RRR ಚಿತ್ರದಲ್ಲಿ ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ ಈ ದೃಶ್ಯಗಳು..!, ರಾಜಮೌಳಿ ಜಾದು ನೋಡಿ ಕಳೆದುಹೋದ ಪ್ರೇಕ್ಷಕರು

RRR  ಚಿತ್ರವನ್ನು ನೀವು ನೋಡಲು ಚಿತ್ರಮಂದಿರದ ಒಳಗೆ ಕಾಲಿಟ್ಟರೆ ಸಾಕು, ಸಿನೆಮಾ (Movie) ಶುರುವಾದ ಮೊದಲ ಐದು ನಿಮಿಷಗಳಲ್ಲಿಯೇ, ರಾಜಮೌಳಿ ಅವರು ಸೃಷ್ಟಿಸಿದ ಜಗತ್ತು ನಿಮ್ಮನ್ನು ಸಂಪೂರ್ಣವಾಗಿ ಮಂತ್ರಮುಗ್ದರನ್ನಾಗಿಸುತ್ತದೆ.

ಆರ್​ಆರ್​ಆರ್​

ಆರ್​ಆರ್​ಆರ್​

  • Share this:
ಬಹು-ನಿರೀಕ್ಷಿತ ಬಿಗ್ ಬಜೆಟ್ ಚಿತ್ರವಾದ ‘ಆರ್‌ಆರ್‌ಆರ್’ (RRR) ಈಗಾಗಲೇ ದೇಶಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಚೆನ್ನಾಗಿಯೇ ಹಣ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಬಾಹುಬಲಿ ಅಂತಹ ಹಿಟ್ ಚಿತ್ರವನ್ನು ನೀಡಿದ ನಿರ್ದೇಶಕ ಎಸ್. ಎಸ್ ರಾಜಮೌಳಿ (SS Rajamouli) ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ RRR ಆಗಿದ್ದು, ಇದರಲ್ಲಿರುವ ಕೆಲವು ದೃಶ್ಯಗಳು ನಿಮ್ಮನ್ನು ಮಂತ್ರಮುಗ್ದರನ್ನಾಗಿಸದೆ ಬಿಡದು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.  RRR  ಚಿತ್ರವನ್ನು ನೀವು ನೋಡಲು ಚಿತ್ರಮಂದಿರದ ಒಳಗೆ ಕಾಲಿಟ್ಟರೆ ಸಾಕು, ಸಿನೆಮಾ (Movie) ಶುರುವಾದ ಮೊದಲ ಐದು ನಿಮಿಷಗಳಲ್ಲಿಯೇ, ರಾಜಮೌಳಿ ಅವರು ಸೃಷ್ಟಿಸಿದ ಜಗತ್ತು ನಿಮ್ಮನ್ನು ಸಂಪೂರ್ಣವಾಗಿ ಮಂತ್ರಮುಗ್ದರನ್ನಾಗಿಸುತ್ತದೆ ಎಂದು ಹೇಳಬಹುದು.

ಹೌದು, ನಟ ಜೂನಿಯರ್ ಎನ್‌ಟಿಆರ್ ಮತ್ತು ನಟ ರಾಮ್ ಚರಣ್ ತಮ್ಮ ಅಭಿನಯದಿಂದ ನಿಮ್ಮನ್ನು ಆಕರ್ಷಿಸಿದರೆ, ರಾಜಮೌಳಿ ಮತ್ತು ಛಾಯಾಗ್ರಾಹಕ ಕೆ.ಕೆ ಸೆಂಥಿಲ್ ಕುಮಾರ್ ಅವರ ದೃಷ್ಟಿಕೋನ, ವಿಎಫ್ಎಕ್ಸ್ ತಂಡ ಮತ್ತು ಖ್ಯಾತ ಸಂಗೀತ ಸಂಯೋಜಕ ಎಂ. ಎಂ ಕೀರವಾಣಿ ಅವರ ಹಿನ್ನೆಲೆ ಸಂಗೀತದೊಂದಿಗೆ ಅವರ ತೆರೆಯ ಮೇಲಿನ ಉಪಸ್ಥಿತಿಯನ್ನು ನಿಮ್ಮನ್ನು ಬೇರೆಯ ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಚಿತ್ರ ಮಂದಿರದಲ್ಲಿ ನೀವು ಈ ಚಿತ್ರ ನೋಡಲು ಹೋದರೆ ನಿಮಗೆ ದಿಗ್ಭ್ರಮೆಗೊಳಿಸುವ ಮತ್ತು ನಿಮ್ಮ ಮೇಲೆ ಪ್ರಭಾವ ಬೀರುವ ಕೆಲವು ದೃಶ್ಯಗಳನ್ನು ನಾವು ಇಲ್ಲಿ ವಿವರಿಸಿದ್ದೇವೆ ನೋಡಿ.

ಚಿತ್ರದಲ್ಲಿ ನಟ ರಾಮ್ ಚರಣ್ ಅವರ ಪರಿಚಯದ ದೃಶ್ಯ:

ನಟ ರಾಮ್ ಚರಣ್ ಅವರ ರಾಜು ಪಾತ್ರವನ್ನು ತುಂಬಾನೇ ಚೆನ್ನಾಗಿ ಪರಿಚಯಿಸಲಾಗಿದೆ. ಆ ಪಾತ್ರವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಕ್ರಮಣಕಾರಿ ಮತ್ತು ಬಲಶಾಲಿಯಾಗಿದ್ದು, ಬ್ರಿಟಿಷ್ ಗವರ್ನರ್ ಸ್ಕಾಟ್ ಅವರ ಸೇವೆ ಮಾಡುವ ಪೊಲೀಸ್ ಅಧಿಕಾರಿ ರಾಜು ಅವರನ್ನು ನಿರ್ಭೀತ ವ್ಯಕ್ತಿ ಎಂದು ತೋರಿಸಲಾಗಿದೆ. ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು, ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಜನರನ್ನು ಎದುರಿಸುವ ದೃಶ್ಯ ನಿಜಕ್ಕೂ ಅದ್ಭುತವಾಗಿದೆ. ರಾಜಮೌಳಿ ಅವರು ಈ ದೃಶ್ಯವನ್ನು RRR ಚಿತ್ರದಲ್ಲಿನ ತುಂಬಾ ಭಯ ಬೀಳಿಸುವ ದೃಶ್ಯಗಳಲ್ಲಿ ಇದು ಒಂದು ಎಂದು ಹೇಳಿದ್ದಾರೆ.

ಈ ದೃಶ್ಯದಲ್ಲಿ ರಾಜು ನೋವಿನಿಂದ ಕಿರುಚುತ್ತಾನೆ ಮತ್ತು ತನ್ನ ದೇಹದಲ್ಲಿರುವ ಶಕ್ತಿಯಿಂದ ಆ ಸಾವಿರಾರು ಜನರ ವಿರುದ್ಧ ಹೋರಾಡಲು ತನ್ನೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸುತ್ತಾನೆ. ಈ ದೃಶ್ಯವು ದೊಡ್ಡ ಜನಸಮೂಹವನ್ನು ಒಳಗೊಂಡಿದ್ದರೂ, ಕ್ಯಾಮೆರಾವು ಸೂಕ್ಷ್ಮ ವಿವರಗಳನ್ನು ಸೆರೆ ಹಿಡಿಯುವಲ್ಲಿ ಹಿಂದೆ ಬಿದ್ದಿಲ್ಲ ಎಂದು ಹೇಳಬಹುದು.

ಇದನ್ನೂ ಓದಿ: Alia Bhatt: RRR ಸಿನಿಮಾದಲ್ಲಿ ಆಲಿಯಾ ಸೀನ್ಸ್​​ಗೆ ಕತ್ತರಿ? ರಾಜಮೌಳಿಯನ್ನು ಅನ್​ಫಾಲೋ ಮಾಡಿದ್ರಾ `ಸೀತಾ’?

ಪ್ರತಿಭಟನಾಕಾರರೊಂದಿಗಿನ ಘರ್ಷಣೆಯ ನಂತರ ರಾಜು ತನ್ನ ಪೊಲೀಸ್ ಠಾಣೆಗೆ ಮರಳುತ್ತಿದ್ದಂತೆ, ಜನಸಮೂಹವು ಬಿಟ್ಟು ಚದುರಿ ಹೋಗುತ್ತಿದ್ದಂತೆ ಕ್ಯಾಮೆರಾವು ಅವನ ಪ್ರಕಾಶಮಾನವಾದ ಕಣ್ಣುಗಳಲ್ಲಿ ಝೂಮ್ ಮಾಡುತ್ತದೆ. ಈ ದೃಶ್ಯದಲ್ಲಿ, ಅವನ ಕಣ್ಣುಗಳು ಸಂಯಮ, ನೋವು ಮತ್ತು ಅವನ ದೇಹದ ಭಂಗಿಯು ಹೊರಸೂಸುವ ಶಕ್ತಿಯನ್ನು ವ್ಯಕ್ತಪಡಿಸುತ್ತವೆ.

ರಾಮ್ ಚರಣ್ ಆ ಧೂಳಿನಲ್ಲಿ ಮತ್ತು ಸಾವಿರಾರು ಜನರ ನಡುವೆ ಕಾಣಿಸದ ಕಾರಣ ಚಿತ್ರೀಕರಣದ ಸಮಯದಲ್ಲಿ ನಾನು ಭಯ ಭೀತನಾಗಿದ್ದೆ, ಆದರೆ ಯಾವುದೇ ಅಪಾಯವಿಲ್ಲದೆ ಶಾಟ್ ಅನ್ನು ಪೂರ್ಣಗೊಳಿಸಿದರು ಎಂದು ರಾಜಮೌಳಿ ಅವರು ಸುದ್ದಿ ಸಂಸ್ಥೆಗೆ ನೀಡಿದ ಒಂದು ಸಂದರ್ಶನದಲ್ಲಿ ಹೇಳಿದ್ದರು.

ನಟ ಜೂನಿಯರ್ ಎನ್ಟಿಆರ್ ಎಂಟ್ರಿ ದೃಶ್ಯ:

ನಟ ಜೂನಿಯರ್ ಎನ್‌ಟಿಆರ್ ಅವರು ಈ ಚಿತ್ರದಲ್ಲಿ ಭೀಮ್ ಅಲಿಯಾಸ್ ಕೋಮರಾಮ್ ಭೀಮ್ ಎಂಬ ಬುಡಕಟ್ಟು ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭೀಮ್ ಅವರ ಎಂಟ್ರಿ ದೃಶ್ಯವು ಸ್ನಾಯುವಿನ ಚೌಕಟ್ಟಿನಿಂದ ಹಿಡಿದು ಹುಲಿಯೊಂದಿಗೆ ನಡೆಸುವ ಸೆಣೆಸಾಟದವರೆಗೆ, ಜೂನಿಯರ್ ಎನ್‌ಟಿಆರ್ ಅವರ ಪರಿಚಯದ ಪ್ರತಿಯೊಂದು ಅಂಶವೂ ದೃಷ್ಟಿಗೋಚರವಾಗಿ ಆಕರ್ಷಕವಾಗಿದೆ. ಹುಲಿಯೊಂದಿಗಿನ ಅನುಕ್ರಮದ ಒಂದು ಭಾಗವನ್ನು ಚಿತ್ರದ ಟ್ರೈಲರ್ ನಲ್ಲಿ ಸೇರಿಸಲಾಗಿದೆ. ಆದರೆ ಇದರ ಪೂರ್ತಿ ದೃಶ್ಯವು ಬೇರೆಯ ಹಂತದಲ್ಲಿದೆ. ದೊಡ್ಡ ಪರದೆಯಲ್ಲಿ ಈ ಅನುಕ್ರಮವನ್ನು ನೋಡುವುದು ಖಂಡಿತವಾಗಿಯೂ ನಿಮಗೆ ಗೂಸ್ ಬಂಪ್ ಗಳನ್ನು ನೀಡುತ್ತದೆ.

ನೀರಿನಂತೆ, ಭೀಮ್ ಶಾಂತ, ಕಾಳಜಿ ಮತ್ತು ಹಿತಕರ ಆದರೆ ಅದೇ ಸಮಯದಲ್ಲಿ, ಅಪಾಯಕಾರಿ ಸಹ ಎಂಬುದನ್ನು ದೃಶ್ಯಗಳ ಮೂಲಕ ತೋರಿಸಿದ್ದಾರೆ. ತನ್ನ ಜನರ ವಿಷಯಕ್ಕೆ ಬಂದಾಗ ಅವನು ಬಲಶಾಲಿಯಾಗುತ್ತಾನೆ. ಮತ್ತೊಂದೆಡೆ, ರಾಮನು ಬೆಂಕಿಯಂತೆ ಕೋಪ ಮತ್ತು ಶಕ್ತಿಯನ್ನು ಪ್ರದರ್ಶಿಸುತ್ತಾನೆ, ಅದು ಏನನ್ನಾದರೂ ನಾಶಪಡಿಸುತ್ತದೆ.

ರಾಜು ಮತ್ತು ಭೀಮ್ ಅವರ ಮೊದಲ ಭೇಟಿ ದೃಶ್ಯ:

ಭೀಮ್ ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರುವುದರಿಂದ, ರಾಜು ಭೀಮನನ್ನು ಬಂಧಿಸಲು ಬಯಸುತ್ತಾನೆ. ಒಬ್ಬರಿಗೊಬ್ಬರು ಹೇಗೆ ಕಾಣುತ್ತಾರೆಂದು ಇಬ್ಬರಿಗೂ ತಿಳಿದಿರುವುದಿಲ್ಲ. ಆದಾಗ್ಯೂ, ರೈಲು ಬೆಂಕಿಗೆ ಆಹುತಿಯಾದಾಗ ಮತ್ತು ಚಿಕ್ಕ ಹುಡುಗನ ಜೀವಕ್ಕೆ ಅಪಾಯವಾದಾಗ ವಿಧಿ ಅವರನ್ನು ಭೇಟಿಯಾಗುವಂತೆ ಮಾಡುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ಸಂಕೇತ ನೀಡುತ್ತಾರೆ ಮತ್ತು ಒಂದು ಯೋಜನೆಯನ್ನು ರೂಪಿಸುತ್ತಾರೆ. ರಾಜು ಮತ್ತು ಭೀಮ್ ಹಗ್ಗ ಮತ್ತು ಧ್ವಜದ ಸಹಾಯದಿಂದ ಪುಟ್ಟ ಹುಡುಗನ ಸಹಾಯಕ್ಕೆ ಬರುತ್ತಾರೆ. ಈ ಅನುಕ್ರಮವು ಬೆಂಕಿ (ರಾಜು) ಮತ್ತು ನೀರು (ಭೀಮ್) ಭೇಟಿಯಾದಾಗ, ಅದು ಜಗತ್ತನ್ನು ಹಾಳುಮಾಡಬಹುದು ಮತ್ತು ಅದೇ ಸಮಯಕ್ಕೆ ಸರಿಪಡಿಸಲುಬಹುದು ಎಂದು ತೋರಿಸುತ್ತದೆ.

ಈ ದೃಶ್ಯವು ಮುಂದುವರೆದಂತೆ, ಇಬ್ಬರೂ ನೀರಿನಾಳದಲ್ಲಿ ಪರಸ್ಪರರ ಕಡೆಗೆ ಓಡುವ ಪ್ರಭಾವಶಾಲಿ ಶಾಟ್ ಅನ್ನು ಸಹ ನಾವು ನೋಡುತ್ತೇವೆ.

ನಾಟು ನಾಟು ಹಾಡಿನ ದೃಶ್ಯ:

ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ 'ನಾಟು ನಾಟು' ಹಾಡಿನಲ್ಲಿ ವೇಗವಾಗಿ ಹೆಜ್ಜೆ ಹಾಕಿದ ರೀತಿ ಎಂತಹವರನ್ನಾದರೂ ಮಂತ್ರಮುಗ್ದರನ್ನಾಗಿಸುತ್ತದೆ. ಈ ಹಾಡಿನ ಕೊರಿಯೊಗ್ರಫಿ ತುಂಬಾನೇ ಚೆನ್ನಾಗಿ ಮೂಡಿ ಬಂದಿದ್ದು, ಅವರಿಬ್ಬರು ಹಾಕುವ ಆ ಕೊಕ್ಕೆಯ ಹೆಜ್ಜೆ ಕಠಿಣವಾಗಿದೆ ಎಂದು ನೀವು ಭಾವಿಸಿದರೆ, ಈ ಇಡೀ ಡ್ಯಾನ್ಸ್ ನೋಡಲು ತುಂಬಾನೇ ಚೆನ್ನಾಗಿದೆ ಎಂದು ಹೇಳಬಹುದು.

ಇದನ್ನೂ ಓದಿ: RRR Movie: ಬುಡಕಟ್ಟು ಜನಾಂಗದ ಮಲ್ಲಿ ಪಾತ್ರ ಮಾಡಿದ ಬಾಲಕಿ ಯಾರು ಗೊತ್ತಾ?, ಇಲ್ಲಿದೆ ಇಂಟ್ರಸ್ಟಿಂಗ್​ ಸ್ಟೋರಿ

ರಾಜು ಮತ್ತು ಭೀಮ್ ‘ನಾಟು ನಾಟು’ ಹಾಡಿನಲ್ಲಿ ಡ್ಯಾನ್ಸ್ ಮಾಡಲು ನೆಲವನ್ನು ಬಳಸಿಕೊಂಡ ರೀತಿ ಅದ್ಬುತವಾಗಿದೆ. ಮೊದಲು, ಭೀಮ್ ಕಂದು ಚರ್ಮದ ವ್ಯಕ್ತಿ ಎಂದು ಅಪಹಾಸ್ಯಕ್ಕೊಳಗಾಗುತ್ತಾನೆ ಮತ್ತು ಅವಮಾನಿಸಲ್ಪಡುತ್ತಾನೆ. ಈ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾದ ಭಾಗವಾಗಿರುವ ಕಪ್ಪು ಡ್ರಮ್ಮರ್ ಅನ್ನು ಕ್ಯಾಮೆರಾ ಶೀಘ್ರದಲ್ಲೇ ಜೂಮ್ ಇನ್ ಮಾಡುತ್ತದೆ. ಪಾತ್ರವು ಭೀಮ್ ಎದುರಿಸಿದ ಅವಮಾನವನ್ನು ಅರ್ಥಮಾಡಿಕೊಂಡಂತೆ ತೋರುತ್ತದೆ. ಈ ಒಂದು ದೃಶ್ಯವು ವರ್ಣಭೇದ ನೀತಿಯ ಜಾಗತಿಕ ಸ್ವರೂಪದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಮಾತನಾಡುತ್ತದೆ.

ಬ್ರಿಟಿಷ್ ಗವರ್ನರ್ ಸ್ಕಾಟ್ ಅವರ ಸ್ವಾಗತ ಪಾರ್ಟಿಗೆ ಜೂನಿಯರ್ ಎನ್ಟಿಆರ್ ಬ್ರೇಕ್:

ಇದು ಚಿತ್ರದ ಅತ್ಯಂತ ಶಿಳ್ಳೆಗೆ ಯೋಗ್ಯವಾದ ದೃಶ್ಯ ಎಂದರೆ ತಪ್ಪಾಗುವುದಿಲ್ಲ. ಈ ದೃಶ್ಯದಲ್ಲಿ ಜೂನಿಯರ್ ಎನ್‌ಟಿಆರ್ ಅವರ ಭೀಮ್ ಪಾತ್ರವು ಬ್ರಿಟಿಷ್ ಗವರ್ನರ್ ಸ್ಕಾಟ್ ಅವರ ಸ್ವಾಗತ ಕೂಟವನ್ನು ನಾಶಪಡಿಸುತ್ತದೆ. ಅವನು ಟ್ರಕ್ ನಲ್ಲಿ ಬರುತ್ತಾನೆ, ಅವನು ಕಾಡು ಪ್ರಾಣಿಗಳೊಂದಿಗೆ ಟ್ರಕ್ ನಿಂದ ಹೊರ ಬರುತ್ತಾನೆ. ಬ್ರಿಟಿಷರ ವಿರುದ್ಧದ ಅವನ ಹೋರಾಟದಲ್ಲಿ ಪ್ರಾಣಿಗಳು ಸಹ ಒಂದು ಆಯುಧವಾಗುತ್ತವೆ.

ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಜೈಲಿನಿಂದ ತಪ್ಪಿಸಿಕೊಂಡು ಕಾಡಿಗೆ ಬಂದು ಫೈಟ್ ಮಾಡುವ ದೃಶ್ಯ:

ಜೂನಿಯರ್ ಎನ್‌ಟಿಆರ್ ಅವರ ಭೀಮ್ ರಾಮಾಯಣದ ಪಾತ್ರವನ್ನು ಉಲ್ಲೇಖಿಸಿದ ನಂತರ ಸ್ಟ್ಯಾಂಡ್ಔಟ್ ಅನುಕ್ರಮವು ಬರುತ್ತದೆ. ಅವನು ತಾನು ಭಗವಾನ್ ಹನುಮಾನ್ ಎಂದು ಸೂಚಿಸುತ್ತಾನೆ ಮತ್ತು ಆಲಿಯಾ ಭಟ್ ನ ಸೀತೆಗೆ ತನ್ನ ಶ್ರೀರಾಮ ಅಲಿಯಾಸ್ ರಾಜುವನ್ನು ಮರಳಿ ಕರೆತರುವುದಾಗಿ ಭರವಸೆ ನೀಡುತ್ತಾನೆ. ಜೈಲಿನಲ್ಲಿ ರಾಜುವನ್ನು ಕಂಡು ಕೊಳ್ಳುವಲ್ಲಿ ಯಶಸ್ವಿಯಾದ ಭೀಮ್, ಅವನನ್ನು ತನ್ನ ಭುಜದ ಮೇಲೆ ಕುಳಿತು ಕೊಳ್ಳುವಂತೆ ಮಾಡಿ, ಚಿರತೆಯಂತೆ ಕಾಡಿನ ಕಡೆಗೆ ವೇಗವಾಗಿ ಓಡುತ್ತಾನೆ. ಏತನ್ಮಧ್ಯೆ, ರಾಜು ಬ್ರಿಟಿಷರ ಕಡೆಗೆ ರೈಫಲ್ ನಿಂದ ಗುಂಡು ಹಾರಿಸುತ್ತಾನೆ.

ರಾಜುವಿನ ಭಗವಾನ್ ರಾಮನಂತಹ ಅವತಾರದ ಈ ದೃಶ್ಯವು ಮೈ ಜುಮ್ಮೆನಿಸುವ ಸಿನಿಮೀಯ ಕ್ಷಣವಾಗಿದೆ. ಈಗಾಗಲೇ ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ಖಂಡಿತವಾಗಿಯೂ ಈ ದೃಶ್ಯಗಳನ್ನು ನೋಡಿ ಮೆಚ್ಚಿಕೊಂಡಿರುತ್ತಾರೆ.

ಈ ಚಿತ್ರದಲ್ಲಿ ಇನ್ನೂ ಹಲವು ದೃಶ್ಯಗಳಿವೆ ಅವುಗಳು:

ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಬ್ರಿಟಿಷ್ ಸೈನಿಕನನ್ನು ಹೊಡೆಯಲು ಬೆಂಕಿಯ ಮೂಲಕ ಹಾದು ಹೋಗುವ ಬಾಣವನ್ನು ಬಿಡುತ್ತಾನೆ.

ಜೂನಿಯರ್ ಎನ್‌ಟಿಆರ್ ಬೆಂಕಿ ಹಚ್ಚಿದ ಟೈರ್ ಅನ್ನು ತಳ್ಳುತ್ತಾನೆ ಮತ್ತು ಕ್ಯಾಮೆರಾ, ಟೈರ್ ನ ರಂಧ್ರದ ಮೂಲಕ, ರಾಮ್ ಚರಣ್ ನನ್ನು ಸೆರೆ ಹಿಡಿಯುತ್ತದೆ.

"ಕೋಮರಂ ಭೀಮುಡೋ" ಹಾಡಿನಲ್ಲಿ ರಕ್ತದ ಹನಿಯೊಂದು ಭೀಮನ ಕಣ್ಣುಗುಡ್ಡೆಯನ್ನು ಪ್ರವೇಶಿಸಿ ಕಣ್ಣೀರಾಗಿ ಬಿಳುವ ದೃಶ್ಯವು ಅದ್ಬುತವಾಗಿದೆ.
Published by:shrikrishna bhat
First published: