Bollywood: ಮದುವೆಯ ದಿನದವರೆಗೆ ವಿಕ್ಕಿ- ಕತ್ರೀನಾ ತಮ್ಮ ವಿವಾಹದ ಪರಸ್ಪರ ಉಡುಗೆಗಳನ್ನು ನೋಡಿರಲಿಲ್ಲವಂತೆ

Bollywood: ಮದುವೆಯ ದಿನದವರೆಗೆ ವಧು ಮತ್ತು ವರ ಒಬ್ಬರು ಇನ್ನೊಬ್ಬರ ಉಡುಗೆಗಳನ್ನು ನೋಡಿಯೇ ಇರಲಿಲ್ಲ. ಆದ್ದರಿಂದ ನಾವು ಪ್ರತ್ಯೇಕವಾಗಿ ಅವರ ಉಡುಗೆಗಳ ವಿನ್ಯಾಸದಲ್ಲಿ ಕೆಲಸ ಮಾಡಲಾಗಿದೆ.

ಸಬ್ಯಸಾಚಿ ಡಿಸೈನ್

ಸಬ್ಯಸಾಚಿ ಡಿಸೈನ್

  • Share this:
ಬಾಲಿವುಡ್ (Bollywood) ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರೀನಾ ಕೈಫ್ ಅವರ ಮದುವೆ (Vicky Kaushal and  Katrina Kaif)  ಮೊನ್ನೆ ನಡೆದಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅಭಿಮಾನಿಗಳು ಮಾತ್ರ ಇವರ ಮದುವೆ ಉಡುಗೆಗಳನ್ನು (wedding dress) ನೋಡಿ ಫುಲ್ ಫಿದಾ ಆಗಿರುವುದಂತೂ ನಿಜವಾದ ಸಂಗತಿಯಾಗಿದೆ. ಇವರಿಬ್ಬರ ಸ್ಟಾರ್ ನಟ ನಟಿಯ ಮದುವೆಗೆ ಉಡುಗೆಗಳನ್ನು ವಿನ್ಯಾಸಗೊಳಿಸಿದ (Designed)  ಪ್ರಖ್ಯಾತ ಡಿಸೈನರ್‌ ಸಭ್ಯಸಾಚಿ (Sabyasachi) ಮುಖರ್ಜಿ, ತಮ್ಮ ಭವ್ಯ ವಿವಾಹದ ದಿನದಂದು ಮಾತ್ರ ಈ ಇಬ್ಬರು ಪರಸ್ಪರರ ಉಡುಗೆಗಳನ್ನು ನೋಡಿಕೊಂಡಿದ್ದಾರೆ ಮತ್ತು ಇವರಿಬ್ಬರ ಉಡುಗೆಗಳು ಸುಂದರವಾಗಿ ಹೊಂದಾಣಿಕೆಯಾಗಿದೆ ಎಂದೂ ಹೇಳಿದರು.

ಕೈಯಿಂದ ನೇಯ್ದ ಮಟ್ಕಾ ಸಿಲ್ಕ್‌

ನಟಿ ಕತ್ರೀನಾ ತಮ್ಮ ಮದುವೆಯ ಸಮಾರಂಭದಲ್ಲಿ ಕೈಯಿಂದ ನೇಯ್ದ ಮಟ್ಕಾ ಸಿಲ್ಕ್‌ನಲ್ಲಿ ತಯಾರಿಸಿದ ಕೆಂಪು ಲೆಹೆಂಗಾ ಧರಿಸಿದ್ದು, ಅದಕ್ಕೆ ವೆಲ್ವೆಟ್‌ನಲ್ಲಿ ಸೂಕ್ಷ್ಮವಾಗಿ ಕಸೂತಿ ಮಾಡಿದ ಜರ್ಡೋಜಿ ಬಾರ್ಡರ್ ಸಹ ಇತ್ತು.

ಇದನ್ನೂ ಓದಿ: Katrina Kaif - Vicky Kaushal: ಏನ್​ ಗುರೂ.. ವಿಕ್ಕಿ ಕೌಶಲ್​ಗಿಂತ ಸಖತ್​​ ರಿಚ್​ ಅಂತೆ ಕತ್ರಿನಾ ಕೈಫ್​!

ನಟ ವಿಕ್ಕಿ ಮರೋರಿ ಕಸೂತಿಯೊಂದಿಗೆ ದಂತದ ರೇಷ್ಮೆ ಶೆರ್ವಾನಿ ಆರಿಸಿಕೊಂಡಿದ್ದರು, ರೇಷ್ಮೆ ಕುರ್ತಾ ಮತ್ತು ಚುರಿದಾರ್‌ನೊಂದಿಗೆ ಜೋಡಿಯಾಗಿ ಧರಿಸಿದ್ದರು. ಅಲ್ಲದೆ ಈ ಉಡುಪಿಗೆ ಸರಿ ಹೊಂದುವ ಆಭರಣಗಳನ್ನು ಸಹ ಇಬ್ಬರು ಧರಿಸಿದ್ದರು.

"ಮದುವೆಯ ದಿನದವರೆಗೆ ವಧು ಮತ್ತು ವರ ಒಬ್ಬರು ಇನ್ನೊಬ್ಬರ ಉಡುಗೆಗಳನ್ನು ನೋಡಿಯೇ ಇರಲಿಲ್ಲ. ಆದ್ದರಿಂದ ನಾವು ಪ್ರತ್ಯೇಕವಾಗಿ ಅವರ ಉಡುಗೆಗಳ ವಿನ್ಯಾಸದಲ್ಲಿ ಕೆಲಸ ಮಾಡಿದ್ದರೂ ಸಹ ಅವರಿಬ್ಬರ ಉಡುಗೆಗಳು ಹೇಗೆ ಸರಿಯಾಗಿ ಹೊಂದಿಕೊಂಡಿವೆ ಎಂಬುದನ್ನು ನೋಡುವುದು ತುಂಬಾನೇ ಸುಂದರವಾಗಿತ್ತು" ಎಂದು ಮನರಂಜನಾ ಮಾಧ್ಯಮದ ಜೊತೆ ಮಾತನಾಡಿದ ಸಭ್ಯಸಾಚಿ ಮುಖರ್ಜಿ ಹೇಳಿದರು.

ಉಡುಗೆ ವಿನ್ಯಾಸ

"ಕತ್ರೀನಾ ಸೌಂದರ್ಯಕ್ಕೆ ಸರಿ ಹೊಂದುವಂತೆ ಅವರ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಉಡುಗೆಯನ್ನು ವಿನ್ಯಾಸಗೊಳಿಸಲು ನನಗೆ ಸುಲಭವಾಯಿತು" ಎಂದು ಅವರು ಹೇಳಿದರು. ನಟಿ ಕತ್ರೀನಾ ಸಾಂಪ್ರದಾಯಿಕ ಮದುವೆ ಸಮಾರಂಭದ ಮೂಲಕ ವಿಕ್ಕಿಯ ಪಂಜಾಬಿ ಸಾಂಪ್ರದಾಯಕ್ಕೆ ಗೌರವ ನೀಡಿದರು. ತಮ್ಮ ಮದುವೆ ಆಗುವವರೆಗೂ ತಮ್ಮ ಮದುವೆಯ ಬಗ್ಗೆ ಎಲ್ಲಿಯೂ ಬಾಯಿ ಬಿಡದ ವಿಕ್ಕಿ ಮತ್ತು ಕತ್ರೀನಾ 2019ರಿಂದ ಒಟ್ಟಿಗೆ ಓಡಾಡಲು ಪ್ರಾರಂಭಿಸಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರೂ ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಮದುವೆಯಾಗಿದ್ದಾರೆ.

ಸಮಾರಂಭ ಫೋಟೋ ವೈರಲ್

ಈ ಸ್ಟಾರ್ ನಟರ ಮದುವೆಗೆ ಅವರಿಬ್ಬರ ಕೆಲವು ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಾಗಿದ್ದರು. ಅತಿಥಿ ಪಟ್ಟಿಯಲ್ಲಿರುವ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಕಬೀರ್ ಖಾನ್ ಮತ್ತು ಮಿನಿ ಮಾಥುರ್, ಶರ್ವರಿ ವಾಘ್, ಅಂಗದ್ ಬೇಡಿ ಮತ್ತು ನೇಹಾ ಧೂಪಿಯಾ ಸಹ ಸೇರಿದ್ದರು.

ಇದನ್ನೂ ಓದಿ: ಬಹುತೇಕ ಬಾಲಿವುಡ್ ತಾರೆಯರು ತಮ್ಮ ಮದುವೆಗೆ ಸಬ್ಯಸಾಚಿ ಡಿಸೈನ್ ಮಾಡಿದ ಬಟ್ಟೆಗಳನ್ನೇ ಯಾಕೆ ಆಯ್ದುಕೊಳ್ತಾರೆ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ

ಮದುವೆಯ ಮೊದಲ ಫೋಟೋಗಳನ್ನು ಹಂಚಿಕೊಂಡ ವಿಕ್ಕಿ ಮತ್ತು ಕತ್ರೀನಾ ಒಂದೇ ರೀತಿಯಲ್ಲಿ ಬರೆದಿರುವ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ "ಈ ಕ್ಷಣಕ್ಕೆ ನಮ್ಮನ್ನು ಕರೆತಂದ ಎಲ್ಲದಕ್ಕೂ ನಮ್ಮ ಹೃದಯದಲ್ಲಿರುವ ಪ್ರೀತಿ ಮತ್ತು ಕೃತಜ್ಞತೆ ಮಾತ್ರ. ನಾವು ಈ ಹೊಸ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತಿದ್ದಂತೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳನ್ನು ಕೋರುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಇವರಿಬ್ಬರು ಹಲ್ದಿ ಮತ್ತು ಮೆಹಂದಿ ಸಮಾರಂಭಗಳ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
Published by:vanithasanjevani vanithasanjevani
First published: