• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Video Viral: ಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್; ಮಾಡೆಲ್ ಮಂಗಾಟಕ್ಕೆ ನೆಟ್ಟಿಗರು ಗರಂ

Video Viral: ಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್; ಮಾಡೆಲ್ ಮಂಗಾಟಕ್ಕೆ ನೆಟ್ಟಿಗರು ಗರಂ

ಅಲೆಸ್ಯ ಕಾಫೆಲ್ನಿಕೋವಾ

ಅಲೆಸ್ಯ ಕಾಫೆಲ್ನಿಕೋವಾ

ಮಾಡೆಲ್​ ಅಲೆಸ್ಯ ಇತ್ತೀಚೆಗೆ ಇಂಡೋನೆಷಿಯಾದಿಂದ ಬಾಲಿಗೆ ಹಾರಿದ್ದರು.ಅಲ್ಲಿ ಹೊಸದಾಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಪ್ಲಾನ್​ ಹಾಕಿಕೊಂಡಿದ್ದಾರೆ. ಅದರಂತೆ ವಿಭಿನ್ನವಾಗಿ ಫೋಟೋ ತೆಗೆಸಿಕೊಳ್ಳಬೇಕೆಂದು ಸುಮಾತ್ರನ್​ ಆನೆಯ ಜೊತೆಗೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

 • Share this:

  ಮಾಡೆಲ್​ ಒಬ್ಬರು ಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಅನೇಕರು ಮಾಡೆಲ್​ ಮಾಡಿದ ಅವಾಂತರ ಕಂಡು ಗರಂ ಆಗಿದ್ದಾರೆ. ಮಾತ್ರವಲ್ಲದೆ,  ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ಕಾಮೆಂಟ್​ ಬರೆಯುವ ಮೂಲಕ ಮಾಡೆಲ್​ಗೆ ಬೈಗುಳಗಳ ಸುರಿಮಳೆ ಸುರಿಸಿದ್ದಾರೆ.


  ರಷ್ಯಾ ಮೂಲದ ಮಾಡೆಲ್​ ಅಲೆಸ್ಯ ಕಾಫೆಲ್ನಿಕೋವಾ ಬೆತ್ತಲೆಯಾಗಿ ಫೋಟೋ ಕ್ಲಿಕ್ಕಿಸಲು ಆನೆ ಬೆನ್ನೇರಿದ್ದಾರೆ. ಸುಮಾತ್ರನ್​ ಎಂಬ ಅಳಿವಿನಂಚಿನಲ್ಲಿರುವ ಆನೆಯನ್ನು ಫೋಟೋಶೂಟ್​ಗಾಗಿ ಬಳಸಿಕೊಂಡಿದ್ದಾರೆ.


  ಮಾಡೆಲ್​ ಅಲೆಸ್ಯ ಇತ್ತೀಚೆಗೆ ಇಂಡೋನೆಷಿಯಾದಿಂದ ಬಾಲಿಗೆ ಹಾರಿದ್ದರು.ಅಲ್ಲಿ ಹೊಸದಾಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಪ್ಲಾನ್​ ಹಾಕಿಕೊಂಡಿದ್ದಾರೆ. ಅದರಂತೆ ವಿಭಿನ್ನವಾಗಿ ಫೋಟೋ ತೆಗೆಸಿಕೊಳ್ಳಬೇಕೆಂದು ಸುಮಾತ್ರನ್​ ಆನೆಯ ಜೊತೆಗೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.


  ಅಲೆಸ್ಯ ಅವರ ಬೆತ್ತಲೆ ಫೋಟೋಶೂಟ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೋ ಕಂಡು ಭಾರೀ ವಿರೋಧ ವ್ಯಕ್ತಿ ಪಡಿಸಿದ್ದಾರೆ. ಅಲ್ಲದೆ, ಮಾಡೆಲ್​ ಹುಚ್ಚಾಟವನ್ನು ಕಂಡು ಸಿಟ್ಟಾಗಿದ್ದಾರೆ. ಇನ್ನು ಪ್ರಾಣಿದಯಾ ಸಂಘ ಮತ್ತು ಪರಿಸರ ಪ್ರೇಮಿಗಳು ಕೂಡ ಮಾಡೆಲ್​ ವರ್ತನೆಗೆ ಖಂಡನೆ ವ್ಯಕ್ತ ಪಡಿಸಿದ್ದಾರೆ. ಈ ವಿಚಾರ ಆಕೆಗೆ ತಿಳಿದಂತೆ ಇನ್​​ಸ್ಟಾಗ್ರಾಂನಿಂದ ವಿಡಿಯೋ ಡಿಲೀಟ್​ ಮಾಡಿದ್ದಾರೆ.  ಇದಾದ ಬಳಿಕ ಅಲೆಸ್ಯ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಆನೆಯೊಂದಕ್ಕೆ ಸ್ನಾನ ಮಾಡಿಸುತ್ತಿದ್ದಾರೆ. ಹಲವು ಟೀಕೆಗಳನ್ನು ಕೇಳಿದ ನಂತರ ಅಲೆಸ್ಯ ನಾನು ಪ್ರಾಣಿ ಪ್ರೇಮಿ, ಮೊದಲಿನಿಂದಲೂ ಪ್ರಾಣಿಗಳ ಸಂರಕ್ಷಣೆಗಾಗಿ ಸಾಕಷ್ಟು ದಾನ ಮಾಡಿದ್ದೇನೆ. ಆದರೆ ಯಾರಿಗೂ ಅದಾವುದು ಕಾಣಿಸುವುದಿಲ್ಲ ಎಂದಿದ್ದಾರೆ.

  top videos
   First published: