Rashmika Mandanna: ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಣೆ? ಏನೋ ನಡೀತಿರೋದಂತೂ ಪಕ್ಕಾ!

ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಲು ಇಬ್ಬರು ಒಟ್ಟಿಗೆ ಗೋವಾಗೆ ತೆರಳಿದ್ದರು. ಇದೀಗ ಇವರಿಬ್ಬರ ಬಗ್ಗೆ ಹೊಸ ವಿಚಾರವೊಂದು ಸಖತ್​ ವೈರಲ್ ಆಗುತ್ತಿದೆ. ಅದನ್ನುನೋಡಿದ ಅಭಿಮಾನಿಗಳು ನಿಜ ಇವರಿಬ್ಬರ ನಡುವೆ ಸಂಥಿಂಗ್​.. ಸಂಥಿಂಗ್​ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.

ರಶ್ಮಿಕಾ, ವಿಜಯ್​ ದೇವರಕೊಂಡ ಫ್ಯಾಮಿಲಿ

ರಶ್ಮಿಕಾ, ವಿಜಯ್​ ದೇವರಕೊಂಡ ಫ್ಯಾಮಿಲಿ

  • Share this:
ಕರುನಾಡ ಕ್ರಶ್​, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಅವರ ರೇಂಜ್ (Range)​ ಈಗ ಬದಲಾಗಿದೆ. ಕಿರಿಕ್​ ಪಾರ್ಟಿ (Kirik Party) ಸಿನಿಮಾ ಮೂಲಕ ತೆರೆಗೆ ಬಂದ ನಟಿ ರಶ್ಮಿಕಾ, ಈಗ ಭಾರತದ ಟಾಪ್​ ಹೀರೋಯಿನ್ (Top Heroin)​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೊಡ್ಡ ದೊಡ್ಡ ಹೆಸರಾಂತ ನಟಿಯರಿಗೆ ಸೆಡ್ಡು ಹೊಡೆದು, ತಮ್ಮ ಸ್ಥಾನವನ್ನು ಬಿಗಿ ಪಡಿಸಿಕೊಂಡಿದ್ದಾರೆ. ಕರುನಾಡ ಕ್ರಶ್​ ಆಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್​ ಕ್ರಶ್ (National Crush)​. ಈಕೆ ಸಿನಿಮಾ ಮಾಡಲು ನಿರ್ಮಾಪಕರು ತಾ ಮುಂದೆ.. ನಾ ಮುಂದೆ ಎಂದು ಕ್ಯೂನಲ್ಲಿ ಕಾಯುತ್ತಿದ್ದಾರಂತೆ. ತೆಲುಗಿನ ‘ಗೀತಾ ಗೋವಿಂದಂ’ (Geeta Govindam) ಮತ್ತು ‘ಡಿಯರ್ ಕಾಮ್ರೇಡ್’ (Dear Comrade) ನಂತಹ ಚಲನಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನ ಗೆದ್ದಂತಹ ಜೋಡಿ ಎಂದರೆ ಅದು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devankonda) ಅವರದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರಿಬ್ಬರ ಪರದೆಯ ಮೇಲಿನ ಒಂದು ಕೆಮಿಸ್ಟ್ರಿ ಯಾರು ತಾನೇ ಮರೆಯಲು ಸಾಧ್ಯ ಹೇಳಿ..? ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಲು ಇಬ್ಬರು ಒಟ್ಟಿಗೆ ಗೋವಾಗೆ ತೆರಳಿದ್ದರು. ಇದೀಗ ಇವರಿಬ್ಬರ ಬಗ್ಗೆ ಹೊಸ ವಿಚಾರವೊಂದು ಸಖತ್​ ವೈರಲ್ ಆಗುತ್ತಿದೆ. ಅದನ್ನುನೋಡಿದ ಅಭಿಮಾನಿಗಳು ನಿಜ ಇವರಿಬ್ಬರ ನಡುವೆ ಸಂಥಿಂಗ್​.. ಸಂಥಿಂಗ್​ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.

ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಣೆ?

ವಿಜಯ್ ದೇವರಕೊಂಡ ಸಂಕ್ರಾಂತಿ ಹಬ್ಬದಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದಾರೆ. ಆ ಫೋಟೋದಲ್ಲಿ ವಿಜಯ್​ ದೇವರಕೊಂಡ ಜೊತೆ ಸಹೋದರ ಆನಂದ್​ ದೇವರಕೊಂಡ, ಅವರ ಅಪ್ಪ-ಅಮ್ಮ ಹಾಗೂ ಪ್ರೀತಿಯಿಂದ ಸಾಕಿದ ಶ್ವಾನದ ಜೊತೆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದರು. ಇಂತಹದ್ದೇ ಬ್ಯಾಕ್​ಗ್ರೌಂಡ್​ನಲ್ಲಿರುವ ಫೋಟೋವನ್ನು ರಶ್ಮಿಕಾ ಮಂದಣ್ಣ ಕೂಡ ಶೇರ್​ ಮಾಡಿಕೊಂಡಿದ್ದರು. ಈ ಎರಡು ಫೋಟೋಗಳನ್ನೇ ಇಟ್ಟುಕೊಂಡು ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಿಸಿದ್ದಾರೆಂದು ಟಾಕ್​ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.


ಇದನ್ನು ಓದಿ: Rashmika Mandanna-Vijay Deverakonda ನಡುವೆ ಸಂಥಿಂಗ್.. ಸಂಥಿಂಗ್​? ಒಟ್ಟಿಗೆ ಗೋವಾದಲ್ಲಿ ಇವ್ರು ಮಾಡಿದ್ದೇನು ನೀವೇ ನೋಡಿ...!

ಒಂದೇ ಬಣ್ಣದ ಉಡುಪು ಧರಿಸಿದ್ದ ರಶ್ಮಿಕಾ-ವಿಜಯ್!

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಫೋಸ್ಟ್ ಮಾಡಿದ ಫೋಟೊಗಳ ಬ್ಯಾಕ್‌ಗ್ರೌಂಡ್ ಬಗ್ಗೆ ಅಷ್ಟೇ ಮಾತಾಡುತ್ತಿಲ್ಲ. ಇಬ್ಬರೂ ಒಂದೇ ಬಣ್ಣದ ಉಡುಪುಗಳನ್ನು ಧರಿಸಿದ್ದಾರೆ. ಹೀಗಾಗಿ ಇಬ್ಬರೂ ಒಂದೇ ಕಡೆ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ ಎನ್ನುವುದು ನೆಟ್ಟಿಗರ ವಾದ. ಇದರೊಂದಿಗೆ ಇಬ್ಬರ ನಡುವೆ ಏನೋ ನಡೀತಿದೆ ಅಂತಾನೂ ಮಾತಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಸ್ನೇಹ, ಸಾಂದರ್ಭಿಕ ಭೇಟಿಗಳು ಅಭಿಮಾನಿಗಳಲ್ಲಿ ಅನೇಕ ಸಂದೇಹಗಳನ್ನು ಹುಟ್ಟಿ ಹಾಕಿದ್ದರೂ ಸಹ ಇವರಿಬ್ಬರು 'ಕೇವಲ ಸ್ನೇಹಿತರು' ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇವರಿಬ್ಬರು ಸ್ಟಾರ್ ನಟರು ಅನೇಕ ಬಾರಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ: ಕೊನೆಗೂ `ವಧು’ವಾದ ರಶ್ಮಿಕಾ ಮಂದಣ್ಣ.. ಮೊದಲ ಬಾರಿಗೆ ತನ್ನ `ಹನಿ’ ಬಗ್ಗೆ ಹೇಳಿದ ನಟಿ!

ಒಟ್ಟಿಗೆ ಹೊಸ ವರ್ಷ ಆಚರಣೆ

ಜನವರಿ 1 ರಂದು, ನಟಿ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಲು ಒಂದು ಸ್ಥಳದಲ್ಲಿ ನಿಂತು ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದು, ಈ ಫೋಟೋದ ಹಿನ್ನೆಲೆಯಲ್ಲಿ ಒಂದು ಸ್ವಿಮ್ಮಿಂಗ್ ಪೂಲ್ ಮತ್ತು ಗಿಡಗಳಿರುವುದನ್ನು ನಾವು ಫೋಟೋವೊಂದರಲ್ಲಿ ನೋಡಬಹುದಾಗಿದೆ.ಅದೇ ರೀತಿಯ ಹಿನ್ನಲೆಯಿರುವ ಇನ್ನೊಂದು ಫೋಟೋವನ್ನು ವಿಜಯ್ ಸಹೋದರ ಆನಂದ್ ದೇವರಕೊಂಡ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಎರಡು ಫೋಟೋಗಳಲ್ಲಿರುವ ಹಿನ್ನೆಲೆಯ ನೋಟವನ್ನು ನೋಡಿಕೊಂಡು ವಿಜಯ್ ಕುಟುಂಬ ಮತ್ತು ಅವರೊಟ್ಟಿಗೆ ರಶ್ಮಿಕಾ ಮಂದಣ್ಣ ಎಲ್ಲರೂ ಗೋವಾದಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎಂದು ತಿಳಿದುಬಂದಿದೆ.
Published by:Vasudeva M
First published: