RRR: ಜೇಮ್ಸ್ ‘ಪವರ್’ ಮುಂದೆ ನಡೀಲಿಲ್ಲ ಪರಭಾಷಾ ಖದರ್! ಮಾರ್ಚ್ 17ಕ್ಕೆ ರಿಲೀಸ್ ಆಗಲ್ಲ ‘ಆರ್​ಆರ್​ಆರ್​'

ಆರ್‌ಆರ್‌ಆರ್ ಸಿನಿಮಾಕ್ಕೆ ಜೇಮ್ಸ್ ಸಿನಿಮಾ ಠಕ್ಕರ್ ಕೊಡೋದು ಪಕ್ಕಾ ಆಗಿದೆ. ಹೀಗಾಗೇ ಆರ್‌ಆರ್‌ಆರ್ ರಾಜಮೌಳಿ ಆಂಡ್ ಟೀಂಗೆ ತನ್ನ ಚಿತ್ರ ಬಿಡುಗಡೆ ದಿನವನ್ನು ಮುಂದೂಡಿದೆ. 

RRR-ಪುನೀತ್ ರಾಜ್​ಕುಮಾರ್

RRR-ಪುನೀತ್ ರಾಜ್​ಕುಮಾರ್

  • Share this:
ದೇಶದಾದ್ಯಂತ ಭಾರೀ ಕ್ರೇಜ್​ ಹುಟ್ಟು ಹಾಕಿರೋ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ನಿರ್ದೇಶನದ ಆರ್​ಆರ್​ಆರ್ (RRR) ಚಿತ್ರತಂಡ ಇದೀಗ ಸಿನಿಮಾ ರಿಲೀಸ್​ ಡೇಟ್ ಮುಂದೂಡಿದೆ. ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್ (Punith Rajkumar) ಅಭಿನಯದ ಜೇಮ್ಸ್​(James) ಚಿತ್ರ ಮಾರ್ಚ್ 17ರಂದು  ಬಿಡುಗಡೆಯಾಗ್ತಿದೆ. ಅಂದೇ RRR ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್​ ಆಗಿತ್ತು. ಆದ್ರೆ ಇದೀಗ ಚಿತ್ರತಂಡ ತನ್ನ ರಿಲೀಸ್ ಡೇಟ್​ ಮುಂದೂಡಿದ್ದು ಹಲವು ಪ್ರಶ್ನೆಗಳ ಹುಟ್ಟು ಹಾಕಿದೆ. ಜೇಮ್ಸ್​ ಚಿತ್ರದ ಮುಂದೆ RRRಗೆ​ ಸೋಲಿನ ಭಯ ಕಾಡ್ತಿದ್ಯಾ ಅಥವಾ ಅಪ್ಪು ಚಿತ್ರ ಜೇಮ್ಸ್​ಗೆ ಪೈಪೋಟಿ ಕೊಡಲಾಗದೇ ಆರ್​ಆರ್​ಆರ್ ಚಿತ್ರದ ರಿಲೀಸ್​ ಡೇಟ್​ ಮುಂದೂಡಿದೆಯಾ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಮಾರ್ಚ್ 18ಕ್ಕೆ ಚಿತ್ರ ರಿಲೀಸ್ ಮಾಡುವುದಾಗಿ RRR ಚಿತ್ರತಂಡ ಘೋಷಿಸಿತ್ತು ಇದೀಗ ಒಂದು ವಾರ ಸಿನಿಮಾ ಬಿಡುಗಡೆ ಮುಂದೂಡಿದೆ. ಪುನೀತ್ ಕೊನೆ ಚಿತ್ರ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.  ​

ಅಪ್ಪು ಬರ್ತಡೇ ದಿನ ಅಭಿಮಾನಿಗಳಿಗೆ ಜೇಮ್ಸ್​ ಗಿಫ್ಟ್​!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಆಗಿರೋದ್ರಿಂದ ಅಭಿಮಾನಿಗಳಷ್ಟೇ ಅಲ್ಲದೇ, ರಾಜ್ಯದ ಜನರ ಪಾಲಿಗೂ ಈ ಸಿನಿಮಾ ವಿಶೇಷ ಅನಿಸಿದೆ. ಅಲ್ಲದೇ ಮಾರ್ಚ್ 17ರಂದು ಅಪ್ಪು ಹುಟ್ಟು ಹಬ್ಬ ಇದೆ. ಹೀಗಾಗಿ ಅಂದೇ ‘ಜೇಮ್ಸ್’ ಸಿನಿಮಾ ರಿಲೀಸ್ ಮಾಡಿ, ಅಭಿಮಾನಿಗಳಿಗೆ ಗಿಫ್ಟ್ ಕೊಡಬೇಕು ಅನ್ನೋದು ಚಿತ್ರತಂಡದ ಯೋಜನೆಯಾಗಿದೆ.

ಇದನ್ನೂ ಓದಿ: RRR vs James: ‘ಆರ್‌ಆರ್‌ಆರ್’ಗೆ ಡಿಚ್ಚಿ ಕೊಡುತ್ತಾ ‘ಪವರ್‘ ಫುಲ್ ‘ಜೇಮ್ಸ್’? ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಕ್ಲಾಶ್

ಈ ಸಿನಿಮಾಕ್ಕೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸಾಥ್ ನೀಡುತ್ತಾರೆ ಎನ್ನಲಾಗಿದೆ. ಇವೆಲ್ಲ ನಿಜವಾದರೆ ಅಪ್ಪು ಬರ್ತ್ ಡೇ ದಿನದಂದೇ ಜೇಮ್ಸ್ ರಿಲೀಸ್ ಆಗೋದ್ರಲ್ಲಿ ಡೌಟೇ ಇಲ್ಲ. ಹೀಗಾದರೆ ಆರ್‌ಆರ್‌ಆರ್ ಸಿನಿಮಾಕ್ಕೆ ಜೇಮ್ಸ್ ಸಿನಿಮಾ ಠಕ್ಕರ್ ಕೊಡೋದು ಪಕ್ಕಾ ಆಗಿದೆ. ಹೀಗಾಗೇ ಆರ್‌ಆರ್‌ಆರ್ ರಾಜಮೌಳಿ ಆಂಡ್ ಟೀಂಗೆ ತನ್ನ ಚಿತ್ರ ಬಿಡುಗಡೆ ದಿನವನ್ನು ಮುಂದೂಡಿದೆ.

ಸ್ಟಾರ್ ನಟರ ಚಿತ್ರ ಆರ್​ಆರ್​ಆರ್

ಜ್ಯೂ. ಎನ್‌ಟಿಆರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಇಬ್ಬರು ಸ್ಟಾರ್ ನಟರ ಜೊತೆಗೆ ಸ್ಟಾರ್ ನಿರ್ದೇಶಕನ ಕಾಂಬಿನೇಷನ್ ನ ಸಿನಿಮಾ ಆಗಿರೋದ್ರಿಂದ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಜನರ ಕುತೂಹಲ ಹೆಚ್ಚಿಸುತ್ತಿವೆ. ಎಂ ಎಂ ಕೀರವಾಣಿ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು, “ನಾಟು ನಾಟು” ಹಾಡು ಹುಚ್ಚೆಬ್ಬಿಸಿದೆ.

ಕರ್ನಾಟಕದಲ್ಲಿ ಗೆಲ್ಲೋದು ಸುಲಭವಲ್ಲ

ಆರ್‌ಆರ್‌ಆರ್ ಕುರಿತಂತೆ ಈಗಾಗಲೇ ವಿಶ್ವದಾದ್ಯಂತ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದೆ. ಹೊಸ ವರ್ಷದ ವೇಳೆಗೆ ಸಿನಿಮಾ ರಿಲೀಸ್ ಗೆ ಚಿತ್ರತಂಡ ಸಾಕಷ್ಟು ಪ್ಲಾನ್ ಮಾಡಿತ್ತು. ಆದ್ರೆ ಕೊರೊನಾದಿಂದ ಸಿನಿಮಾ ಡೇಟ್ ಮುಂದೋಗ್ತಿತ್ತು. ಆದ್ರೆ ಇದೀಗ ಅಪ್ಪು ಚಿತ್ರ ಜೇಮ್ಸ್ ಬಿಡುಗಡೆ ದಿನ RRR ರಿಲೀಸ್​ ಆದ್ರೆ ಕರ್ನಾಟಕದಲ್ಲಿ ಚಿತ್ರ ಗೆಲ್ಲೋದು ಕಷ್ಟ ಅನಿಸಿರಬೇಕು ಹೀಗಾಗಿ ಡೇಟ್​ ಮುಂದೂಡಿದೆ.

ಇದನ್ನೂ ಓದಿ: RRR Film: ಅರೆರೇ ಹಾಲಿವುಡ್​​ನಿಂದ ಕಾಪಿ ಮಾಡಿದ್ದಾ RRR..!? ಸಿನಿ ಅಂಗಳದಲ್ಲಿ ಶುರುವಾಗಿದೆ ಗುಸು-ಗುಸು

ಪುನೀತ್​ ಕೊನೆಯ ಚಿತ್ರ ನೋಡಲು ಇಡೀ ಕರ್ನಾಟಕದ ಜನ ಕಾಯ್ತಿದ್ದಾರೆ. ಪರಭಾಷೆ ಚಿತ್ರ ಯಾವುದೆ ಬಂದ್ರು ಜನರು ನೋಡಲ್ಲ ಅನ್ನೋದು ಎಲ್ಲರ ಲೆಕ್ಕಚಾರವಾಗಿತ್ತು. ಹೀಗಾಗಿ RRR ಚಿತ್ರತಂಡ ತನ್ನ ರಿಲೀಸ್ ಡೇಟ್​ ಮುಂದೂಡಿದೆ ಅಂತ ಹೇಳಲಾಗ್ತಿದೆ. ಅಲ್ಲದೇ ಮಾರ್ಚ್ 17ರಂದು ಅಪ್ಪು ಹುಟ್ಟು ಹಬ್ಬ ಇದೆ. ಹೀಗಾಗಿ ಅಂದೇ ‘ಜೇಮ್ಸ್’ ಸಿನಿಮಾ ರಿಲೀಸ್ ಮಾಡಿ, ಅಭಿಮಾನಿಗಳಿಗೆ ಗಿಫ್ಟ್ ಕೊಡಬೇಕು ಅನ್ನೋದು ಚಿತ್ರತಂಡದ ಯೋಜನೆಯಾಗಿದೆ.
Published by:Pavana HS
First published: