ಸಂಜಯ್​ ದತ್​ ಬಯೋಪಿಕ್​ 'ಸಂಜು' ವಿರುದ್ಧ ಕಿಡಿಕಾರಿರುವ ಆರ್​ಎಸ್​ಎಸ್​!

news18
Updated:July 12, 2018, 5:13 PM IST
ಸಂಜಯ್​ ದತ್​ ಬಯೋಪಿಕ್​ 'ಸಂಜು' ವಿರುದ್ಧ ಕಿಡಿಕಾರಿರುವ ಆರ್​ಎಸ್​ಎಸ್​!
news18
Updated: July 12, 2018, 5:13 PM IST
ನ್ಯೂಸ್​ 18 ಕನ್ನಡ 

ನಟ ಸಂಜಯ್​ ದತ್​ ಅವರ ಜೀವನಾಧಾರಿತ ಸಿನಿಮಾ 'ಸಂಜು' ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್​ಎಸ್​ಎಸ್​) ಬೇಸರ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಸಂಘ ತನ್ನ ಮುಖ್ಯ ಪತ್ರಿಕೆ ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಈ ವಿಷಯ ಅರ್ಥವಾಗುತ್ತದೆ.

ಪತ್ರಿಕೆಯ ಮುಖಪುಟದಲ್ಲಿ 'ಕಿರ್​ದಾರ್​ ದಾಗ್​ದಾರ್​' ಎಂಬ ತಲೆ ಬಹರ ನೀಡಿರುವ ಈ ಲೇಖನದಲ್ಲಿ ಮುಂಬೈನ ಸಿನಿಮಾ ಉದ್ಯಮದ ಮಾಫಿಯಾ ಹಾಗೂ ಭೂಗತಲೋಕವನ್ನು ವೈಭವೀಕರಿಸುವ ಸಿನಿಮಾಗಳನ್ನು ಏಕೆ ಮಾಡಲು ಅವಕಾಶ ನೀಡಲಾಡುತ್ತಿದೆ.

ಪಾಂಚಜನ್ಯದ ತಾಜಾ ಅಂಕಣದಲ್ಲಿ 'ಸಂಜು' ಸಿನಿಮಾದ ಬಗ್ಗೆಯೇ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಸಿನಿಮಾದಲ್ಲಿ 1993 ಮುಂಬೈ ಬಾಂಬ್​ ಸ್ಫೋಟದಲ್ಲಿ ಜೈಲಿಗೆ ಹೋಗಿದ್ದ ಸಂಜಯ್​ ದತ್​ ಬಗ್ಗೆ ತುಂಬಾ ಒಳ್ಳೆಯ ಭಾವನೆ ಮೂಡುವಂತೆ ತೋರಿಸಲಾಗಿದೆ. ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಹಿಂದೂ ವಿರೋಧಿ ಸಿನಿಮಾಗಳನ್ನು ತೆಗೆಯುತ್ತಾರೆ. ಅವರ ಹಿಂದಿನ 'ಪಿಕೆ' ಸಿನಿಮಾ ಸಹ ಹಿಂದೂ ವಿರೋಧಿಯಾಗಿತ್ತು. ಇದರಲ್ಲಿ ಕಂಳಂಕಿತರಾಗಿರುವ ಸಂಜಯ್​ ದತ್​ ಅವರ ಹೆಸರನ್ನು ಶುದ್ಧಗೊಳಿಸುವ ಪ್ರಯತ್ನ ಮಾಡಲಾಗಿದೆ ವಿನಃ ಸಂಜು ಅವರ ಸಾಕಷ್ಟು ತಪ್ಪು ಮತ್ತು ಕೆಟ್ಟ ಗುಣಗಳನ್ನು ಮರೆಮಾಚಲಾಗಿದೆ ಎಂದು ಬರೆಯಲಾಗಿದೆ.

ಸಂಜಯ್​ ದತ್​ ಯಾವ ಘನ ಕಾರ್ಯ ಮಾಡಿದ್ದಾರೆಂದು ಅವರ ಜೀವನಾಧಾರಿತ ಸಿನಿಮಾ ಮಾಡಲಾಗಿದೆ. ಹಿರಾನಿ ಈ ಸಿನಿಮಾದ ಮೂಲಕ ಯುವಜನರಿಗೆ ಒಬ್ಬ ರೋಲ್​ ಮಾಡೆಲ್​ ಅನ್ನು ಪರಿಚಯಿಸಿದ್ದಾರಾ ಎಂದೆಲ್ಲ ಅಂಕಣದಲ್ಲಿ ಬರೆಯಲಾಗಿದೆ.

 

 
First published:July 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ