RRR Movie: ಬುಡಕಟ್ಟು ಜನಾಂಗದ ಮಲ್ಲಿ ಪಾತ್ರ ಮಾಡಿದ ಬಾಲಕಿ ಯಾರು ಗೊತ್ತಾ?, ಇಲ್ಲಿದೆ ಇಂಟ್ರಸ್ಟಿಂಗ್​ ಸ್ಟೋರಿ

RRR ಚಿತ್ರದಲ್ಲಿನ ಬುಡಕಟ್ಟು ಜನಾಂಗದ ಹುಡುಗಿ ಮಲ್ಲಿ (Malli) ಎಂಬ ಪುಟ್ಟ ಬಾಲಕಿ ಪಾತ್ರವು ಎಲ್ಲರ ಗಮನ ಸೆಳೆಯುತ್ತಿದ್ದು, ಈ ಮಲ್ಲಿ ಪಾತ್ರದಲ್ಲಿ ನಟಿಸಿದ ಆ ಪುಟ್ಟ ಬಾಲಕಿ ಯಾರು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅಂತಹ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

RRR ಚಿತ್ರದಲ್ಲಿ ಮಲ್ಲಿ ಪಾತ್ರ ಮಾಡಿದ ಬಾಲಕಿ

RRR ಚಿತ್ರದಲ್ಲಿ ಮಲ್ಲಿ ಪಾತ್ರ ಮಾಡಿದ ಬಾಲಕಿ

  • Share this:
ಎಸ್​.ಎಸ್ ರಾಜಮೌಳಿ (SS Rajamouli) ನಿರ್ದೇಶನದ ಆರ್​ಆರ್​ಆರ್ (RRR) ಚಿತ್ರವು ಸದ್ಯ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್​ ಆಫಿಸ್ (Box Office) ದೂಳಿಪಟ ಮಾಡಿದೆ. ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ 500 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಆಗುವ ಮೂಲಕ ಭಾರತೀಯ ಚಿತ್ರರಂಗದಲ್ಲಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ. ಅಲ್ಲದೇ ಹಿಂದಿ ಅವತರಣಿಕೆಯಲ್ಲಿಯೇ RRR ಚಿತ್ರವು 100 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ಈ ನಡುವೆ ಚಿತ್ರದಲ್ಲಿನ ಬುಡಕಟ್ಟು ಜನಾಂಗದ ಹುಡುಗಿಯಾದ ಮಲ್ಲಿ (Malli) ಎಂಬ ಪುಟ್ಟ ಹುಡುಗಿಯ ಪಾತ್ರವು ಎಲ್ಲರ ಗಮನ ಸೆಳೆಯುತ್ತಿದ್ದು, ಈ ಹುಡುಗಿಯ ಸುತ್ತಲೇ ಸಿನಿಮಾವು ನಡೆಯುತ್ತದೆ ಎಂದರೂ ತಪ್ಪಾಗಲಾರದು. ಹಾಗಾದರೆ ಈ ಮಲ್ಲಿ ಪಾತ್ರದಲ್ಲಿ ನಟಿಸಿದ ಆ ಪುಟ್ಟ ಬಾಲಕಿ ಯಾರು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅಂತಹ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಚಂಡೀಗಢದ ಬಾಲಕಿ ಈ ಮಲ್ಲಿ:

ಮಲ್ಲಿ ಎಂಬ ಪಾತ್ರ ಆರ್​ಆರ್​ಆರ್​ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ನೆನಪಿನಲ್ಲಿ ಉಳಿಯುವಂತಹ ಒಂದು ಕ್ಯಾರೆಕ್ಟರ್ ಆಗಿದೆ. ಅದರಲ್ಲಿಯೂ ಅನೇಕರಿಗೆ ಮಲ್ಲಿ ಪಾತ್ರ ಭಾವನಾತ್ಮಕವಾಗಿ ಕನೆಕ್ಟ್ ಆಗಿತ್ತು ಎಂದರೂ ತಪ್ಪಾಗಲಾರದು. ಇಂತಹ ಅದ್ಭುತ ನಟನೆ ಮಾಡಿದ ಮಲ್ಲಿ ಪಾತ್ರದಾರಿಯ ನಿಜಜೀವನದ ಹೆಸರು ಟ್ವಿಂಕಲ್ ಶರ್ಮಾ ಎಂದು. ಇವಳು ಮೂಲತಃ ಚಂಡೀಗಢದವಳಾಗಿದ್ದಾಳೆ.

ಕೋಮರಮ್ ಭೀಮ್ (ಜ್ಯೂ.ಎನ್​ಟಿಆರ್​)​ ಬುಡಗಕಟ್ಟು ಜನಾಂಗದನಾಗಿದ್ದು, ಅದೇ ಜನಾಂಗದ ಮಲ್ಲಿ ಎಂಬ ಹುಡುಗಿಯನ್ನು ಬ್ರಿಟಿಷರು ಅಪಹರಣ ಮಾಡುತ್ತಾರೆ. ಅವಳನ್ನು ವಾಪಸ್​ ಕರೆದುಕೊಂಡು ಬರುವುದಕ್ಕೆ ಭೀಮ್ ಹೋಗುತ್ತಾನೆ. ಇದೇ ಸಿನಿಮಾದ ಜೀವಾಳವಾಗಿದ್ದು, ಇದರಲ್ಲಿ ಮಲ್ಲಿ ಪಾತ್ರಧಾರಿ ಅದ್ಭುತವಾಗಿ ನಟಿಸಿದ್ದಾಳೆ.

ಇದನ್ನೂ ಓದಿ: RRR Movie Twitter Review: 'ಆರ್‌ಆರ್‌ಆರ್‌' ನೋಡಿದ ಪ್ರೇಕ್ಷಕರು ಹೇಳಿದ್ದೇನು? ಟ್ವಿಟ್ಟರ್‌ನಲ್ಲಿ ವಿಮರ್ಶೆಗಳ ಸುರಿಮಳೆ

ಮಲ್ಲಿ ಪಾತ್ರಕ್ಕಾಗಿ 160 ಮಕ್ಕಳ ಆಡಿಷನ್:

ಇನ್ನು, RRR ಚಿತ್ರದ ಮಲ್ಲಿ ಎಂಬ ಪಾತ್ರಕ್ಕಾಗಿ ನಿರ್ದೇಶಕ ಎಸ್.ಎಸ್ ರಾಜಮೌಳಿ ಬರೋಬ್ಬರಿ 160 ಮಕ್ಕಳ ಆಡಿಷನ್ ನಡೆಸಿದ್ದಾರೆ. ಅಂತಿಮವಾಗಿ ಚಂಡಿಗಢದ ಟ್ವಿಂಕಲ್​ ಶರ್ಮಾ ಎಂಬ ಬಾಲಕಿ ಈ ಪಾತ್ರಕ್ಕಾಗಿ ಆಯ್ಕೆಯಾದಳು. ಆದರೆ ಈ ಪಾತ್ರಕ್ಕಾಗಿ ಆಯ್ಕೆ ಆಗುವಾಗ ಟ್ವಿಂಕಲ್​ ಶರ್ಮಾ 8ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಆದರೆ ಇದೀಗ ಅವಳು 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.

ಟ್ವಿಂಕಲ್​ ಶರ್ಮಾ ಆಯ್ಕೆ ಆಗಿದ್ದಾದರೂ ಹೇಗೆ?:

ಪಾತ್ರಗಳ ಆಯ್ಕೆ ವಿಚಾರದಲ್ಲಿ ರಾಜಮೌಳಿ ಎಂದಿಗೂ ರಾಜಿ ಆದವರಲ್ಲ. ಅಂತೆಯೇ ಈ ಪಾತ್ರಕ್ಕಾಗಿ ಅನೇಕ ಹುಡುಕಾಟ ಮಾಡಿದ ನಂತರ ಟ್ವಿಂಕಲ್​ ಶರ್ಮಾ ಅವಳನ್ನು ಆಯ್ಕೆ ಮಾಡಿದ್ದಾರೆ. ಟ್ವಿಂಕಲ್​ ಶರ್ಮಾ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​ ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಆಕೆ ಸ್ಪರ್ಧಿಸಿದ್ದಾಳೆ. ಅಲ್ಲದೇ ಫ್ಲಿಪ್​ಕಾರ್ಟ್​ನಲ್ಲಿ ಮಕ್ಕಳನ್ನು ಒಳಗೊಂಡ ಜಾಹೀರಾತಿನಲ್ಲಿ ಟ್ವಿಂಕಲ್ ನಟಿಸಿದ್ದರು. ಈ ಜಾಹೀರಾತನ್ನು ನೋಡಿದ ನಿರ್ದೇಶಕ ರಾಜಮೌಳಿ ಮಲ್ಲಿ ಪಾತ್ರಕ್ಕೆ ಟ್ವಿಂಕಲ್​ ಸರಿಹೊಂದಬಹುದು ಅನಿಸಿ, ಆ ಬಳಿಕ ಟ್ವಿಂಕಲ್​ಗೆ ಆಡಿಷನ್​ಗೆ ಆಹ್ವಾನ ನೀಡಿ ಆಯ್ಕೆರ ಮಾಡಿದ್ದರಂತೆ. ಆದರೆ ಇದೀಗ ಚಿತ್ರದ ಮಲ್ಲಿ ಪಾತ್ರಕ್ಕೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: RRR: ಆರ್​ಆರ್​ಆರ್​ ಸಿನಿಮಾದ ಒಟಿಟಿ ರಿಲೀಸ್ ಡೇಟ್​ ಫಿಕ್ಸ್​.. ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಬರ್ತಿದೆ!

RRR ಒಟಿಟಿ ರಿಲೀಸ್ ಡೇಟ್ ಫಿಕ್ಸ್?:

RRR ಒಟಿಟಿ ದಿನಾಂಕಕ್ಕೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೀ5 ತೆಲುಗು, ತೆಮಿಳು, ಮಲಯಾಳಂ ಮತ್ತು ಕನ್ನಡ ಹಕ್ಕುಗಳನ್ನು ಪಡೆದುಕೊಂಡಿದೆ. ನೆಟ್‌ಫ್ಲಿಕ್ಸ್ ಹಿಂದಿ ಹಕ್ಕುಗಳನ್ನು ಖರೀದಿಸಿದೆ. ಅಲ್ಲದೇ ಚಿತ್ರ ಬಿಡುಗಡೆಯಾದ 2 ತಿಂಗಳ ನಂತರ ಮೇ 25 ರಂದು ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Published by:shrikrishna bhat
First published: