Sadak 2 Trailer: ಲೈಕ್ಸ್​ಗಿಂತ ಹೆಚ್ಚು ಡಿಸ್​ಲೈಕ್ಸ್​ ಪಡೆದ ವಿಡಿಯೋವಾಗಿ ಹೊರಹೊಮ್ಮಿದ ಸಡಕ್​ 2 ಟ್ರೇಲರ್​..!

Boycott Sadak 2: ಸಡಕ್​ 2 ಇದೇ 28ರಂದು ಒಟಿಟಿ ಮೂಲಕ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್ ಆಗಲಿದ್ದು, ಹಾಟ್​ಸ್ಟಾರ್​ ಅನ್ನೂ ಅನ್​ಇನ್​ಸ್ಟಾಲ್​ ಮಾಡುವಂತೆಯೂ ನಿನ್ನೆ ಟ್ರೆಂಡ್​ ಮಾಡಿದ್ದರು ನೆಟ್ಟಿಗರು. ಈಗ ನಿನ್ನೆಯಷ್ಟೆ ರಿಲೀಸ್​ ಆದ ಸಡಕ್​ 2 ಚಿತ್ರದ ಟ್ರೇಲರ್​ಗೆ ಈಗ ಅತಿ ಹೆಚ್ಚು ಡಿಸ್​ಲೈಕ್ಸ್​ ಸಿಕ್ಕಿದೆ. 

ಸಡಕ್​ 2 ಸಿನಿಮಾದಲ್ಲಿ ಆಲಿಯಾ ಭಟ್​

ಸಡಕ್​ 2 ಸಿನಿಮಾದಲ್ಲಿ ಆಲಿಯಾ ಭಟ್​

  • Share this:
ಯೂಟ್ಯೂಬ್​ನಲ್ಲಿ ರಿಲೀಸ್ ಆಗುವ ಸಾಕಷ್ಟು ವಿಡಿಯೋಗಳು ಅವುಗಳಿಗೆ ಸಿಗುವ ಲೈಕ್ಸ್​, ಶೇರ್​ ಹಾಗೂ ಕಮೆಂಟ್​ಗಳಿಂದಲೇ ಹೆಚ್ಚು ಸದ್ದು ಮಾಡುತ್ತವೆ. ಆದರೆ ಬಾಲಿವುಡ್​ ಸಿನಿಮಾ ಟ್ರೇಲರ್​ ಒಂದು ಅದಕ್ಕೆ ಸಿಕ್ಕಿರುವ ಡಿಸ್​ಲೈಕ್ಸ್​ಗಳಿಂದಲೇ ಸುದ್ದಿಯಲ್ಲಿದೆ. 

ದೊಡ್ಡ ಗ್ಯಾಪ್​ ನಂತರ ಫಿಲ್ಮ್​ ಮೇಕರ್​ ಮಹೇಶ್​ ಭಟ್​ ನಿರ್ದೇಶನದ ಸಡಕ್​ 2 ಸಿನಿಮಾ ನಾನಾ ವಿಷಗಳಿಂದಾಗಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಅಭಿನಯಿಸಿರುವ ಎಲ್ಲರೂ ಸಿನಿಮಾ ತಾರೆಯ ಕುಟುಂಗಳಿಗೆ ಸೇರಿದವರಾಗಿದ್ದು, ಈ ಸಿನಿಮಾವನ್ನು ಬಹಿಷ್ಕರಿಸುವಂತೆ ನೆಟ್ಟಿಗರು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡುತ್ತಿದ್ದಾರೆ.

netizens are trending Boycott Sadak 2 on twitter
ಸಡಕ್​ 2 ಸಿನಿಮಾವನ್ನು ಬಹಿಷ್ಕರಿಸುವಂತೆ ಟ್ರೆಂಡ್​ ಮಾಡುತ್ತಿರುವ ನೆಟ್ಟಿಗರು


ಅಷ್ಟೇಅಲ್ಲ, ಸಡಕ್​ 2 ಇದೇ 28ರಂದು ಒಟಿಟಿ ಮೂಲಕ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್ ಆಗಲಿದ್ದು, ಹಾಟ್​ಸ್ಟಾರ್​ ಅನ್ನೂ ಅನ್​ಇನ್​ಸ್ಟಾಲ್​ ಮಾಡುವಂತೆಯೂ ನಿನ್ನೆ ಟ್ರೆಂಡ್​ ಮಾಡಿದ್ದರು ನೆಟ್ಟಿಗರು. ಈಗ ನಿನ್ನೆಯಷ್ಟೆ ರಿಲೀಸ್​ ಆದ ಸಡಕ್​ 2 ಚಿತ್ರದ ಟ್ರೇಲರ್​ಗೆ ಈಗ ಅತಿ ಹೆಚ್ಚು ಡಿಸ್​ಲೈಕ್ಸ್​ ಸಿಕ್ಕಿದೆ.



ಸಡಕ್​ 2 ಟ್ರೇಲರ್​ಗೆ 2.57 ಲಕ್ಷ ಲೈಕ್ಸ್ ಸಿಕ್ಕರೆ, 45 ಲಕ್ಷ ಡಿಸ್​ಲೈಕ್ಸ್​ ಸಿಕ್ಕಿದೆ. ಅಂದರೆ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿರದ್ದರೂ, ಈ ವಿಡಿಯೋವನ್ನು ಇಷ್ಟಪಡದವರ ಸಂಖ್ಯೆಯೇ ಹೆಚ್ಚಾಗಿದೆ. 2018ರಲ್ಲಿ ಯೂಟ್ಯೂಬ್​ ರಿಲೀಸ್​ ಮಾಡಿದ್ದ ಯೂಟ್ಯೂಬ್​ ರಿವೈಂಡ್​ ವಿಡಿಯೋಗೆ 1.8 ಕೋಟಿ ಡಿಸ್​ಲೈಕ್ಸ್​ ಸಿಕ್ಕಿದೆ.



ಸುಶಾಂತ್ ಸಿಂಗ್​ ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಸ್ವಜನಪಕ್ಷಪಾತ ಹಾಗೂ ಸ್ಟಾರ್​ ಕಿಡ್​ಗಳ ಮೇಲೆ ನೆಟ್ಟಿಗರು ಸಮರ ಸಾರಿದ್ದಾರೆ. ಇದೇ ಕಾರಣದಿಂದಾಗಿ ಈ ಟ್ರೇಲರ್​ಗೆ ಅತಿಹೆಚ್ಚು ಡಿಸ್​ಲೈಕ್ಸ್​ ಸಿಗುತ್ತಿದೆ ಎನ್ನಲಾಗುತ್ತಿದೆ.



ಮುಖೇಶ್​ ಭಟ್​ ನಿರ್ಮಾಣದ ಈ ಚಿತ್ರದಲ್ಲಿ ಆಲಿಯಾ ಭಟ್​, ಪೂಜಾ ಭಟ್​, ಸಂಜಯ್​ ದತ್​ ಹಾಗೂ ಆದಿತ್ಯ ರಾಯ್​ ಕಪೂರ್​ ನಟಿಸಿದ್ದಾರೆ. ನೆಟ್ಟಿಗರು ಆರೋಪಿಸುತ್ತಿರುವಂತೆ ಇದರಲ್ಲಿರುವ ಪ್ರಮುಖ ಪಾತ್ರಧಾರಿಗಳೆಲ್ಲ ಸಿನಿ ತಾರೆಯರ ಕುಟುಂಬಕ್ಕೆ ಸೇರಿದವರೆ.
Published by:Anitha E
First published: