ದುಬೈನಲ್ಲಿ RRR​ Pre-Release Event​.. ಕಾರ್ಯಕ್ರಮಕ್ಕೆ ಬರ್ತಾರಂತೆ ಹಾಲಿವುಡ್​ ಸೂಪರ್​ ಸ್ಟಾರ್!​

ದುಬೈನಲ್ಲಿ ಆರ್​ಆರ್​ಆರ್​ ಪ್ರಿ-ರಿಲೀಸ್​ ಇವೆಂಟ್​ ನಡೆಸಲು ಈ ಹಿಂದೆನೇ ರಾಜಮೌಳಿ ಪ್ಲ್ಯಾನ್​ ಮಾಡಿಕೊಂಡಿದ್ದರು. ಅದಕ್ಕೆ ಕಾಲ ಈಗ ಕೂಡಿ ಬಂದಿದೆ. ದುಬೈನಲ್ಲಿ ‘ಆರ್​ಆರ್​ಆರ್​’  ಪ್ರಿ-ರಿಲೀಸ್ ಇವೆಂಟ್ ಮಾಡಲು ರಾಜಮೌಳಿ ನಿರ್ಧರಿಸಿದ್ದಾರೆ

ಟಾಮ್​ ಕ್ರೂಸ್​ಗೆ ರಾಜಮೌಳಿ ಆಹ್ವಾನ

ಟಾಮ್​ ಕ್ರೂಸ್​ಗೆ ರಾಜಮೌಳಿ ಆಹ್ವಾನ

  • Share this:
‘ಆರ್​ಆರ್​ಆರ್​’(RRR) ಸದ್ಯಕ್ಕೆ ಇಡೀ ಭಾರತ, ಅಲ್ಲ.. ಅಲ್ಲ..  ಇಡೀ ವಿಶ್ವ(World)ವೇ ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದೆ. ಇದಕ್ಕೆ ಕಾರಣ ಸಿನಿಮಾ ಮಾಂತ್ರಿಕ ರಾಜಮೌಳಿ(Rajamouli) ನಿರ್ದೇಶನದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ‘ಬಾಹುಬಲಿ’(Baahubali) ಮೂಲಕ ರಾಜಮೌಳಿ ತಾನೆಂತ ನಿರ್ದೇಶಕ ಎಂಬುದನ್ನು ಪ್ರೂವ್​ ಮಾಡಿಕೊಂಡಿದ್ದಾರೆ. ಇದೀಗ ಮತ್ತೆ ‘ಆರ್​ಆರ್​ಆರ್’​ ಮೂಲಕ ಇಡೀ ವಿಶ್ವದ ಮುಂದೆ ಬರುತ್ತಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸಖತ್​ ಸೌಂಡ್ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಿರ್ದೇಶಕ ರಾಜಮೌಳಿ, ಮತ್ತು ಸಿನಿಮಾ ಕಾಸ್ಟಿಂಗ್​. ಹೌದು, ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಾಮ್​ಚರಣ್(Ram Charan)​, ಜೂನಿಯರ್​ ಎನ್​ಟಿಆರ್(Jr.NTR) ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಬಾಲಿವುಡ್​ ನಟ ಅಜಯ್​ ದೇವಗನ್(Ajay Devagn)​, ಆಲಿಯಾ ಭಟ್(Alia Bhatt) ಕೂಡ ಇದ್ದಾರೆ. ಸಿನಿಮಾ ಜನವರಿ 7ರಂದು ರಿಲೀಸ್ ಆಗಬೇಕಿತ್ತು. ಇದೀಗ ಮಾರ್ಚ್ 25ಕ್ಕೆ ತೆರೆ ಮೇಲೆ ಬರ್ತಿದೆ. ಈಗಾಗಲೇ ಪ್ರಿ ರಿಲೀಸ್  ಇವೆಂಟ್(Pre-Release Event)​ಗಳನ್ನು ಚಿತ್ರತಂಡ ಗ್ರ್ಯಾಂಡ್ ಆಗಿ ಮಾಡಿದೆ. ಆದರೆ, ರಾಜಮೌಳಿ ಕಣ್ಣು ಇದೀಗ ದುಬೈ(Dubai) ಮೇಲೆ ಬಿದ್ದಿದೆ. 

ದುಬೈನಲ್ಲಿ ‘ಆರ್​ಆರ್​ಆರ್​’ ಗ್ರ್ಯಾಂಡ್​ ಇವೆಂಟ್!

ಹೌದು, ದುಬೈನಲ್ಲಿ ಆರ್​ಆರ್​ಆರ್​ ಪ್ರಿ-ರಿಲೀಸ್​ ಇವೆಂಟ್​ ನಡೆಸಲು ಈ ಹಿಂದೆನೇ ರಾಜಮೌಳಿ ಪ್ಲ್ಯಾನ್​ ಮಾಡಿಕೊಂಡಿದ್ದರು. ಅದಕ್ಕೆ ಕಾಲ ಈಗ ಕೂಡಿ ಬಂದಿದೆ. ದುಬೈನಲ್ಲಿ ‘ಆರ್​ಆರ್​ಆರ್​’  ಪ್ರಿ-ರಿಲೀಸ್ ಇವೆಂಟ್ ಮಾಡಲು ರಾಜಮೌಳಿ ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಲಿವುಡ್‌ ಸೂಪರ್‌ಸ್ಟಾರ್ ಅನ್ನು ಕರೆದುಕೊಂಡು ಬರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ, ಆ ಸೂಪರ್​ ಸ್ಟಾರ್​ನನ್ನು ಸಂಪರ್ಕಿಸುವುದು ಅಷ್ಟು ಸುಲಭದ ಮಾತಲ್ಲ.

ಇದನ್ನೂ ಓದಿ: ಭಾರತದ ನಿರ್ದೇಶಕರಿಗೆ ಉಕ್ರೇನ್​ ಫೇವರಿಟ್​ ಶೂಟಿಂಗ್​ ಸ್ಪಾಟ್​! RRR ಚಿತ್ರೀಕರಣ ಕೂಡಾ ಇಲ್ಲೇ ಆಗಿದ್ದು

ಟಾಮ್​ ಕ್ರೂಸ್​ಗೆ ಗಾಳ ಹಾಕಿದ ರಾಜಮೌಳಿ!

ರಾಜಮೌಳಿ 'RRR' ಪ್ರಿ- ರಿಲೀಸ್ ಕಾರ್ಯಕ್ರಮಕ್ಕೆ ಈಗಾಗಲೇ ಹಾಲಿವುಡ್ ಸೂಪರ್‌ಸ್ಟಾರ್‌ಗೆ ಆಹ್ವಾನ ಕೂಡ ನೀಡಿದ್ದಾರಂತೆ. ‘ಮಿಷನ್ ಇಂಪಾಸಿಲ್’ ಅಂತಹ ಆ್ಯಕ್ಷನ್​ ಸಿನಿಮಾಗಳಲ್ಲಿ ನಟಿಸಿರುವ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ರಿಲೀಸ್​ಗೆ ರೆಡಿಯಾಗಿರುವ ‘ಡಾಕ್ಟರ್​ ಸ್ಟ್ರೆಂಜ್​’ ಸಿನಿಮಾದಲ್ಲಿ ಟಾಮ್​ ಕ್ರೂಸ್​ ಐರನ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದೂ ನಿಜವಾಗುತ್ತೆ ಅನ್ನುವುದು ಡೌಟ್​. ಯಾಕೆಂದರೆ ‘ಅವೆಂಜರ್ಸ್ ಎಂಡ್ ಗೇಮ್​’ ಸಿನಿಮಾದಲ್ಲಿ ಐರನ್​ ಮ್ಯಾನ್​ ಪಾತ್ರ ಎಂಡ್ ಆಗಿತ್ತು.

ಇದನ್ನೂ ಓದಿ: ನಾಗಿಣಿ ತರ ನಂಗಾನಾಚ್​ ಮಾಡಿದ್ದೇಕೆ ಸಮಂತಾ? ಮಾಡಿದ್ದಲ್ಲ.. ದೊಣ್ಣೆ ಹಿಡಿದು ಮಾಡ್ಸಿದ್ದಂತೆ!

ಮತ್ತೆ ಪ್ರಚಾರದ ಭರಾಟೆಗೆ ಇಳಿಯಲಿದೆ ಚಿತ್ರತಂಡ!

ಈ ಸಿನಿಮಾ ಜನವರಿ 7ರಂದೇ ರಿಲೀಸ್ ಆಗಬೇಕಿತ್ತು. ಆಗಲೇ ರಾಜಮೌಳಿ ಬಾರಿ ವೆಚ್ಚದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಕೊರೋನಾ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಬೇಕಾಗಿತ್ತು. ಮತ್ತೆ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ ಚರಣ್ ತೇಜಾ ಹಾಗೂ ಆಲಿಯಾ ಭಟ್ ಈ ಚಿತ್ರದ ಪ್ರಚಾರಕ್ಕೆ ಇಳಿಯಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈಗಾಗಲೇ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದರಿಂದ ಈ ಬಾರಿ ಕೇವಲ ಪ್ರಮುಖ ಸಿಟಿಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
Published by:Vasudeva M
First published: