ಸುನೀಲ್ ಶೆಟ್ಟಿ ಮಗನ ಸಿನಿ ಎಂಟ್ರಿಗೆ ಸಕಲ ಸಿದ್ಧತೆ: 'ಪೈಲ್ವಾನ್' ಅಣ್ಣನಿಗೆ ಕಿಚ್ಚನ ವಿಶಸ್

Ahan Shetty : ತೆಲುಗಿನ 'ಜೆರ್ಸಿ', 'ಡಿಯರ್ ಕಾಮ್ರೇಡ್', ತಮಿಳಿನ 'ವೀರಂ' ಹಾಗೂ ಕನ್ನಡದ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸೇರಿದಂತೆ ಒಂದಷ್ಟು ಚಿತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲಿ ಕೆಲ ಚಿತ್ರಗಳ ಪ್ರಿ ಪ್ರೊಡಕ್ಷನ್​ ಕೆಲಸಗಳು ಸಹ ಪ್ರಾರಂಭವಾಗಿವೆ.

Suniel-Ahaan-Shetty

Suniel-Ahaan-Shetty

  • Share this:
ಬಾಲಿವುಡ್​ನಲ್ಲಿ ಬಾಕ್ಸಾಫೀಸ್ ಬೇಟೆಗೆ ಇದೀಗ ಸೌತ್ ಸಿನಿಮಾಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಯಾವಾಗ 'ಅರ್ಜುನ್ ರೆಡ್ಡಿ' ರಿಮೇಕ್ 'ಕಬೀರ್ ಸಿಂಗ್'​  ಸೂಪರ್ ಡೂಪರ್ ಹಿಟ್ ಆಯ್ತೋ, ಅಲ್ಲಿಂದಲೇ ಹೊಸ ಶಕೆಯೊಂದು ಪ್ರಾರಂಭವಾಗಿದೆ. ಇದೀಗ ಬಿಟೌನ್ ನಿರ್ಮಾಪಕರು ತೆಲುಗಿನ 'ಜೆರ್ಸಿ', 'ಡಿಯರ್ ಕಾಮ್ರೇಡ್', ತಮಿಳಿನ 'ವೀರಂ' ಹಾಗೂ ಕನ್ನಡದ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸೇರಿದಂತೆ ಒಂದಷ್ಟು ಚಿತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲಿ ಕೆಲ ಚಿತ್ರಗಳ ಪ್ರಿ ಪ್ರೊಡಕ್ಷನ್​ ಕೆಲಸಗಳು ಸಹ ಪ್ರಾರಂಭವಾಗಿವೆ.

ಇದರ ಬೆನ್ನಲ್ಲೇ ಮತ್ತೊಂದು ತೆಲುಗು ಚಿತ್ರ ಹಿಂದಿಗೆ ರಿಮೇಕ್ ಆಗಲು ರೆಡಿಯಾಗಿದೆ. ಇಲ್ಲಿ ವಿಶೇಷ ಏನಪ್ಪಾ ಅಂದರೆ ಈ ಚಿತ್ರದ ಮೂಲಕ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿರುವುದು.

ಈಗಾಗಲೇ ಅಭಿನಯಕ್ಕೆ ಬೇಕಾದ ಸಲಕ ಕಸರತ್ತು ಮಾಡಿ ತಯಾರಿಯಲ್ಲಿರುವ ಅಹಾನ್ ತೆಲುಗಿನ ಸೂಪರ್ ಡೂಪರ್ ಹಿಟ್ 'RX 100' ಚಿತ್ರದ ರಿಮೇಕ್​ನಲ್ಲಿ ಅಭಿನಯಿಸಲಿದ್ದಾರೆ. ಟಾಲಿವುಡ್​ನಲ್ಲಿ ಯುವ ನಟ ಕಾರ್ತಿಕೇಯನ್​ಗೆ ದೊಡ್ಡ ಬ್ರೇಕ್ ನೀಡಿದ್ದ ಈ ಚಿತ್ರದ ಮೂಲಕ ಶೆಟ್ರ ಮಗ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಸದ್ಯ ಚಿತ್ರಕ್ಕೆ 'ತಡಪ್' ಎಂದು ಶೀರ್ಷಿಕೆ ಇಡಲಾಗಿದ್ದು, ಇದನ್ನು ಬಿಟೌನ್​ನ ಅಂಡರ್​ವರ್ಲ್ಡ್​ ಚಿತ್ರಗಳ ಮಾಂತ್ರಿಕ ಎಂದು ಹೆಸರು ಪಡೆದಿರುವ ಮಿಲನ್ ಲುತಾರಿಯಾ  ನಿರ್ದೇಶಿಸಲಿದ್ದಾರೆ. ಹಾಗೆಯೇ ಅಹಾನ್​ಗೆ ನಾಯಕಿಯಾಗಿ ತಾರಾ ಸುತಾರಿಯಾ ಕಾಣಿಸಲಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಸಾಜಿದ್ ನಡಿಯಾದ್ವಾಲಾ ಬಂಡವಾಳ ಹೂಡಲಿದ್ದಾರೆ.

ಪೈಲ್ವಾನ್ ನಟನ ಪುತ್ರನಿಗೆ ಕಿಚ್ಚನ ವಿಶಸ್
ಕಿಚ್ಚ ಸುದೀಪ್ ಹಾಗೂ ಸುನೀಲ್ ಶೆಟ್ಟಿ ಇಬ್ಬರೂ ಗೆಳೆಯರು ಎಂಬುದು ಬಿಡಿಸಿ ಹೇಳಬೇಕಿಲ್ಲ. ಅಭಿನಯ ಚಕ್ರವರ್ತಿಯ ಒಂದು ಕರೆಗೆ ಬಾಲಿವುಡ್ ನಟ 'ಪೈಲ್ವಾನ್'​ನಲ್ಲಿ ಅಭಿನಯಿಸಿದ್ದರು. ಇದೀಗ ಬಾಲಿವುಡ್ ಅಣ್ಣನ ಮಗನ ಚಿತ್ರಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ನಿಮ್ಮ ಮಗನಿಗೆ ಈ ಚಿತ್ರವು ದೊಡ್ಡ ಮಟ್ಟದ ಯಶಸ್ಸು ತಂದುಕೊಡಲಿ ಎಂದು 'ಪೈಲ್ವಾನ್' ಸಾಥಿ ಸುನೀಲ್ ಶೆಟ್ಟಿಗೆ ಕಿಚ್ಚ ಸುದೀಪ್ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

First published: