ಕನ್ನಡ ಚಿತ್ರರಂಗದಲ್ಲಿ ಈಗ ಮೆರೆಯುತ್ತಿರುವ ಟಾಪ್ ಸ್ಟಾರ್ಗಳಲ್ಲಿ ಶ್ರೀಮುರುಳಿ ಕೂಡ ಒಬ್ಬರು. ಚಂದ್ರ ಚಕೋರಿ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮುರುಳಿ ಅವರು ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡರು. 2003ರಲ್ಲಿ ಕುಮಾರಸ್ವಾಮಿ ಅವರ ಚೆನ್ನಾಂಬಿಕ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾವನ್ನು ಎಸ್. ನಾರಾಯಣ್ ಅವರು ನಿರ್ದೇಶನ ಮಾಡಿದ್ದರು. 250 ದಿನಗಳ ಪ್ರದರ್ಶನ ಕಂಡಿದ್ದ ಚಂದ್ರಚಕೋರಿ ಸಿನಿಮಾ ಮುರುಳಿ ಅವರಿಗೆ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು. ಎಸ್.ನಾರಾಯಣ್ ನಿರ್ದೇಶನ, ಚಿತ್ರದ ಸಂಗೀತ, ಮುರಳಿ ಅಭಿನಯ ಕನ್ನಡ ಚಿತ್ರ ಪ್ರಿಯರ ಹೃದಯ ಗೆದ್ದಿದ್ದಲ್ಲದೆ ಅಂದಿನ ಕಾಲದಲ್ಲಿ ಈ ಸಿನಿಮಾ ಹೊಸ ದಾಖಲೆಯೇ ಬರೆದಿಬಿಟ್ಟಿತು.
ತನ್ನ ಚೊಚ್ಚಲ ಸಿನಿಮಾದಲ್ಲೇ ಅದ್ಭುತ ನಟನೆಯ ಮೂಲಕ ಶ್ರೀಮುರಳಿ ಕನ್ನಡಿಗರ ಮನದಲ್ಲಿ ನೆಲೆಸಿಬಿಟ್ಟರು. ಸದ್ಯ ಈ ಚಂದ್ರ ಚಕೋರಿ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. ಸಿನಿಮಾ ರಿಲೀಸ್ ಆಗಿ ಸುಮಾರು 18 ವರ್ಷದ ಬಳಿಕ ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ ನಿರ್ದೇಶಕ ಎಸ್. ನಾರಾಯಣ್.
Mr. ಬ್ಯಾಚುಲರ್ ಅಂತಿದ್ದಾರೆ ನಟ ಡಾರ್ಲಿಂಗ್ ಕೃಷ್ಣ!
ಅದೇನೆಂದರೆ ಚಂದ್ರ ಚಕೋರಿ ಸಿನಿಮಾಗೆ ಮೊದಲು ನಾಯಕನಾಗಿ ಶ್ರೀಮುರಳಿ ಆಯ್ಕೆ ಆಗಿರಲಿಲ್ಲವಂತೆ. ಇವರಿಗೂ ಮೊದಲು ಬೇರೊಬ್ಬ ನಾಯಕನನ್ನು ಆಯ್ಕೆ ಮಾಡಿದ ಬಗ್ಗೆ ಎಸ್. ನಾರಾಯಣ್ ಹೇಳಿದ್ದಾರೆ. ಚಂದ್ರ ಚಕೋರಿ ಸಿನಿಮಾಗೆ ಹೀರೋ ಆಗಬೇಕಾಗಿದ್ದವರು ನಟ ಆದಿತ್ಯ ಎಂದು ಆ ಚಿತ್ರದ ನಿರ್ದೇಶಕ ಎಸ್. ನಾರಾಯಣ್ ಬಹಿರಂಗಪಡಿಸಿದ್ದಾರೆ.
ಚಂದ್ರ ಚಕೋರಿ ಕಥೆಯನ್ನು ಎಸ್. ನಾರಾಯಣ್ ಅವರು ಕುರಿಗಳು ಸಾರ್ ಕುರಿಗಳು ಸಿನಿಮಾ ಚಿತ್ರೀಕರಣ ಮಾಡುತ್ತಲೇ ಬರೆದಿದ್ದರಂತೆ. ಚಿತ್ರಕ್ಕೆ ಹೊಸ ನಾಯಕನ ಹುಡುಕಾಟದಲ್ಲಿದ್ದ ನಾರಾಯಣ್ ಆದಿತ್ಯ ತಂದೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಸಂಪರ್ಕಿಸಿ ವಿಚಾರಿಸಿದ್ದರಂತೆ.
ಕುರಿಗಳು ಸಾರ್ ಕುರಿಗಳು ಸಿನಿಮಾಗೆ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಆದಿತ್ಯ, ಆಗಾಗ ಬಂದು ಹೋಗುವುದನ್ನು ಕಂಡ ನಾರಾಯಣ್ ಈತನೇ ಪರ್ಫೆಕ್ಟ್ ಎಂದುಕೊಂಡಿದ್ದರಂತೆ. ಅವರನ್ನು ಸಂಪರ್ಕಿಸಲು 3-4 ಸಲ ಪ್ರಯತ್ನ ಪಟ್ಟಿದ್ದಾರೆ. ಆದರೆ, ಅಷ್ಟರಲ್ಲಿ ಆದಿತ್ಯ 'ಲವ್' ಎನ್ನುವ ಚಿತ್ರವನ್ನು ಒಪ್ಪಿಕೊಂಡಿಯಾಗಿತ್ತು. ಹೀಗಾಗಿ ಚಂದ್ರ ಚಕೋರಿ ಚಿತ್ರದಲ್ಲಿ ನಟಿಸುವ ಅವಕಾಶ ಶ್ರೀ ಮುರಳಿಗೆ ಸಿಕ್ಕಿತಂತೆ.
ಆತ ನನಗೆ ಮೋಸ ಮಾಡಿದ!; ಬ್ರೇಕ್ಅಪ್ ವಿಚಾರ ಬಹಿರಂಗ ಪಡಿಸಿ ಬೇಸರ ಹೊರ ಹಾಕಿದ ನಟಿ
ಸದ್ಯ ಈ ಘಟನೆ ನಡೆದು ಎಷ್ಟೋ ವರ್ಷಗಳು ಕಳೆದ ಬಳಿಕ ಇದೇ ಮೊದಲ ಬಾರಿಗೆ ನಾರಾಯಣ್ ಅವರ ನಿರ್ದೇಶನದಲ್ಲಿ ಆದಿತ್ಯ ನಟಿಸುತ್ತಿದ್ದಾರೆ. ಹೌದು, '5 D' ಶೀರ್ಷಿಕೆಯ ಸಿನಿಮಾದಲ್ಲಿ ಆದಿತ್ಯಗೆ ಆ್ಯಕ್ಷನ್ ಕಟ್ ಹೇಳಲು ನಾರಾಯಣ್ ಸಿದ್ದರಾಗಿದ್ದಾರೆ. ಈ ಸಿನಿಮಾದಲ್ಲಿ ಆದಿತ್ಯಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಸ್ವಾತಿ ಕುಮಾರ್ ಅವರ 1 ಟು 100 ಡ್ರೀಮ್ ಮೂವೀಸ್ ಬ್ಯಾನರ್ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಹೊಸ ವರ್ಷದ ಮೊದಲ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಸಿನಿಮಾವನ್ನು ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ