ಆರ್‌ಆರ್‌ಆರ್ (RRR) ಈ ಸಿನಿಮಾ ಚಿತ್ರರಂಗದ (Film Industry) ಇತಿಹಾಸವನ್ನು (History) ಬದಲಿಸಿದ ಎನ್ನಬಹುದು. ಬಾಹುಬಲಿ (Bahubali) ನಂತರ ಎಸ್ಎಸ್ ರಾಜಾಮೌಳಿ (Rajamouli) ನಿರ್ದೇಶನದ ಈ ಸಿನಿಮಾ ಬಹುತೇಕ ಸಿನಿಮಾಗಳ ದಾಖಲೆಯನ್ನು ಪುಡಿ ಮಾಡಿತ್ತು. ಒಂದು ರೀತಿಯ ಅಲೆಯಂತೆ ಅಪ್ಪಳಿಸಿ ಕೋಟಿ ಕೋಟಿ ಬಾಚಿದೆ. ಇದೀಗ ಈ ಸಿನಿಮಾದ ಕಲೆಕ್ಷನ್ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಏನದು ಸುದ್ದಿ ಇಲ್ಲಿದೆ ನೋಡಿ.
ಬರೋಬ್ಬರಿ 1100 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ
ಆರ್‌ಆರ್‌ಆರ್ ಸಿನಿಮಾ ಬಹುದೊಡ್ಡ ತಾರಾಂಗಣವನ್ನು ಹೊಂದಿತ್ತು. ಟಾಲಿವುಡ್ನ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಹಾಗೂ ಬಾಲಿವುಡ್ ನಟಿ ಆಲಿಯಾ ಮತ್ತು ಅಜಯ್ ದೇವಗನ್ ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಈ ಸಿನಿಮಾ, ನಿರೀಕ್ಷೆಗೂ ಮೀರಿ ಸಕ್ಸಸ್ ಪಡೆದಿದೆ. ಇದೀಗ ಅದರ ಕಲೆಕ್ಷನ್ ವಿಚಾರ ಬಹಳ ಸದ್ದು ಮಾಡುತ್ತಿದೆ.
ಹೌದು, ಈ ಸಿನಿಮಾ ಒಟ್ಟು 1100 ಕೋಟಿ ಬಾಚಿದೆಯಂತೆ. ಆರ್‌ಆರ್‌ಆರ್ ಭಾರತದಲ್ಲಿ 902 ಕೋಟಿ ಕಲೆಕ್ಷನ್ ಮಾಡಿದ್ದು, ಅದೇ ಸಿನಿಮಾ ವಿಶ್ವಾದ್ಯಂತ 1111 ಕೋಟಿ ಕಲೆಕ್ಷನ್ ಮಾಡಿ, ಗಲ್ಲಾಪೆಟ್ಟಿಗೆಯಲ್ಲಿ ಮೂರನೇ ಸ್ಥಾನದಲ್ಲಿದೆಯಂತೆ. ಒಟ್ಟಾರೆಯಾಗಿ ಒಂದು ಸಿನಿಮಾ ಹಲವು ಚಿತ್ರಗಳ ದಾಖಲೆ ಮುರಿಯುತ್ತಿರುವುದು ಸುಳ್ಳಲ್ಲ. ಬಿಡುಗಡೆಗೂ ಮೊದಲು ಹಾಗೂ ನಂತರ ಕೂಡ ಸುದ್ದಿಯಲ್ಲಿರುವ ಸಿನಿಮಾ, ಇಷ್ಟು ದಿನಗಳ ನಂತರ ಸಹ ಸದ್ದು ಮಾಡುತ್ತಿರುವುದು ನಿಜಕ್ಕೂ ದಕ್ಷಿಣ ಭಾರತೀಯರಿಗೆ ಸಂತಸದ ವಿಚಾರ.
ಒಟಿಟಿಯಲ್ಲೂ ಮೋಡಿ ಮಾಡಿದ ಆರ್‌ಆರ್‌ಆರ್
ಆರ್ ಆರ್ ಆರ್ ಸಿನಿಮಾ ಭಾರತಿಯ ಚಿತ್ರರಂಗದಲ್ಲಿ ಬದಲಾವಣೆಗೆ ಕಾರಣವಾಗಿದೆ. ಸಿಕ್ಕ ಸಿಕ್ಕ ರೆಕಾರ್ಟ್ಗಳನ್ನು ಧೂಳಿಪಟ ಮಾಡಿದೆ. ಈಗ ಝಿ 5ನಲ್ಲಿ ಸಹ ಜನರಿಗೆ ಮೋಡಿ ಮಾಡುತ್ತಿದ್ದು, 1 ನಿಮಿಷಕ್ಕೆ ಬರೋಬ್ಬರಿ 1000 ಮಿಲಿಯನ್ಸ್ ವೀಕ್ಷಣೆ ಪಡೆದ ಹೊಸ ದಾಖಲೆ ಮಾಡಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ನಾಲ್ಕು ಭಾಷೆಯಲ್ಲಿ ಸಹ ಮೋಡಿ ಮಾಡಿದ್ದು, ಹೆಚ್ಚಿನ ಜನರು ಈಗಲೂ ಇದನ್ನು ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ನಾಳೆ ಬಿಡುಗಡೆಗೆ ಸಿದ್ದವಾಗಿದೆ 3 ಸಿನಿಮಾಗಳು, ವೀಕೆಂಡ್ನಲ್ಲಿ ಸಿನಿಪ್ರಿಯರಿಗೆ ಭರ್ಜರಿ ಹಬ್ಬ
ಈ ರಾಜಮೌಳಿ ಎಂಬ ಸಿನಿಮಾ ಮಾಂತ್ರಿಕನ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದು ನೊಣವನ್ನಾದರೂ ಇಟ್ಟುಕೊಂಡು ಅದ್ಭುತ ಸಿನಿಮಾ ಮಾಡಬಹುದು ಅಂತ ಈಗಾಗಲೇ ಅವರು ನಿರೂಪಿಸಿದ್ದಾರೆ. ಬಾಹುಬಲಿ ಹಾಗೂ ಬಾಹುಬಲಿ 2ನಂತಹ ವೈಭವಯುತ ಸಿನಿಮಾದಲ್ಲಿ ಅದ್ಭುತ ಕಥೆ ಹೇಳಿದ್ದ ರಾಜಮೌಳಿ, ಈ ಬಾರಿ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆ ಹೇಳಿದ್ದಾರೆ.
ಇಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜುವಾಗಿ ನಟಿಸಿದ್ದರೆ, ಜ್ಯೂ. ಎನ್‌ಟಿಆರ್ ಕೊಮರಮ್ ಭೀಮನಾಗಿ ಅಭಿನಯಿಸಿದ್ದಾರೆ. ಬ್ರಿಟೀಷ್ ಆಡಳಿತದಲ್ಲಿ ಪೊಲೀಸ್ ಆಗಿದ್ದ ಸೀತಾರಾಮ ರಾಜುಗೆ ದೊಡ್ಡ ಹುದ್ದೆಗೆ ಏರುವ ಆಸೆ. ಆತ್ತ ಕಾಡಿನಲ್ಲಿ ಬೆಳೆಯುವ ಕೊಮರಮ್ ಭೀಮನಿಗೆ ತನ್ನ ಕಾಡು, ತನ್ನ ಜನರೇ ಪ್ರಪಂಚ. ಹೀಗೆ ಭೀಮನ ಗುಂಪಿನ ಹುಡುಗಿಯೊಬ್ಬಳನ್ನು ಬ್ರಿಟಿಷರು ಕರೆದೊಯ್ಯುತ್ತಾರೆ. ಆಕೆಯನ್ನು ಹುಡುಕಿಕೊಂಡು ಭೀಮ್ ಕಾಡಿನಿಂದ ಆಚೆಗೆ ಬರುತ್ತಾನೆ. ಅಲ್ಲೂರಿ ಸೀತಾರಾಮ ರಾಜುಗೆ ಎದುರಾಗುತ್ತಾನೆ. ಅಲ್ಲಿಂದ ಮುಂದೆ ಕಥೆ ಮತ್ತೊಂದು ಹಂತ ತಲುಪುತ್ತದೆ.
ಇದನ್ನೂ ಓದಿ: ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎಂದ ರಾಯನ್, ಚಿರು ಮಗನ ಮುದ್ದಾದ ವಿಡಿಯೋ ನೋಡಿ
ಬಾಹುಬಲಿಯಲ್ಲಿ ರಾಜಮನೆತನದ ಕಥೆ ಹೇಳಿದ್ದ ರಾಜಮೌಳಿ, ಇಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ದಾರೆ. ಸಿನಿಮಾ ನೋಡುತ್ತ ನೋಡುತ್ತ ಇದು ಸ್ವಾತಂತ್ರ್ಯ ಪೂರ್ವದಲ್ಲಿ, ದೇಶದ ಯಾವುದೋ ಭಾಗದಲ್ಲಿ ನಡೆದ ಕಥೆ ಅಂತ ಅನಿಸಿದರೆ ಅಚ್ಚರಿಯಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ