ಪ್ರಪಂಚದಾದ್ಯಂತ RRR ಸಾಧಿಸಿದ ಯಶಸ್ಸಿನ ಪ್ರಮಾಣ ನಮಗೆಲ್ಲರಿಗೂ ಗೊತ್ತಿದೆ. ಇದು ಬಾಕ್ಸ್ ಆಫೀಸ್ನಲ್ಲಿ ಸರಿಸುಮಾರು 1150 ಕೋಟಿಗಳನ್ನು ಸಂಗ್ರಹಿಸಿ ಹೊಸ ದಾಖಲೆ ಬರೆದಿದ್ದು ಮಾತ್ರವಲ್ಲದೇ, ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಮಾತ್ರವಾಗಿದೆ. ಅಲ್ಲದೇ, RRR ಪ್ರಪಂಚದಾದ್ಯಂತ ಇದ್ದ ಅನೇಕ ದಾಖಲೆಗಳನ್ನು ಅಳಿಸಿಹಾಕಿದೆ ಎಂಬುದರಲ್ಲಿಯಾವುದೇ ಅನುಮಾನವಿಲ್ಲ. ಎನ್ಟಿಆರ್ ಮತ್ತು ರಾಮ್ ಚರಣ್ ಭಾರತದ ಪ್ರೇಕ್ಷಕರಿಂದ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ. ಈಗಲೂ ಹಲವು ವಿದೇಶಿಗರು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
100 ದಿನ ಪೂರೈಸಿದ ಆರ್ಆರ್ಆರ್
ಇಂದು RRR 100 ದಿನಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ಎನ್ಟಿಆರ್, ರಾಮ್ ಚರಣ್ ಮತ್ತು ರಾಜಮೌಳಿ ಇರುವ ವರ್ಕಿಂಗ್ ಸ್ಟಿಲ್ ಅನ್ನು ಬಿಡುಗಡೆ ಮಾಡಿದೆ. ಈ ಸಿನಿಮಾ ಥಿಯೇಟರ್ ನಲ್ಲಿ ಮಾತ್ರವಲ್ಲದೇ, ಚಿತ್ರವು OTT ಯಲ್ಲಿ ಸಹ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಈಗ ಝಿ 5ನಲ್ಲಿ ಸಹ ಜನರಿಗೆ ಮೋಡಿ ಮಾಡಿದ್ದು, 1 ನಿಮಿಷಕ್ಕೆ ಬರೋಬ್ಬರಿ 1000 ಮಿಲಿಯನ್ಸ್ ವೀಕ್ಷಣೆ ಪಡೆದು ಹೊಸ ದಾಖಲೆ ಮಾಡಿತ್ತು ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ನಾಲ್ಕು ಭಾಷೆಯಲ್ಲಿ ಸಹ ಮೋಡಿ ಮಾಡಿದ್ದು, ಹೆಚ್ಚಿನ ಜನರು ಈಗಲೂ ಇದನ್ನು ವೀಕ್ಷಿಸುತ್ತಿದ್ದಾರೆ.
ರಾಜಮೌಳಿ ನಿರ್ದೇಶನದ ರೌದ್ರಂ ರಣಂ ರುಧಿರಂ ಸಿನಿಮಾ ವಿಶ್ವಾದ್ಯಂತ ಥಿಯೇಟರ್ಗಳಲ್ಲಿ ಭಾರಿ ಹಿಟ್ ಆಗಿ, ಸಂಚಲನವನ್ನು ಸೃಷ್ಟಿಸಿತು ಮಾತ್ರವಲ್ಲದೆ ಹಾಲಿವುಡ್ ಚಲನಚಿತ್ರ ಗಣ್ಯರಿಂದ ಮೆಚ್ಚುಗೆಯನ್ನು ಗಳಿಸಿದೆ. ಈ ಚಿತ್ರ ಇದೀಗ ಮತ್ತೊಂದು ಸಂಚಲನ ಮೂಡಿಸಿದೆ.ಅತ್ಯುತ್ತಮ ಚಿತ್ರ ವಿಭಾಗದಲ್ಲಿ RRR ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ. ಈ ವಿಷಯವನ್ನು 'ಆರ್ಆರ್ಆರ್' ತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ಮೈಸೂರಿನ ಹೋಟೆಲ್ ಮುಂದೆ ರಮ್ಯಾ ಹೈಡ್ರಾಮಾ, ನರೇಶ್ ಮೇಲೆ ಆರೋಪಗಳ ಸುರಿಮಳೆ
ದಾಖಲೆ ಬರೆದ ಆರ್ಆರ್ಆರ್
ಸಿನಿಮಾ ಘೋಷಣೆ ಆದಾಗಿನಿಂದ ಪ್ರತಿ ದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇತ್ತು. ಈಗ ಸಿನಿಮಾ ನೋಡಿದ ಪ್ರತಿಯೊಬ್ಬರು ಇದು ನಮ್ಮ ಭಾರತೀಯರ ಹೆಮ್ಮೆ. ಸಿನಿಮಾ ಮಾಂತ್ರಿಕ ರಾಜಮೌಳಿಗೆ ಬಹುಪರಾಕ್ ಎಂದಿದ್ದಾರೆ. ಆರ್ ಆರ್ ಆರ್ ಸಿನಿಮಾ ಭಾರತಿಯ ಚಿತ್ರರಂಗದಲ್ಲಿ ಬದಲಾವಣೆಗೆ ಕಾರಣವಾಗಿದೆ. ಸಿಕ್ಕ ಸಿಕ್ಕ ರೆಕಾರ್ಟ್ಗಳನ್ನು ಧೂಳಿಪಟ ಮಾಡಿದೆ. ಇಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜುವಾಗಿ ನಟಿಸಿದ್ದರೆ, ಜ್ಯೂ. ಎನ್ಟಿಆರ್ ಕೊಮರಮ್ ಭೀಮನಾಗಿ ಅಭಿನಯಿಸಿದ್ದಾರೆ.
ಬ್ರಿಟೀಷ್ ಆಡಳಿತದಲ್ಲಿ ಪೊಲೀಸ್ ಆಗಿದ್ದ ಸೀತಾರಾಮ ರಾಜುಗೆ ದೊಡ್ಡ ಹುದ್ದೆಗೆ ಏರುವ ಆಸೆ. ಆತ್ತ ಕಾಡಿನಲ್ಲಿ ಬೆಳೆಯುವ ಕೊಮರಮ್ ಭೀಮನಿಗೆ ತನ್ನ ಕಾಡು, ತನ್ನ ಜನರೇ ಪ್ರಪಂಚ. ಹೀಗೆ ಭೀಮನ ಗುಂಪಿನ ಹುಡುಗಿಯೊಬ್ಬಳನ್ನು ಬ್ರಿಟಿಷರು ಕರೆದೊಯ್ಯುತ್ತಾರೆ. ಆಕೆಯನ್ನು ಹುಡುಕಿಕೊಂಡು ಭೀಮ್ ಕಾಡಿನಿಂದ ಆಚೆಗೆ ಬರುತ್ತಾನೆ. ಅಲ್ಲೂರಿ ಸೀತಾರಾಮ ರಾಜುಗೆ ಎದುರಾಗುತ್ತಾನೆ. ಅಲ್ಲಿಂದ ಮುಂದೆ ಕಥೆ ಮತ್ತೊಂದು ಹಂತ ತಲುಪುತ್ತದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಆರ್ಆರ್ಆರ್ ಬಾಚಿದ್ದು ಅಷ್ಟಿಷ್ಟಲ್ಲ, ಸಿನಿಮಾದ ಕಲೆಕ್ಷನ್ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ
ಬಾಹುಬಲಿಯಲ್ಲಿ ರಾಜಮನೆತನದ ಕಥೆ ಹೇಳಿದ್ದ ರಾಜಮೌಳಿ, ಇಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ದಾರೆ. ಸಿನಿಮಾ ನೋಡುತ್ತ ನೋಡುತ್ತ ಇದು ಸ್ವಾತಂತ್ರ್ಯ ಪೂರ್ವದಲ್ಲಿ, ದೇಶದ ಯಾವುದೋ ಭಾಗದಲ್ಲಿ ನಡೆದ ಕಥೆ ಅಂತ ಅನಿಸಿದರೆ ಅಚ್ಚರಿಯಿಲ್ಲ. ಒಟ್ಟಾರೆಯಾಗಿ ದಕ್ಷಿಣದ ಸಿನಿಮಾವೊಂದು ವಿಶ್ವದಾದ್ಯಂತ ಹೆಸರು ಮಾಡಿದ್ದು ಹೆಮ್ಮೆಯ ವಿಚಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ