RRR Record: ಒಟಿಟಿಯಲ್ಲಿ ಆರ್​ಆರ್​ಆರ್​ ಕಮಾಲ್​, 1 ನಿಮಿಷದಲ್ಲಿ 1000 ಮಿಲಿಯನ್ಸ್ ವೀವ್ಸ್​

RRR

RRR

RRR:  ಹೌದು, ಥಿಯೇಟರ್​ನಲ್ಲಿ ಮಾತ್ರವಲ್ಲದೇ, ಒಟಿಟಿ ಝೀ 5ನಲ್ಲಿ ಸಹ ದಾಖಲೆ ಮಾಡಿದೆ. ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸಿರುವ ಆರ್​ಆರ್​ಆರ್​ ಇದೇ ತಿಂಗಳ 20ರಂದು ಒಟಿಟಿಗೆ ಲಗ್ಗೆ ಇಟ್ಟಿದ್ದು, ಈಗ ಈ ಚಿತ್ರ ಹೊಸದೊಂದು ರೆಕಾರ್ಡ್ ಬರೆದಿದೆ.

  • Share this:

ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ ಸಿನಿಮಾ (RRR Cinema) ರಿಲೀಸ್ (Release) ಆಗಿ, ಧೂಳಿಬ್ಬಿಸಿದ್ದು ಎಲ್ಲರಿಗೂ ಗೊತ್ತಿದೆ. ರಾಜಮೌಳಿ (Rajamouli), ಜ್ಯೂ. ಎನ್‌ಟಿಆರ್ (Jr. NTR) ಹಾಗೂ ರಾಮ್‌ಚರಣ್ (Ramcharan) ಅಭಿಮಾನಿಗಳು (Fans) ಈ ಚಿತ್ರವನ್ನು ಹಬ್ಬ ಆಚರಿಸಿದಂತೆ ಆಚರಿಸಿ ಸಂಭ್ರಮಪಟ್ಟಿದ್ದಾರೆ. ಆರ್‌ಆರ್‌ಆರ್‌ ಸಿನಿಮಾ ನೋಡಿ, ತಮ್ಮ ನೆಚ್ಚಿನ ನಟರಿಗೆ (Heros) ಜೈಕಾರ ಹಾಕಿ, ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ. ಬರೀ ಆಂಧ್ರ (Andhra), ತೆಲಂಗಾಣವಷ್ಟೇ (Telangana) ಅಲ್ಲ, ಇಡೀ ಭಾರತದೆಲ್ಲೆಡೆ ಸಿನಿಮಾ ರಿಲೀಸ್ ಆಗಿ, ದಾಖಲೆಗಳನ್ನು ಮಾಡಿದೆ. ಬಾಹುಬಲಿ 1,2, ನಂತರ  RRR ಕೂಡ ರಾಜಮೌಳಿ ಬತ್ತಳಿಕೆ ಇಂದ ಬಂದ ಮತ್ತೊಂದು ಅದ್ಭುತ ಸಿನಿಮಾ.  ತೆರೆ ಮೇಲೆ ರಾಮ್​ಚರಣ್​ ಹಾಗೂ ಎನ್​ಟಿಆರ್​ ಜೋಡಿ ಕಮಾಲ್ ಮಾಡಿತ್ತು. ಹಾಗೆಯೇ ಒಟಿಟಿಯಲ್ಲಿ ಸಹ ಚಿತ್ರ ಬಿಡುಗಡೆಯಾಗಿ ದಾಖಲೆ ಬರೆದಿದೆ.


ಹೌದು, ಥಿಯೇಟರ್​ನಲ್ಲಿ ಮಾತ್ರವಲ್ಲದೇ, ಒಟಿಟಿ ಝೀ 5ನಲ್ಲಿ ಸಹ ದಾಖಲೆ ಮಾಡಿದೆ. ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸಿರುವ ಆರ್​ಆರ್​ಆರ್​ ಇದೇ ತಿಂಗಳ 20ರಂದು ಒಟಿಟಿಗೆ ಲಗ್ಗೆ ಇಟ್ಟಿದ್ದು, ಈಗ ಈ ಚಿತ್ರ ಹೊಸದೊಂದು ರೆಕಾರ್ಡ್ ಬರೆದಿದೆ.


 1 ನಿಮಿಷಕ್ಕೆ 1000 ಮಿಲಿಯನ್ಸ್ ವೀಕ್ಷಣೆ 


ಆರ್ ಆರ್ ಆರ್ ಸಿನಿಮಾ ಭಾರತಿಯ ಚಿತ್ರರಂಗದಲ್ಲಿ ಬದಲಾವಣೆಗೆ ಕಾರಣವಾಗಿದೆ. ಸಿಕ್ಕ ಸಿಕ್ಕ ರೆಕಾರ್ಟ್​ಗಳನ್ನು ಧೂಳಿಪಟ ಮಾಡಿದೆ. ಈಗ ಝಿ 5ನಲ್ಲಿ ಸಹ ಜನರಿಗೆ ಮೋಡಿ ಮಾಡುತ್ತಿದ್ದು, 1 ನಿಮಿಷಕ್ಕೆ ಬರೋಬ್ಬರಿ 1000 ಮಿಲಿಯನ್ಸ್ ವೀಕ್ಷಣೆ ಪಡೆದ ಹೊಸ ದಾಖಲೆ ಮಾಡಿದೆ.   ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ನಾಲ್ಕು ಭಾಷೆಯಲ್ಲಿ ಸಹ ಮೋಡಿ ಮಾಡಿದ್ದು, ಹೆಚ್ಚಿನ ಜನರು ಈಗಲೂ ಇದನ್ನು ವೀಕ್ಷಿಸುತ್ತಿದ್ದಾರೆ.


ಇದನ್ನೂ ಓದಿ: ಪಾಪ ಪಾಂಡು ಶಾಲಿನಿಯ ಡಿಸೈನ್​ ಡಿಸೈನ್​ ಬ್ಲೌಸ್​ಗಳು! ಶಾಲಿವುಡ್​ನಲ್ಲಿ ಏನೆಲ್ಲಾ ಇದೆ ಗೊತ್ತಾ?


ಧನ್ಯವಾದ ತಿಳಿಸಿದ ಚಿತ್ರತಂಡ


ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿರುವ RRR ಸಿನಿಮಾಕ್ಕೆ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲಿಯೂ ಸಿನಿಮಾಗೆ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ,ನಿಮ್ಮ ಅದ್ಭುತ ಪ್ರತಿಕ್ರಿಯೆ ನನ್ನ ತುಂಬು ಹೃದಯದ ಧನ್ಯವಾದ ಎಂದು ಜೂನಿಯರ್ ಎನ್ ಟಿಆರ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.


ಬಾಹುಬಲಿ ಚಿತ್ರ ಸರಣಿಯ ನಂತರ ಮತ್ತೊಮ್ಮೆ ಇಂತಹ ಬ್ಲಾಕ್ ಬಸ್ಟರ್ ಚಿತ್ರವನ್ನು ತಂದಿದ್ದಕ್ಕಾಗಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರನ್ನು ಕೆಲವು ಅಭಿಮಾನಿಗಳು ಶ್ಲಾಘಿಸಿದ್ದರು. ಇದು ನಿಮ್ಮ ನಿರ್ದೇಶನದ ಅತ್ಯುತ್ತಮ ಚಿತ್ರಗಳಲ್ಲೂ ಇದೂ ಒಂದು ಅಂತ ಹಾಡಿ ಹೊಗಳಿದ್ದರು.


'RRR', ಇತ್ತೀಚೆಗಿನ ಎಸ್‌ಎಸ್ ರಾಜಮೌಳಿ ಅದ್ಭುತ ಸಿನಿಮಾವು ವಿಶ್ವಾದ್ಯಂತ ಬಿಡುಗಡೆಯಾದ ಕೇವಲ 16 ದಿನಗಳಲ್ಲಿ ಅತ್ಯಂತ ಅಪೇಕ್ಷಿತ 1000 ಕೋಟಿ ಕ್ಲಬ್‌ ಸೇರಿದ್ದು ಇತಿಹಾಸ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರ 'RRR' ಚಿತ್ರ 20 ನೇ ಶತಮಾನದ ಆರಂಭದ ಇಬ್ಬರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸುತ್ತ ಸುತ್ತುವ ಕಾಲ್ಪನಿಕ ಕಾಲದ ಸಿನಿಮಾ ಇದಾಗಿದೆ.


ಇದನ್ನೂ ಓದಿ: ರಾ ರಾ ರಕ್ಕಮ್ಮ ಎಂದು ಹೆಜ್ಜೆ ಹಾಕಿದ ವೈಷ್ಣವಿ ಗೌಡ - ಕಾಮೆಂಟ್​ಗಳ ಮಳೆ ಸುರಿಸಿದ ಅಭಿಮಾನಿಗಳು


ಚಲನಚಿತ್ರವು ಅದರ ಅಗಾಧವಾದ ಸಿನಿಮೀಯ ಪ್ರಮಾಣ, ಆಕ್ಷನ್ ಮತ್ತು ನಾಟಕಕ್ಕಾಗಿ ಪ್ರಶಂಸೆಯನ್ನು ಪಡೆದಿದೆ ಮತ್ತು UK ನಂತಹ ದೊಡ್ಡ ಸೊಡ್ಡ ಮಾರುಕಟ್ಟೆಗಳಲ್ಲಿ ಭಾರತೀಯ ಚಲನಚಿತ್ರಗಳು ಸಾಂಪ್ರದಾಯಿಕವಾಗಿ ಉತ್ತಮವಾದ ಪ್ರತಿಕ್ರಿಯೆ ಪಡೆಯುವುದಿಲ್ಲ, ಆದರೆ RRR ಯುಕೆಯಲ್ಲೂ ಸಹ ಕಮಾಲ್ ಮಾಡಿ ಸೈ ಎನಿಸಿಕೊಂಡಿದೆ.

Published by:Sandhya M
First published: