• Home
  • »
  • News
  • »
  • entertainment
  • »
  • Tamannaah Bhatia: ಕೈ ಕೈ ಹಿಡಿದು ಬಂದ ವಿಜಯ್-ತಮನ್ನಾ! ವೈರಲ್ ಆಯ್ತು ರೊಮ್ಯಾಂಟಿಕ್ ವಿಡಿಯೋ

Tamannaah Bhatia: ಕೈ ಕೈ ಹಿಡಿದು ಬಂದ ವಿಜಯ್-ತಮನ್ನಾ! ವೈರಲ್ ಆಯ್ತು ರೊಮ್ಯಾಂಟಿಕ್ ವಿಡಿಯೋ

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ

ಒಂದು ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮದಲ್ಲಿ ತಮನ್ನಾ ಮತ್ತು ವಿಜಯ್ ಇಬ್ಬರು ಒಟ್ಟಿಗೆ ಕೈ ಹಿಡಿದುಕೊಂಡು ಇರುವ ಮತ್ತು ಒಬ್ಬರ ಪಕ್ಕದಲ್ಲಿ ಇನ್ನೊಬ್ಬರು ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದು ಸಹ ನೋಡಬಹುದು.

  • Trending Desk
  • 3-MIN READ
  • Last Updated :
  • Share this:

ನಮಗೆ ಈಗ ಬಿ-ಟೌನ್ ನಲ್ಲಿ ಹೊಸದೊಂದು ಸ್ಟಾರ್ ಜೋಡಿಯೊಂದನ್ನು (Couple) ನೋಡುವುದಕ್ಕೆ ಸಿಗಬಹುದೇ ಅಂತ ಅಭಿಮಾನಿಗಳು ಮತ್ತು ಸಿನಿ ರಸಿಕರು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ. ಯಾವುದಪ್ಪಾ ಆ ಜೋಡಿ ಅಂತೀರಾ? ಇತ್ತೀಚೆಗೆ ಗೋವಾದಲ್ಲಿ (Goa) ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ನಟ ವಿಜಯ್ ವರ್ಮಾ (Vijay Varma) ಮತ್ತು ನಟಿ ತಮನ್ನಾ ಭಾಟಿಯಾ (Tamannaah Bhatia) ಇಬ್ಬರು ಪರಸ್ಪರ ಅಪ್ಪಿಕೊಂಡು, ಚುಂಬಿಸುತ್ತಿರುವುದು ಬೆಳಕಿಗೆ ಬಂದಿತ್ತು.


ಹೊಳೆಯುವ ಗುಲಾಬಿ ಉಡುಪಿನಲ್ಲಿ ನಟಿ ಸುಂದರವಾಗಿ ಕಾಣುತ್ತಿದ್ದರೆ, ವಿಜಯ್ ಬಿಳಿ ಶರ್ಟ್ ಹಾಕಿಕೊಂಡು ಹಸಿರು ಶಾರ್ಟ್ಸ್ ಧರಿಸಿದ್ದರು.
ಅಷ್ಟೇ ಅಲ್ಲದೆ ಒಂದೆರಡು ವೀಡಿಯೋಗಳಲ್ಲಿ, ಅವರು ಒಟ್ಟಿಗೆ ಸ್ಟೆಪ್ಸ್ ಹಾಕುತ್ತಿರುವುದನ್ನು ಮತ್ತು ಪರಸ್ಪರರು ಒಳ್ಳೆಯ ಸಮಯವನ್ನು ಕಳೆಯುತ್ತಿರುವುದನ್ನು ಸಹ ಅಭಿಮಾನಿಗಳು ಈ ವೀಡಿಯೋಗಳಲ್ಲಿ ನೋಡಿದ್ದರು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ವಿಜಯ್ ಮತ್ತು ತಮನ್ನಾ ಇಬ್ಬರು ಪ್ರೀತಿಸುತ್ತಿದ್ದಾರೆಯೇ?


ಆ ಸುದ್ದಿ ಜೋರಾಗಿ ಹರಿದಾಡಲು ಶುರುವಾದಾಗ, ಅಭಿಮಾನಿಗಳು ವಿಜಯ್ ಮತ್ತು ತಮನ್ನಾ ಇಬ್ಬರು ಪ್ರೇಮಿಗಳೇ? ಮುಂದೆ ಇಬ್ಬರು ನಟರು ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡು ಮದುವೆ ಆಗುತ್ತಾರಾ ಅಂತೆಲ್ಲಾ ಊಹೆಗಳು ಮತ್ತು ವದಂತಿಗಳು ಹರಿದಾಡಿದವು ಅಂತ ಹೇಳಬಹುದು.


ಈಗ ಇದೆಲ್ಲದಕ್ಕೆ ಪುಷ್ಟಿ ನೀಡುವಂತೆ ಇನ್ನೊಂದು ವೀಡಿಯೋ ಹೊರ ಬಂದಿದೆ ನೋಡಿ. ಇದರಲ್ಲಿ ಒಂದು ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮದಲ್ಲಿ ತಮನ್ನಾ ಮತ್ತು ವಿಜಯ್ ಇಬ್ಬರು ಒಟ್ಟಿಗೆ ಕೈ ಹಿಡಿದುಕೊಂಡು ಇರುವ ಮತ್ತು ಒಬ್ಬರ ಪಕ್ಕದಲ್ಲಿ ಇನ್ನೊಬ್ಬರು ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದು ಸಹ ನೋಡಬಹುದು.
ತಮನ್ನಾ ಅವರನ್ನು ಚಲನಚಿತ್ರೋದ್ಯಮದಲ್ಲಿ ಅವರ ಸೊಗಸಾದ ವ್ಯಕ್ತಿತ್ವ ಮತ್ತು ಪ್ರಾಮಾಣಿಕ ಅಭಿನಯದಿಂದಾಗಿ ಅನೇಕರು ಇಷ್ಟಪಡುತ್ತಾರೆ. ಈಗ ಹೊಸದೊಂದು ವೀಡಿಯೋದಲ್ಲಿ ಈ ಇಬ್ಬರು ನಟರು ಮತ್ತೊಮ್ಮೆ ಜೊತೆಯಲ್ಲಿ ಖುಷಿ ಖುಷಿಯಾಗಿರುವುದು ಕಂಡು ಬಂದಿದೆ ಅಂತ ಹೇಳಬಹುದು.


ಫೋಟೋಗೆ ಸೂಪರ್ ಪೋಸ್ ನೀಡಿದ ತಮನ್ನಾ ಮತ್ತು ವಿಜಯ್..


ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ತಮನ್ನಾ ಮತ್ತು ವಿಜಯ್ ಫೋಟೋಗಳಿಗೆ ಪೋಸ್ ನೀಡಿದರು. ಅವರು ಕಾಣಿಸಿಕೊಂಡಾಗ ಒಬ್ಬರಿಗೊಬ್ಬರು ಕೈಗಳನ್ನು ಹಿಡಿದುಕೊಂಡು ಮತ್ತು ಪರಸ್ಪರ ತಬ್ಬಿಕೊಂಡರು ಕೂಡ.


ಇಬ್ಬರೂ ನಟರು ತುಂಬಾನೇ ಸ್ಮಾರ್ಟ್ ಆಗಿ ಕಾಣುತ್ತಿದ್ದರು ಮತ್ತು ಇವರಿಬ್ಬರು ಒಳ್ಳೆಯ ಜೋಡಿ ಅಂತೆ ಕಂಡರು. ಅವರ ಕೆಮಿಸ್ಟ್ರಿ ಮಾತ್ರ ಅಭಿಮಾನಿಗಳಿಗೆ ತುಂಬಾನೇ ಹಿಡಿಸಿದೆ ಅಂತ ಹೇಳಬಹುದು.


ತಮನ್ನಾ ಮತ್ತು ವಿಜಯ್ ಅವರ ಲವ್ ಸ್ಟೋರಿ ನೋಡಿ..


ತಮನ್ನಾ ಮತ್ತು ವಿಜಯ್ ವರ್ಮಾ ಮೊದಲ ಬಾರಿಗೆ ಚಲನಚಿತ್ರ ಪ್ರದರ್ಶನದ ಸಮಯದಲ್ಲಿ ಭೇಟಿಯಾದರು. ನಂತರ ಅವರು ‘ಲಸ್ಟ್ ಸ್ಟೋರಿಸ್ 2’ ವೆಬ್ ಸಿರೀಸ್ ಗಾಗಿ ಒಟ್ಟಿಗೆ ಕೆಲಸ ಮಾಡುವಾಗ ಮತ್ತು ಆಡಿಷನ್ ಮಾಡುವಾಗ ಗೋವಾದಲ್ಲಿ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆದರು.


ಬಾಹುಬಲಿ ಚಿತ್ರದ ನಟಿ ಮತ್ತು ವಿಜಯ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಪರಸ್ಪರರ ಜೊತೆಯನ್ನು ಇಷ್ಟಪಡುತ್ತಾರೆ ಎಂದು ಸುದ್ದಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು.


ಇದನ್ನೂ ಓದಿ: Tamannaah Bhatia: ಗೋವಾದಲ್ಲಿ ತಮನ್ನಾ ಲಿಪ್​ಲಾಕ್! ಮಿಲ್ಕಿಬ್ಯೂಟಿ ಮನಸು ಕದ್ದ ಹ್ಯಾಂಡ್ಸಂ ಯಾರು?


ತಮನ್ನಾ 2005 ರಲ್ಲಿ ಬಿಡುಗಡೆಯಾದ ‘ಚಾಂದ್ ಸಾ ರೋಶನ್ ಚೆಹ್ರಾ ಚಿತ್ರದ ಮೂಲಕ ಸಮೀರ್ ಅಫ್ತಾಬ್ ಜೊತೆ ನಟನೆಗೆ ಪಾದಾರ್ಪಣೆ ಮಾಡಿದರು. ಮಧುರ್ ಭಂಡಾರ್ಕರ್ ನಿರ್ದೇಶನದ ಬಬ್ಲಿ ಬೌನ್ಸರ್ ಚಿತ್ರದ ಮೂಲಕ ಅವರು ಕೊನೆಯ ಬಾರಿಗೆ ಒಟಿಟಿ ಸ್ಪೇಸ್ ನಲ್ಲಿ ಕಾಣಿಸಿಕೊಂಡರು.


ವಿಜಯ್ ವರ್ಮಾ 2012 ರಲ್ಲಿ ಚಿತ್ತಗಾಂಗ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪಿಂಕ್, ಮಾನ್ಸೂನ್ ಶೂಟೌಟ್, ಮಂಟೋ, ಗಲ್ಲಿ ಬಾಯ್ ಮತ್ತು ದಿ ಘೋಸ್ಟ್ ಸ್ಟೋರಿಸ್ ಸಂಕಲನದ ಕೆಲಸಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. ಅವರು ಕೊನೆಯ ಬಾರಿಗೆ ಆಲಿಯಾ ಭಟ್ ಅವರೊಂದಿಗೆ ಒಟಿಟಿ ಚಲನಚಿತ್ರ ಡಾರ್ಲಿಂಗ್ಸ್ ನಲ್ಲಿ ಕಾಣಿಸಿಕೊಂಡರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು