RRR Movie Review: 'ರಾಜಮೌಳಿ' ಎಂಬ ಸಿನಿ ಮಾಂತ್ರಿಕ ಹೇಳಿದ ಸ್ವಾತಂತ್ರ್ಯಪೂರ್ವದ ಕಥೆ! ಹೇಗಿದೆ ಗೊತ್ತಾ 'ಆರ್‌ಆರ್‌ಆರ್‌'?

'ರಾಜಮೌಳಿ' ಎಂಬ 'ಸಿನಿಮಾ ಮಾಂತ್ರಿಕ'ನ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದು 'ನೊಣ'ವನ್ನಾದರೂ ಇಟ್ಟುಕೊಂಡು ಅದ್ಭುತ ಸಿನಿಮಾ ಮಾಡಬಹುದು ಅಂತ ಈಗಾಗಲೇ ಅವರು ನಿರೂಪಿಸಿದ್ದಾರೆ. 'ಬಾಹುಬಲಿ' ಹಾಗೂ 'ಬಾಹುಬಲಿ-2'ನಂತಹ ವೈಭವಯುತ ಸಿನಿಮಾದಲ್ಲಿ ಅದ್ಭುತ ಕಥೆ ಹೇಳಿದ್ದ ರಾಜಮೌಳಿ, ಈ ಬಾರಿ 'ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆ' ಹೇಳಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾ

ಆರ್‌ಆರ್‌ಆರ್‌ ಸಿನಿಮಾ

 • Share this:
  ಭಾರತೀಯ ಚಿತ್ರರಂಗಕ್ಕೆ ‘ಆರ್‌ಆರ್‌ಆರ್‌’ (RRR) ಎಂಬ ಮತ್ತೊಂದು ದೊಡ್ಡ ಅಲೆ ಅಪ್ಪಳಿಸಿದೆ. ‘ಬಾಹುಬಲಿ’ಯಿಂದ (Bahubali) ಮೋಡಿ ಮಾಡಿದ್ದ ರಾಜಮೌಳಿ (Rajamouli) ಎಂಬ ಸಿನಿ ಮಾಂತ್ರಿಕನ ಬತ್ತಳಿಕೆಯಿಂದ ಹೊರಬಂದ ‘ಆರ್‌ಆರ್‌ಆರ್’ ಎಂಬ ಬಾಣ, ತೆರೆಗೆ ಅಪ್ಪಳಿಸಿದೆ. ನಿನ್ನೆ ರಾತ್ರಿಯೇ ಮೊದಲ ಶೋ (First Show) ಪ್ರದರ್ಶನಗೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರು ರಾಜಮೌಳಿಗೆ “ಬಹು ಪರಾಕ್” ಎಂದಿದ್ದಾರೆ. ತಲುಗು ಚಿತ್ರರಂಗದ (Telugu Film Industry) ಸೂಪರ್‌ ಸ್ಟಾರ್‌ಗಳಾದ (Super Star) ರಾಮ್‌ಚರಣ್ (Ramcharan), ಜ್ಯೂ. ಎನ್‌ಟಿಆರ್ (Jr. NTR), ಬಾಲಿವುಡ್ ಬೆಡಗಿ ಆಲಿಯಾ ಭಟ್ (Aalia Baht), ಅಜಯ್ ದೇವಗನ್ (Ajay Devgan) ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ತೀವ್ರ ಕುತೂಹಲ ಕೆರಳಿಸಿತ್ತು. ಸಿನಿಮಾ ಘೋಷಣೆ ಆದಾಗಿನಿಂದ ಪ್ರತಿ ದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇತ್ತು. ಪ್ರತಿ ದಿನ ಅಭಿಮಾನಿಗಳನ್ನು (Fans) ತುದಿಗಾಲಲ್ಲಿ ನಿಲ್ಲುವಂತೆ, ಸಿನಿಮಾ ಬಿಡುಗಡೆಗಾಗಿ ಕಾಯುವಂತೆ ಮಾಡಿತ್ತು. ಅಂತಿಮವಾಗಿ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನ, ಮೊದಲ ಪ್ರದರ್ಶನ (First Day, First Show) ನೋಡಿದ ಪ್ರೇಕ್ಷಕರು (Audience) ರಾಮ್‌ಚರಣ್, ಜ್ಯೂ. ಎನ್‌ಟಿಆರ್‌ಗೆ ಶಿಳ್ಳೆ ಹೊಡೆದಿದ್ದಾರೆ, ರಾಜಮೌಳಿಗೆ ಚಪ್ಪಾಳೆಗಳ ಸುರಿಮಳೆ ಸುರಿಸಿದ್ದಾರೆ.

  ಸೆನ್ಸಾರ್ ಮಂಡಳಿ ಸದಸ್ಯರಿಂದಲೇ ಮೆಚ್ಚುಗೆ

  UK, UAE ಸೆನ್ಸಾರ್ ಮಂಡಳಿಯ ಸದಸ್ಯರಾಗಿರುವ ಉಮೈರ್ ಸಂಧು ಸಿನಿಮಾ ನೋಡಿ ಫೈವ್ ಸ್ಟಾರ್ (5 Star) ಕೊಟ್ಟಿದ್ದಾರೆ. “ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಡೆಡ್ಲಿ ಕಾಂಬೊ. ಅಜಯ್ ದೇವಗನ್ ಒಂದು ಸರ್ಪ್ರೈಸ್ ಪ್ಯಾಕೇಜ್. ಆಲಿಯಾ ಭಟ್ ಸುರಸುಂದರಿಯಂತೆ ಮಿಂಚಿದ್ದಾರೆ” ಅಂತ ಸಂಧು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

  “ದೊಡ್ಡ ಕನಸು ಕಾಣಲು ಧೈರ್ಯ ಬೇಕು!”

  ಚಲನಚಿತ್ರ ವಿಮರ್ಶಕರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ RRR ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.  “ಭಾರತೀಯ ಚಲನಚಿತ್ರ ನಿರ್ಮಾಪಕರೊಬ್ಬರು ದೊಡ್ಡ ಕನಸು ಕಾಣಲು ಧೈರ್ಯಮಾಡಿ ಅದನ್ನು ಸಾಧಿಸಿದ್ದಾರೆ ಎಂದು RRR ನಿಮಗೆ ಹೆಮ್ಮೆ ತರುತ್ತದೆ. ಇದನ್ನು ಖಂಡಿತವಾಗಿಯೂ ತಪ್ಪಿಸಿಕೊಳ್ಳಬಾರದು. ಇದನ್ನು ಇಂದು ಬ್ಲಾಕ್ ಬಸ್ಟರ್ ಎಂದು ಕರೆದರೂ ,ನಾಳೆ ಅದು ಕ್ಲಾಸಿಕ್ ಆಗಿ ನೆನಪಿನಲ್ಲಿ ಉಳಿಯುತ್ತದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಅತ್ಯುತ್ತಮ ಅಭಿನಯ ನೀಡಿದ್ದಾರೆ” ಅಂತ ಹೊಗಳಿದ್ದಾರೆ.

  ಇದನ್ನೂ ಓದಿ: ಕರ್ನಾಟಕದಲ್ಲಿ RRRಗೆ ತೊಂದ್ರೆ ಕೊಟ್ರೆ, KGF 2 ಬರ್ತಿದೆ ಹುಷಾರ್​! ಕನ್ನಡಿಗರಿಗೆ ಜ್ಯೂ. NTR, ರಾಮ್​ಚರಣ್​ ಫ್ಯಾನ್ಸ್​ ಧಮ್ಕಿ

  ಸ್ವಾತಂತ್ರ್ಯ ಪೂರ್ವದ ಕಥೆ ಹೇಳಿದ ರಾಜಮೌಳಿ

  ಈ ರಾಜಮೌಳಿ ಎಂಬ ಸಿನಿಮಾ ಮಾಂತ್ರಿಕನ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದು ನೊಣವನ್ನಾದರೂ ಇಟ್ಟುಕೊಂಡು ಅದ್ಭುತ ಸಿನಿಮಾ ಮಾಡಬಹುದು ಅಂತ ಈಗಾಗಲೇ ಅವರು ನಿರೂಪಿಸಿದ್ದಾರೆ. ಬಾಹುಬಲಿ ಹಾಗೂ ಬಾಹುಬಲಿ 2ನಂತಹ ವೈಭವಯುತ ಸಿನಿಮಾದಲ್ಲಿ ಅದ್ಭುತ ಕಥೆ ಹೇಳಿದ್ದ ರಾಜಮೌಳಿ, ಈ ಬಾರಿ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆ ಹೇಳುತ್ತಾರೆ.

  ಸೀತಾರಾಮ ರಾಜು, ಕೊಮರಮ್ ಭೀಮನ ಕಥೆ

  ಇಲ್ಲಿ ರಾಮ್‌ ಚರಣ್ ಅಲ್ಲೂರಿ ಸೀತಾರಾಮ ರಾಜುವಾಗಿ ನಟಿಸಿದ್ದರೆ, ಜ್ಯೂ. ಎನ್‌ಟಿಆರ್‌ ಕೊಮರಮ್ ಭೀಮನಾಗಿ ಅಭಿನಯಿಸಿದ್ದಾರೆ. ಬ್ರಿಟೀಷ್ ಆಡಳಿತದಲ್ಲಿ ಪೊಲೀಸ್ ಆಗಿದ್ದ ಸೀತಾರಾಮ ರಾಜುಗೆ ದೊಡ್ಡ ಹುದ್ದೆಗೆ ಏರುವ ಆಸೆ. ಆತ್ತ ಕಾಡಿನಲ್ಲಿ ಬೆಳೆಯುವ ಕೊಮರಮ್ ಭೀಮನಿಗೆ ತನ್ನ ಕಾಡು, ತನ್ನ ಜನರೇ ಪ್ರಪಂಚ. ಹೀಗೆ ಭೀಮನ ಗುಂಪಿನ ಹುಡುಗಿಯೊಬ್ಬಳನ್ನು ಬ್ರಿಟಿಷರು ಕರೆದೊಯ್ಯುತ್ತಾರೆ. ಆಕೆಯನ್ನು ಹುಡುಕಿಕೊಂಡು ಭೀಮ್‌ ಕಾಡಿನಿಂದ ಆಚೆಗೆ ಬರುತ್ತಾನೆ. ಅಲ್ಲೂರಿ ಸೀತಾರಾಮ ರಾಜುಗೆ ಎದುರಾಗುತ್ತಾನೆ. ಅಲ್ಲಿಂದ ಮುಂದೆ ಕಥೆ ಮತ್ತೊಂದು ಹಂತ ತಲುಪುತ್ತದೆ.

  ಬಾಹುಬಲಿಯಲ್ಲಿ ರಾಜಮನೆತನದ ಕಥೆ ಹೇಳಿದ್ದ ರಾಜಮೌಳಿ, ಇಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ದಾರೆ. ಸಿನಿಮಾ ನೋಡುತ್ತ ನೋಡುತ್ತ ಇದು ಸ್ವಾತಂತ್ರ್ಯ ಪೂರ್ವದಲ್ಲಿ, ದೇಶದ ಯಾವುದೋ ಭಾಗದಲ್ಲಿ ನಡೆದ ಕಥೆ ಅಂತ ಅನಿಸಿದರೆ ಅಚ್ಚರಿಯಿಲ್ಲ.

  ಬಾಹುಬಲಿ ಹಳೆಯ ಟೀಂಗಳೇ ಮುಂದುವರಿಕೆ

  ರಾಜಮೌಳಿ ಸಿನಿಮಾಕ್ಕೆ ಕೆಲಸ ಮಾಡುವ ಟೀಂನ ಬಹುತೇಕರೂ ಇದರಲ್ಲೂ ಕೆಲಸ ಮಾಡಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಕೀರವಾಣಿ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಈ ಹಿಂದಿನಂತೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಬರೆದಿದ್ದಾರೆ.

  ಇದನ್ನೂ ಓದಿ: ಒಂದೆಡೆ The Kashmir Files, ಮತ್ತೊಂದೆಡೆ RRR! ಕರ್ನಾಟಕದಲ್ಲಿ 'ಜೇಮ್ಸ್‌'ಗೆ ಪರಭಾಷಾ ಚಿತ್ರಗಳೇ ಅಡ್ಡಿ!

  ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?

  ರಾತ್ರಿಯೆಲ್ಲ ಕಾದು ಕುಳಿತು ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಬರೀ ಭಾರತದಲ್ಲಿ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ಆರ್‌ಆರ್‌ಆರ್‌ ಪ್ರದರ್ಶನಗೊಂಡಿದೆ. ಸಿನಿಮಾ ನೋಡಿದ ರಾಜಮೌಳಿ, ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್‌ ಅಭಿಮಾನಿಗಳು ಬಹುಪರಾಕ್ ಅಂತಿದ್ದಾರೆ.
  Published by:Annappa Achari
  First published: