Bigg Boss OTT: ರೂಪೇಶ್ ಬರ್ತ​ಡೇಗೆ ಸಾನ್ಯಾ ಕೊಟ್ರು ಸರ್ಪ್ರೈಸ್ ಗಿಫ್ಟ್; ತುಳು ನಟನ ಹಾರ್ಟ್​ನಲ್ಲಿ ತಕಧಿಮಿತ

ನಾವಿಬ್ಬರು ಬರೀ ಫ್ರೆಂಡ್ಸ್​ ಅಂತಿದ್ದಾ ಸಾನಿಯಾ ರೂಪೇಶ್​ ಶೆಟ್ಟಿಗೆ ಸಖತ್​ ಗಿಫ್ಟ್​ ಕೊಟ್ಟಿದ್ದಾರೆ. ಹಾಡು ಹೇಳೋ ಮೂಲಕ ರೂಪೇಶ್​ ಸರ್ಪ್ರೈಸ್​ ಗಿಫ್ಟ್​ ನೀಡಿದ್ದಾರೆ. ಸಾನ್ಯ ಗಿಫ್ಟ್​ಗೆ ರೂಪೇಶ್​  ಬೋಲ್ಡ್​ ಆಗಿದ್ದಾರೆ.

ಸಾನ್ಯಾ ಅಯ್ಯರ್​ ,ರೂಪೇಶ್​ ಶೆಟ್ಟಿ

ಸಾನ್ಯಾ ಅಯ್ಯರ್​ ,ರೂಪೇಶ್​ ಶೆಟ್ಟಿ

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ.  ಇದೀಗ ಬಿಗ್​ ಬಾBiಸ್ ಮನೆಯಲ್ಲಿ ರೂಪೇಶ್ (Roopesh Shetty) ಶೆಟ್ಟಿ ಅವರ ಹುಟ್ಟುಹಬ್ಬ ಆಚರಿಸಲಾಗಿದೆ.

ರೂಪೇಶ್​ಗೆ ಸಾನ್ಯಾ ಗಿಫ್ಟ್​

ನಾವಿಬ್ಬರು ಬರೀ ಫ್ರೆಂಡ್ಸ್​ ಅಂತಿದ್ದಾ ಸಾನಿಯಾ ರೂಪೇಶ್​ ಶೆಟ್ಟಿಗೆ ಸಖತ್​ ಗಿಫ್ಟ್​ ಕೊಟ್ಟಿದ್ದಾರೆ. ಹಾಡು ಹೇಳೋ ಮೂಲಕ ರೂಪೇಶ್​ ಸರ್ಪ್ರೈಸ್​ ಗಿಫ್ಟ್​ ನೀಡಿದ್ದಾರೆ. ಸಾನ್ಯ ಗಿಫ್ಟ್​ಗೆ ರೂಪೇಶ್​  ಬೋಲ್ಡ್​ ಆಗಿದ್ದಾರೆ. ಲವ್​ ಇಲ್ಲ ಎನ್ನುತ್ತಿದ್ದವನ ಹಾರ್ಟ್​ನಲ್ಲಿ ಲವ್ ಮೂಡಿದಂತಿದೆ.



ಸಾನ್ಯಾ ಬಾಯಲ್ಲಿ ರೂಪೇಶ್​ ಗುಣಗಾನ

ದರ್ಬಾರಲ್ಲಿ ದಿಲ್ದಾರ್ ಇವನು, ಒಂಚೂರ್ ಕೊಟ್ರೆ ಡಬ್ಬಲ್ ಕೊಡುವನು ಬಿಗ್ ಬಾಸ್ ಮನೆಯಲ್ಲಿ ನಗುಮೊಗದವನು, ಸ್ಮೈಲ್ ಅಲ್ಲೇ ಎಲ್ಲರನ್ನು ಸೋಲಿಸುವವನು, ನಿಜವಾಗಿ ಬದುಕಿದವನು ಮುಖವಾಡ ಕಳಚಿದನಿವನು, ಮಜಾ ಮಾಡಿ ಹೇಳಿದನು ಮೂರ್ ದಿನದ ಬಾಳು ಗುರು ಕೇಳು, ನನ್ನ ಮಾತು ಚೂರು. ಹೀಗೆ ರ‍್ಯಾಪ್‌ನಲ್ಲಿ ರೂಪೇಶ್ ಅವರ ಗುಣಗಾನವನ್ನು ಸಾನ್ಯಾ ಮಾಡಿದರು.

ರೂಪೇಶ್​ ಮುಖದಲ್ಲಿ ಮಂದಹಾಸ

ಸಾನ್ಯ ಹಾಗೂ ರೂಪೇಶ್​ ಜೋಡಿ ತುಂಬಾ ಚೆನ್ನಾಗಿದೆ ಎಂದು ಬಿಗ್​ ಬಾಸ್​ ಮನೆಯ ಇತರ ಸ್ಪರ್ಧಿಗಳು ಹೇಳ್ತಿದ್ದಾರೆ. ಇಬ್ಬರು ಬಿಗ್​ಬಾಸ್​ ಮನೆಯಲ್ಲಿ ಒಟ್ಟಿಗೆ ಕಾಲಕಳೆಯುತ್ತಿರೋದ್ರಿಂದ ಎಲ್ಲರಿಗೂ ಇವರ ಮಧ್ಯೆ ಏನೋ ನಡೀತಿದೆ ಎನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ: Bigg Boss OTT: 'ನಂಗೆ ನಿನ್ನ ಮೇಲೆ ಫೀಲಿಂಗ್​ ಇದೆ; ಬೇಕು ಅಂದ್ರೆ ಒಪ್ಪಿಕೋ‘, ಸೋನು ಗೌಡ ಅಂಡ್​ ರಾಕೇಶ್ ಲವ್ ಸ್ಟೋರಿ

ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್​ ಸ್ಟೋರಿ ಶುರುವಾಗಿದ್ರೆ. ಮತ್ತೊಂದೆಡೆ ಸಾನ್ಯಾ ಹಾಗೂ ರೂಪೇಶ್ ನಡುವೆ ಏನೋ ನಡೀತಿದೆ ಅನ್ನೋ ಗುಸು ಗುಸು ಕೇಳಿ ಬರ್ತಿದೆ. ಸಾನ್ಯಾ ಹೋದಲ್ಲೆಲ್ಲಾ ರೂಪೇಶ್​ ಹಿಂದೆ ಇರ್ತಾರೆ. ಬಿಗ್​ಬಾಸ್​​ ಮನೆಯಲ್ಲಿ ಇಬ್ಬರು ಹೆಚ್ಚು ಸಮಯ ಮಾತಾಡುತ್ತಾ ಕಾಲಕಳೆಯುತ್ತಾರೆ. ಇದನ್ನೆಲ್ಲಾ ನೋಡಿದ ಜನ ಇವರ ನಡುವೆನು ಲವ್​ ಶುರುವಾದಂತೆ ಕಾಣ್ತಿದೆ ಎನ್ನುತ್ತಾರೆ.

ಸಾನ್ಯ ರೂಪೇಶ್​ ಲವ್​ ಸ್ಟೋರಿ

ತನ್ನ ಜೀವನಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಸಾನ್ಯ ಬಿಗ್​ ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿ. ಈ ಜೋಡಿ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಗುಸುಗುಸು ಶುರುವಾಗಿದೆ.

ಇದನ್ನೂ ಓದಿ: Bigg Boss OTT: ರಾಕೇಶ್​ ಜೊತೆ ಬೇರೆ ಹುಡುಗಿ ಮಾತಾಡಿದ್ರೆ ಈಕೆಗೆ ಉರಿಯುತ್ತಂತೆ, ಜೋಶ್​ ಹುಡುಗನಿಗೆ ಜೋತುಬಿದ್ದ ಸೋನು!

ನಮ್ಮ ನಡುವೆ ಪ್ರೀತಿ ಇಲ್ಲ ನಾವು ಜಸ್ಟ್​ ಫ್ರೆಂಡ್​

ರೂಪೇಶ್ ಹಾಗೂ ಸಾನ್ಯಾ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿದ್ದವರೇ  ಮಾತಾಡುತ್ತಿದ್ದಾರೆ. ಯಾವಾಗಲು ಒಟ್ಟಿಗೆ ಇರುವುದನ್ನು ಕಂಡ ಬಿಗ್​ಬಾಸ್ ಮಂದಿ ಇಬ್ಬರು ಲವ್​ ಮಾಡ್ತಿದ್ದಾರೆಂದು ಅಂದುಕೊಂಡಿದ್ದಾರೆ. ಈ ಬಗ್ಗೆ ಸಾನ್ಯ ಕಿವಿಗೂ ಬಿದ್ದಿದೆ ಹೀಗಾಗಿ, ಬಿಗ್​ಬಾಸ್​ ಮನೆಯಲ್ಲಿ ಅವ್ರೆ ಸ್ಪಷ್ಟನೆ ಹೊಂದನ್ನು ನೀಡಿದ್ದಾರೆ. ನನ್ನ ಹಾಗೂ ರೂಪೇಶ್​ ನಡುವೆ ನೀವೆಲ್ಲಾ ಊಹಿಸಿರುವಂತಹ ಸಂಬಂಧವಿಲ್ಲ, ನಮ್ಮಿಬ್ಬರ ನಡುವೆ ಇರೋದು ಪ್ರೀತಿ ಅಲ್ಲ ಸ್ನೇಹ. ನಾವು ಜಸ್ಟ್​ ಫ್ರೆಂಡ್​ ಎನ್ನುವ ಮೂಲಕ ಗಾಸಿಪ್​ಗೆ ತೆರೆ ಎಳೆದಿದ್ದಾರೆ.
Published by:Pavana HS
First published: