ಬಿಡುಗಡೆಗೆ ಮುನ್ನವೇ ಸಾಹೋ ಆರ್ಭಟ ಶುರು: ಬಾಹುಬಲಿ ದಾಖಲೆ ಉಡೀಸ್

Sahoo: ಈ ಹಿಂದೆ ರೆಬೆಲ್​ ಸ್ಟಾರ್ ಪ್ರಭಾಸ್ ಅಭಿನಯದ ಬಾಹುಬಲಿ ಸಿರೀಸ್​ ಡಿಜಿಟಲ್ ರೈಟ್ಸ್​ನ್ನು ನೆಟ್​ಫ್ಲಿಕ್ಸ್ 25.5 ಕೋಟಿಗೆ ಖರೀದಿಸಿತ್ತು. ಇದೀಗ ಇದೇ ದಾಖಲೆಯನ್ನು ಅಳಿಸಿಹಾಕಿರುವ ಡಾರ್ಲಿಂಗ್ ಟಾಲಿವುಡ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

zahir | news18-kannada
Updated:August 25, 2019, 10:29 PM IST
ಬಿಡುಗಡೆಗೆ ಮುನ್ನವೇ ಸಾಹೋ ಆರ್ಭಟ ಶುರು: ಬಾಹುಬಲಿ ದಾಖಲೆ ಉಡೀಸ್
saaho
  • Share this:
'ಸಾಹೋ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕಿದ್ದೇ ತಡ ದಾಖಲೆಗಳ ನಿರ್ಮಾಣ ಪ್ರಾರಂಭವಾಗಿದೆ. 'ಬಾಹುಬಲಿ' ಚಿತ್ರದ ಬಳಿಕ ಪ್ರಭಾಸ್ ಸೂಪರ್ ಹೀರೋವಾಗಿ ರಂಜಿಸಲಿರುವ ಈ ಚಿತ್ರದ ಡಿಜಿಟಲ್ ರೈಟ್ಸ್​ನ್ನು ಅಮೆಜಾನ್ ಪ್ರೈಮ್ ಖರೀದಿಸಿದೆ. ಅದು ಕೂಡ ಬರೋಬ್ಬರಿ 42 ಕೋಟಿ ನೀಡಿ.

ಹೌದು, ಬಹುನಿರೀಕ್ಷಿತ 'ಸಾಹೋ' ಚಿತ್ರದ ಡಿಜಿಟಲ್ ರೈಟ್ಸ್​ಗಾಗಿ ಹಲವು ಕಂಪೆನಿಗಳು ಮುಗಿಬಿದ್ದಿದ್ದವು. ಆದರೆ ಇದೀಗ ಅಮೆಜಾನ್ ಪ್ರೈಮ್ 42 ಕೋಟಿಗೆ ಡೀಲ್ ಕುದುರಿಸುವ ಮೂಲಕ ಚಿತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರಗಳ ಡಿಜಿಟಲ್ ರೈಟ್ಸ್​ ಮಾತ್ರ ಅಮೆಜಾನ್ ಪಾಲಾಗಿದೆ. ಇನ್ನು ಹಿಂದಿ ರೈಟ್ಸ್​ನ್ನು ನಿರ್ಮಾಪಕರು ಹಾಗೆಯೇ ಉಳಿಸಿಕೊಂಡಿದ್ದು, ಚಿತ್ರ ಬಿಡುಗಡೆ ಬಳಿಕ ಮಾರಾಟ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ರೆಬೆಲ್​ ಸ್ಟಾರ್ ಪ್ರಭಾಸ್ ಅಭಿನಯದ 'ಬಾಹುಬಲಿ' ಸಿರೀಸ್​ ಡಿಜಿಟಲ್ ರೈಟ್ಸ್​ನ್ನು ನೆಟ್​ಫ್ಲಿಕ್ಸ್ 25.5 ಕೋಟಿಗೆ ಖರೀದಿಸಿತ್ತು. ಇದೀಗ ಇದೇ ದಾಖಲೆಯನ್ನು ಅಳಿಸಿಹಾಕಿರುವ 'ಡಾರ್ಲಿಂಗ್' ಟಾಲಿವುಡ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಭಾರತೀಯ ಚಿತ್ರರಂಗದ ಡಿಜಿಟಲ್ ರೈಟ್ಸ್​ ರೆಕಾರ್ಡ್ಸ್​ನಲ್ಲಿ ರಜನಿಕಾಂತ್ ಅಭಿನಯದ 'ರೊಬೋ 2.0' ಚಿತ್ರ ಮುಂಚೂಣಿಯಲ್ಲಿದ್ದು, ಈ ಚಿತ್ರದ ಹಕ್ಕನ್ನು ಅಮೆಜಾನ್ ಪ್ರೈಮ್ 60 ಕೋಟಿಗೆ ತನ್ನದಾಗಿಸಿಕೊಂಡಿತ್ತು. ಇದೀಗ 'ಸಾಹೋ' ಹಿಂದಿ ಡಿಜಿಟಲ್ ರೈಟ್ಸ್ ಹಕ್ಕು ಇನ್ನೂ ಮಾರಾಟವಾಗದೇ ಉಳಿದಿರುವುದರಿಂದ ಈ ಚಿತ್ರ '2.0' ದಾಖಲೆಯನ್ನು ಮುರಿಯಲಿದೆ ಎನ್ನಲಾಗುತ್ತಿದೆ.

ಸುಜೀತ್ ರೆಡ್ಡಿ ನಿರ್ದೇಶನದ 'ಸಾಹೋ' ಆಗಸ್ಟ್​ 30 ರಂದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತೆರೆ ಕಾಣಲಿದ್ದು, ಚಿತ್ರವು ಓಪನಿಂಗ್ ಮೂಲಕವೇ ಹೊಸ ದಾಖಲೆಗಳಿಗೆ ಮುನ್ನುಡಿ ಬರೆಯುವ ನಿರೀಕ್ಷೆಯಿದೆ.

ಈ ಬಿಗ್ ಬಜೆಟ್ ಚಿತ್ರದಲ್ಲಿ ಪ್ರಭಾಸ್​ರೊಂದಿಗೆ ಬಾಲಿವುಡ್ ತಾರೆಗಳಾದ ಜಾಕಿ ಶ್ರಾಫ್, ಶ್ರದ್ಧಾ ಕಪೂರ್, ಮಂದಿರಾ ಬೇಡಿ, ನೀಲ್ ನಿತಿನ್ ಮುಖೇಶ್, ಎವೆಲಿನ್ ಶರ್ಮಾ ಮುಂತಾದ ಪ್ರಮುಖ ನಟ-ನಟಿಯರು ಕಾಣಿಸಿಕೊಂಡಿದ್ದಾರೆ.

First published: August 25, 2019, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading