Priyanka Chopra: ಹೊಸ ಕ್ಯಾಪ್ಟನ್ ಮಾರ್ವೆಲ್ ಆಗಿ ಬಾಲಿವುಡ್​ ಬೆಡಗಿ, ಸೂಪರ್​ ವುಮೆನ್​ ಆಗ್ತಾರಾ ಪ್ರಿಯಾಂಕಾ?

ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರನ್ನು ಮಾರ್ವೆಲ್​ ಸಿನಿಮಾದಲ್ಲಿ ಪರಿಚಯಿಸಲು ರುಸ್ಸೋ ಬ್ರದರ್ಸ್ ಇಚ್ಛೆ ಇರುವುದಾಗಿ ಹೇಳಿದ್ದಾರೆ.

ಪ್ರಿಯಾಂಕಾ ಚೋರ್ಪಾ

ಪ್ರಿಯಾಂಕಾ ಚೋರ್ಪಾ

  • Share this:
ಹಾಲಿವುಡ್ (Hollywood )​ ಸಿನಿಮಾಗಳನ್ನೂ ಇದೀಗ ಭಾರತೀಯರು ಸಖತ್ ಇಷ್ಟಪಟ್ಟು ನೋಡುತ್ತಿದ್ದಾರೆ. ಅದರಲ್ಲಿಯೂ ಬಹುಮುಖ್ಯವಾಗಿ ಡಿಸಿ (DC) ಮತ್ತು ಮಾರ್ವೆಲ್ (Marvel)​ ಅವರ ಕಾಮಿಕ್ಸ್ ಅವತರಣಿಕೆಯ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಲಾಕ್​ ಡೌನ್​ ನಂತರ ಬಿಡುಗಡೆ ಆದ ಸ್ಪೈಡರ್ ಮ್ಯಾನ್ ನೋ ವೆ ಹೋಂ ಮತ್ತು ಡಾಕ್ಟರ್​ ಸ್ಟ್ರೇಂಜ್​ ಸಿನಿಮಾಗಳು ಭಾರತೀಯ ಗಲ್ಲಾಪೆಟ್ಟಿಗೆಯನ್ನು ಧೂಳಿಪಟ ಮಾಡಿತ್ತು. ಮಾರ್ವೆಲ್​ ಸ್ಟುಡಿಯೋಸ್​ ಸಿನಿಮಾಗಳಿಗೆ ಭಾರತದಲ್ಲಿ ದೊಡ್ಡಮಟ್ಟದಲ್ಲಿಅಭಿಮಾನಿಗಳನ್ನು ಹೊಂದಿದೆ. ಇದರ ಭಾಗವಾಗಿ ಇದೀಗ ಮಾರ್ವೆಲ್​ ನ ಸೂಪರ್​ ನಿರ್ದೇಶಕ ಮತ್ತು ನಿರ್ಮಾಪಕರಾದ ರುಸ್ಸೋ ಬ್ರದರ್ಸ್ (Russo Brothers) ಭಾರತೀಯ ನಟಿಯೊಬ್ಬರನ್ನು ಮೊದಲ ಬಾರಿಗೆ ಮಾರ್ವೆಲ್​ ನಲ್ಲಿ ತರಲು ಇಚ್ಛೆ ಇರುವುದಾಗಿ ಹೇಳಿದ್ದಾರೆ. ಹೌದು, ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರನ್ನು ಮಾರ್ವೆಲ್​ ಸಿನಿಮಾದಲ್ಲಿ ಪರಿಚಯಿಸಲು ರುಸ್ಸೋ ಬ್ರದರ್ಸ್ ಇಚ್ಛೆ ಇರುವುದಾಗಿ ಹೇಳಿದ್ದಾರೆ.

 ಕ್ಯಾಪ್ಟನ್ ಮಾರ್ವೆಲ್ ಆಗಿ ಪ್ರಿಯಾಂಕಾ:

ಹೌದು, ಇದೇನು ಕ್ಯಾಪ್ಟನ್ ಮಾರ್ವೆಲ್ ಆಗಿ  ಪ್ರಿಯಾಂಕಾ ಚೋಪ್ರಾ ಅವರು ನಟಿಸಲಿದ್ದಾರಾ ಎಂದು ಅಚ್ಚರಿ ಆದರೂ ಇದು ಸತ್ಯ, ಇತ್ತೀಚೆಗೆ, ರುಸ್ಸೋ ಬ್ರದರ್ಸ್ ಗಳಾದ ಆಂಥೋನಿ ರೊಸ್ಸೊ ಮತ್ತು ಜೋ ರುಸ್ಸೋ ತಮ್ಮ ಚಿತ್ರ ದಿ ಗ್ರೇ ಮ್ಯಾನ್‌ನ ಪ್ರಚಾರಕ್ಕಾಗಿ ಭಾರತಕ್ಕೆ ಆಗಮಿಸಿದಾಗ ಮಾರ್ವೆಲ್ ಸೂಪರ್ ಹೀರೋ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಬಲ್ಲ ಯಾವ ಭಾರತೀಯ ನಟಿಯನ್ನು ನೀವು ಆಯ್ಕೆ ಮಾಡುತ್ತೀರಿ ಎಂದು ಕೇಳಲಾಗಿತ್ತು. ಅಲ್ಲದೇ ಈ ಪ್ರಶ್ನೆಗೆ ಇಬ್ಬರು ನಟಿಯರನ್ನೂ ಸೂಚಿಸಲಾಗಿತ್ತು. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಡುವೆ ರುಸ್ಸೋ ಬ್ರದರ್ಸ್ ಪ್ರಿಯಾಂಕಾ ಚೋರ್ಪಾ ಅವರನ್ನು ಆಯ್ಕೆ ಮಾಡಿದ್ದಾರೆ.






ಇನ್ನು, ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ರುಸ್ಸೋ ಬ್ರದರ್ಸ್ ಸಿಟಾಡೆಲ್‌ ಎಂಬ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಮುಂದಿನ ಕ್ಯಾಪ್ಟನ್ ಮಾರ್ವೆಲ್ ಆಗಿ  ಪ್ರಿಯಾಂಕಾ ಚೋರ್ಪಾ ಎಂದು ಉತ್ತರಿಸಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ನಿಜವಾಗಲಿದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: Vikrant Rona: ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ

ಎವೆಂಜರ್ಸ್​ ಸಿರೀಸ್​ನ ಹೊಸ ಸಿನಿಮಾ ಘೋಷಣೆ:

ಇನ್ನು, ಮಾರ್ವೆಲ್​ ಸ್ಟುಡಿಯೋಸ್​ನ ಪ್ರಮುಖ ಸಿನಿಮಾ ಸರಣಿಯಾದ ಎವೆಂಜರ್ಸ್​ ನ ಸಿನಿಮಾದ ಮುಂದುವರೆದ ಭಾಗವನ್ನು ಘೋಷಿಸಿಲಾಗಿದೆ. ಹೌದು, ಚಿತ್ರವು ಎವೆಂಜರ್ಸ್​ ಎಂಡ್​ ಗೇಮ್​ ನಂತರ ಬರುತ್ತಿರುವ ಬುಹುನಿರೀಕ್ಷಿತ ಸಿನಿಮಾದ ಸರಣಿ ಇದಾಗಿದೆ. ಅದರ ಪ್ರಕಾರ ಎವೆಂಜರ್ಸ್​: ದ ಕಾಂಗ್​ ಡೆಸ್ಟಿನಿ ಮತ್ತು ಎವೆಂಜರ್ಸ್: ಸಿಕ್ರೇಟ್​ ವಾರ್​ ಎಂಬ ಎರಡು ಸಿನಿಮಾ ಸರಣಿಯನ್ನು ಘೋಷಿಸಿದೆ.

ಎವೆಂಜರ್ಸ್​: ದ ಕಾಂಗ್​ ಡೆಸ್ಟಿನಿ


ಅಲ್ಲದೇ ಈ ಚಿತ್ರಗಳ ಘೋಷಣೆ ಜೊತೆ ಚಿತ್ರದ ಬಿಡುಗಡೆ ದಿನಾಂಕವನ್ನೂ ಈಗಲೇ ತಿಳಿಸಿದೆ.  ಎವೆಂಜರ್ಸ್​: ದ ಕಾಂಗ್​ ಡೆಸ್ಟಿನಿ ಚಿತ್ರವು ಮೇ 2, 2025 ಮತ್ತು  ಎವೆಂಜರ್ಸ್: ಸಿಕ್ರೇಟ್​ ವಾರ್​ ಚಿತ್ರವು ನವೆಂಬರ್​ 7, 2025ರಂದು ರಿಲೀಸ್​ ಆಗುವುದಾಗಿ ತಿಳಿಸಲಾಗಿದೆ. ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಎವೆಂಜರ್ಸ್: ಸಿಕ್ರೇಟ್​ ವಾರ್​


ಹೊಸ ಬ್ಯುಸಿನೆಸ್ ಶುರು ಮಾಡಿದ ಪ್ರಿಯಾಂಕಾ:

ತಾನು ಸೋನಾ ಹೋಮ್ ಎಂಬ ಹೊಸ ಹೋಮ್‍ವೇರ್ ಲೈನ್ ಅನ್ನು ಆರಂಭಿಸಿರುವುದರ ಕುರಿತು ಪ್ರಿಯಾಂಕ ಚೋಪ್ರಾ, ಇನ್‍ಸ್ಟಾಗ್ರಾಂನಲ್ಲಿ ಘೋಷಣೆ ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಅವರು ಪೋಸ್ಟ್ ಮಾಡಿದ್ದ ಆ ವಿಡಿಯೋದಲ್ಲಿ, ತನ್ನ ಸೋನಾ ಹೋಮ್ ಬ್ರಾಂಡ್‍ನ ಕೆಲವು ವಸ್ತುಗಳನ್ನು ತೋರಿಸಿದ್ದಾರೆ.
Published by:shrikrishna bhat
First published: