RX100: ಇಷ್ಟಪಟ್ಟ ಹುಡುಗಿಗಾಗಿ ತಲೆ ಬೋಳಿಸಿಕೊಂಡಿದ್ದರಂತೆ ಆರ್​ಎಕ್ಸ್​100 ನಾಯಕ ಕಾರ್ತಿಕೇಯ

RX100 Karthikeya: ಕೇಳುವುದಕ್ಕೆ ಕೊಂಚ ವಿಚಿತ್ರ ಎನಿಸಿದರೂ ನಿಜ. ಕೆಲವೊಮ್ಮೆ ನಾವು ಏನು ಮಾಡುತ್ತಿದ್ದೇವೆ ಎಂದು ನಮಗೇ ತಿಳಿಯವುದಿಲ್ಲ. ಅದರಲ್ಲೂ ಹರೆಯದಲ್ಲಿ ಮಾಡಿದ ಎಷ್ಟೋ ಕೆಲಸಗಳು ವಯಸ್ಸಾದ ನಂತರ ಅರ್ಥವಾಗುತ್ತದೆ. ಇಲ್ಲಿ ಆರ್​ಎಕ್ಸ್​ 100 ಚಿತ್ರದ ನಾಯಕನ ನಿಜ ಜೀವನದಲ್ಲಿ ಆಗಿದ್ದೂ ಇದೆ.

Anitha E | news18
Updated:July 31, 2019, 6:07 PM IST
RX100: ಇಷ್ಟಪಟ್ಟ ಹುಡುಗಿಗಾಗಿ ತಲೆ ಬೋಳಿಸಿಕೊಂಡಿದ್ದರಂತೆ ಆರ್​ಎಕ್ಸ್​100 ನಾಯಕ ಕಾರ್ತಿಕೇಯ
ಆರ್​ಎಕ್ಸ್​ 100 ಚಿತ್ರದ ನಟ ಕಾರ್ತಿಕೇಯ
Anitha E | news18
Updated: July 31, 2019, 6:07 PM IST
ಪ್ರತಿಯೊಬ್ಬರೂ ಹರೆಯದ ಹಂತವನ್ನು ದಾಟಿಯೇ ಬರುತ್ತಾರೆ. ಆದರೆ ಈ ಹಂತದಲ್ಲಿ ಮಾಡುವ ಕೆಲವೊಂದು ಕೆಲಸಗಳು ಜೀವನದಲ್ಲಿ ಮರೆಯಲಾಗದ ನೆನಪುಗಳಾಗಿ ಬಿಡುತ್ತವೆ. ಅದರಲ್ಲೂ ಆಗ ಏನು ಮಾಡುತ್ತಿದ್ದೇವೆ ಎನ್ನುವ ಅರಿವು ಸಹ ಇರುವುದಿಲ್ಲ. ಇಲ್ಲೊಬ್ಬ ಟಾಲಿವುಡ್​ ನಟ ಸಹ ತಮ್ಮ ಟಿನೇಜ್​ನಲ್ಲಿ ಮಾಡಿದ್ದ ಎಂದು ಕೆಲಸದ ಅರ್ಥ ಈಗ ಅವರಿಗೆ ಅರಿವಾಗುತ್ತಿದೆಯಂತೆ.

ಹೌದು, 'ಆರ್​ ಎಕ್ಸ್​ 100' ಸಿನಿಮಾದಲ್ಲಿ ಭಗ್ನ ಪ್ರೇಮಿಯಾಗಿ ಅಭಿನಯಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಜೋರಾಗಿ ಸದ್ದು ಮಾಡಿದ್ದ ನಟ ಕಾರ್ತಿಕೇಯ. ಈ ನಾಯಕ ನಟ ಈಗ ತಮ್ಮ ಕಾಲೇಜು ದಿನಗಳಲ್ಲಿ ಒಂದು ಹುಡುಗಿಗಾಗಿ ಮಾಡಿದ್ದ ಕೆಲಸದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.



ಕಾರ್ತಿಕೇಯ ಕಾಲೇಜಿನಲ್ಲಿದ್ದಾಗ ಒಂದು ಹುಡುಗಿಯನ್ನು ಇಷ್ಟಪಡುತ್ತಿದ್ದು, ಆಕೆಗಾಗಿ ತಮ್ಮ ತಲೆಯನ್ನೇ ಬೋಳಿಸಿಕೊಂಡಿದ್ದರಂತೆ. ಅದನ್ನ ನೆನೆಸಿಕೊಂಡರೆ ನಗು ಬರುತ್ತದೆ ಎಂದಿದ್ದಾರೆ ಕಾರ್ತಿಕೇಯ.

ಇದನ್ನೂ ಓದಿ: Prabhas: ಲಂಡನ್​ನತ್ತ ಮುಖ ಮಾಡಿದ ಮೋಸ್ಟ್​ ಹ್ಯಾಪನಿಂಗ್​ ಜೋಡಿ ಪ್ರಭಾಸ್​-ಅನುಷ್ಕಾ ಶೆಟ್ಟಿ..!

'ಆಲಿ ತೊ ಸರದಾಗ' ಕಾರ್ಯಕ್ರಮದಲ್ಲಿ ಕಾರ್ತಿಕೇಯ ತಮ್ಮ ಕಾಲೇಜು ದಿನಗಳು ಹಾಗೂ ಕೆಲವೊಂದು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದು ಆಗಿನ ಪ್ರೀತಿಯ ಎಂದು ಕೇಳಿದರೆ, ಅದಕ್ಕೆ ಲವ್​ ಎನ್ನಲಾಗುವುದಿಲ್ಲ ಎಂದು ಮುಸುನಗುತ್ತಾ ಜಾರಿಕೊಂಡಿದ್ದಾರೆ ಆರ್ ಎಕ್ಸ್​ 100 ನಟ.

ಕಾತಿಕೇಯ ಸದ್ಯ'ಗುಣ 369' ಸಿನಿಮಾದಲ್ಲಿ ಅಭಿನಯಿಸುತ್ತಿದ್ದು. ಅದು  ಆ.2ಕ್ಕೆ ತೆರೆಗಪ್ಪಳಿಸಲಿದೆ.
Loading...

 

Topless Yoga Pose: ಸಂಚಲನ ಮೂಡಿಸಿದೆ ಕಿರುತೆರೆ ನಟಿಯ ಟಾಪ್​ಲೆಸ್​ ಯೋಗಾ ಪೋಸ್​..!

First published:July 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...