ಬಾಹುಬಲಿ ಪ್ರಭಾಸ್ ಈಗ ಬ್ಯಾಡ್ ಬಾಯ್​

Saaho: ಈ ಹಿಂದೆ ಸಲ್ಮಾನ್ ಖಾನ್​ರ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಕಿಕ್​ನಲ್ಲಿ ಜತೆಯಾಗಿದ್ದ ನೀಳಕಾಲ ಸುಂದರಿ ಬಾಕ್ಸಾಫೀಸ್ ಬೇಟೆಗೆ ಪ್ಲಸ್ ಪಾಯಿಂಟ್​ ಆಗಿದ್ದರು.

zahir | news18-kannada
Updated:August 20, 2019, 11:08 AM IST
ಬಾಹುಬಲಿ ಪ್ರಭಾಸ್ ಈಗ ಬ್ಯಾಡ್ ಬಾಯ್​
saaho
  • Share this:
ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾ ಬಿಟೌನ್​ನಲ್ಲಿ ಸಖತ್ ಸೌಂಡ್​ ಮಾಡುತ್ತಿದೆ. 'ಬಾಹುಬಲಿ' ಚಿತ್ರದ ಬಳಿಕ ಟಾಲಿವುಡ್​ ರೆಬೆಲ್​ ಸ್ಟಾರ್​ ಅವರ ಮತ್ತೊಂದು ಅವತಾರಕ್ಕಾಗಿ ಸಿನಿಪ್ರಿಯರು ಕಾದು ಕುಳಿತಿದ್ದಾರೆ. ಈಗಾಗಲೇ ಟ್ರೈಲರ್​ ಮೂಲಕ ಸಂಚಲನ ಸೃಷ್ಟಿಸಿರುವ ಚಿತ್ರತಂಡ ಇದೀಗ ಮತ್ತೊಂದು ಸಾಂಗ್ ಬಿಡುಗಡೆ ಮಾಡಿದೆ. ಈ ಹಿಂದೆ ರೋಮ್ಯಾಂಟಿಕ್ ಗೀತೆಯ ಮೂಲಕ ಹಾರ್ಟ್​ಗೆ ಲಗ್ಗೆಯಿಟ್ಟ ಟೀಂ ಸಾಹೋ ಈ ಬಾರಿ ಸಖತ್ ಹಾಟ್ ಗೀತೆಯೊಂದಿಗೆ ಕಿಚ್ಚು ಹಚ್ಚಿದೆ.

'ಬ್ಯಾಡ್ ಬಾಯ್..' ಲಿರಿಕ್​ನೊಂದಿಗೆ ಮೂಡಿ ಬಂದಿರುವ ಈ ಹಸಿ ಬಿಸಿ ಸಾಂಗ್​​ನಲ್ಲಿ 'ಬಾಹುಬಲಿ'ಗೆ ಜೋಡಿಯಾಗಿರುವುದು ಜಾಕ್ವೆಲಿನ್ ಫರ್ನಾಂಡೀಸ್. ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಕಪೂರ್ ಕಾಣಿಸಲಿದ್ದಾರೆ. ಇದರ ನಡುವೆ ಏಕಾಏಕಿ ಜಾಕ್ವೆಲಿನ್ ಎಂಟ್ರಿಯಾಗಿರುವುದು ಹೊಸ ಕುತೂಹಲವನ್ನು ಹುಟ್ಟುಹಾಕಿದೆ.

ಖ್ಯಾತ ರ್ಯಾಪರ್ ಬಾದ್​ಶಾ ಸಂಗೀತ ಸಂಯೋಜಿಸಿ ಈ ಗೀತೆಯನ್ನು ಹಾಡಿದ್ದಾರೆ. 'ಬಾಹುಬಲಿ' ಹುಡುಗನ ಬ್ಯಾಡ್ ಬಾಯ್ ಲುಕ್ ರೆಬೆಲ್ ಸ್ಟಾರ್ ಅಭಿಮಾನಿಗಳನ್ನು ಸೆಳೆದಿದ್ದು, ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಾಗೆಯೇ ಚಿತ್ರದಲ್ಲಿ ಲಂಕಾ ಬೆಡಗಿ ಜಾಕ್ವೆಲಿನ್ ಕಾಣಿಸಲಿದ್ದಾರಾ ಅಥವಾ ಕೇವಲ ಈ ಗೀತೆಗೆ ಸೀಮಿತವೇ ಎಂಬ ಪ್ರಶ್ನೆಯೊಂದು ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಏಕೆಂದರೆ ಈ ಹಿಂದೆ ಸಲ್ಮಾನ್ ಖಾನ್​ರ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ 'ಕಿಕ್'​ನಲ್ಲಿ ಜತೆಯಾಗಿದ್ದ ನೀಳಕಾಲ ಸುಂದರಿ ಬಾಕ್ಸಾಫೀಸ್ ಬೇಟೆಗೆ ಪ್ಲಸ್ ಪಾಯಿಂಟ್​ ಆಗಿದ್ದರು. ಇದೀಗ ಸಾಹಸಮಯ 'ಸಾಹೋ'ದಲ್ಲೂ ಕಾಣಿಸಿಕೊಳ್ಳುವ ಮೂಲಕ ಹೊಸ ನಿರೀಕ್ಷೆಯನ್ನು  ಹುಟ್ಟುಹಾಕಿದ್ದಾರೆ.

ಈ ಚಿತ್ರವು ಆಗಸ್ಟ್​ 30 ರಂದು ದೇಶದಾದ್ಯಂತ ಹಲವು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕಾಗಿ ಕಳೆದೆರೆಡು ವರ್ಷಗಳಿಂದ ಟಾಲಿವುಡ್​ ರೆಬೆಲ್​ಸ್ಟಾರ್ ಅಭಿಮಾನಿಗಳಂತೂ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ