ಮತ್ತೆ ಟ್ರೋಲ್‍ಗೆ ತುತ್ತಾದ Sabyasachi - ರೂಪದರ್ಶಿಗಳ ಬಗ್ಗೆ ನೆಟ್ಟಿಗರ ಕಾಮೆಂಟ್​

Sabyasachi's Jewellery Ad Gets Trolled: ಡಿಸೈನರ್‌ನ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಬ್ಯಸಾಚಿ ಫೈನ್ ಜ್ಯುವೆಲ್ಲರಿ ಎಂಬ ಮೂರು ರೂಪದರ್ಶಿಗಳ ಫೋಟೋವನ್ನು ಹಂಚಿಕೊಂಡಿದೆ. @sabyasachijewelry ಕತ್ತರಿಸದ ಮತ್ತು ಅದ್ಭುತವಾದ ಕಟ್ ವಜ್ರಗಳು, ಓಪಲ್‍ಗಳು, ಮುತ್ತುಗಳು, ಪಚ್ಚೆಗಳು, ಅಕ್ವಾಮರೀನ್ ಮತ್ತು 22k ಚಿನ್ನದಲ್ಲಿ ಬಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಸ್ ಫ್ಯಾಷನ್ (Fashion)ಮತ್ತು ಆಭರಣ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಫ್ಯಾಷನ್ ಪ್ರಪಂಚದಲ್ಲಿ ಜನಪ್ರಿಯ ಹೆಸರು. ಈಗಲೂ ಸಬ್ಯಸಾಚಿ(Sabyasachi) ಒಡವೆ, ಬಟ್ಟೆಗಳಿಗೆ(Dress) ಎಲ್ಲಿಲ್ಲದ ಬೇಡಿಕೆ. ದುಬಾರಿಯಾದರೂ ಮುಗಿಬಿದ್ದು ಸಭ್ಯಸಾಚಿಯ ಉತ್ಪನ್ನಗಳನ್ನು ಕೊಳ್ಳುವಲ್ಲಿ ಹಿಂದೇಟು ಹಾಕುತ್ತಿಲ್ಲ. ಆದರೆ ಇದು ಒಂದಲ್ಲಾ ಒಂದು ವಿಷಯಕ್ಕೆ ಟ್ರೋಲ್‍ಗೆ ಒಳಗಾಗುತ್ತಲೇ ಇರುತ್ತದೆ. ಕಳೆದ ತಿಂಗಳಲ್ಲಿ ರಾಯಲ್ ಬೆಂಗಾಳಿ ಮಂಗಳಸೂತ್ರದ ಕಾರಣ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ನೆಟ್ಟಿಗರಿಂದ ಸ್ವಲ್ಪ ಖಾರವಾಗಿ ಪ್ರತಿಕ್ರಿಯೆಗಳನ್ನು ಸ್ವೀಕರಿಸಿತ್ತು.

ಈಗ ಮತ್ತೊಮ್ಮೆ ಸಬ್ಯಸಾಚಿಯು ನೆಟ್ಟಿಗರಿಂದ ಟ್ರೋಲ್‍ಗೆ ಒಳಗಾಗಿದೆ. ಈ ಬಾರಿ ಶರತ್ಕಾಲದ ಚಳಿಗಾಲದ 21 ಸಂಗ್ರಹ ಅಭಿಯಾನದಲ್ಲಿ ಬ್ರ್ಯಾಂಡ್‍ನ ಉತ್ತಮ ಆಭರಣಗಳನ್ನು ಪ್ರಚಾರ ಮಾಡುವ ಚಿತ್ರಕ್ಕಾಗಿ ಟ್ರೋಲ್‍ಗಳನ್ನು ಎದುರಿಸುತ್ತಿದೆ. ಸಬ್ಯಸಾಚಿ ಆಭರಣಗಳು ಮತ್ತು ಬಟ್ಟೆಗಳನ್ನು ಧರಿಸಿದ ಮೂರು ಸೂಪರ್ ಮಾಡೆಲ್‍ಗಳು ಟ್ರೋಲ್‍ಗಳನ್ನು ಎದುರಿಸಿದ್ದಾರೆ. ಹೌದು ಇವರ ಬಟ್ಟೆಗಳು, ಒಡವೆಗಳಿಗಿಂತ ಮಾಡೆಲ್‍ಗಳ ಹಾವಭಾವವು ಟ್ವಿಟ್ಟರ್‌ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ನೆಟಿಜನ್‍ಗಳಿಂದ ಟೀಕೆ ಮತ್ತು ಮೆಚ್ಚುಗೆ ಎರಡನ್ನೂ ಪಡೆಯುತ್ತಿದೆ.

ಡಿಸೈನರ್‌ನ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಬ್ಯಸಾಚಿ ಫೈನ್ ಜ್ಯುವೆಲ್ಲರಿ ಎಂಬ ಮೂರು ರೂಪದರ್ಶಿಗಳ ಫೋಟೋವನ್ನು ಹಂಚಿಕೊಂಡಿದೆ. @sabyasachijewelry ಕತ್ತರಿಸದ ಮತ್ತು ಅದ್ಭುತವಾದ ಕಟ್ ವಜ್ರಗಳು, ಓಪಲ್‍ಗಳು, ಮುತ್ತುಗಳು, ಪಚ್ಚೆಗಳು, ಅಕ್ವಾಮರೀನ್ ಮತ್ತು 22k ಚಿನ್ನದಲ್ಲಿ ಬಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗಿದೆ.
ಪೋಸ್ಟ್‌ನ ಕಮೆಂಟ್‍ನಲ್ಲಿ ರೂಪದರ್ಶಿಗಳ ಮುಖಭಾವವನ್ನು ಟೀಕಿಸಿದ್ದಾರೆ. ಯಾಕೆ ದುಃಖದಲ್ಲಿರುವಂತೆ ಕಾಣುತ್ತಿದ್ದಾರೆ. ಏನು ಅನಾಹುತವಾಗಿಲ್ಲವಲ್ಲ ಎಂದು ಹೇಳಿದರೆ, ಇನ್ನು ಕೆಲವರು ಯಾಕೆ ಅವರು ಶೋಕದಲ್ಲಿದ್ದಾರೆ ಎಂದು ಕೇಳಿದ್ದಾರೆ.

ಇದನ್ನೂ ಓದಿ: ದ್ವೇಷ ಗೆದ್ದಿದೆ, ಕಲಾವಿದ ಸೋತಿದ್ದಾನೆ ಎಂದ ಸ್ಟ್ಯಾಂಡ್ ಅಪ್ ಕಾಮಿಡಿಯನ್

ರಾಧಾರಾಜು ಅವರು ಕಮೆಂಟ್ ಮಾಡಿ ಇದು ಯಾರ ಸಾವಿನ ಶೋಕ ಎಂದು ಕೇಳಿದ್ದಾರೆ. ಈ ಜಾಹೀರಾತು ತುಂಬಾ ಶ್ರೇಷ್ಟವಾಗಿದೆ. ಇದು ಹಣವು ನಿಮಗೆ ಸಂತೋಷವನ್ನು ತಂದು ಕೊಡುವುದಿಲ್ಲ ಎಂದು ಸೂಚಿಸುತ್ತಿದೆ ಎಂದು ಪೂರ್ಣಿಮಾ ದತ್ತ ಅವರು ಟ್ವೀಟ್ ಮಾಡಿದ್ದಾರೆ. ನಿಮ್ಮಲ್ಲಿ ಒಂದು ಸುಂದರವಾದ ನಗುವಿದ್ದರೆ, ನಿಮಗೆ ದುಬಾರಿ ಹಣದ ಅಗತ್ಯವಿರುವುದಿಲ್ಲ. ಓಹ್! ಇದು ನಿಮ್ಮ ವ್ಯವಹಾರ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ರೂಪದರ್ಶಿಗಳ ಮುಖಗಳಿಗೆ ಯುವಕರ ಫೋಟೋ ಅಂಟಿಸಿ ಇದು ಉತ್ತಮವಾದ ಲುಕ್ ಎಂದು ಹೇಳಿದ್ದಾರೆ.

ಆದರೂ, ಕೆಲವು ಟ್ವೀಟ್‍ಗಳು ಮತ್ತು ಕಾಮೆಂಟ್‍ಗಳು ಚಿತ್ರಣದ ಜಾಗತಿಕ ಆಕರ್ಷಣೆಯನ್ನು ಎತ್ತಿ ತೋರಿಸಿವೆ ಮತ್ತು ಆಭರಣಗಳು ನೀಡುವ ಶ್ರೀಮಂತಿಕೆಯ ಮೇಲೆ ಕೇಂದ್ರೀಕರಿಸುವಾಗ ಮೇಕಪ್ ಇಲ್ಲದೆ ಮಹಿಳೆಯರ ಆತ್ಮವಿಶ್ವಾಸವನ್ನು ಉತ್ತೇಜಿಸುವುದು ಕಲ್ಪನೆ # No tam jham# ಕೇವಲ ಆಭರಣದ ವರ್ತನೆ ಎಂದು ಹೇಳಿದರು.

ಇನ್ನೊಬ್ಬ ಬಳಕೆದಾರರು, "ಉಡುಪುಗಳು ಮತ್ತು ನೆಕ್ಲೇಸ್‌ಗಳನ್ನು ಪ್ರೀತಿಸಿ, ಅಂತಿಮವಾಗಿ ಇದು ರೂಪದರ್ಶಿಗಳ ನೈಜ ಪ್ರಪಂಚವನ್ನು ಪ್ರತಿನಿಧಿಸುತ್ತದೆ. ಚಲನಚಿತ್ರ ಮತ್ತು ಮಾಡೆಲಿಂಗ್ ಪ್ರಪಂಚವು ತೆಳುವಾದ ಮತ್ತು ಏರ್‌ಬ್ರಶ್‌ ಮಾದರಿಗಳೊಂದಿಗೆ ಮಹಿಳೆಯರ ಸ್ವಯಂ ಇಮೇಜ್ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಪಕವಾದ ಹಾನಿಯನ್ನುಂಟುಮಾಡಿದೆ. ಇದು ವಾಸ್ತವತೆಯನ್ನು ಅರಿಯುವ ಸಮಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೋನಸ್ ಸಹೋದರರಲ್ಲಿ ಅತಿ ಶ್ರೀಮಂತ ಇವೆರೇ ಅಂತೆ ನೋಡಿ

ಈ 3 ಮಾಡೆಲ್‍ಗಳನ್ನು ತಮ್ಮ ನೋಟದ ಮೇಲೆ ಟ್ರೋಲ್ ಮಾಡುವುದವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು. ಜಾಹೀರಾತು ಅಕ್ಷರಶಃ ಸಬ್ಯಸಾಚಿ ಆಭರಣಕ್ಕಾಗಿ.. ಹಾಗಾಗಿ ಅವರ "ಕಾಂತಿಯಿಲ್ಲದ ಚರ್ಮದ" ಮೇಲಿನ ಗೀಳು ನನಗೆ ಅರ್ಥವಾಗುತ್ತಿಲ್ಲ. ಜಾಹೀರಾತಿನಲ್ಲಿ ಭಾರತೀಯ ಮಹಿಳೆಯರಂತೆ ಕಾಣುವ ರೂಪದರ್ಶಿಗಳ ಕೊರತೆ ಇದೆ ಎಂದು ಹೇಳಿದ್ದಾರೆ.
First published: