'ಸೇಕ್ರೆಡ್​ ಗೇಮ್ಸ್'​ ವಿವಾದ: ನವಾಜುದ್ದೀನ್​ ಸಿದ್ದಿಖಿ ನಿರಾಳ!

news18
Updated:July 17, 2018, 1:18 PM IST
'ಸೇಕ್ರೆಡ್​ ಗೇಮ್ಸ್'​ ವಿವಾದ: ನವಾಜುದ್ದೀನ್​ ಸಿದ್ದಿಖಿ ನಿರಾಳ!
news18
Updated: July 17, 2018, 1:18 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗಷ್ಟೆ ನವಾಜುದ್ದಿನ್ ಸಿದ್ದಿಖಿ ಅಭಿನಯದ 'ಸೇಕ್ರೆಡ್ ಗೇಮ್ಸ್' ವೆಬ್ ಸೀರಿಸ್‍ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷದ ಹಲವರು ಇದನ್ನ ಟೀಕಿಸಿ, ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ವೆಬ್​ ಸರಣಿಗೆ ಕೊಂಚ ನೆಮ್ಮದಿ ಸಿಕ್ಕಿಂತಾಗಿದೆ.

ಅನುರಾಗ್ ಕಶ್ಯಪ್ ನಿರ್ದೇಶನದ 'ಸೇಕ್ರೆಡ್ ಗೇಮ್ಸ್' ವಿವಾದಕ್ಕೆ ಸಂಬಂಧ ಪಟ್ಟಂತೆ ಹೈ ಕೋರ್ಟ್ ಸಂಭಾಷಣೆಗೂ, ನಟಿರಿಗೂ ಸಂಬಂಧ ಇಲ್ಲ ಎಂದಿದ್ದೆ. ಇತ್ತೀಜೆಗೆ ಕಾಂಗ್ರೆಸ್​ ಬೆಂಬಲಿಗ ನಿಖಿಲ್ ಭಲ್ಲಾ ಎಂಬುವವರು ವೆಬ್ ಸೀರಿಸ್ ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನ ಅವಮಾನಿಸಲಾಗಿದೆ ಎಂದು ಆರೋಪಿಸಿ ನವಾಜುದ್ದೀನ್ ಸಿದ್ದಿಖಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ಸದ್ಯ ಈ ವಿಚಾರಕ್ಕೆ ಸಂಬಧ ಪಟ್ಟಂತೆ ಹೈ ಕೋರ್ಟ್ ನೀಡಿರೋ ಆದೇಶದಿಂದ ನವಾಜುದ್ದೀನ್ ಸಿದ್ಧಿಖಿ ಕೊಂಚ ನಿರಾಳವಾಗಿದ್ದಾರೆ. ಅಲ್ಲದೇ ಹೈಕೋರ್ಟ್ 'ಸೇಕ್ರೆಡ್ ಗೇಮ್ಸ್' ಕುರಿತ ಪ್ರಕರಣದ ವಿಚಾರಣೆಯನ್ನ ಇದೇ ತಿಂಗಳ 19ಕ್ಕೆ ಮುಂದೂಡಿದ್ದು, ಅಂದು ಅಂತಿಮ್ಮ ತೀರ್ಪು ಪ್ರಕಟಿಸಲಿದೆ.

ನೆಟ್​ಫ್ಲಿಕ್ಸ್​ನಲ್ಲಿ ಸದ್ಯ ಪ್ರಸಾರವಾಗುತ್ತಿರುವ ಈ ವೆಬ್​ ಸರಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...