ಸ್ಯಾಂಡಲ್‍ವುಡ್ (Sandalwood) ಮತ್ತು ಕನ್ನಡ ಕಿರುತೆರೆಯಲ್ಲಿ ಫೇಮಸ್ ಆಗಿರುವ ನಟ ಅನಿರುದ್ಧ್ (Actor Anirudh). ಅನಿರುದ್ಧ್ ಅವರು ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ (Serial) ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಯೂರಿದ್ದರು. ವಿಷ್ಣುವರ್ಧನ್ ಅಳಿಯ ಅಂತ ತುಂಬಾ ಜನ ಈ ಸೀರಿಯಲ್ ನೋಡ್ತಾ ಇದ್ರು. ಅನಿರುದ್ಧ್ ಸಹ ಅದೇ ರೀತಿ ಪಾತ್ರಕ್ಕೆ ಜೀವ ತುಂಬಿದ್ರು. ಸೀರಿಯಲ್ ಸೆಟ್‍ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಧಾರಾವಾಹಿ ಇಂದ ಔಟ್ ಆಗಿದ್ದರು. ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಬೇಕು ಎಂಬ ಚರ್ಚೆ ಸಹ ನಡೆದಿತ್ತು. ಆದ್ರೆ ನಿರ್ದೇಶಕ ಎಸ್, ನಾರಾಯಣ್ (S Narayan) ಅನಿರುದ್ಧ್ ಗಾಗಿ ಸೂರ್ಯವಂಶ ಧಾರಾವಾಹಿ ನಿರ್ಮಾಣ ಮಾಡ್ತಾ ಇದ್ದರು. ಆದ್ರೆ ಮೂಲಗಳ ಪ್ರಕಾರ ಇದೀಗ ಸೂರ್ಯವಂಶ ಪ್ರಾಜೆಕ್ಟ್ (Project) ನಿಂತಿದೆಯಂತೆ.
ಸೂರ್ಯವಂಶ ಧಾರಾವಾಹಿಯಲ್ಲಿ ಸಿಕ್ಕಿತ್ತು ಅವಕಾಶ
ಎಲ್ಲಾ ವಿವಾದಗಳ ನಡುವೆ ಅನಿರುದ್ಧ್ ಗೆ ಮತ್ತೊಂದು ಅವಕಾಶ ದೊರೆಕಿಸಿ ಕೊಟ್ಟಿದ್ರು ನಿದೇರ್ಶಕ ಎಸ್.ನಾರಾಯಣ. ಸೂರ್ಯವಂಶ ಹೆಸರಿನ ಹೊಸ ಧಾರಾವಾಹಿಯಲ್ಲಿ ನಟ ಅನಿರುದ್ಧ ಜತ್ಕರ್ ಪ್ರಮುಖ ಪಾತ್ರದಲ್ಲಿ ಮಾಡಬೇಕಿತ್ತು. ಉದಯ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಬೇಕಿತ್ತು. ಈ ಸೀರಿಯಲ್‍ಗೆ ಕಲಾಸಾಮ್ರಾಟ್ ಎಸ್.ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನವಿತ್ತು.
20 ಎಪಿಸೋಡ್ ಶೂಟ್
ಸೂರ್ಯವಂಶ ಧಾರಾವಾಹಿ ಶೂಟಿಂಗ್ ಸಹ ಆರಂಭವಾಗಿತ್ತು. 20 ಎಪಿಸೋಡ್‍ಗಳನ್ನು ಶೂಟ್ ಮಾಡಲಾಗಿತ್ತು. ಆದ್ರೆ 20 ಸಂಚಿಕೆಗಳ ಶೂಟಿಂಗ್‍ಗೆ ಧಾರಾವಾಹಿ ನಿಂತು ಹೋಗಿದೆ. ಅಲ್ಲದೇ ಈ ಪ್ರಾಜೆಕ್ಟ್ ಕೈ ಬಿಟ್ಟಿದ್ದಾರಂತೆ ಎಸ್. ನಾರಾಯಣ್.
ಅನಿರುದ್ಧ್ ಅವರಿಗೆ ಇದ್ದ ಒಂದು ಅವಕಾಶ ಕೈ ತಪ್ಪಿತಾ?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ ಅವರಿಗೆ ಮತ್ತೆ ಅವಕಾಶಗಳು ಸಿಗೋದೇ ಇಲ್ಲ ಎಂಬ ಚರ್ಚೆಗಳು ನಡೆದಿದ್ವು. ಆಗ ಅವರ ಸಹಾಯಕ್ಕೆ ಬಂದಿದ್ದು ಎಸ್ ನಾರಾಯಣ್ ಅವರು. ಅವರಿಗಾಗಿ ಕತೆ ಬರೆದಿದ್ದರು. ಅವರೇ ನಿರ್ಮಾಣ ಮಾಡಿದ್ದರು. ಎಲ್ಲರೂ ಕೈ ಬಿಟ್ಟಾಗ ಅನಿರುದ್ಧ್ ಅವರಿಗೆ ಆಸರೆಯಾಗಿ ನಿಂತಿದ್ದರು. ಆದ್ರೆ ಆ ಪ್ರಾಜೆಕ್ಟ್ ಕೈ ಬಿಟ್ಟ ಕಾರಣ ಅನಿರುದ್ಧ್ ಅವರಿಗೆ ಇದ್ದ ಒಂದು ಅವಕಾಶ ಕೈ ತಪ್ಪಿದಂತಾಗಿದೆ.
ಪ್ರಾಜೆಕ್ಟ್ ಕೈ ಬಿಟ್ರಂತೆ ಎಸ್. ನಾರಾಯಣ್!
ನಿರ್ದೇಶನದಲ್ಲಿ ಯಾವಾಗಲೂ ಸೂಪರ್ ಹಿಟ್ ಗಳನ್ನೇ ಕೊಟ್ಟಿದ್ದಾರೆ ಎಸ್. ನಾರಾಯಣ್ ಅವರು. ಅವರು ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಅದೇ ರೀತಿ ಧಾರಾವಾಹಿ ಹೇಗಿರುತ್ತೆ ಎಂದು ಎಲ್ಲಾ ಅಭಿಮಾನಿಗಳು ಕಾಯ್ತಾ ಇದ್ದರು. ಆದ್ರೆ 20 ಸಂಚಿಕೆ ಶೂಟ್ ಮಾಡಿ ಪ್ರಾಜೆಕ್ಟ್ ಕೈ ಬಿಟ್ಟಿದ್ದಾರಂತೆ. ಯಾಕೆ ಎಂಬ ಕಾರಣ ಇನ್ನೂ ತಿಳಿದಿಲ್ಲ.
ಸೂರ್ಯವಂಶ ಸಿನಿಮಾ ರೀತಿ ಬರ್ತಿತ್ತಾ ಧಾರಾವಾಹಿ
1999 ರಲ್ಲಿ ತೆರೆಗೆ ಬಂದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾ 'ಸೂರ್ಯವಂಶ'. ಈ ಚಿತ್ರಕ್ಕೆ ಎಸ್.ನಾರಾಯಣ್ ಆ್ಯಕ್ಷನ್ ಕಟ್ ಹೇಳಿದ್ದರು.'ಸೂರ್ಯವಂಶ ಸಿನಿಮಾ ಹಿಟ್ ಆಗಿತ್ತು. ಅದೇ ಹೆಸರು ಧಾರಾವಾಹಿಗೆ ಇಟ್ಟಿದ್ರು. ಹಾಗಾಗಿ ಧಾರಾವಾಹಿ ಹಿಟ್ ಆಗುವ ಎಲ್ಲಾ ಲಕ್ಷಣಗಳು ಇದ್ದವು.
ಇದನ್ನೂ ಓದಿ: Jote Joteyali: ವಿಷ್ಣುವರ್ಧನ್ ಅಳಿಯ ಅನಿರುದ್ಧ್‌ಗೆ ಕನ್ನಡ ಕಿರುತೆರೆಯಿಂದ ಬಹಿಷ್ಕಾರ? ಜೊತೆ ಜೊತೆಯಲಿ ಏನಾಯ್ತು?
ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಎಸ್. ನಾರಾಯಣ್ ಅವರು ಆತ್ಮೀಯ ಸ್ನೇಹಿತರು. ಇಬ್ಬರು ಒಟ್ಟಿಗೆ ಮಾಡಿರುವ ಸಿನಿಮಾಗಳು ಯಶಸ್ಸು ಕಂಡಿದ್ದವು. ಅದೇ ರೀತಿ ಅನಿರುದ್ಧ್ ಮತ್ತು ನಾರಾಯಣ್ ಜೋಡಿ ಮೋಡಿ ಮಾಡುತ್ತೆ ಅಂತ ಎಲ್ಲಾ ಕಾಯ್ತಾ ಇದ್ರು. ಆದ್ರೆ ಅದು ಆಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ