Saaho collections: ಸಾಹೋ ಎಫೆಕ್ಟ್​: ಲಾಭದಲ್ಲಿ ನಿರ್ಮಾಪಕರು, ನಷ್ಟ ಹೋದ ವಿತರಕರು..!

Saaho: ಸಾಹೋ ಚಿತ್ರದ ನಿರ್ಮಾಪಕರು ಮಾತ್ರ 20 ದಿನಗಳಲ್ಲಿ 424 ಕೋಟಿ ಗಳಿಕೆ ಮಾಡಿದೆ ಎನ್ನುತ್ತಿದದಾರೆ. ಆದರೆ ಹೊರಗಡೆ ಮಾತ್ರ ಬೇರೆಯದ್ದೇ ಪರಿಸ್ಥಿತಿ ಇದೆ. ನಿರ್ಮಾಪಕರು ಹಾಕಿದ ಹಣ ಹಿಂದಕ್ಕೆ ಪಡೆದುಕೊಂಡು ಕೊಂಚ ಲಾಭದಲ್ಲಿದ್ದರೆ, ಸಿನಿಮಾವನ್ನು ವಿತರಣೆ ಮಾಡಿದವರು ಮಾತ್ರ ತುಂಬಾನೇ ನಷ್ಟದಲ್ಲಿದ್ದಾರಂತೆ.

Anitha E | news18-kannada
Updated:September 16, 2019, 7:01 PM IST
Saaho collections: ಸಾಹೋ ಎಫೆಕ್ಟ್​: ಲಾಭದಲ್ಲಿ ನಿರ್ಮಾಪಕರು, ನಷ್ಟ ಹೋದ ವಿತರಕರು..!
ನಿರ್ದೇಶಕ ಸುಜಿತ್​ ಹಾಗೂ ಪ್ರಭಾಸ್​
Anitha E | news18-kannada
Updated: September 16, 2019, 7:01 PM IST
ಪ್ರಭಾಸ್​ ಅಭಿನಯದ 'ಬಾಹುಬಲಿ' ಸಿನಿಮಾ ಬಾಕ್ಸಾಫಿಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, 2000 ಕೋಟಿ ಬಾಚಿಕೊಂಡ 'ಬಾಹುಬಲಿ' ಸಿನಿಮಾದ ಇಮೇಜ್​ನಲ್ಲೇ ಪ್ರಭಾಸ್​ ಮತ್ತೊಂದು ದೊಡ್ಡ ಬಜೆಟ್​ನ ಚಿತ್ರವನ್ನು ಮಾಡಲು ಮುಂದಾದರು. ಅದೇ 'ಸಾಹೋ'.... ಈ ಚಿತ್ರ ಮೂರು ವಾರಗಳ ಹಿಂದೆ ಬಿಡುಗಡೆಯಾಗಿದ್ದು, ಈಗಾಗಲೇ ಹಲವಾರು ಚಿತ್ರಮಂದಿರಗಳಿಂದ ಕಾಲ್ಕಿತ್ತಿದೆ.

ಆದರೆ ಈ ಚಿತ್ರದ ನಿರ್ಮಾಪಕರು ಮಾತ್ರ 20 ದಿನಗಳಲ್ಲಿ 424 ಕೋಟಿ ಗಳಿಕೆ ಮಾಡಿದೆ ಎನ್ನುತ್ತಿದದಾರೆ. ಆದರೆ ಹೊರಗಡೆ ಮಾತ್ರ ಬೇರೆಯದ್ದೇ ಪರಿಸ್ಥಿತಿ ಇದೆ. ನಿರ್ಮಾಪಕರು ಹಾಕಿದ ಹಣ ಹಿಂದಕ್ಕೆ ಪಡೆದುಕೊಂಡು ಕೊಂಚ ಲಾಭದಲ್ಲಿದ್ದರೆ, ಸಿನಿಮಾವನ್ನು ವಿತರಣೆ ಮಾಡಿದವರು ಮಾತ್ರ ತುಂಬಾನೇ ನಷ್ಟದಲ್ಲಿದ್ದಾರಂತೆ.

Prabhas in Saaho movie
'ಸಾಹೋ' ಸಿನಿಮಾದಲ್ಲಿ ಪ್ರಭಾಸ್​


ಹೌದು, ಹೀಗೊಂದು ಸುದ್ದಿ ಈಗ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಿನಿಮಾ ನಿರ್ಮಾಣ 350 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ ಎನ್ನುತ್ತಿದ್ದ ಚಿತ್ರತಂಡ, ಸಿನಿಮಾದ ಗಳಿಕೆ ಕುರಿತಂತೆ ಪೋಸ್ಟರ್​ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಸಿನಿಮಾ ಬಿಡುಗಡೆಯಾದ ಎರಡೇ ವಾರಕ್ಕೆ 420 ಕೋಟಿ ಗಳಿಕೆ ಮಾಡಿದೆಯಂತೆ ಎಂದರೆ ಅಭಿಮಾನಿಗಳಿಗೂ ಶಾಕ್​ ಆಗಿದೆ.

ಇದನ್ನೂ ಓದಿ: Ileana Dcruz: ಟ್ವೀಟ್​ ಮೂಲಕ ತನಗಿರುವ ಗಂಭೀರ ಕಾಯಿಲೆ ಬಗ್ಗೆ ಬಹಿರಂಗಪಡಿಸಿದ ಇಲಿಯಾನಾ..!

ಆದರೆ ಈ ಸಿನಿಮಾ ಕೇವಲ ತೆಲುಗು ಭಾಷೆಯಲ್ಲೇ 120 ಕೋಟಿ ಗಳಿಸಿದೆ ಎನ್ನುತ್ತಿದ್ದಾರೆ ಚಿತ್ರ ನಿರ್ಮಾಪಕರು. ಆದರೆ ಮುಂಗಡವಾಗಿಯೇ ಕೆಲವು ಪ್ರದೇಶಗಳಲ್ಲಿ ವಿತರಕರು ಈ ಸಿನಿಮಾಗೆ ಹಣ ನೀಡಿ ಖರೀದಿಸಿರುವುದರಿಂದ ಹಲವರಿಗೆ ನಷ್ಟವಾಗಿದೆಯಂತೆ.

ಇದನ್ನೂ ಓದಿ: 'ಶಕುಂತಲಾ ದೇವಿ' ಸಿನಿಮಾದ ನಟಿ ವಿದ್ಯಾ ಬಾಲನ್​ 'ಹತ್ಯೆ'ಗೂ ನಡೆಯುತ್ತಾ ಸಂಚು..!
Loading...

ತಮಿಳು ಹಾಗೂ ಮಲಯಾಳಂನಲ್ಲಿ ಸಾಹೋ ಗಳಿಕೆ ನಿಜಕ್ಕೂ ನಿರಾಶಾದಾಯವಾಗಿದೆ. ಡಿಜಿಟಲ್​, ಸ್ಯಾಟಲೈಟ್​ ಹಾಗೂ ಆಡಿಯೋ ಹಕ್ಕು ಮಾರಾಟವಾಗಿರುವುದನ್ನು ಗಮನಿಸಿದರೆ, ಸಿನಿಮಾ ನಿರ್ಮಾಪಕರು ನಿಜಕ್ಕೂ ಲಾಭದಲ್ಲಿದ್ದಾರೆ. ಆದರೆ ಈ ಸಿನಿಮಾಗೆ ಮುಂಗಡವಾಗಿಯೇ ಹಣ ನೀಡಿ ಖರೀದಿಸಿದ ವಿತರಕರು ಮಾತ್ರ ನಿಜಕ್ಕೂ ಸಂಕಷ್ಟದಲ್ಲಿದ್ದಾರೆ ಎನ್ನಲಾಗುತ್ತಿದೆ.

Aamir Khan: ಬಾಲ್ಯದಲ್ಲಿ ಅಮೀರ್​ ಹೇಗಿದ್ದರು ಗೊತ್ತಾ..? ಇಲ್ಲಿವೆ ಚಿತ್ರಗಳು..!

First published:September 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...