ಆಡು ಮುಟ್ಟದ ಸೊಪ್ಪಿಲ್ಲ.. RRR ಸಿನಿಮಾ ಪ್ರಮೋಷನ್​ ಮಾಡದೇ ಇರದ ಜಾಗವಿಲ್ಲ!

ಇತ್ತೀಚೆಗೆ ಮುಂಬೈನಲ್ಲಿ ಆರ್​ಆರ್​ಆರ್​ ಚಿತ್ರತಂಡ ಅದ್ಧೂರಿ ಪ್ರಚಾರ ನಡೆಸಿದೆ. ಇನ್ನೂ ನಿನ್ನೆ ಆರಂಭವಾದ ಪ್ರೊ ಕಬಡ್ಡಿ(Pro Kabaddi) ಸೀಸನ್​ - 8ರಲ್ಲೂ ಆರ್​ಆರ್​ಆರ್​ ಸಿನಿಮಾದೇ ಹವಾ. ಅಲ್ಲೂ ತನ್ನ ಪ್ರಚಾರ ನಡೆಸಿದ್ದಾರೆ ಎಸ್​.ಎಸ್​.ರಾಜಮೌಳಿ. ಇನ್ನೂ ಜೂ.ಎನ್​ಟಿಆರ್​ ಅವರ ಕನ್ನಡ ಪ್ರೇಮಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ಪ್ರೊ ಕಬಡ್ಡಯಲ್ಲಿ ಆರ್​ಆರ್​ಆರ್​ ಸಿನಿಮಾ ಪ್ರಚಾರ

ಪ್ರೊ ಕಬಡ್ಡಯಲ್ಲಿ ಆರ್​ಆರ್​ಆರ್​ ಸಿನಿಮಾ ಪ್ರಚಾರ

  • Share this:
ಆಡು ಮುಟ್ಟದ ಸೊಪ್ಪಿಲ್ಲ.. ಎಂಬ ಗಾದೆ ಇದೆ. ಅದರಂತೆ ‘ಆರ್​ಆರ್​ಆರ್’(RRR)​​ ಸಿನಿಮಾ ಪ್ರಮೋಷನ್(Promotion)​ ಮಾಡಿರದ ಜಾಗವಿಲ್ಲ ಎಂಬಂತಾಗಿದೆ. ಜನವರಿ 7ರಂದು ‘ಆರ್​ಆರ್​ಆರ್’​​ ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ. ಹೀಗಾಗಿ ಚಿತ್ರತಂಡ ಈಗಾಗಲೇ ಬೆಂಗಳೂರು(Bengaluru), ಆಂಧ್ರ, ತಮಿಳುನಾಡು, ಕೇರಳ, ಮುಂಬೈನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಎಸ್​.ಎಸ್​.ರಾಜಮೌಳಿ(S.S Rajamouli) ಅಂದರೆ ಅಲ್ಲಿ ಹೊಸತನ ಇರುತ್ತೆ. ಅದು ಚಿತ್ರದಲ್ಲಿ ಆಗಲಿ, ಸಿನಿಮಾದ ಪ್ರಚಾರದಲ್ಲಿ ಆಗಲಿ, ವಿಭಿನ್ನವಾಗಿಯೇ ಪ್ರಮೋಷನ್​ ಮಾಡಿದ್ದಾರೆ.ಸಿನಿಮಾ ಬಿಡುಗಡೆಗೆ ಇನ್ನೂ 25 ದಿನ ಬಾಕಿ ಇರುವಾಗಲೇ ರಾಜಮೌಳಿ ಪ್ರಚಾರದ ಅಖಾಡಕ್ಕೆ ಎಂಟ್ರಿಕೊಟ್ಟಿದ್ದರು. ಜೂ.ಎನ್​ಟಿಆರ್(Jr.NTR)​, ರಾಮಚರಣ್(Ramcharan)​, ಆಲಿಯಾ ಭಟ್(​Alia Bhatt), ಎಸ್​​.ಎಸ್​.ರಾಜಮೌಳಿ ಪ್ರಮುಖ ರಾಜ್ಯಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಆರ್​ಆರ್​ಆರ್​ ಚಿತ್ರತಂಡ ಅದ್ಧೂರಿ ಪ್ರಚಾರ ನಡೆಸಿದೆ. ಇನ್ನೂ ನಿನ್ನೆ ಆರಂಭವಾದ ಪ್ರೊ ಕಬಡ್ಡಿ(Pro Kabaddi) ಸೀಸನ್​ - 8ರಲ್ಲೂ ಆರ್​ಆರ್​ಆರ್​ ಸಿನಿಮಾದೇ ಹವಾ. ಅಲ್ಲೂ ತನ್ನ ಪ್ರಚಾರ ನಡೆಸಿದ್ದಾರೆ ಎಸ್​.ಎಸ್​.ರಾಜಮೌಳಿ. ಇನ್ನೂ ಜೂ.ಎನ್​ಟಿಆರ್​ ಅವರ ಕನ್ನಡ ಪ್ರೇಮಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಕನ್ನಡದಲ್ಲೇ ಕಾಮೆಂಟರಿ ಕೊಟ್ಟಿದ್ದಾರೆ. 

ಜೂ. ಎನ್​ಟಿಆರ್​​ ಕನ್ನಡ ಪ್ರೇಮಕ್ಕೆ ಫಿದಾ!

ತೆಲುಗಿನ ಸ್ಟಾರ್ ನಟ ಜೂ ಎನ್‌ಟಿಆರ್ 'ಆರ್‌ಆರ್‌ಆರ್‌' ಸಿನಿಮಾದ ಪ್ರಚಾರಕ್ಕಾಗಿ ದೇಶದೆಲ್ಲೆಡೆ ಪ್ರವಾಸ ಮಾಡುತ್ತಿದ್ದು, ಬೆಂಗಳೂರಿಗೆ ಬಂದಾಗ ಕನ್ನಡದಲ್ಲಿಯೇ ಮಾತನಾಡಿ ಈಗಾಗಲೇ ಗಮನ ಸೆಳೆದಿದ್ದಾರೆ. 'ಆರ್‌ಆರ್‌ಆರ್‌' ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿಯಲ್ಲಿಯೂ ಜೂ ಎನ್‌ಟಿಆರ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಇದೀಗ ಮತ್ತೆ ಜೂ.ಎನ್‌ಟಿಆರ್ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದೀಗ ಪ್ರೋ ಕಬಡ್ಡಿ ಲೀಗ್ ಪಂದ್ಯಾವಳಿಗಳು ನಡೆಯುತ್ತಿದ್ದು, ನಿನ್ನೆಯ ಬೆಂಗಳೂರು ಬುಲ್ಸ್ v/s ಯು ಮುಂಬಾ ನಡುವಿನ ಆಟಕ್ಕೆ ಜೂ ಎನ್‌ಟಿಆರ್ ಸಾಕ್ಷಿಯಾದರು. ಇದನ್ನು ಕಂಡು ಕನ್ನಡಿಗರು  ಫುಲ್ ದಿಲ್​ಖುಷ್​ ಆದರು.

ಇದನ್ನು ಓದಿ: ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ: ಅಪ್ಪು ಪಡೆದಿದ್ದ 2.5 ಕೋಟಿ ಅಡ್ವಾನ್ಸ್​ ವಾಪಸ್​ ಕೊಟ್ಟ ಅಶ್ವಿನಿ!

ಕಬಡ್ಡಿ ಪಂದ್ಯದಲ್ಲೂ ‘ಆರ್​ಆರ್​ಆರ್​’ ಪ್ರಚಾರ!ಕೆಲ ಕಾಲ ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಕಮೆಂಟರಿ ಬಾಕ್ಸ್‌ಗೆ ಆಗಮಿಸಿದ್ದ ಜೂ ಎನ್‌ಟಿಆರ್, ತಮ್ಮ 'ಆರ್‌ಆರ್‌ಆರ್‌' ಸಿನಿಮಾದ ಬಗ್ಗೆ ಮಾತನಾಡಿದರು.‘ನೀವೆಲ್ಲ ಟ್ರೈಲರ್‌ ನೋಡಿದ್ದೀರಿ. ಟ್ರೈಲರ್‌ನಲ್ಲಿಯೇ ಕತೆಯೆಲ್ಲ ಹೇಳುವ ಪ್ರಯತ್ನವನ್ನು ರಾಜಮೌಳಿ ಮಾಡುತ್ತಾರೆ. ಇಲ್ಲೂ ಸಹ ಅದನ್ನೇ ಮಾಡಿದ್ದಾರೆ. ಟ್ರೈಲರ್‌ನಲ್ಲಿ ಹುಲಿ ಇದೆ, ರಾಮ್ ಚರಣ್ ಸರ್ ಅವರದ್ದು 2000 ಜನರ ಮೇಲೆ ಫೈಟ್ ಒಂದಿದೆ. ಸಿನಿಮಾದಲ್ಲಿ ಇನ್ನೂ ಸಾಕಷ್ಟು ವಿಷಯಗಳು ಇರಲಿವೆ'' ಎಂದು ಹೇಳಿದರು. ‘ನಾನು ನನ್ನ ಪಾತ್ರ, ಸಿನಿಮಾದ ಬಗ್ಗೆ ಜಾಸ್ತಿ ಮಾತನಾಡಿದರೆ ರಾಜಮೌಳಿಯವರು ಬಂದು ನನ್ನ ಮೇಲೆ ರೇಡ್ ಮಾಡುತ್ತಾರೆ ಅಷ್ಟೆ’ ಎಂದಿದ್ದಾರೆ.

ಇದನ್ನು ಓದಿ : ಈ ವರ್ಷ ಸ್ಯಾಂಡಲ್​ವುಡ್​ನಲ್ಲಿ ತಲ್ಲಣ ಸೃಷ್ಟಸಿದ ವಿವಾದಗಳಿವು

ಆರ್​ಆರ್​ಆರ್​ ಪ್ರಚಾರದ ಅಖಾಡಕ್ಕೆ ರಾಣಾ ದಾಗ್ಗು ಭಾಟಿಯಾ!

ಬಾಹುಬಲಿ ಸಿನಿಮಾ ಮೂಲಕ ರಾಣಾ ದಾಗ್ಗುಭಾಟಿಯಾ ಪ್ರಪಂಚದಲ್ಲಿ ಹೆಸರು ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಿರ್ದೇಶಕ ಎಸ್​.ಎಸ್. ರಾಜಮೌಳಿ. ಹೀಗಾಗಿ ಆರ್​.ಆರ್​,ಆರ್​ ಸಿನಿಮಾ ಪ್ರಚಾರಕ್ಕೆ ಬಲ್ಲಾಳದೇವ ಸಾಥ್​​ ನೀಡಿದ್ದಾರೆ. ರಾಜಮೌಳಿ, ಜೂ.ಎನ್​ಟಿಆರ್, ರಾಮ್​ಚರಣ್​ ಜೊತೆ ರಾಣಾ ಇರುವ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ. ಇನ್ನೂ ಮಾಧ್ಯಮ, ರೇಡಿಯೋ, ಕ್ರೀಡೆ ಹೀಗೆ ಎಲ್ಲ ಕಡೆಯಲ್ಲೂ ಆರ್​ಆರ್​ಆರ್​ ಚಿತ್ರತಂಡ ಪ್ರಚಾರ ನಡೆಸುತ್ತಿದೆ. ಸಿನಿಮಾ ಬಿಡುಗಡೆಗೆ 15 ದಿನ ಬಾಕಿ ಇದೆ. ಈಗಾಗಲೇ ಎಲ್ಲರ ಬಾಯಲ್ಲೂ ಆರ್​ಆರ್​ಆರ್​ ಮಾತು ಕೇಳಿಬಂದಿದೆ. ಇದೇ ಅಲ್ವಾ ಪ್ರಚಾರದ ಶೈಲಿ ಅಂದರೆ. ​


Published by:Vasudeva M
First published: