2ನೇ ಚಿತ್ರಕ್ಕಾಗಿ ಜೂ. ರೆಬೆಲ್ ಸ್ಟಾರ್​ಗೆ​ ಭರ್ಜರಿ ಆಫರ್: ಅಭಿಷೇಕ್​​ ಅಂಬರೀಷ್ ಪಡೆಯುವ ಸಂಭಾವನೆ ಎಷ್ಟು ಗೊತ್ತೆ?

ಗುರುದತ್ ಈಗಾಗಲೇ ಅಂಬರೀಷ್ ಮತ್ತು ಸುದೀಪ್​ ಅವರನ್ನು ಒಟ್ಟಿಗೆ ತೆರೆ ಮೇಲೆ ತೋರಿಸಿದ ಅನುಭವ ಹೊಂದಿದ್ದರೆ, ಮಹೇಶ್ ರಾವ್ ರಾಕಿಂಗ್ ಸ್ಟಾರ್ ಯಶ್​ಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಈ ಇಬ್ಬರು ನಿರ್ದೇಶಕರುಗಳು ಅಭಿಗಾಗಿ ಹೊಸ ಚಿತ್ರಕಥೆಗಳನ್ನು ರೆಡಿ ಮಾಡಿಕೊಂಡಿದ್ದಾರಂತೆ.

zahir | news18
Updated:June 24, 2019, 7:31 PM IST
2ನೇ ಚಿತ್ರಕ್ಕಾಗಿ ಜೂ. ರೆಬೆಲ್ ಸ್ಟಾರ್​ಗೆ​ ಭರ್ಜರಿ ಆಫರ್: ಅಭಿಷೇಕ್​​ ಅಂಬರೀಷ್ ಪಡೆಯುವ ಸಂಭಾವನೆ ಎಷ್ಟು ಗೊತ್ತೆ?
Abhishek ambareesh
  • News18
  • Last Updated: June 24, 2019, 7:31 PM IST
  • Share this:
'ಅಮರ್' ಮೂಲಕ ಸಾಕಷ್ಟು ಸದ್ದು ಸುದ್ದಿ ಮಾಡಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಇದೀಗ ತಮ್ಮ 2ನೇ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಚೊಚ್ಚಲ ಚಿತ್ರದ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಅಭಿಗೆ ಇದೀಗ ಆಫರ್​ಗಳ ಸುರಿಮಳೆಯಾಗುತ್ತಿದೆ ಎನ್ನಲಾಗಿದೆ. ಅದು ಕೂಡ ಅಂತಿಂಥ ಆಫರ್​ಗಳಲ್ಲಾ ಎಂಬುದೇ ವಿಶೇಷ.

'ಅಮರ್' ಚಿತ್ರಕ್ಕಾಗಿ ಒಂದು ಕೋಟಿ ಸಂಭಾವಣೆ ಪಡೆದಿದ್ದ ಜೂನಿಯರ್ ರೆಬೆಲ್​ ಸ್ಟಾರ್ ಮುಂದೆ ಸದ್ಯ ಎರಡು ಆಫರ್​ಗಳು ಬಂದಿವೆಯಂತೆ. ಅದರಲ್ಲೊಂದು 'ಅಂಬಿ ನಿಂಗ್ ವಯಸ್ಸಾಯ್ತೊ' ಚಿತ್ರದ ನಿರ್ದೇಶಕ ಗುರುದತ್ ಗಾಣಿಗನದ್ದು. ಮತ್ತೊಂದು 'ಸಂತು ಸ್ಟ್ರೈಟ್ ಫಾರ್ವರ್ಡ್'​ಗೆ ಆ್ಯಕ್ಷನ್ ಕಟ್ ಹೇಳಿದ್ದ ಮಹೇಶ್ ರಾವ್ ಅವರದ್ದು.

ಗುರುದತ್ ಈಗಾಗಲೇ ಅಂಬರೀಷ್ ಮತ್ತು ಸುದೀಪ್​ ಅವರನ್ನು ಒಟ್ಟಿಗೆ ತೆರೆ ಮೇಲೆ ತೋರಿಸಿದ ಅನುಭವ ಹೊಂದಿದ್ದರೆ, ಮಹೇಶ್ ರಾವ್ ರಾಕಿಂಗ್ ಸ್ಟಾರ್ ಯಶ್​ಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಈ ಇಬ್ಬರು ನಿರ್ದೇಶಕರುಗಳು ಅಭಿಗಾಗಿ ಹೊಸ ಚಿತ್ರಕಥೆಗಳನ್ನು ರೆಡಿ ಮಾಡಿಕೊಂಡಿದ್ದಾರಂತೆ.

ಈ ಚಿತ್ರದಲ್ಲಿ ನಾಯಕನಾಗಲು ಅಭಿಷೇಕ್ ಅಂಬರೀಷ್​ಗೆ ಸುಮಾರು 2 ಕೋಟಿ ರೂ. ಮೊತ್ತದ ಕಾಲ್​ಶೀಟ್ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ ಮೊದಲ ಚಿತ್ರದಿಂದ 2ನೇ ಸಿನಿಮಾಕ್ಕೇರಲು ಜೂ.ರೆಬೆಲ್ ಸ್ಟಾರ್ ಪಡೆಯುವ ಸಂಭಾವನೆ 2 ಕೋಟಿ ರೂ. ಎನ್ನಲಾಗುತ್ತಿದೆ.

ಇಂತಹದೊಂದು ಬಿಗ್ ಆಫರ್ ನೀಡುತ್ತಿರುವ ನಿರ್ಮಾಪಕರ ಯಾರೆಂಬ ಪ್ರಶ್ನೆಗೆ ಗಾಂಧಿನಗರದಿಂದ ಕೇಳಿ ಬರುವ ಉತ್ತರ ರಾಕ್​ಲೈನ್ ವೆಂಕಟೇಶ್. ಏಕೆಂದರೆ ಈ ಹಿಂದೆಯೇ ಯಂಗ್ ರೆಬೆಲ್ ಸ್ಟಾರ್​ ನಟನೆಯ 2ನೇ ಸಿನಿಮಾವನ್ನು ರಾಕ್​ಲೈನ್​ ಬ್ಯಾನರ್​ನಲ್ಲಿ ನಿರ್ಮಾಣವಾಗಲಿದೆ. ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.ಹೀಗಾಗಿ ಗುರುದತ್ ಮತ್ತು ರಾಕ್​ಲೈನ್ ಜೊತೆಯಾಗಿ ಅಭಿ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿಗಳು ಮತ್ತೊಮ್ಮೆ ಮುನ್ನಲೆಗೆ ಬಂದಿವೆ. ಒಟ್ಟಿನಲ್ಲಿ  ಚೊಚ್ಚಲ ಚಿತ್ರಕ್ಕೆ ಒಂದು ಕೋಟಿ ರೂ ಸಂಭಾವನೆ ಪಡೆದು ದಾಖಲೆ ನಿರ್ಮಿಸಿದ್ದ ಅಭಿಷೇಕ್, ಇದೀಗ 2ನೇ ಚಿತ್ರದ ಸಂಭಾವನೆ ಮೂಲಕ ಕೂಡ ಮತ್ತೊಂದು ಮೈಲುಗಲ್ಲು ಸೃಷ್ಟಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
First published: June 24, 2019, 7:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading