Saaho: ಬಹು ನಿರೀಕ್ಷಿತ ಸಾಹೋ ಚಿತ್ರದ ಬ್ಯೂಟಿಫುಲ್ ರೋಮ್ಯಾಂಟಿಕ್​ ಸಾಂಗ್ ಬಿಡುಗಡೆ

ಆಸ್ಟ್ರಿಯನ್ ಪರ್ವತಗಳ ಎಡೆಯಲ್ಲಿ ಚಿತ್ರಿತವಾಗಿರುವ ಈ ಹಾಡನ್ನು ಹಾಡಿರುವುದು ಪಂಜಾಬಿ ಗಾಯಕ ಗುರು ರಾಂಧವಾ. ಪ್ರಕೃತಿ ರಮಣೀಯ ತಾಣ ಹಾಗೂ ಅದ್ಭುತ ಸೆಟ್​ಗಳ ನಡುವೆ ಪ್ರಭಾಸ್ ಮತ್ತು ಶ್ರದ್ಧಾ ಅವರ ಲುಕ್ ಕೂಡ ಗಮನ ಸೆಳೆಯುತ್ತದೆ.

zahir | news18
Updated:August 2, 2019, 9:04 PM IST
Saaho: ಬಹು ನಿರೀಕ್ಷಿತ ಸಾಹೋ ಚಿತ್ರದ ಬ್ಯೂಟಿಫುಲ್ ರೋಮ್ಯಾಂಟಿಕ್​ ಸಾಂಗ್ ಬಿಡುಗಡೆ
Enni-Soni-Saaho
zahir | news18
Updated: August 2, 2019, 9:04 PM IST
ಮೋಸ್ಟ್ ​ಎಕ್ಸ್​ಪೆಕ್ಟೇಡ್ 'ಸಾಹೋ' ಚಿತ್ರದ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ಟೀಸರ್​ ಮೂಲಕ ಕುತೂಹಲ ಹುಟ್ಟಿಸಿದ ಎನ್ನಿ ಸೋನಿ.. ಗೀತೆಯ ವಿಡಿಯೋವನ್ನು ರಿಲೀಸ್ ಮಾಡಲಾಗಿದ್ದು, ಕಲರ್​ಫುಲ್​ ಹಾಡಿಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆಸ್ಟ್ರಿಯನ್ ಪರ್ವತಗಳ ಎಡೆಯಲ್ಲಿ ಚಿತ್ರಿತವಾಗಿರುವ ಈ ಹಾಡನ್ನು ಹಾಡಿರುವುದು ಪಂಜಾಬಿ ಗಾಯಕ ಗುರು ರಾಂಧವಾ. ಪ್ರಕೃತಿ ರಮಣೀಯ ತಾಣ ಹಾಗೂ ಅದ್ಭುತ ಸೆಟ್​ಗಳ ನಡುವೆ ಪ್ರಭಾಸ್ ಮತ್ತು ಶ್ರದ್ಧಾ ಅವರ ಲುಕ್ ಕೂಡ ಗಮನ ಸೆಳೆಯುತ್ತದೆ.

ಪಂಜಾಬಿ ಸಾಹಿತ್ಯ ಮಿಶ್ರಿತ ಈ ಹಾಡಿನಲ್ಲಿ 'ಬಾಹುಬಲಿ' ಹೀರೋನಾ ಕೆಮೆಸ್ಟ್ರಿ ಬಾಲಿವುಡ್ ನಟಿಯೊಂದಿಗೆ ತುಂಬಾನೇ ಚೆನ್ನಾಗಿ ವರ್ಕ್​ ಆಗಿದೆ ಎನ್ನಬಹದು. ಗುರು ರಾಂಧವಾ ಸಂಗೀತ ಸಂಯೋಜಿಸಿರುವ ಈ ಗೀತೆಯ ಬೀಟ್ಸ್, ಮತ್ತು ಲಿರಿಕ್ಸ್ ಹಾಡನ್ನು ಮತ್ತೆ ಆಲಿಸುವಂತೆ ಮಾಡುತ್ತದೆ.

ಈಗಾಗಲೇ ಭರ್ಜರಿ ಸಾಹಸ ದೃಶ್ಯಗಳ ಟೀಸರ್​ ಮೂಲಕ ಕುತೂಹಲ ಹುಟ್ಟುಹಾಕಿರುವ 'ಸಾಹೋ' ಚಿತ್ರದ ಗೀತೆಗೆ ಪ್ರಭಾಸ್ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರವು ಆಗಸ್ಟ್ 30 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...