ವಿಶ್ವವೇ ತೆಲುಗು ರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ (S.S Rajmouli). ಅವರ ಬಾಹುಬಲಿ ಸರಣಿ ಚಿತ್ರಗಳು (Moive) ಹೊಸ ಇತಿಹಾಸವನ್ನೇ ಬರೆದಿತ್ತು. ನಾಯಕ ಪ್ರಭಾಸ್ ಸೇರಿ ಎಲ್ಲರಿಗೂ ಈ ಸಿನಿಮಾಗಳು ವೃತ್ತಿ ಜೀವನದ ಗೇಮ್ ಚೇಂಜರ್ ಆದವು. ಬಾಹುಬಲಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಯ್ತು, ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆದರು ಮತ್ತು ರಾಜಮೌಳಿ ಸ್ಟಾರ್ ನಿರ್ದೇಶಕರು (Star Director) ಎಂಬ ಖ್ಯಾತಿ ಪಡೆದರು. ಬಾಹುಬಲಿ 1,2, ನಂತರ ಈದೀಗ RRR ಕೂಡ ರಾಜಮೌಳಿ ಬತ್ತಳಿಕೆ ಇಂದ ಬಂದ ಮತ್ತೊಂದು ಅದ್ಭುತ ಸಿನಿಮಾ. 'ಬಾಹುಬಲಿ 2' ಮತ್ತು 'RRR' ನೊಂದಿಗೆ ಎಸ್ಎಸ್ ರಾಜಮೌಳಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್ (Box Office) ಇತಿಹಾಸ ನಿರ್ಮಿಸಿತ್ತು. ತೆರೆ ಮೇಲೆ ರಾಮ್ಚರಣ್ ಹಾಗೂ ಎನ್ಟಿಆರ್ ಜೋಡಿ ಕಮಾಲ್ ಮಾಡಿತ್ತು.
ಒಟಿಟಿಗೆ ಶೀಘ್ರದಲ್ಲೇ ಬರುತ್ತಿದೆ ಆರ್ಆರ್ಆರ್ ಸಿನಿಮಾ!
ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಬ್ಲಾಕ್ಬಸ್ಟರ್ ಸಿನಿಮಾ 'ಆರ್ಆರ್ಆರ್' ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು ಗೊತ್ತೇ ಇದೆ. ಈ ಮಧ್ಯೆಯೇ ಸಿನಿಮಾವನ್ನು ಒಟಿಟಿ ಪ್ಲಾಟ್ಫಾರ್ಮ್ಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ. ಮೇ 20ರಂದು ಸಿನಿಮಾ ಒಟಿಟಿಗೂ ಲಗ್ಗೆ ಇಡಲಿದೆ. ಸ್ಟಾರ್ ನಟರಾದ ರಾಮ್ಚರಣ್, ಜೂನಿಯರ್ ಎನ್ಟಿಆರ್ ನಟನೆಯ ಆರ್ಆರ್ಆರ್ ಸಿನಿಮಾ ಈಗಾಗಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಇದೀಗ ಮನೆಯಲ್ಲೇ ಕೂತು ಈ ಸಿನಿಮಾವನ್ನು ನೋಡು ದಿನ ಕೂಡ ದೂರ ಇಲ್ಲ.
ಎಕ್ಸ್ಟ್ರಾ ದುಡು ಕೊಟ್ರೆ ಮಾತ್ರ ಸಿನಿಮಾ ನೋಡ್ಬಹುದು!
ಜಿ5 ಮತ್ತು ನೆಟ್ಫ್ಲಿಕ್ಸ್ನಲ್ಲಿ ಆರ್ಆರ್ಆರ್ ಸಿನಿಮಾ ಬರುತ್ತಿದೆ ಎಂಬುದೇನೋ ಸರಿ. ಆದರೆ, ಸಿನಿಮಾ ವಿತರಕರು ಇದರಲ್ಲಿ ಒಂದು ಟ್ವಿಸ್ಟ್ ಇಟ್ಟಿದ್ದು, ಈಗಾಗಲೇ ಒಟಿಟಿಯ ಚಂದಾದಾರಿಕೆ ಹೊಂದಿದ್ದರೂ ಈ ಸಿನಿಮಾವನ್ನು ವೀಕ್ಷಿಸಲು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿದೆ. ಈಗಾಗಲೇ ಅಮೇಜಾನ್ ಪ್ರೈಮ್ ಇದನ್ನು ಪ್ರಯೋಗ ಮಾಡಿದೆ. ಸ್ಪೈಡರ್ ಮ್ಯಾನ್ ಚಿತ್ರವನ್ನು ಬಾಡಿಗೆ ತೆಗೆದುಕೊಂಡು ನೋಡುವ ಆಪ್ಷನ್ ನೀಡಿದೆ. ಇದಕ್ಕೆ ವೀಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಆರ್ಆರ್ಆರ್ ಕೂಡ ಇದೇ ಹಾದಿಯಲ್ಲಿ ಬರುತ್ತಿದ್ದು, ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ಕನ್ನಡ ಸಿನಿಮಾ ನೋಡಿ ಕೊಂಡಾಡಿದ ಕಿಚ್ಚ! 'ಆ' ನಟನ ಪರ್ಫಾಮೆನ್ಸ್ಗೆ ಸುದೀಪ್ ಫಿದಾ
ಜೂನ್ 3ಕ್ಕೆ ಆಹಾ ದಲ್ಲಿ ಆರ್ಆರ್ಆರ್ ಲಭ್ಯ!
'RRR', ಇತ್ತೀಚೆಗಿನ ಎಸ್ಎಸ್ ರಾಜಮೌಳಿ ಅದ್ಭುತ ಸಿನಿಮಾವು ವಿಶ್ವಾದ್ಯಂತ ಬಿಡುಗಡೆಯಾದ ಕೇವಲ 16 ದಿನಗಳಲ್ಲಿ ಅತ್ಯಂತ ಅಪೇಕ್ಷಿತ 1000 ಕೋಟಿ ಕ್ಲಬ್ ಸೇರಿದೆ.ಒಂದು ವೇಳೆ ಸಿನಿಮಾವನ್ನು ಪ್ರತ್ಯೇಕವಾಗಿ ಹಣ ಪಾವತಿ ಮಾಡಲು ಬಯಸದೇ ಇದ್ದಲ್ಲಿ ನೀವು ಜೂನ್ 3ರವರೆಗೂ ಕಾಯಬೇಕಾಗುತ್ತದೆ. ಜೂನ್ 3ರ ಬಳಿಕ ಆಯಾ ಒಟಿಟಿಗಳಲ್ಲಿ ಸಹಜವಾಗಿ ಸ್ಟ್ರೀಮಿಂಗ್ ಆಗಲಿದೆ. ಆಗ ಅದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಒಂದೇ ದಿನ ಇಬ್ಬರು ದಿಗ್ಗಜರ ವಿವಾಹ ವಾರ್ಷಿಕೋತ್ಸವ! ಜ್ಯೂ.ಎನ್ಟಿಆರ್ ಮನೆಯಲ್ಲಿ ಹೀಗಿತ್ತು ನೋಡಿ ಸಂಭ್ರಮ
ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ 'RRR' ಚಿತ್ರ 20 ನೇ ಶತಮಾನದ ಆರಂಭದ ಇಬ್ಬರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸುತ್ತ ಸುತ್ತುವ ಕಾಲ್ಪನಿಕ ಅವಧಿಯ ನಾಟಕವಾಗಿದೆ. ಚಲನಚಿತ್ರವು ಅದರ ಅಗಾಧವಾದ ಸಿನಿಮೀಯ ಪ್ರಮಾಣ, ಆಕ್ಷನ್ ಮತ್ತು ನಾಟಕಕ್ಕಾಗಿ ಪ್ರಶಂಸೆಯನ್ನು ಪಡೆಯಿತು ಮತ್ತು UK ನಂತಹ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರತೀಯ ಚಲನಚಿತ್ರಗಳು ಸಾಂಪ್ರದಾಯಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ, ಆದರೆ RRR ಯುಕೆಯಲ್ಲೂ ಸಹ ಕಮಾಲ್ ಮಾಡಿ ಸೈ ಎನಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ