RRR Movie: ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್​ನಲ್ಲಿ ಎರಡನೇ ಸ್ಥಾನ ಪಡೆದ ಆರ್​ಆರ್​ಆರ್​, ಸಿನಿಮಾ ಬಗ್ಗೆ ರೆಸುಲ್ ಪೂಕುಟ್ಟಿ ಹೀಗಂದ್ರಾ?

RRR Movie: ಈ ಮಧ್ಯೆ ಸೌಂಡ್ ವಿನ್ಯಾಸಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ಮಲಯಾಳಂ ಚಿತ್ರರಂಗದ ರೆಸೂಲ್ ಪೂಕಟ್ಟಿ ಆರ್.ಆರ್.ಆರ್ ಸಿನಿಮಾದ ಬಗ್ಗೆ ಕಾಮೆಂಟ್​ ಮಾಡಿದ್ದು ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆರ್​ಆರ್​ಆರ್​ ಸಿನಿಮಾ ಪೋಸ್ಟರ್​

ಆರ್​ಆರ್​ಆರ್​ ಸಿನಿಮಾ ಪೋಸ್ಟರ್​

  • Share this:
ಎಸ್‌ಎಸ್ ರಾಜಮೌಳಿ (Rajamouli) ನಿರ್ದೇಶನದ ರಾಮ್ ಚರಣ್ Ram Charan), ಜೂನಿಯರ್ ಎನ್‌ಟಿಆರ್ (Jr NTR) ಅಭಿನಯದ ಆರ್‌ಆರ್‌ಆರ್​ (RRR) ಸಿನಿಮಾ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​(Hollywood Critics Association Awards) ಮಿಡ್‌ಸೀಸನ್ ಅವಾರ್ಡ್ಸ್ 2022 ರಲ್ಲಿ ಮೊದಲ ಭಾರತೀಯ ಚಿತ್ರವಾಗಿ ನಾಮನಿರ್ದೇಶನಗೊಂಡಿದ್ದು ಗೊತ್ತೇ ಇದೆ. ಇದೀಗ ಹೊಸ ಸುದ್ದಿ ಎಂದರೆ ಈ ಸಿನಿಮಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಪ್ಯಾನ್ ಇಂಡಿಯನ್ ಸಿನಿಮಾವು ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು ಮೊದಲ ಸ್ಥಾನವನ್ನು ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒಮ್ಸ್‌ ಪಡೆದಿದೆ.

ರನ್ನರ್ ಅಪ್​ ಆದ ಆರ್​ಆರ್​ಆರ್​ ಸಿನಿಮಾ

ಶುಕ್ರವಾರ ಟ್ವಿಟರ್‌ನಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಪ್ರಶಸ್ತಿಯನ್ನು ಪ್ರಕಟಿಸಿದೆ. RRR ಜನಪ್ರಿಯ ಹಾಲಿವುಡ್ ಚಲನಚಿತ್ರಗಳಾದ Top Gun: Maverick, The Batman, Elvis, ಮತ್ತು The Unbearable Weight of Massive Talent ಅನ್ನು ಹಿಂದಿಕ್ಕಿ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಅವಾರ್ಡ್ಸ್‌ನಲ್ಲಿ ರನ್ನರ್-ಅಪ್ ಸ್ಥಾನವನ್ನು ಗೆದ್ದಿದೆ ಎಂದು ತಿಳಿಸಿದೆ. RRR ರನ್ನರ್-ಅಪ್ ಸ್ಥಾನವನ್ನು ಗೆದ್ದ ಬಗ್ಗೆ ನೆಟಿಜನ್‌ಗಳು ಹೆಚ್ಚು ಸಂತೋಷಪಟ್ಟಿದ್ದಾರೆ, ಆದರೆ ಕೆಲವು ಅಭಿಮಾನಿಗಳು ಆರ್‌ಆರ್‌ಆರ್‌ಗೆ ಮೊದಲ ಪ್ರಶಸ್ತಿ ನೀಡಬೇಕಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆರ್‌ಆರ್‌ಆರ್ ಅಸ್ಕರ್ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್‌ನಲ್ಲಿ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಸಿನಿಮಾವಾಗಿದೆ. ಇನ್ನು ಕಳೆದ ವಾರ, ನಾಮನಿರ್ದೇಶನ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಈ ಮಧ್ಯೆ ಸೌಂಡ್ ವಿನ್ಯಾಸಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ಮಲಯಾಳಂ ಚಿತ್ರರಂಗದ ರೆಸೂಲ್ ಪೂಕಟ್ಟಿ ಆರ್.ಆರ್.ಆರ್ ಸಿನಿಮಾದ ಬಗ್ಗೆ ಕಾಮೆಂಟ್​ ಮಾಡಿದ್ದು ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕೆಲವರು ಆರ್​ಆರ್​ಆರ್​ ಸಿನಿಮಾವನ್ನು ಸಲಿಂಗಿಗಳ ಪ್ರೇಮಕಥೆ ಎಂದು ಕರೆದಿದ್ದರು, ಇದೀಗ ರೆಸೂಲ್ ಪೂಕಟ್ಟಿ ಸಹ ಇದೇ ಮಾತನ್ನು ಹೇಳಿದ್ದು ಇದು ಹಲವರಿಗೆ ಬೇಸರ ತರಿಸಿದೆ. ಈ ಬಗ್ಗೆ ಸಿನಿಮಾದ ನಿರ್ಮಾಪಕರು ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಅಭಿಮಾನದ ಅಂಬಾರಿ ಹೊತ್ತ ಯೋಗಿಗೆ ಹುಟ್ಟುಹಬ್ಬದ ಸಂಭ್ರಮ, ಲೂಸ್‌ ಮಾದನ ದುನಿಯಾ ಕಥೆ ಇಲ್ಲಿದೆ

ಆಸ್ಕರ್ ವಿಜೇತ್​ ರೆಸುಲ್ ಪೂಕುಟ್ಟಿ ವಿವಾದಾತ್ಮಕ ಹೇಳಿಕೆ

ಹೌದು, ಶೋಬು ಯಾರ್ಲಗಡ್ಡ ಅವರು, ರೆಸುಲ್ ಪೂಕುಟ್ಟಿಯವರ ಆರ್​ಆರ್​ಆರ್​ ಸಿನಿಮಾ ಕಾಮೆಂಟ್​ ವಿಚಾರವಾಗಿ ಟ್ವೀಟ್​ ಮಾಡಿದ್ದು, ನಕಾರಾತ್ಮಕವಾಗಿ ಮಾತನಾಡಿದ್ದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ನೀವು ಹೇಳುತ್ತಿರುವುದನ್ನು ಹೇಗೆ ಪ್ರೂವ್ ಮಾಡುತ್ತೀರಿ ಎಂದು ಸವಾಲು ಸಹ ಹಾಕಿದ್ದಾರೆ. ಆದರೆ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿರುವ ರೆಸುಲ್​, ಯಾವುದು ತಪ್ಪಲ್ಲ, ನಾನು ಯಾವುದೇ ತಪ್ಪು ಉದ್ದೇಶದಿಂದ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ರಾಜಮೌಳಿ ನಿರ್ದೇಶನದ ರೌದ್ರಂ ರಣಂ ರುಧಿರಂ  ಸಿನಿಮಾ ವಿಶ್ವಾದ್ಯಂತ ಥಿಯೇಟರ್ಗಳಲ್ಲಿ ಭಾರಿ ಹಿಟ್ ಆಗಿ, ಸಂಚಲನವನ್ನು ಸೃಷ್ಟಿಸಿತು ಮಾತ್ರವಲ್ಲದೆ ಹಾಲಿವುಡ್ ಚಲನಚಿತ್ರ ಗಣ್ಯರಿಂದ ಮೆಚ್ಚುಗೆಯನ್ನು ಗಳಿಸಿತ್ತು. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ರಾಜಮೌಳಿ ಕಾಂಬಿನೇಷನ್ ನಲ್ಲಿ ತೆರೆಕಂಡಿದ್ದ 'ಆರ್ಆರ್ಆರ್' ಸಖತ್ ಸಕ್ಸಸ್ ಆಗಿರುವುದು ಗೊತ್ತೇ ಇದೆ. ಮಾರ್ಚ್ 25 ರಂದು ಬಿಡುಗಡೆಯಾದ ಈ ಚಿತ್ರವು ರೂ. 1,150 ಕೋಟಿ ಗಳಿಸಿದ್ದು. ಇದು ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ.

ಇದನ್ನೂ ಓದಿ: ರಾಕಿಭಾಯ್​ ಯಶ್​ ಬಗ್ಗೆ ಸನ್ನಿ ಲಿಯೋನ್​ ಹಿಂಗ್ಯಾಕಂದ್ರು? ವಿಡಿಯೋ ಫುಲ್ ವೈರಲ್

ಶ್ರಿಯಾ ಸರಣ್, ಅಜಯ್ ದೇವಗನ್, ಸಮುದ್ರ ಖನಿ, ರಾಹುಲ್ ರಾಮಕೃಷ್ಣ ಮತ್ತು ಇತರರು ನಟಿಸಿರುವ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದರು. ಈ ಸಿನಿಮಾ ನೋಡಿ ಜನ ಬಾಹುಬಲಿ ಚಿತ್ರ ಸರಣಿಯ ನಂತರ ಮತ್ತೊಮ್ಮೆ ಇಂತಹ ಬ್ಲಾಕ್ ಬಸ್ಟರ್ ಚಿತ್ರವನ್ನು ತಂದಿದ್ದಕ್ಕಾಗಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರನ್ನು ಕೆಲವು ಅಭಿಮಾನಿಗಳು ಶ್ಲಾಘಿಸಿದ್ದರು. ಇದು ನಿಮ್ಮ ನಿರ್ದೇಶನದ ಅತ್ಯುತ್ತಮ ಚಿತ್ರಗಳಲ್ಲೂ ಇದೂ ಒಂದು ಅಂತ ಹಾಡಿ ಹೊಗಳಿದ್ದರು.
Published by:Sandhya M
First published: