RRR: ನಾಟು ನಾಟು ಆಸ್ಕರ್ ಶೋನಲ್ಲಿ ಭಾರತದ ಡ್ಯಾನ್ಸರ್ಸ್ ಇಲ್ಲ! ಜನಾಂಗೀಯ ನಿಂದನೆ ಟೀಕೆ

ನಾಟು ನಾಟು ಡ್ಯಾನ್ಸ್​ನಲ್ಲಿ ಜೂ. ಎನ್​ಟಿಆರ್ ಹಾಗೂ ರಾಮ್​ ಚರಣ್

ನಾಟು ನಾಟು ಡ್ಯಾನ್ಸ್​ನಲ್ಲಿ ಜೂ. ಎನ್​ಟಿಆರ್ ಹಾಗೂ ರಾಮ್​ ಚರಣ್

ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡನ್ನು ಕೂಡ ಪ್ರತಿಷ್ಠಿತ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಆದರೆ ನಾಟು ನಾಟು ಹಾಡಿಗೆ ನರ್ತಿಸಿದವರಲ್ಲಿ ದಕ್ಷಿಣದ ಯಾರೊಬ್ಬ ಡ್ಯಾನ್ಸರ್ ಕೂಡಾ ಇರಲಿಲ್ಲ ಎಂಬುದು ಖೇದಕರವಾದ ಸಂಗತಿಯಾಗಿದೆ.

  • Share this:

ಆಸ್ಕರ್ 2023 ಭಾರತದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಭಾರತೀಯರೆಲ್ಲರೂ ಹೆಮ್ಮೆಪಡುವಂತಹ ಸಾಧನೆಗಳನ್ನು ಭಾರತೀಯ ಚಿತ್ರಗಳಾದ ಆರ್‌ಆರ್‌ಆರ್ ಹಾಗೂ ದ ಎಲಿಫೆಂಟ್ ವಿಸ್ಪರರ್ಸ್ ಮಾಡಿದೆ. ಆಸ್ಕರ್ 2023ರ ವರ್ಷ ಭಾರತಕ್ಕೆ ಐತಿಹಾಸಿಕ ಕೊಡುಗೆಯನ್ನು ನೀಡಿದೆ. ಎಸ್‌ಎಸ್ ರಾಜಮೌಳಿಯವರ ಆರ್‌ಆರ್‌ಆರ್ (RRR) ಅತ್ಯುತ್ತಮ ಮೂಲ ಹಾಡು ಪ್ರಶಸ್ತಿಯನ್ನು ಬಾಚಿಕೊಂಡರೆ, ದ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಅತ್ಯುತ್ತಮ ಡಾಕ್ಯುಮೆಂಟರಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ದಕ್ಷಿಣದ ನರ್ತಕರ ಪ್ರದರ್ಶನ ಕಂಡುಬರಲಿಲ್ಲ


ಈ ಸಮಾರಂಭದಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡನ್ನು ಕೂಡ ಪ್ರತಿಷ್ಠಿತ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಆದರೆ ನಾಟು ನಾಟು ಹಾಡಿಗೆ ನರ್ತಿಸಿದವರಲ್ಲಿ ದಕ್ಷಿಣದ ಯಾರೊಬ್ಬ ಡ್ಯಾನ್ಸರ್ ಕೂಡಾ ಇರಲಿಲ್ಲ ಎಂಬುದು ಖೇದಕರವಾದ ಸಂಗತಿಯಾಗಿದೆ.


ಅದೇ ರೀತಿ ದಕ್ಷಿಣದ ಯಾವೊಂದು ಪ್ರದರ್ಶನ ಕೂಡ ಅಕಾಡೆಮಿ ವೇದಿಕೆಯಲ್ಲಿ ನಡೆಯಲಿಲ್ಲ ಎಂಬುದು ಚರ್ಚೆಯ ವಿಷಯವಾಗಿದೆ.


ನಾಟು ನಾಟು ಹಾಡುಗಾರರಾದ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ವೇದಿಕೆಯಲ್ಲಿ ಹಾಡು ಹಾಡಿದಾಗ ದಕ್ಷಿಣ ಏಷ್ಯಾ ಭಾಗದ ಯಾವುದೇ ನರ್ತಕರು ವೇದಿಕೆಯಲ್ಲಿರಲಿಲ್ಲ ಎಂಬುದು ಹೆಚ್ಚಿನವರಿಗೆ ನಿರಾಶೆಯನ್ನುಂಟು ಮಾಡಿದೆ.




ದಕ್ಷಿಣದವರಿಗೆ ಏಕೆ ಪ್ರಾಶಸ್ತ್ಯವಿಲ್ಲ


ಅಕಾಡೆಮಿ ಪ್ರಶಸ್ತಿಗಳಲ್ಲಿ ದಕ್ಷಿಣದ ಯಾವೊಬ್ಬ ನರ್ತಕ ನರ್ತಕಿ ಭಾಗಿಯಾಗದೇ ಇರುವುದು ಹಾಗೂ ವೇದಿಕೆಯಲ್ಲಿ ಹೆಜ್ಜೆ ಹಾಕದೇ ಇರುವುದು ನೃತ್ಯ ಸಮುದಾಯದ ಅನೇಕರನ್ನು ನಿರಾಶೆಗೆ ಒಳಪಡಿಸಿದೆ.


ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರಗಳಿಗೆ ಮನ್ನಣೆ ದೊರೆಯುವಾಗ ದಕ್ಷಿಣದ ನರ್ತಕ, ನರ್ತಕರಿಗೆ ಏಕೆ ಪ್ರಾಶಸ್ತ್ಯವಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದೆ.


ಸಂಗೀತವೆಂಬುದು ಜಾತಿ, ಧರ್ಮವನ್ನು ಮೀರಿದ್ದು


ಆದರೆ 2009 ರ ಆಸ್ಕರ್ ಸಮಾರಂಭ ಹೀಗಿರಲಿಲ್ಲ. ಭಾರತೀಯ ಗಾಯಕರು ಹಾಗೂ ಹೆಚ್ಚಿನ ಜನಾಂಗದ ನೃತ್ಯಗಾರರು ಹಾಗೂ ಸಂಗೀತಗಾರರ ಗುಂಪೇ ವೇದಿಕೆಯಲ್ಲಿ ನೆರೆದಿತ್ತು ಎಂದು ವರ್ಜೀನಿಯಾ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನದ ಸಹಾಯಕ ಪ್ರಾಧ್ಯಾಪಕರಾದ ಶಿಲ್ಪಾ ಡೇವ್ ಸ್ಮರಿಸುತ್ತಾರೆ.




ಸಂಗೀತ ಲಿಂಗ, ಜನಾಂಗ, ಧರ್ಮವನ್ನು ಮೀರಿರುವ ಒಂದು ದೈವದತ್ತ ಕಲೆ ಎಂಬುದನ್ನು ಕಲಾಕಾರರು ಆ ಸಮಯದಲ್ಲಿ ತೋರಿಸಿದ್ದರು ಹೀಗಾಗಿಯೇ ಜನರಿಗೂ ಯಾವುದೇ ಸಮಸ್ಯೆ ಇರಲಿಲ್ಲ ಎಂಬುದು ಶಿಲ್ಪಾ ಡೇವ್ ಮಾತಾಗಿದೆ.


AMPAS ನರ್ತಕರನ್ನು ಮೊದಲೇ ಆಯ್ಕೆಮಾಡಿಕೊಂಡಿತ್ತು


ಇಂತಹ ಸಮಸ್ಯೆಗಳನ್ನು ಸರಿಪಡಿಸಬೇಕು ಹಾಗೂ ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಧೋರಣೆಯಲ್ಲಿ ಬದುಕಬಾರದು ಎಂದು ಲಾಸ್ ಏಂಜಲೀಸ್‌ನ ಸಂಸ್ಥಾಪಕ ಮತ್ತು ಕಲಾತ್ಮಕ ನಿರ್ದೇಶಕ ಮೆಕ್‌ಡೇನಿಯಲ್ ತಿಳಿಸಿದ್ದಾರೆ.


ಇದನ್ನೂ ಓದಿ: Kichcha Sudeepa: ಕಬ್ಜ ಸಿನಿಮಾ ನೋಡಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಹೊಸ ಒತ್ತಾಯ! ಫ್ಯಾನ್ಸ್ ಪ್ಲೀಸ್ ಎಂದಿದ್ದೇಕೆ?


ಆಸ್ಕರ್‌ಗೆ ಎರಡು ವಾರಗಳ ಮೊದಲು ಮೆಕ್‌ಡೇನಿಯಲ್‌ನ ಏಜೆಂಟ್ ಆಕೆಯನ್ನು ಪ್ರದರ್ಶನ ಸಲಹೆಗಾರರಾಗಿ ನೇಮಿಸಲು ಮುಂದಾಗಿದ್ದರು ಆದರೆ AMPAS (ಅಕಾಡೆಮಿ ಆಫ್ ಮೋಶನ್ ಪಿಕ್ಚರ್ಸ್ ಏಂಡ್ ಆರ್ಟ್ಸ್) ನೆಪೋಲಿಯನ್ ಹಾಗೂ ತಬಿತಾ ಹೆಸರಿನ ಲಾಸ್ ಏಂಜಲೀಸ್ ಮೂಲದ ನರ್ತಕರನ್ನು ಈಗಾಗಲೇ ಆಯ್ಕೆಮಾಡಿಕೊಂಡಿತ್ತು ಎಂದು ಆಕೆಗೆ ತಿಳಿದುಬಂದಿತು.


ದಕ್ಷಿಣ ಭಾಗದ ಮನರಂಜನೆ ಕೂಡ ಬೇಕು


2013 ರಲ್ಲಿ ಇಂಡಿಯನ್ ಆಕ್ಸೆಂಟ್ಸ್: ಬ್ರೌನ್ ವಾಯ್ಸ್ ಅಂಡ್ ರೇಶಿಯಲ್ ಪರ್ಫಾರ್ಮೆನ್ಸ್ ಇನ್ ಅಮೇರಿಕನ್ ಟೆಲಿವಿಷನ್ ಅಂಡ್ ಫಿಲ್ಮ್ ಎಂಬ ಪುಸ್ತಕ ಬರೆದಿದ್ದ ಡೇವ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ಮುಂದಿನ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ದಕ್ಷಿಣ ಏಷ್ಯಾದ ಮನರಂಜನೆಯನ್ನು ಸೇರ್ಪಡೆಗೊಳಿಸಬೇಕು ಎಂದು ತಿಳಿಸಿದ್ದಾರೆ. ನಿರ್ದೇಶಕರು, ಬರಹಗಾರರು ಮತ್ತು ನಟರಿಗೆ ಪ್ರಾತಿನಿಧ್ಯ ನೀಡುವ ಜೊತೆಗೆ ನೃತ್ಯಕಾರರಿಗೂ ಇಲ್ಲಿ ಮನ್ನಣೆ ನೀಡಬೇಕು ಎಂದು ಡೇವ್ ತಿಳಿಸಿದ್ದಾರೆ.


ರಾಮ್‌ಚರಣ್, ಎನ್‌ಟಿಆರ್ ಪರ್ಫಾಮೆನ್ಸ್ ಕೂಡ ಇರಲಿಲ್ಲ

top videos


    ಆರಂಭದಲ್ಲಿ ಆರ್‌ಆರ್‌ಆರ್ ಚಿತ್ರದಲ್ಲಿ ನಟಿಸಿದ್ದ ಹಾಗೂ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಮಾತ್ರವೇ ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಹಾಡಿಗೆ ನರ್ತಿಸುವುದು ಎಂದಾಗಿತ್ತು. ಆದರೆ ಸಮಯದ ಅಭಾವದಿಂದಾಗಿ ಈ ಇಬ್ಬರೂ ನಟರು ನರ್ತಿಸಲು ನಿರಾಕರಿಸಿದರು ಎಂಬುದು ವರದಿಯಾಗಿದೆ.

    First published: