RRR Postponed: ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್​ ಕೊಡ್ಬೇಕು ಪ್ರೊಡ್ಯೂಸರ್​: ಹಿಂಗಾದ್ರೆ... ಮುಂದೆ ಹೆಂಗೆ ಸ್ವಾಮಿ!

ಆರ್​​ಆರ್​ಆರ್​’​​ ರಿಲೀಸ್​ ಡೇಟ್​ ಅಧಿಕೃತವಾಗಿ ಮುಂದೂಡಿಕೆ(RRR Release Date Postponed)ಯಾಗಿದೆ. ಈ ವಿಚಾರ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದರ ಜೊತೆಗೆ ಇದೀಗ ಪ್ರೇಕ್ಷಕರಿಗೆ ‘ಆರ್​ಆರ್​ಆರ್​’ ಸಿನಿಮಾದ ನಿರ್ಮಾಪಕರು 10 ಕೋಟಿ ರೂಪಾಯಿಗಳನ್ನು ವಾಪಸ್​ ನೀಡಬೇಕು. ಯಾಕೆ ಅಂತೀರಾ? ಮುಂದೆ ಇದೆ ನೋಡಿ...

‘ಆರ್​ಆರ್​ಆರ್​’ ಚಿತ್ರದ ಪೋಸ್ಟರ್​​

‘ಆರ್​ಆರ್​ಆರ್​’ ಚಿತ್ರದ ಪೋಸ್ಟರ್​​

  • Share this:
2022ರ ಹೊಸ್ತಿಲಲ್ಲೇ ಬಿಗ್​ ಬಜೆಟ್(Big Budget)​ ಸಿನಿಮಾ ಜನವರಿ 7ರಂದು ‘ಆರ್​​ಆರ್​ಆರ್​​’(RRR) ರಿಲೀಸ್ ಆಗಬೇಕಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ, ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ‘ಆರ್​​ಆರ್​ಆರ್​’ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ನಡೆಯಬೇಕಿತ್ತು. ಇನ್ನೇನು ಕೇವಲ 4 ದಿನದ ಬಳಿಕ ‘ಆರ್​​ಆರ್​ಆರ್​’ ಸಿನಿಮಾ ವಿಶ್ವಾದಾದ್ಯಂತ ಅದ್ಧೂರಿಯಾಗಿ ತೆರೆಕಾಣಬೇಕಿತ್ತು. ಆದರೆ, ಕೊರೋನಾ(Corona) ಅಬ್ಬರಕ್ಕೆ ಇದೀಗ ಎಲ್ಲವೂ ನಿಂತಲ್ಲೇ ನಿಂತಿದೆ. ‘ಆರ್​ಆರ್​ಆರ್​’ ರಿಲೀಸ್​ ದಿನಾಂಕ ಮುಂದೂಡಿಕೆಯಾಗಿದೆ. ಒಂದೂವರೆ ತಿಂಗಳ ಹಿಂದಿನಿಂದಲೇ ಚಿತ್ರತಂಡ ಅದ್ಧೂರಿಯಗಿ ಪ್ರಚಾರ ಮಾಡಿಕೊಂಡು ಬಂದಿದೆ. ಇದೊಂದು ಪ್ಯಾನ್​ ಇಂಡಿಯಾ(Pan India) ಸಿನಿಮಾ ಆಗಿರುವುದರಿಂದ ಪ್ರತಿ ರಾಜ್ಯಕ್ಕೂ ತೆರಳಿ ಪ್ರಚಾರ ಮಾಡಬೇಕು.ಅದರಂತೆ ಎಲ್ಲ ಕಾರ್ಯವೂ ನಡೆಯುತ್ತಿತ್ತು. ಆದರೆ, ಚಿತ್ರತಂಡ ಕೊಟ್ಟ ಶಾಕ್​ನಿಂದ ಸಿನಿರಸಿಕರಿಗೆ  ಭಾರೀ ನಿರಾಸೆಯಾಗಿದೆ. ಹೊಸ ವರ್ಷದಲ್ಲೇ ಸಂಕಷ್ಟ ಎದುರಾದರೆ ಮುಂದೆ ಹೇಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲ ಕಡೆ ಚಿತ್ರದ  ಮುಂಗಡ ಟಿಕೆಟ್​(Pre Ticket Booking) ಕೂಡ  ಸೇಲ್​ ಆಗಿತ್ತು. ಆದರೆ, ಈಗ ‘ಆರ್​​ಆರ್​ಆರ್​’​​ ರಿಲೀಸ್​ ಡೇಟ್​ ಅಧಿಕೃತವಾಗಿ ಮುಂದೂಡಿಕೆ(RRR Release Date Postponed)ಯಾಗಿದೆ. ಈ ವಿಚಾರ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದರ ಜೊತೆಗೆ ಇದೀಗ ಪ್ರೇಕ್ಷಕರಿಗೆ ‘ಆರ್​ಆರ್​ಆರ್​’ ಸಿನಿಮಾದ ನಿರ್ಮಾಪಕರು 10 ಕೋಟಿ ರೂಪಾಯಿಗಳನ್ನು ವಾಪಸ್​ ನೀಡಬೇಕು. ಯಾಕೆ ಅಂತೀರಾ? ಮುಂದೆ ಇದೆ ನೋಡಿ...

10 ಕೋಟಿ ರೂ. ಮೊತ್ತದ ಟಿಕೆಟ್​ ಬುಕ್​ ಆಗಿತ್ತು!

ಜೂನಿಯರ್​ ಎನ್​ಟಿಆರ್​, ರಾಮಚರಣ್​ ಒಟ್ಟಿಗೆ ಅಭಿನಯಿಸಿರುವ ‘ಆರ್​ಆರ್​ಆರ್’​ ಚಿತ್ರದ ಬಗ್ಗೆ ದೊಡ್ಡ ಕ್ರೇಜ್​ ಸೃಷ್ಟಿ ಆಗಿದೆ. ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿತ್ತು. ಚಿತ್ರ ನೋಡಲು ಸಿನಿರಸಿಕರು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರು. ಆದರೆ, ಈಗ ಅವರಿಗೆ ನಿರಾಸೆ ಮೂಡಿಸಿದೆ. ಜನವರಿ 7ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದಕ್ಕಾಗಿ ಹಲವು ಕಡೆ ಮುಂಗಡ ಟಿಕೆಟ್​ ಬುಕ್ಕಿಂಗ್​ ಸಹ ಆರಂಭವಾಗಿತ್ತು. ವಿಶ್ವದಾದ್ಯಂತ ಅಂದಾಜು 10 ಕೋಟಿ ರೂಪಾಯಿ ಮೌಲ್ಯದ ಟಿಕೆಟ್​ ಬುಕ್​ ಆಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಸಿನಿಮಾ ರಿಲೀಸ್ ದಿನಾಂಕ ಪೋಸ್ಟ್​ಪೋನ್​ ಆಗಿರುವುದರಿಂದ ಆ ಹಣವನ್ನು ಪ್ರೇಕ್ಷಕರಿಗೆ ವಾಪಸ್​ ನೀಡಬೇಕು.

ಇದನ್ನು ಓದಿ : ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಭಾರೀ ನಿರಾಸೆ: `ಆರ್​ಆರ್​ಆರ್​’ ಸಿನಿಮಾ ರಿಲೀಸ್​​ ಡೇಟ್​ ಮುಂದೂಡಿಕೆ!

ರೈಟ್ ಟೈಂನಲ್ಲಿ ಬಿಡುಗಡೆ ಮಾಡಿ ಅಂತಿದ್ದಾರೆ ಪಂಡಿತರು!

ಈ 10 ಕೋಟಿ ರೂಪಾಯಿ ವಾಪಸ್​ ನೀಡುವುದರಿಂದ ಸಿನಿಮಾದ ನಿರ್ಮಾಪಕರಿಗೆ ಯಾವುದೇ ರೀತಿಯ ಲಾಸ್​ ಇಲ್ಲ. ಈ ಸಿನಿಮಾ ಮೇಲಿರುವ ಕ್ರೇಜ್​ನಿಂದ ಪ್ರೇಕ್ಷಕರು. ಮುಂಗಡವಾಗಿ ಸಿನಿಮಾ ಟಿಕೆಟ್​ ಬುಕ್​ ಮಾಡಿದ್ದರು. ಇದೀಗ ಈ ಹಣವನ್ನು ಹಿಂದಿರುಗಿಸುವುದರಿಂದ ಸಿನಿಮಾಗೆ ಕಂಡಿತವಾಗಿಯೂ ಯಾವುದೇ ನಷ್ಟ ಇಲ್ಲ. ಆದರೆ, ಸರಿಯಾದ ಟೈಂ ನೋಡಿ ಸಿನಿಮಾ ರಿಲೀಸ್ ಮಾಡಬೇಕು. ಆಗ ಕಲೆಕ್ಷನ್​ ತುಂಬಾ ಚೆನ್ನಾಗಿ ಆಗುತ್ತೆ ಅಂತ ಸಿನಿಮಾ ಪಂಡಿತರು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಇದನ್ನು ಓದಿ : ಅಂತೆ-ಕಂತೆಗಳಿಗೆ ಫುಲ್​ಸ್ಟಾಪ್​ ಇಟ್ಟ `ರಾಧೆ ಶ್ಯಾಮ್​’: ಹೇಳಿದ್​ ಡೇಟ್​ಗೆ ಸಿನಿಮಾ ರಿಲೀಸ್​!

ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಶಾಕ್​!

ಆರ್​​ಆರ್​ಆರ್​ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್​ ಚರಣ್​  ಮತ್ತು ಜ್ಯೂ. ಎನ್​ಟಿಆರ್​ ಭೂಮಿಕೆಯಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ನೋಡಬೇಕು ಎಂದು ಕಾಯುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ. ಟೀಸರ್​, ಸಾಂಗ್ಸ್​​, ಟ್ರೈಲರ್​​ನಿಂದಲೇ ಆರ್​​ಆರ್​ಆರ್​ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಚಿತ್ರಮಂದಿರಗಳಲ್ಲಿ ಮತ್ತೆ ಈ ಸಿನಿಮಾ ಮೂಲಕ ಅಸಲಿ ಹಬ್ಬ ಎಂದರೇ ಏನು ಎಂದು ತೋರಿಸೋಣ ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿಜಕ್ಕೂ ಶಾಕ್​ ಆಗಿದೆ. ನಟಿ ಆಲಿಯಾ ಭಟ್​ ಅವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್​ ದೇವಗನ್​ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Published by:Vasudeva M
First published: