RRR Movie: ರಿಲ್ಯಾಕ್ಸ್ ಮೂಡ್​ನಲ್ಲಿ ಜೂನಿಯರ್​ NTR ಹಾಗೂ ರಾಮ್ ಚರಣ್ : ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

'RRR' ಚಿತ್ರೀಕರಣದ ಶಾಟ್‌ಗಳ ನಡುವೆ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ರಿಲ್ಯಾಕ್ಸ್ ಆಗಿ ಮಲಗಿಕೊಂಡು ಫೋನ್ ನೋಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ.

ರಾಮ್ ಚರಣ್​, ಜ್ಯೂ.NTR

ರಾಮ್ ಚರಣ್​, ಜ್ಯೂ.NTR

 • Share this:
  ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ (S.S Rajamouli) ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆರ್ ಆರ್ ಆರ್' (RRR) ಸಿನಿಮಾವನ್ನು ಚಿತ್ರರಸಿಕರು ಕಾತುರದಿಂದ ಎದುರು ನೋಡುವಂತಾಗಿದೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸ್ಟಾರ್ ನಿರ್ದೇಶಕ ರಾಜಮೌಳಿ ಸಾರಥ್ಯದ ಜೂನಿಯರ್ ಎನ್.ಟಿ.ಆರ್ (Jr NTR), ರಾಮ್ ಚರಣ್ (Ram Charan ), ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅಭಿನಯದ 'ಆರ್ ಆರ್ ಆರ್' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.

  'RRR' ಚಿತ್ರೀಕರಣದ ಶಾಟ್‌ಗಳ ನಡುವೆ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ರಿಲ್ಯಾಕ್ಸ್ ಆಗಿ ಮಲಗಿಕೊಂಡು ಫೋನ್ ನೋಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ. ಮುಂಬರುವ ಮಹಾಕಾವ್ಯ 'RRR' ಸೆಟ್‌ನಿಂದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಒಳಗೊಂಡ BTS ('ಬಿಟ್‌ವೀನ್ ದಿ ಶಾಟ್ಸ್') ಫೋಟೋವನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ.

  ರಿಲ್ಯಾಕ್ಸ್ ಮೂಡ್​ನಲ್ಲಿ ಜ್ಯೂ.NTR ಹಾಗೂ ರಾಮ್ ಚರಣ್

  'RRR' ಚಿತ್ರೀಕರಣದ ಶಾಟ್‌ಗಳ ನಡುವೆ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಹಾಯಾಗಿ ಚಿಲ್ ಮೂಡ್ ನಲ್ಲಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. 'RRR' ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರಿಬ್ಬರು ನಾಯಕರು ಕೆಳಗೆ ಹುಲ್ಲಿನ ಹಾಸಿಗೆ ಮೇಲೆ ಮಲಗಿಕೊಂಡು ಫೋನ್ ನೋಡುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದು, ಇನ್ ಸ್ಟಾಗ್ರಾನ್ ನಲ್ಲಿ ಆರ್ ಆರ್ ಆರ್ ತಂಡ ಹಂಚಿಕೊಂಡಿದೆ. "ಕ್ಯಾಮೆರಾ ರೋಲಿಂಗ್ ಆಗದಿದ್ದಾಗ ಫೋನ್ ನಲ್ಲಿ ಸ್ಕ್ರೋಲಿಂಗ್" ಎಂಬ ಶೀರ್ಷಿಕೆ ನೀಡಿ ಇಬ್ಬರು ನಾಯಕರು ಫೋನ್ ನೋಡುತ್ತಿರುವ ಚಿತ್ರವನ್ನು ಶೇರ್ ಮಾಡಲಾಗಿದೆ.

  ಇದನ್ನೂ ಓದಿ: ದುಬೈನಲ್ಲಿ RRR​ Pre-Release Event​.. ಕಾರ್ಯಕ್ರಮಕ್ಕೆ ಬರ್ತಾರಂತೆ ಹಾಲಿವುಡ್​ ಸೂಪರ್​ ಸ್ಟಾರ್!​

  'RRR' ಶೂಟಿಂಗ್‌ನ ಮಧ್ಯಂತರದಲ್ಲಿ,ಎನ್ಟಿಆರ್, ರಾಮ್ ಚರಣ್ ಇಬ್ಬರು ಮರದ ನೆರಳಿನಲ್ಲಿ ಹುಲ್ಲಿನ ಹಾಸಿಗೆ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  ಫೋಟೋ ಹಂಚಿಕೊಂಡ ಚಿತ್ರತಂಡ

  ಶೂಟಿಂಗ್ ಸೆಟ್ ನಲ್ಲಿ ತಮ್ಮ ಮುಂದಿನ ಚಿತ್ರೀಕರಣಕ್ಕೆ ಸಿದ್ಧರಾಗಿರುವಂತೆ ತೋರುತ್ತಿರುವ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್, ಮೇಕಪ್‌ನೊಂದಿಗೆ ಚಿತ್ರದ ಕಾಸ್ಟ್ಯೂಮ್ ಧರಿಸಿದ್ದಾರೆ. ಸಿನಿಮಾದ ಚಿತ್ರೀಕರಣದ ಗ್ಯಾಪ್ ಸಮಯದಲ್ಲಿ ಇಬ್ಬರೂ ತೆಲುಗು ತಾರೆಯರು ಹುಲ್ಲಿನ ಮೇಲೆ ಮಲಗಿಕೊಂಡು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಸ್ಕ್ರೋಲ್ ಮಾಡುತ್ತಿದ್ದಾರೆ.

  'RRR' ತಯಾರಕರು ತಮ್ಮ BTS ಸಂಗ್ರಹದಿಂದ ಈ ಚಿತ್ರವನ್ನು ಅನಾವರಣಗೊಳಿಸಿದ್ದಾರೆ ಮತ್ತು ರೋಲಿಂಗ್ ಇಲ್ಲದ ಸಮಯದಲ್ಲಿ ಸ್ಕ್ರೋಲಿಂಗ್ ಎಂಬ ಹಾಸ್ಯದ ಉಲ್ಲೇಖದ ಶೀರ್ಷಿಕೆ ನೀಡಿದ್ದಾರೆ.ಅಭಿಮಾನಿಗಳು ಕೂಡ ಫೋಟೋಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಹಲವು ಪ್ರೀತಿಯ ಎಮೋಜಿಗಳನ್ನು ನೀಡಿ ಲೈಕ್ಸ್, ಕಾಮೆಂಟ್ ಮಾಡಿದ್ದಾರೆ.

  ಸೋಶಿಯಲ್​ ಮೀಡಿಯದಲ್ಲಿ ಫೋಟೋ ವೈರಲ್​

  ಬಹುನಿರೀಕ್ಷಿತ ‘RRR’ ಸಿನಿಮಾದ ಕ್ರೇಜ್ ದಿನದಿನವೂ ಹೆಚ್ಚುತ್ತಿದೆ. ನೈಜ ಘಟನೆ ಆಧರಿಸಿ ‘RRR’ ಸಿನಿಮಾ ತಯಾರಾಗುತ್ತಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಜ್ಯೂ. ಎನ್ಟಿಆರ್ ಮತ್ತು ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಪೋಸ್ಟರ್, ಲಿರಿಕಲ್ ಸಾಂಗ್ ಗಳು ಭಾರಿ ಹೈಪ್ ಸೃಷ್ಟಿ ಮಾಡಿವೆ.. ದೇಶಭಕ್ತಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಜೂ.ಎನ್ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ತೇಜ ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಇದನ್ನೂ ಓದಿ: Russia-Ukraine War: ಭಾರತದ ನಿರ್ದೇಶಕರಿಗೆ ಉಕ್ರೇನ್​ ಫೇವರಿಟ್​ ಶೂಟಿಂಗ್​ ಸ್ಪಾಟ್​! RRR ಚಿತ್ರೀಕರಣ ಕೂಡಾ ಇಲ್ಲೇ ಆಗಿದ್ದು

  RRR ಚಿತ್ರವೂ ಅತೀ ಹೆಚ್ಚು ಬಂಡವಾಳ ಹೂಡಿದ ಚಿತ್ರವಾಗಿದ್ದುಈಗಾಗಲ್ಲೇ ಚಿತ್ರ ದೇಶದೆಲ್ಲೆಡೆ ಫ್ರೀ ರೀಲಿಸ್ ಪ್ರಮೋಶನ್ ಮೂಲಕ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ. RRR ಚಿತ್ರವು ಇದೇ ಮಾರ್ಚ್ 25 ರಂದು ಬಿಡುಗಡೆಯಾಗಲಿದ್ದು, ಚಿತ್ರದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಆವೃತ್ತಿಗಳು ZEE5 ನಲ್ಲಿ ಲಭ್ಯವಿರುತ್ತವೆ. ಇದು ಹಿಂದಿ, ಪೋರ್ಚುಗೀಸ್, ಕೊರಿಯನ್, ಟರ್ಕಿಶ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತದೆ.
  Published by:Pavana HS
  First published: