ಜನವರಿ 7ರಂದು ‘ಆರ್ಆರ್ಆರ್’ (RRR) ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಚಿತ್ರತಂಡ ಈಗಾಗಲೇ ಬೆಂಗಳೂರು (Bengaluru), ಆಂಧ್ರ, ತಮಿಳುನಾಡು, ಕೇರಳ, ಮುಂಬೈನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಎಸ್.ಎಸ್.ರಾಜಮೌಳಿ (S.S Rajamouli) ಅಂದರೆ ಅಲ್ಲಿ ಹೊಸತನ ಇರುತ್ತೆ. ಅದು ಚಿತ್ರದಲ್ಲಿ ಆಗಲಿ, ಸಿನಿಮಾದ ಪ್ರಚಾರದಲ್ಲಿ ಆಗಲಿ, ವಿಭಿನ್ನವಾಗಿಯೇ ಪ್ರಮೋಷನ್ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ 25 ದಿನ ಬಾಕಿ ಇರುವಾಗಲೇ ರಾಜಮೌಳಿ ಪ್ರಚಾರದ ಅಖಾಡಕ್ಕೆ ಎಂಟ್ರಿಕೊಟ್ಟಿದ್ದರು. ಜೂ.ಎನ್ಟಿಆರ್ (Jr.NTR), ರಾಮಚರಣ್ (Ramcharan), ಆಲಿಯಾ ಭಟ್ (Alia Bhatt), ಎಸ್.ಎಸ್.ರಾಜಮೌಳಿ ಪ್ರಮುಖ ರಾಜ್ಯಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಆರ್ಆರ್ಆರ್ ಚಿತ್ರತಂಡ ಅದ್ಧೂರಿ ಪ್ರಚಾರ ನಡೆಸಿದೆ. ಈಗಾಗಲೇ ಟ್ರೈಲರ್ನಲ್ಲೇ ಆರ್ಆರ್ಆರ್ ಸಿನಿಮಾ ಮೋಡಿ ಮಾಡಿದೆ. ಚೆನ್ನೈನಲ್ಲಿ ಈಗಾಗಲೇ ಚಿತ್ರತಂಡ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್(Pre Release Event) ಮಾಡಿದೆ.ಮುಂಬೈನಲ್ಲೂ ಪ್ರೀ ರಿಲೀಸ್ ಇವೆಂಟ್ ಮಾಡಲಾಗಿದೆ. ಇದೀಗ ಚಿತ್ರತಂಡದ ಕಣ್ಣು ಸಿಲಿಕಾನ್ ಸಿಟಿ(Silicon City) ಮೇಲೆ ಇದೆ. ಹೀಗಾಗಿ ನಾಳೆ ಅಂದರೆ ಜನವರಿ 2 ರಂದು ಬೆಂಗಳೂರಿನ ಅರಮನೆ ಮೈದಾನ(Bengaluru Palace Ground)ಲ್ಲಿ ಆರ್ಆರ್ಆರ್ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಘಟಾನುಘಟಿ ನಾಯಕರ ದಂಡೇ ಆಗಮಿಸುತ್ತಿದೆ. ಜೊತೆಗೆ ರಾಜ್ಯದ ಮುಖ್ಯಮಂತಿ ಬಸವರಾಜ ಬೊಮ್ಮಾಯಿ(Cm Basavaraja Bommai) ಅವರಿಗೂ ಆಹ್ವಾನ ನೀಡಲಾಗಿದೆ.
ಯಾವೆಲ್ಲ ದಿಗ್ಗಜರು ಇವೆಂಟ್ಗೆ ಬರ್ತಿದ್ದಾರೆ ಗೊತ್ತಾ?
ಭಾನುವಾರ ಜನವರಿ 2 ಸಂಜೆ 6.30ಕ್ಕೆ ಆರ್ಆರ್ಆರ್ ಪ್ರೀ ರಿಲೀಸ್ ಕಾರ್ಯಕ್ರಮ ಆರಂಭಗೊಳ್ಳಲಿದೆ. ಅತಿಥಿಗಳಾಗಿ ಮುಖ್ಯಮಂತ್ರಿ ಬೊಸವರಾಜ ಬೊಮ್ಮಾಯಿ, ರಾಕಿಂಗ್ ಸ್ಟಾರ್ ಯಶ್, ಶಿವರಾಜ್ಕುಮಾರ್, ಉಪೇಂದ್ರ ಹಾಗೂ ಧ್ರುವ ಸರ್ಜಾ ಆಗಮಿಸುತ್ತಿದ್ದಾರೆ. ಈ ಮೂಲಕ ಕಾರ್ಯಕ್ರಮದ ರಂಗನ್ನು ಇವರು ಹೆಚ್ಚಿಸಲಿದ್ದಾರೆ.ಇವರ ಜತೆಗೆ ಇಡೀ ಸಿನಿಮಾ ತಂಡ ಇರಲಿದೆ ಎನ್ನಲಾಗಿದೆ. ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟ ಜ್ಯೂ.ಎನ್ಟಿಆರ್, ರಾಮ್ ಚರಣ್, ನಟಿ ಆಲಿಯಾ ಭಟ್ ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿಯೇ ಈ ಕಾರ್ಯಕ್ರಮ ನಡೆಯುತ್ತಿದೆ.
ಇದನ್ನು ಓದಿ: RRR ಸಿನಿಮಾದಲ್ಲಿ ಆಲಿಯಾ, ಅಜಯ್ ದೇವಗನ್ ಅತಿಥಿ ಪಾತ್ರ: ರಾಜಮೌಳಿ ಮಾತು ಕೇಳಿ ಫ್ಯಾನ್ಸ್ ಶಾಕ್!
ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ!
ಹೈದರಾಬಾದ್ನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸಲು ಚಿತ್ರತಂಡ ಪ್ಲ್ಯಾನ್ ರೂಪಿಸಿತ್ತು. ಆದರೆ, ಕೊವಿಡ್ ಕಾರಣದಿಂದ ಈ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿತ್ತು. ಹೀಗಾಗಿ ಸಕ್ಸಸ್ ಮೀಟ್ಅನ್ನು ಹೈದರಾಬಾದ್ನಲ್ಲಿ ನಡೆಸುವ ಆಲೋಚನೆ ತಂಡಕ್ಕೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಲಿದೆ. ಎಲ್ಲ ಘಟಾನುಘಟಿ ನಾಯಕರು ಒಂದೇ ವೇದಿಕೆ ಮೇಲೆ ಸೇರತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಜೂ.ಎನ್ಟಿಆರ್, ಹಾಗೂ ರಾಮಚರಣ್ಗೆ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.
ಇದನ್ನು ಓದಿ :ನಾನು ವಂಚಕನಲ್ಲ, ಜಾಕಲಿನ್ ಜೊತೆ ಅಫೇರ್ ಇದ್ದಿದ್ದು ನಿಜ ಎಂದ ಸುಕೇಶ್!
ಆಲಿಯಾ, ಅಜಯ್ ಅತಿಥಿ ಪಾತ್ರಗಳಂತೆ!
ಆಲಿಯಾ ಭಟ್ ಅವರು ಸೀತಾ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಆದರೆ ಅದೊಂದು ಚಿಕ್ಕ ಪಾತ್ರ ಎಂಬ ಮಾಹಿತಿ ತಿಳಿದುಬಂದಿದೆ. ಆ ಬಗ್ಗೆ ರಾಜಮೌಳಿ ಕೂಡ ಯಾವುದೇ ಮುಚ್ಚುಮರೆ ಮಾಡಿಲ್ಲ. ‘ಆಲಿಯಾ ಮತ್ತು ಅಜಯ್ ದೇವಗನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅದನ್ನು ಮುಚ್ಚಿಟ್ಟು ನಾನು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ. ಆದರೆ ಆ ಪಾತ್ರಗಳಿಗೆ ಹೀರೋಗಳಷ್ಟೇ ಮಹತ್ವ ಇದೆ’ ಎಂದು ಎಸ್.ಎಸ್. ರಾಜಮೌಳಿ ಹೇಳಿದ್ದಾರೆ. ಸಿನಿಮಾ ಮಾಂತ್ರಿಕನ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಆಲಿಯಾ ಭಟ್, ಅಜಯ್ ದೇವಗನ್ ಅವರದ್ದು ಚಿಕ್ಕ ಪಾತ್ರ ಎಂದು ಹೇಳಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ