ಸಿನಿಮಾ ರಿಲೀಸ್​​​ಗೂ ಮುನ್ನವೇ ಸ್ಟಾರ್ ಆದ ರೂರಲ್ ಅಂಜನ್!

Yarrabirri Movie: ‘ಯರ್ರಾಬಿರ್ರಿ’ ಸಿನಿಮಾ ತೆರೆಗೆ ಬರಲು ರೆಡಿಯಾಗಿದ್ದು, ಕೋರೊನಾ ಹಾವಳಿ ಹಾಗೂ ಲಾಕ್​ಡೌನ್​ನಿಂದ ರಿಲೀಸ್​ಗಾಗಿ ಕಾಯುತ್ತಿದೆ. ಅದೇನೇ ಇರಲಿ ಉತ್ತರ ಕರ್ನಾಟಕದ ಬಡ ರೈತ ಕುಟುಂಬದ ಹುಡುಗನೊಬ್ಬ ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಸ್ಟಾರ್ ಆಗಿರುವುದು ವಿಶೇಷವೇ ಸರಿ

news18-kannada
Updated:July 20, 2020, 7:07 PM IST
ಸಿನಿಮಾ ರಿಲೀಸ್​​​ಗೂ ಮುನ್ನವೇ ಸ್ಟಾರ್ ಆದ ರೂರಲ್ ಅಂಜನ್!
ರೂರಲ್ ಅಂಜನ್
  • Share this:
ಒಬ್ಬ ನಾಯಕ ನಟ ಅಭಿಮಾನಿಗಳನ್ನು ಗಳಿಸಿ ಸ್ಟಾರ್ ಪಟ್ಟಕ್ಕೇರಬೇಕು ಅಂದರೆ ಆತನ ಒಂದಾದರೂ ಸಿನಿಮಾ ಹಿಟ್ ಅಥವಾ ಸೂಪರ್​​ ಹಿಟ್​ ಆಗಿರಬೇಕು. ಈ ಹೀರೋ ಸೂಪರ್ ಗುರು ಅಂತ ಅಭಿಮಾನಿಗಳು ಆತನನ್ನು ಫಾಲೋ ಮಾಡಬೇಕು. ಆದರೆ ಇಲ್ಲೊಬ್ಬ ನಾಯಕ ನಟ ಇನ್ನೂ ಒಂದೂ ಸಿನಿಮಾ ರಿಲೀಸ್ ಆಗದಿದ್ದರೂ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ರೂರಲ್ ಸ್ಟಾರ್ ಎಂಬ ಬಿರುದನ್ನೇ ಪಡೆದಿದ್ದಾರೆ.

ಹೌದು, ಮೂಲತಃ ಧಾರವಾಡ ಜಿಲ್ಲೆ, ಕುಂದಗೋಳ ತಾಲ್ಲೂಕು, ಗೌಡಗೆರೆ ಗ್ರಾಮದ ಅಂಜನ್ ಈ ಸಾಧನೆ ಮಾಡಿರುವ ಪ್ರತಿಭೆ. ಅವರು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ‘ಯರ್ರಾಬಿರ್ರಿ’, ಶೂಟಿಂಗ್ ಪೂರ್ಣಗೊಂಡಿದ್ದು, ಇನ್ನಷ್ಟೇ ರಿಲೀಸ್ ಆಗಬೇಕಿದೆ. ಆದರೆ ಅದಕ್ಕೂ ಮುನ್ನವೇ ಅಂಜನ್ ಹೆಸರಲ್ಲಿ 300 ಫೇಸ್​​​​ಬುಕ್​ ಫ್ಯಾನ್ ಪೇಜ್​​ಗಳಿವೆ. ಅವುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಇದ್ದಾರೆ. 30ಕ್ಕೂ ಹೆಚ್ಚು ಮಂದಿ ಕೈ, ತೋಳುಗಳ ಮೇಲೆ ಅಂಜನ್ ಹೆಸರು, ಫೋಟೋ ಅಥವಾ ‘ಯರ್ರಾಬಿರ್ರಿ’ ಸಿನಿಮಾ ಟೈಟಲ್ ಹಚ್ಚೆ ಹಾಕಿಸಿಕೊಂಡಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಬೈಕ್​ಗಳ ಮೇಲೆ ಹಾಗೂ 300 ಆಟೋ, ಕಾರುಗಳ ಮೇಲೆ ರೂರಲ್ ಸ್ಟಾರ್ ಅಂಜನ್ ಹೆಸರು ರಾರಾಜಿಸುತ್ತಿದೆ. ಹೀಗೆ ಉತ್ತರ ಕರ್ನಾಟಕದ ಪ್ರತಿಭೆ ಸ್ಯಾಂಡಲ್​​ವುಡ್​ನಲ್ಲಿ ಸದ್ದು ಮಾಡಲು ಎಂಟ್ರಿ ಕೊಟ್ಟಿದೆ ಅಂತ ಗೊತ್ತಾಗಿದ್ದೇ, ಅಲ್ಲಿನ ಜನ ಅಂಜನ್ ಬೆಂಬಲಕ್ಕೆ ನಿಂತಿದ್ದಾರೆ.

ರೂರಲ್ ಅಂಜನ್


ಹಚ್ಚೆ ಹಾಕಿಸಿಕೊಂಡ ಅಭಿಮಾನಿ


ಅಂದಹಾಗೆಯೇ, ಅಂಜನ್ ರೈತ ಕುಟುಂಬಕ್ಕೆ ಸೇರಿದವರು. ಅವರ ತಂದೆ ಕೃಷಿ ಮಾಡುತ್ತಾರೆ, ತಮ್ಮ ಈಗಲೂ ಹುಬ್ಬಳ್ಳಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಬಾಲ್ಯದಿಂದಲೂ ಕ್ರೀಡೆ, ಡ್ಯಾನ್ಸ್ ಬಗ್ಗೆ ಅತೀವ ಆಸಕ್ತಿಯಿದ್ದ ಕಾರಣ, ಅಂಜನ್ ಶಾಲೆ ಹಾಗೂ ಕಾಲೇಜು ದಿನಗಳಲ್ಲೇ ರಾಜ್ಯ ಮಟ್ಟದ ಲಾಂಗ್ ಜಂಪ್, ಹೈ ಜಂಪ್, ವಾಲಿಬಾಲ್ ಹಾಗೂ 100 ಮೀಟರ್ ಓಟದಲ್ಲಿ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಆದರೆ ಬಡತನದ ಕಾರಣ ಅವರಿಗೆ ಬೇಕಾದ ಶೂಗಳನ್ನೂ ಖರೀದಿಸಲು ಅಶಕ್ತರಾಗಿದ್ದರಿಂದ, ಕ್ರೀಡೆಯ ಕನಸನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ಆ ಬಳಿಕ ತಾವೇ ಡ್ಯಾನ್ಸ್ ಕಲಿತು, ಡ್ಯಾನ್ಸ್ ಕ್ಲಾಸ್ ಕೂಡ ಪ್ರಾರಂಭಿಸಿದ ಅಂಜನ್, ಸಿನಿಮಾ ರಂಗದಲ್ಲಿ ಬೆಳೆಯುವ ಕನಸು ಕಂಡು 2011ರಲ್ಲಿ ಬೆಂಗಳೂರಿಗೆ ಬಂದಿಳಿದರು.

ರೂರಲ್ ಅಂಜನ್
ಸಿನಿಮಾಗಳಲ್ಲೇ ಸಣ್ಣ, ಪುಟ್ಟ ಕೆಲಸ ಮಾಡುತ್ತಾ, ಕ್ರಮೇಣ ಪಾತ್ರಗಳನ್ನೂ ನಿರ್ವಹಿಸಿದ ಅಂಜನ್ ‘ಮನಸಿನ ಚಿತ್ತಾರ’ ಎಂಬ ಕಿರುಚಿತ್ರದಲ್ಲಿ ನಟಿಸಿದರು. ಆ ಶಾರ್ಟ್ ಫಿಲ್ಮ್ ಥಿಯೇಟರ್​​​ಗಳಲ್ಲೂ ರಿಲೀಸ್ ಆಗಿ, ನಿರ್ಮಾಪಕರಿಗೆ ಲಾಭವನ್ನೂ ತಂದುಕೊಟ್ಟಿದೆ. ಆ ಬಳಿಕ ‘ಯರ್ರಾಬಿರ್ರಿ’ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು.
ರೂರಲ್ ಅಂಜನ್


ರೂರಲ್ ಅಂಜನ್


ಸದ್ಯ, ‘ಯರ್ರಾಬಿರ್ರಿ’ ಸಿನಿಮಾ ತೆರೆಗೆ ಬರಲು ರೆಡಿಯಾಗಿದ್ದು, ಕೋರೊನಾ ಹಾವಳಿ ಹಾಗೂ ಲಾಕ್​ಡೌನ್​ನಿಂದ ರಿಲೀಸ್​ಗಾಗಿ ಕಾಯುತ್ತಿದೆ. ಅದೇನೇ ಇರಲಿ ಉತ್ತರ ಕರ್ನಾಟಕದ ಬಡ ರೈತ ಕುಟುಂಬದ ಹುಡುಗನೊಬ್ಬ ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಸ್ಟಾರ್ ಆಗಿರುವುದು ವಿಶೇಷವೇ ಸರಿ.
Published by: Harshith AS
First published: July 20, 2020, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading