ಬಾಲಿವುಡ್ನಲ್ಲಿ ಮತ್ತೊಬ್ಬ ಸ್ಟಾರ್ ನಟಿ ಮದುವೆಯಾಗುತ್ತಿದ್ದಾರೆ. ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ (Athiya shetty) ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ (K L Rahul) ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಖಂಡಾಲಾದ ಸುನೀಲ್ ಶೆಟ್ಟಿ ಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತ ರಾಹುಲ್ ಬಂಗಲೆಯೂ ಭರ್ಜರಿ ದೀಪಾಲಂಕಾರಗಳಿಂದ ಬೆಳಗುತ್ತಿದೆ. ಮದುವೆಗೆ ಸಾಕಷ್ಟು ಜನ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟ್ ಜಗತ್ತಿನ ಅನೇಕ ಸ್ಟಾರ್ಗಳು ಆಗಮಿಸುತ್ತಾರೆ ಎನ್ನಲಾಗಿದೆ.
ಈ ಮಧ್ಯೆ ಶೀಘ್ರದಲ್ಲೇ ಹಸೆಮಣೆ ಏರಲಿರುವ ಅಥಿಯಾ ಶೆಟ್ಟಿ ಅವರ ವರ್ಕೌಟ್ ಮತ್ತು ಡಯೆಟ್ ರಿವೀಲ್ ಆಗಿದೆ. ಅವರು ಹೇಗೆ ವರ್ಕೌಟ್ ಮಾಡ್ತಾರೆ… ಏನು ತಿಂತಾರೆ.. ಯಾವುದನ್ನು ಇಷ್ಟ ಪಡ್ತಾರೆ.. ಅವರ ಡಯೆಟ್ ಹೇಗಿರುತ್ತೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಬೇಗ ಮಲಗು… ಬೇಗ ಏಳು ಪಾಲಿಸಿ: ಬೇಗ ಮಲಗಿ ಬೇಗ ಏಳು ಅನ್ನೋದು ಹಳೆಯ ನಿಯಮ. ಆದ್ರೆ ಇತ್ತೀಚಿಗೆ ಅದನ್ನು ಬಹಳಷ್ಟು ಜನರು ಪಾಲಿಸುತ್ತಿಲ್ಲ. ಲೇಟಾಗಿ ಮಲಗಿ ಲೇಟಾಗಿ ಏಳ್ತಾರೆ. ಆದ್ರೆ ಅಥಿಯಾ ಶೆಟ್ಟಿ ಹಾಗಲ್ಲ. ಅವರು ಸಾಮಾನ್ಯವಾಗಿ ಬೇಗ ಮಲಗಿ ಬೇಗ ಏಳ್ತಾರಂತೆ. ಹೀಗಾಗಿ ಅವರು ಚೆನ್ನಾಗಿ ನಿದ್ದೆ ಮಾಡುತ್ತಾರಂತೆ. ಬೆಳಗ್ಗೆ ಬೇಗ ಎದ್ದು ತಮ್ಮ ದಿನಚರಿ ಆರಂಭಿಸುತ್ತಾರೆ.
ಮನೆಯಲ್ಲಿಯೇ ವ್ಯಾಯಾಮ: ಸಾಮಾನ್ಯವಾಗಿ ಸೆಲೆಬ್ರಿಟಿಗಳು ವ್ಯಾಯಾಮ ತಪ್ಪಿಸೋದೇ ಇಲ್ಲ. ಇದಕ್ಕೆ ಅಥಿಯಾ ಕೂಡ ಹೊರತಾಗಿಲ್ಲ. ಎಲ್ಲ ಸೆಲೆಬ್ರಿಟಿ ಮನೆಗಳಲ್ಲಿ ಇರುವ ಹಾಗೆಯೇ ಅಥಿಯಾ ಮನೆಯಲ್ಲಿಯೇ ಜಿಮ್ ಹೊಂದಿದ್ದಾರೆ. ಆರೋಗ್ಯ ಹಾಗೂ ಫಿಟ್ನೆಸ್ಗೆ ಪ್ರತಿದಿನ ವರ್ಕೌಟ್ ಮಾಡ್ತಾರೆ.
ವರ್ಕೌಟ್ನಲ್ಲಿ ಪ್ರಯೋಗ: ಅಥಿಯಾ ವರ್ಕೌಟ್ ಜೊತೆಗೆ ಸಾಕಷ್ಟು ಡಿಫರೆಂಟ್ ಪ್ರಯೋಗಗಳನ್ನೂ ಮಾಡ್ತಾರಂತೆ. ಮಾರ್ಷಲ್ ಆರ್ಟ್ಸ್, ಮಾರ್ನಿಂಗ್ ಹೈಕ್ಸ್ನಂಥ ಚಾಲೆಂಜಿಂಗ್ ಚಟುವಟಿಕೆಗಳನ್ನೂ ಅವರು ಮಾಡ್ತಾರಂತೆ. ಅಲ್ಲದೇ ಕೆಲವೊಮ್ಮೆ ಲಾಂಗ್ ವಾಕ್ ಕೂಡ ಹೋಗುತ್ತಾರೆ.
ಧ್ಯಾನ ಇಷ್ಟ ಎನ್ನುತ್ತಾರೆ ನಟಿ: ಧ್ಯಾನ ಅನ್ನುವುದು ಮನಸ್ಸಿಗೆ ಉಲ್ಲಾಸ ನೀಡುವಂಥದ್ದು. ಮನಸ್ಸಿಗೆ ಹಾಗೂ ಶರೀರಕ್ಕೆ ಸಾಕಷ್ಟು ಪ್ರಯೋಜನ ನೀಡುವ ಧ್ಯಾನವನ್ನು ಇವರು ತಪ್ಪಿಸೋದೇ ಇಲ್ವಂತೆ. ಅದರಲ್ಲೂ ಧ್ಯಾನ ಎಂದರೆ ತುಂಬಾ ಇಷ್ಟ. ಮನಸ್ಸಿಗೆ ಶಾಂತಿ ನೀಡುವ ಈ ಧ್ಯಾನ, ನನ್ನ ಬದುಕಿನ ಭಾಗವೇ ಆಗಿದೆ ಎಂದು ಇನ್ಸ್ಟಾಗ್ರಾಂ ನಲ್ಲಿ ಒಮ್ಮೆ ಅವರು ಬರೆದುಕೊಂಡಿದ್ದರು.
ಅಥಿಯಾ ಡಯೆಟ್: ಹೋಮ್ಮೇಡ್ ಫುಡ್ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ತೂಕ ಕಾಪಾಡಿಕೊಳ್ಳಲು ಮನೆ ಅಡುಗೆಯನ್ನೇ ತಿನ್ನಬೇಕು ಎನ್ನುತ್ತಾರೆ. ಅಥಿಯಾ ಕೂಡ ಮನೆಯ ಅಡುಗೆಯನ್ನೇ ತಿನ್ನುತ್ತಾರಂತೆ. ಇದು ಕಡಿಮೆ ಕ್ಯಾಲೋರಿ ಹೊಂದಿರುತ್ತದೆ ಅಲ್ಲದೇ ಪೋಷಣೆಯೂ ಸಿಗುತ್ತದೆ. ಹಾಗಾಗಿ ಅಥಿಯಾ ಹೋಮ್ಮೇಡ್ ಫುಡ್ ಇಷ್ಟಪಡುತ್ತಾರೆ.
ಗ್ರೀಸ್ ಜ್ಯೂಸ್ ಇಷ್ಟವಂತೆ: ಸಾಮಾನ್ಯವಾಗಿ ಡಯೆಟ್ ಮಾಡುವವರು ಗ್ರೀನ್ ಜ್ಯೂಸ್ ಕುಡಿಯುತ್ತಾರೆ. ಕಡಿಮೆ ಕ್ಯಾಲೊರಿ ಜೊತೆಗೆ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಇದು ಒಳಗೊಂಡಿರುತ್ತದೆ. ಅಥಿಯಾ ಕೂಡ ಗ್ರೀನ್ ಜ್ಯೂಸ್ ಕುಡಿಯುತ್ತಾರೆ. ಅವರು ಕೆಲಸದ ಮೇಲಿರಲಿ ಅಥವಾ ರಜೆಯಲ್ಲಿರಲಿ… ಗ್ರೀನ್ ಜ್ಯೂಸ್ ಕುಡಿಯುವುದನ್ನು ಮಾತ್ರ ಮರೆಯುವುದಿಲ್ಲ.
ಸಕ್ಕರೆ ಬಳಕೆ ಇಲ್ಲವೇ ಇಲ್ಲ: ಸಕ್ಕರೆಯುಳ್ಳ ಪದಾರ್ಥಗಳ ಸೇವನೆ ಅನಾರೋಗ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ಇಲ್ಲಸಲ್ಲದ ರೋಗಗಳ ಜೊತೆಗೆ ತೂಕ ಏರಿಕೆಗೂ ಕಾರಣವಾಗುತ್ತದೆ. ಹಾಗಾಗಿ ಶುಗರ್ ತಿನ್ನಲೇಬೇಡಿ ಅಂತಾರೆ ತಜ್ಞರು. ಅಥಿಯಾ ಕೂಡಾ ಶುಗರ್ ಗೆ ನೋ ಹೇಳ್ತಾರಂತೆ. ಸಕ್ಕರೆ ಹೊಂದಿರುವ ಆಹಾರವಾಗಲಿ ಅಥವಾ ಪಾನೀಯಗಳಾಗಲೀ ಯಾವುದನ್ನೂ ಅವರು ಸೇವಿಸುವುದಿಲ್ಲ. ಇದರಿಂದ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯ ಎಂದು ಅವರು ನಂಬುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ