ಡಿ.9ಕ್ಕೆ ರಾಜ್ಯದ 30 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ RRR ಟ್ರೈಲರ್​ ಬಿಡುಗಡೆ: ಥಿಯೇಟರ್​ಗಳ​​ ಲಿಸ್ಟ್​ ಇಲ್ಲಿದೆ!

ಕರ್ನಾಟಕ(Karnataka)ದಲ್ಲೂ ಒಟ್ಟು 30 ಚಿತ್ರಮಂದಿರಗಳಲ್ಲಿ ಡಿಸೆಂಬರ್​ 9ರಂದು ಸಿನಿಮಾದ ಟ್ರೈಲರ್ ರಿಲೀಸ್​​​ ಆಗಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಏಕಕಾಲಕ್ಕೆ ಎಲ್ಲ ಚಿತ್ರಮಂದಿರಗಳಲ್ಲಿ ಆರ್​ಆರ್​ಆರ್​​ ಸಿನಿಮಾದ ಟ್ರೈಲರ್​ ರಿಲೀಸ್​ ಆಗಲಿದೆ.

ಜೂ.ಎನ್​ಟಿಆರ್​​, ರಾಮ್​ಚರಣ್​

ಜೂ.ಎನ್​ಟಿಆರ್​​, ರಾಮ್​ಚರಣ್​

  • Share this:
ನಾಳೆಗಾಗಿ ಇಡೀ ಭಾರತೀಯ ಚಿತ್ರಂಗವೇ ಕಾತುರದಿಂದ ಕಾಯುತ್ತಿದೆ. ಏಕೆಂದರೆ ನಾಳೆ ಭಾರತೀಯ ಸಿನಿರಂಗದ ಮೋಸ್ಟ್​ ಎಕ್ಸ್​ಪೆಕ್ಟೆಡ್(Most Exepected)​ ಸಿನಿಮಾ ಆರ್​ಆರ್​ಆರ್(RRR)​​ ಚಿತ್ರದ ಟ್ರೈಲರ್(Trailer)​ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್(Teaser)​, ಹಾಡು(Songs)ಗಳಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಆರ್​ಆರ್​ಆರ್​​ ಸಿನಿಮಾ, ನಾಳೆ ಟ್ರೈಲರ್​ನಲ್ಲಿ ಯಾವ ರೀತಿ ನಿರೀಕ್ಷೆ ಹೆಚ್ಚಿಸುತ್ತೆ ಅಂತ ಕಾದು ನೋಡಬೇಕಿದೆ. ಎಲ್ಲ ರಾಜ್ಯದ ಚಿತ್ರಮಂದಿರ(Theater)ಗಳಲ್ಲೂ ಈ ಸಿನಿಮಾದ ಟ್ರೈಲರ್​ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಕರ್ನಾಟಕ(Karnataka)ದಲ್ಲೂ ಒಟ್ಟು 30 ಚಿತ್ರಮಂದಿರಗಳಲ್ಲಿ ಡಿಸೆಂಬರ್​ 9ರಂದು ಸಿನಿಮಾದ ಟ್ರೈಲರ್ ರಿಲೀಸ್​​ ಆಗಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಏಕಕಾಲಕ್ಕೆ ಎಲ್ಲ ಚಿತ್ರಮಂದಿರಗಳಲ್ಲಿ ಆರ್​ಆರ್​ಆರ್​​ ಸಿನಿಮಾದ ಟ್ರೈಲರ್​ ರಿಲೀಸ್​ ಆಗಲಿದೆ. ಈ ಬಗ್ಗೆ ಚಿತ್ರತಂಡ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಯಾವ ಜಿಲ್ಲೆಯ ಯಾವ ಚಿತ್ರಮಂದಿರದಲ್ಲಿ ಟ್ರೈಲರ್​ ರಿಲೀಸ್ ಆಗಲಿದೆ ಎಂಬ ಮಾಹಿತಿ ಇದೆ. ಟ್ರೈಲರ್​​ ಬಿಡುಗಡೆಯನ್ನೇ ಸಿನಿಮಾದಂತೆ ಆರ್​ಆರ್​​ಆರ್​​ ಚಿತ್ರತಂಡ ಮಾಡುತ್ತಿರುವುದನ್ನು ಕಂಡು ಅಭಿಮಾನಿ(Fans)ಗಳು ಥ್ರಿಲ್​(Thrill) ಆಗಿದ್ದಾರೆ. ನಾಳೆ ಬೆಳಗ್ಗೆ ಯಾವಾಗ ಆಗುತ್ತೆ ಅಂತ ಕಾಯುತ್ತಿದ್ದಾರೆ. 

ಚಿತ್ರಮಂದಿರಗಳ ಲಿಸ್ಟ್​ ಬಿಡುಗಡೆಮಾಡಿದ ಚಿತ್ರತಂಡ!

ನಾಳೆ ಆರ್​ಆರ್​ಆರ್​ ಸಿನಿಮಾದ ಟ್ರೈಲರ್​ ಅನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ. ಈ ಬಗ್ಗೆ ಕೆಎನ್​ವಿ ಪ್ರೋಡಕ್ಷನ್​​ ಮಾಹಿತಿ ಹಂಚಿಕೊಂಡಿದೆ. ‘ಎಲ್ಲರಿಗೂ ನಮಸ್ಕಾರ, ರಾಮ್​​ ಚರಣ್​, ಜೂನಿಯರ್​ ಎನ್​ಟಿಆರ್​​, ಅಜಯ್​ ದೇವಗನ್​​, ಆಲಿಯಾ ಭಟ್​ ಅಭಿನಯದ, ಸುಪ್ರಸಿದ್ಧ ನಿರ್ದೇಶಕರಾದ ಎಸ್​.ಎಸ್​.ರಾಜಮೌಳಿ ಸರ್​ ನಿರ್ದೇಶಿಸಿರುವ ಭಾರತ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ, ಆರ್​ಆರ್​ಆರ್​ ಚಿತ್ರದ ಟ್ರೈಲರ್​ ಬಿಡುಗಡೆಯನ್ನು ಕರ್ನಾಟಕದ 30 ಚಿತ್ರಮಂದಿರಗಳಲ್ಲಿ ಮಾಡಲಾಗುವುದೆಂದೂ ತಿಳಿಸಲು ನಾವು ಹೆಮ್ಮೆ ಪಡುತ್ತೇವೆ. ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಬನ್ನಿ, ಈ ಅದ್ಭುತವಾದ ಕ್ಷಣಕ್ಕೆ ಸಾಕ್ಷಿಯಾಗಿ. ಇಡೀ ಪ್ರಪಂಚ ಯೂಟ್ಯೂಬ್​​ನಲ್ಲಿ ಈ ಚಿತ್ರದ ಟ್ರೈಲರ್​ ನೋಡುವುದಕ್ಕೂ ಮುನ್ನ ನೀವು ಬೆಳ್ಳಿ ಪರದೆ ಮೇಲೆ ವೀಕ್ಷಿಸಿ..ಎಲ್ಲರಿಗೂ ಆದರದ ಸ್ವಾಗತ’ ಎಂದು ಪತ್ರದಲ್ಲಿ ಇದೆ.ಭೀಮ್​ಗಾಗಿ ರೆಡಿಯಿರಿ ಎಂದ ರಾಮ್​ಚರಣ್!​

ಇದೇ ಮೊದಲ ಬಾರಿಗೆ ರಾಮ್​ಚರಣ್​ ಹಾಗೂ ಜೂ.ಎನ್​ಟಿಆರ್​ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ನಾಳೆ ಸಿನಿಮಾ ಟ್ರೈಲರ್​​ ರಿಲೀಸ್ ಆಗುತ್ತಿರುವ ಬಗ್ಗೆ ರಾಮಚರಣ್​ ಪೋಸ್ಟ್​​ ಮಾಡಿದ್ದಾರೆ. ಭೀಮ್​ಗಾಗಿ ರೆಡಿಯಿರಿ ಎಂದು ಆರ್​ಆರ್​​ಆರ್​ ಸಿನಿಮಾದ 14 ಸೆಕೆಂಡ್​​ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಸಣ್ಣ ವಿಡಿಯೋ ನೋಡಿಯೇ ಫ್ಯಾನ್ಸ್​​ ಫುಲ್​ ಥ್ರಿಲ್​ ಆಗಿದ್ದಾರೆ.ಇದನ್ನು ಓದಿ : ಜನನಿ ಹಾಡು ಬಿಡುಗಡೆಗೆ ಮುನ್ನ ಕನ್ನಡಿಗರ ಕ್ಷಮೆಯಾಚಿಸಿದ ರಾಜಮೌಳಿ

ರಾಮ್​ಗಾಗಿ ರೆಡಿಯಿರಿ ಎಂದ ಜೂ.ಎನ್​ಟಿಆರ್​!

ಇನ್ನೂ ರಾಮ್​​ಗಾಗಿ ರೆಡಿಯಿರಿ ಎಂದು ಜೂ.ಎನ್​ಟಿಆರ್​ ಪೋಸ್ಟ್​ ಮಾಡಿದ್ದರೆ. ಇಬ್ಬರು ನಟರು ಮತ್ತೊಬ್ಬರ 14 ಸೆಕೆಂಡ್​ನ ವಿಡಿಯೋವನ್ನು ಪೋಸ್ಟ್​​ ಮಾಡಿದ್ದಾರೆ. ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಇದೇ ರೀತಿಯ ಟ್ರಿಕ್ಸ್​​ನಿಂದಲೇ ರಾಜಮೌಳಿ ಸಿನಿಮಾ ಮೇಲಿರುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಇನ್ನೂ ನಾಳೆ ಯೂಟ್ಯೂಬ್​ ಕ್ರ್ಯಾಶ್​ ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಿದ್ದಾರೆ ಫ್ಯಾನ್ಸ್​​.
View this post on Instagram


A post shared by Jr NTR (@jrntr)

ಇದನ್ನು ಓದಿ : 15 ನಿಮಿಷದ ಪಾತ್ರಕ್ಕೆ ಆಲಿಯಾ ಭಟ್​ ಪಡೆದ ಸಂಭಾವನೆ ಎಷ್ಟು ಗೊತ್ತಾ? ತಲೆ ತಿರುಗೋದು ಗ್ಯಾರಂಟಿ!

ಈ ಚಿತ್ರ 2022ರ ಜ. 7ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಅದ್ದೂರಿ ಹಾಡು, ಟೀಸರ್​ ಮೂಲಕ ಪ್ರೇಕ್ಷಕರ ಸೆಳೆದಿರುವ ಚಿತ್ರದ ಮತ್ತೊಂದು ಬಹುನಿರೀಕ್ಷಿತ ಜನನಿ (Janani Song From RRR Movie) ಹಾಡನ್ನು ನವೆಂಬರ್​ 26ರಂದು ಬಿಡುಗಡೆ ಮಾಡಿದ್ದರು. ಈ ಹಾಡು ನೋಡಿದ ಪ್ರತಿಯೊಬ್ಬರ ನಿರೀಕ್ಷೆ ದುಪ್ಪಟಾಗಿದೆ. ನಾಳೆ ಟ್ರೈಲರ್​ ನೋಡಿದ ಬಳಿಕ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚಲಿದೆ.
Published by:Vasudeva M
First published: