HOME » NEWS » Entertainment » RUSSIAN FAN MARINA KARTINKA SENT HEART TOUCHING VIDEO TO KICHCHA SUDEEP AE

Kihchcha Sudeep: ರಷ್ಯಾದಲ್ಲೂ ಕಿಚ್ಚನ ಜಪ: ಅಭಿಮಾನಿಯಿಂದ ಸುದೀಪ್​ಗೆ ಬಂತು ವಿಶೇಷ ವಿಡಿಯೋ ಸಂದೇಶ..!

Kihchcha Sudeep Received Video From Russian Fan: ಯಾರೇ ಅಭಿಮಾನಿ ಅವರಿಗೆ ಟ್ವೀಟ್​ ಮಾಡಿದರೆ ಸಾಕು, ಅದಕ್ಕೆ ಸುದೀಪ್​ ಪ್ರತಿಕ್ರಿಯೆ ನೀಡದೆ ನಿರ್ಲಕ್ಷಿಸುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಿಚ್ಚನನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ಸಂಪರ್ಕಿಸುತ್ತಾರೆ. ಈಗಲೂ ಅಷ್ಟೆ ರಷ್ಯಾದ ಅಭಿಮಾನಿಯೊಬ್ಬರು ಕಿ್ಚನಿಗೆ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. 

Anitha E | news18-kannada
Updated:November 14, 2019, 12:45 PM IST
Kihchcha Sudeep: ರಷ್ಯಾದಲ್ಲೂ ಕಿಚ್ಚನ ಜಪ: ಅಭಿಮಾನಿಯಿಂದ ಸುದೀಪ್​ಗೆ ಬಂತು ವಿಶೇಷ ವಿಡಿಯೋ ಸಂದೇಶ..!
ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ಸದ್ಯ ಸ್ಯಾಂಡಲ್​ವುಡ್​ಗೆ ಮಾತ್ರ ಸೀಮಿತವಾದ ನಟರಾಗಿ ಉಳಿದಿಲ್ಲ. ಅವರ ಖ್ಯಾತಿ ದೇಶದ ಗಡಿಯನ್ನೂ ದಾಟಿದೆ. ಬಾಲಿವುಡ್​, ಕಾಲಿವುಡ್​, ಟಾಲಿವುಡ್​ನಲ್ಲೂ ಕಿಚ್ಚನ ಹೆಸರಿಗೆ ಅದರದ್ದೇ ಆದ ಗತ್ತಿದೆ. ಅದರಲ್ಲೂ ಅವರು ಎಲ್ಲ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿರುತ್ತಾರೆ.

ಯಾರೇ ಅಭಿಮಾನಿ ಅವರಿಗೆ ಟ್ವೀಟ್​ ಮಾಡಿದರೆ ಸಾಕು, ಅದಕ್ಕೆ ಅವರು ಪ್ರತಿಕ್ರಿಯೆ ನೀಡದೆ ನಿರ್ಲಕ್ಷಿಸುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಿಚ್ಚನನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ಸಂಪರ್ಕಿಸುತ್ತಾರೆ. ಈಗಲೂ ಅಷ್ಟೆ ರಷ್ಯಾದ ಅಭಿಮಾನಿಯೊಬ್ಬರು ಕಿ್ಚನಿಗೆ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.

Kannada Bigg Boss 7 Elimination Bigg Boss Contestants Reveled a secret infront of Kiccha Sudeep.
ವಾರದ ಕತೆ ಕಿಚ್ಚನ ಜೊತೆ


ರಷ್ಯಾದವರಾದ ಮರಿನಾ ಕಾರ್ಟಿಂಕಾ ಎಂಬ ಯುವತಿಗೆ ಕಿಚ್ಚ ಎಂದರೆ ತುಂಬಾ ಇಷ್ಟವಂತೆ. ಅವರು ಸುದೀಪ್​ ಅಭಿನಯದ ಸಾಕಷ್ಟು ಸಿನಿಮಾಗಳನ್ನು ನೋಡಿದ್ದು, ಬಿಗ್​ಬಾಸ್​ನ ಕೆಲವು ಎಪಿಸೋಡ್​ಗಳನ್ನೂ ವೀಕ್ಷಿಸಿ ಎಂಜಾಯ್​ ಮಾಡಿದ್ದಾರಂತೆ. ಅದಕ್ಕಾಗಿಯೇ ಅವರನ್ನು ರಂಜಿಸಿದ ಕಿಚ್ಚನಿಗೆ ವಿಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ.

ಇದನ್ನೂ ಓದಿ: #SSMB27: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ ಪ್ರಿನ್ಸ್​ ಮಹೇಶ್​ ಬಾಬು-ಪ್ರಶಾಂತ್​ ನೀಲ್​ರ ಹೊಸ ಸಿನಿಮಾ ಸುದ್ದಿ..!​

ಸದ್ಯ ಈ ವಿಡಿಯೋ ಸುದೀಪ್​ ಅಭಿಮಾನಿಗಳ ಟ್ವಿಟರ್​ ಖಾತೆಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಕಿಚ್ಚ ಸಹ ತಮ್ಮ ಅಭಿಮಾನಿಗೆ ಟ್ವಿಟರ್​ನಲ್ಲೇ ಧನ್ಯವಾದ ತಿಳಿಸಿದ್ದಾರೆ.ಸುದೀಪ್​ ಸದ್ಯ 'ಕೋಟಿಗೊಬ್ಬ 3' ಸಿನಿಮಾದಲ್ಲಿ ವ್ಯಸ್ತವಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಸುದೀಪ್​ ಇತ್ತೀಚೆಗಷ್ಟೆ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಇದರ ಜತೆಗೆ ಸುದೀಪ್​ 'ಬಿಗ್​ಬಾಸ್​' ಕಾರ್ಯಕ್ರಮದ ನಿರೂಪಣೆಯಲ್ಲೂ ತೊಡಗಿದ್ದಾರೆ. ವಾರಾಂತ್ಯಕ್ಕೆ ಕಿರುತೆರೆಯಲ್ಲಿ ಅಭಿಮಾನಿಗಳನ್ನು ರಂಜಿಸುವ ಕಿಚ್ಚನ ಕೀರ್ತಿ ದಿನೇ ದಿನೇ ವಿಶ್ವದಾದ್ಯಂತ ಪಸರಿಸುತ್ತಿದೆ.

DeepVeer Tirupati Visit : ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದೀಪಿಕಾ-ರಣವೀರ್..!​


First published: November 14, 2019, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories