ಬಾಲಿವುಡ್(Bollywood)ನಲ್ಲಿ ನಟ-ನಟಿಯರ ಮಧ್ಯೆ ಪ್ರೇಮವಾಗುವುದು ಕಾಮನ್. ಇತ್ತೀಚೆಗೆ ಹೀಗೆ ಪ್ರೀತಿಸಿ ಮದುವೆಯಾದವರು ಕತ್ರಿನಾ ಕೈಫ್(Katina Kaif) ಹಾಗೂ ವಿಕ್ಕಿ ಕೌಶಲ್(Vicky Kasuhal). ಮತ್ತೊಂದು ಜೋಡಿ ಮದುವೆಗೆ ಸಿದ್ಧವಾಗುತ್ತಿದೆ. ಅವರು ಬೇರೆ ಯಾರು ಅಲ್ಲ ರಣಬೀರ್ ಕಪೂರ್(Ranbir Kapoor) ಹಾಗೂ ಆಲಿಯಾ ಭಟ್(Alia Bhatt). ಮುಂದಿನ ವರ್ಷ ಅಂದರೆ 2022ರ ಪ್ರಾರಂಭದಲ್ಲೇ ಈ ಜೋಡಿ ಹಸೆಮಣೆ ಏರುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಇದೀಗ ಇಷ್ಟು ದಿನ ನಾವು ಕ್ಲೋಸ್ ಫ್ರೆಂಡ್ಸ್(Close Friends) ಹೇಳುತ್ತಿದ್ದ ಮತ್ತೊಂದು ಜೋಡಿ ಹಸೆಮಣೆ ಏರುವ ಲಕ್ಷಣಗಳು ಕಾಣುತ್ತಿದೆ. ಹೌದು, ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ರಿಲೇಶನ್ಶಿಪ್ನಲ್ಲಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಈ ವದಂತಿಯನ್ನು ನಂಬುವ ರೀತಿಯಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಆದರೆ ಈ ಜೋಡಿ ಮಾತ್ರ ಇದನ್ನು ಒಪ್ಪಿಕೊಂಡಿರಲಿಲ್ಲ. ನಾವಿಬ್ಬರೂ ಕ್ಲೋಸ್ ಫ್ರೆಂಡ್ ಅಷ್ಟೆ ಎಂದು ಉತ್ತರ ನೀಡುತ್ತಿದ್ದರು. ಆದರೆ, ಈಗ ಕಿಯಾರಾ ಹಾಗೂ ಸಿದ್ದಾರ್ಥ್ ಪ್ರೀತಿಯಲ್ಲಿರುವ ವಿಚಾರಕ್ಕೆ ಹೊಸ ಸಾಕ್ಷ್ಯ ಸಿಕ್ಕಿದೆ. ಇದನ್ನು ಕಂಡ ಫ್ಯಾನ್ಸ್ ಬಾಲಿವುಡ್ನಲ್ಲಿ ಮತ್ತೊಂದು ಜೋಡಿ ಶೀಘ್ರದಲ್ಲೇ ಮದುವೆ(Marriage)ಯಾಗಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಫ್ಯಾನ್ಸ್ ಈ ರೀತಿ ಮಾತನಾಡಲು ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ..
ನ್ಯೂ ಇಯರ್ ಸೆಲೆಬ್ರೇಷನ್ಗೆ ಮಾಲ್ಡೀವ್ಸ್ ಹೊರಟ ಲವ್ ಬರ್ಡ್ಸ್!
ಹೌದು. ಇದು ನಿಜ ಕಿಯಾರಾ ಹಾಗೂ ಸಿದ್ದಾರ್ಥ್ ಹೊಸ ವರ್ಷ ವೆಲ್ಕಮ್ ಮಾಡಲು ಮಾಲ್ಡೀವ್ಸ್ಗೆ ತೆರಳಿದ್ದಾರೆ. ಇಬ್ಬರೂ ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಪಾಪರಾಜಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ, ಈ ಫೋಟೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇಷ್ಟು ದಿನ ನಾವಿಬ್ಬರು ಗುಡ್ ಫ್ರೆಂಡ್ಸ್ ಎಂದು ಹೇಳುತ್ತಿರುವಾಗಲೇ ನಮಗೆ ಅನುಮಾನವಿತ್ತು ಈಗ ಕನ್ಫರ್ಮ ಆಯ್ತು ಅಂತಿದ್ದಾರೆ ಫ್ಯಾನ್ಸ್. ಒಟ್ಟಿನಲ್ಲಿ ನೀವು ಕೂಡ ಕ್ಯೂಟ್ ಕಪಲ್. ಇಬ್ಬರು ಪೇರ್ ಚೆನ್ನಾಗಿದೆ ಮಾಲ್ಡೀವ್ಸ್ನಿಂದ ಬಂದ ಬಳಿಕ ಮದುವೆಯಾಗಿಬಿಡಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
𝐈𝐬𝐡𝐪 𝐛𝐮𝐥𝐚𝐚𝐯𝐚𝐚
𝐉𝐚𝐚𝐧𝐞 𝐤𝐚𝐛 𝐚𝐚𝐯𝐞...
How comfortly they put their hands on each other!
Ahhhhhhhhhh!!!!!!!❤️😍@advani_kiara @SidMalhotra #KiaraAdvani #SidharthMalhotra #SidKiara pic.twitter.com/n4HpcvaWpM
— kiaraadvanisupremacy (@kiaraxfangirl) December 28, 2021
ಇದನ್ನು ಓದಿ: ಬರ್ತ್ಡೇ ಪಾರ್ಟಿಯಲ್ಲಿ ಜೆನಿಲಿಯಾ ಜೊತೆ ಸಲ್ಲು ಭರ್ಜರಿ ಡ್ಯಾನ್ಸ್: ವಿಡಿಯೋ ಸಖತ್ ವೈರಲ್!
ಬಾಲಿವುಡ್ನ ಬಹುಬೇಡಿಕೆಯ ನಟಿ ಕಿಯಾರಾ
ಬಾಲಿವುಡ್ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖರು. ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಎಂ.ಎಸ್. ಧೋನಿ: ಅನ್ಟೋಲ್ಡ್ ಸ್ಟೋರಿ’, ‘ಕಬೀರ್ ಸಿಂಗ್’, ‘ಗುಡ್ ನ್ಯೂಸ್’ ಮುಂತಾದ ಚಿತ್ರಗಳಿಂದ ಅವರಿಗೆ ಭಾರಿ ಯಶಸ್ಸು ಸಿಕ್ಕಿದೆ. ಲಸ್ಟ್ ಸ್ಟೋರೀಸ್ ವೆಬ್ ಸರಣಿ ಮೂಲಕವೂ ಅವರ ಜನಪ್ರಿಯತೆ ಹೆಚ್ಚಿತು. ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್ನ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಇದನ್ನು ಓದಿ : ಗೋವಾದಲ್ಲಿ ಸ್ನೇಹಿತರೊಂದಿಗೆ ಸಮಂತಾ ಫುಲ್ ಮಸ್ತಿ: ನಟಿಯ ಹಾಟ್ ಫೋಟೋಗಳು ವೈರಲ್!
‘ಶೇರ್ಷಾ’ದಲ್ಲಿ ಒಟ್ಟಿಗೆ ನಟಿಸಿದ್ದ ಕಿಯಾರಾ, ಸಿದ್ಧಾರ್ಥ್!
ಸಿನಿಮಾ ವಿಮರ್ಶಕರಿಂದ ಹಿಡಿದು ಸಿನಿಪ್ರಿಯರವರೆಗೂ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ಅಭಿನಯದ ಶೇರ್ಷಾ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಸೆಲೆಬ್ರಿಟಿಗಳೂ ಸಹ ಈ ಸಿನಿಮಾ ನೋಡಿ ವಾವ್ ಎಂದಿದ್ದಾರೆ. ಜೊತೆಗೆ ಈ ಜೋಡಿಯನ್ನು ಹಾಡಿಹೊಗಳಿದ್ದರು. ಈ ಸಿನಿಮಾ ಬಳಿಕ ಇಬ್ಬರ ಮದುವೆ ವದಂತಿಗೆ ಮತ್ತಷ್ಟು ಪುಷ್ಟಿಸಿಕ್ಕಿದೆ. ಆನ್ ಸ್ಕ್ರೀನ್ ಹಾಗೆ ಆಫ್ ಸ್ಕ್ರೀನ್ನಲ್ಲೂ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಗಮನಸೆಳೆದಿದ್ದು, ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಿಬರುತ್ತಿತ್ತು. ಇದೀಗ ಈ ಜೋಡಿ ಒಟ್ಟಿಗೆ ಮಾಲ್ಡೀವ್ಸ್ಗೆ ಹೋಗಿರುವುದು ಊಹಾಪೋಹಗಳಿಕೆ ರೆಕ್ಕೆ ಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ