• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • RRR Cinema: ಟಾಮ್ ಆ್ಯಂಡ್ ಜೆರ್ರಿಯನ್ನೇ ಕಾಪಿ ಮಾಡಿದ್ರಾ ಆರ್‌ಆರ್‌ಆರ್‌! ವೈರಲ್ ಆಗ್ತಿದೆ ಸೇಮ್ ಟು ಸೇಮ್ ವಿಡಿಯೋ!

RRR Cinema: ಟಾಮ್ ಆ್ಯಂಡ್ ಜೆರ್ರಿಯನ್ನೇ ಕಾಪಿ ಮಾಡಿದ್ರಾ ಆರ್‌ಆರ್‌ಆರ್‌! ವೈರಲ್ ಆಗ್ತಿದೆ ಸೇಮ್ ಟು ಸೇಮ್ ವಿಡಿಯೋ!

ಟಾಮ್​ ಆಂಡ್​ ಜೆರ್ರಿ ಮತ್ತು ಆರ್​ಆರ್​ಆರ್​ಗೂ ಲಿಂಕ್ ಇದ್ಯಾ?

ಟಾಮ್​ ಆಂಡ್​ ಜೆರ್ರಿ ಮತ್ತು ಆರ್​ಆರ್​ಆರ್​ಗೂ ಲಿಂಕ್ ಇದ್ಯಾ?

Tom And Jerry: ತ್ರಿಬಲ್​ ಆರ್​ ಚಿತ್ರದ ಕೆಲವೊಂದು ಸೀನ್​ಗಳು ಥೇಟ್​ ಟಾಮ್​ ಆ್ಯಂಡ್​ ಜೆರ್ರಿಯ ಸೀನ್​​ಗಳನ್ನೇ ಹೋಲಿಕೆಯಾಗುತ್ತಿದ್ದು, ಸದ್ಯ ಎಡಿಟ್​ ಮಾಡಿದ ವಿಡಿಯೋ ಒಂದು ಸಖತ್ ವೈರಲ್​ ಆಗುತ್ತಿದೆ. ಇನ್ನು ನಿರ್ದೇಶಕ ರಾಜಮೌಳಿಯವರು ಟಾಮ್ ಅಂಡ್ ಜೆರ್ರಿಯನ್ನೇ ಇನ್ಸ್​​ಪಿರೇಶನ್​ ಆಗಿಟ್ಟುಕೊಂಡು ಕೊಂಡು ತ್ರಿಬಲ್ ಆರ್ ಸಿನಿಮಾವನ್ನು ರಚಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿ.

ಮುಂದೆ ಓದಿ ...
  • Share this:

    2022 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ (S. S. Rajamouli) ಅವರ ಆರ್‌ಆರ್‌ಆರ್ (RRR) ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದೆ ಮತ್ತು ಇತ್ತೀಚೆಗ ಆಸ್ಕರ್​ ಪ್ರಶಸ್ತಿಯನ್ನು ಗೆದ್ದು ಚಿತ್ರರಂಗಕ್ಕೂ ಹೆಮ್ಮೆಯನ್ನೇ ತಂದಿದೆ. ಆದರೆ ಈಗ ಎಲ್ಲೇ ನೋಡಿದ್ರೂ ಈ ಚಿತ್ರದ ಹಾಡಿನ ಬಗ್ಗೆಯೇ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಇದೀಗ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದ ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡು ಟಾಮ್ ಆ್ಯಂಡ್​​ ಜೆರ್ರಿಯನ್ನೇ (Tom And Jerry) ಹೋಲುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಜೊತೆಗೆ ಇದರ ಒಂದು ಎಡಿಟೆಡ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ.


    ತ್ರಿಬಲ್​ ಆರ್​ ಚಿತ್ರದ ಕೆಲವೊಂದು ಸೀನ್​ಗಳು ಥೇಟ್​ ಟಾಮ್​ ಆ್ಯಂಡ್​ ಜೆರ್ರಿಯ ಸೀನ್​​ಗಳನ್ನೇ ಹೋಲಿಕೆಯಾಗುತ್ತಿದ್ದು, ಸದ್ಯ ಎಡಿಟ್​ ಮಾಡಿದ ವಿಡಿಯೋ ಒಂದು ಸಖತ್ ವೈರಲ್​ ಆಗುತ್ತಿದೆ. ಜೊತೆಗೆ ಈ ಸಿನಿಮಾದ ಸೀನ್​ಗಳನ್ನು ಮತ್ತು ಟಾಮ್​ ಆಂಡ್​ ಜೆರ್ರಿಯ ಕೆಲವೊಂದು ಸೀನ್​ಗಳನ್ನು ಒಟ್ಟುಗೂಡಿಸಿ ಎಡಿಟ್​ ಮಾಡಿದ್ದು ನೋಡುಗರನ್ನೇ ಅಚ್ಚರಿ ಮೂಡಿಸುವಂತಿದೆ.


    ಇನ್ನು ನಿರ್ದೇಶಕ ರಾಜಮೌಳಿಯವರು ಟಾಮ್ ಆ್ಯಂಡ್ ಜೆರ್ರಿಯನ್ನೇ ಇನ್ಸ್​​ಪಿರೇಶನ್​ ಆಗಿಟ್ಟುಕೊಂಡು ತ್ರಿಬಲ್ ಆರ್ ಸಿನಿಮಾವನ್ನು ರಚಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.


    ಇದನ್ನೂ ಓದಿ: ಜೂನಿಯರ್ ಎನ್​ಟಿಆರ್ ಎಂದೂ ನನ್ನ ಜೊತೆ ಕೆಟ್ಟದಾಗಿ ವರ್ತಿಸಿಲ್ಲ! ಸೌತ್ ನಟರನ್ನು ಹೊಗಳಿದ ನಟಿ


    ಟ್ವಿಟರ್​ನಲ್ಲಿ ಫುಲ್​ ವೈರಲ್​


    ಇನ್ನು ಈ RRR ಮತ್ತು ಟಾಮ್​ ಆ್ಯಂಡ್​ ಜೆರ್ರಿ ಚಿತ್ರದ ಕೆಲವೊಂದು ಸೀನ್​ಗಳು ಒಂದೇ ರೀತಿಯಲ್ಲಿ ಹೋಲಿಯಾಗುತ್ತಿದ್ದು, ಸದ್ಯ ಸೋಶಿಯಲ್​ ಮೀಡಿಯಾದಲ್ಲೂ ಎಲ್ಲರಲ್ಲೂ ಪ್ರಶ್ನೆಯೂ ಮೂಡಿದೆ, ಅಚ್ಚರಿಯನ್ನು ಮೂಡಿಸಿದೆ. ಇನ್ನು ಈ ವಿಡಿಯೋವನ್ನು @PhunnyRabia ಎಂಬವರು RRR ಚಿತ್ರ ಟಾಮ್​​ ಆ್ಯಂಡ್​ ಜೆರ್ರಿಯ ಕಾಪಿಯಾ? ಎಂದು ಕ್ಯಾಪ್ಷನ್​ ಮೂಲಕ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದು ಮಿಲಿಯನ್​ ಗಟ್ಟಲೇ ವೀಕ್ಷಣೆಯನ್ನು ಪಡೆದುಕೊಂಡಿದೆ. ಇನ್ನು ಈ ವಿಡಿಯೋಗೆ 4 ಸಾವಿರಕ್ಕೂ ಹೆಚ್ಚು ಲೈಕ್​ಗಳು ಸಹ ಬಂದಿದೆ.


    ಟಾಮ್​ ಆಂಡ್​ ಜೆರ್ರಿ ಮತ್ತು ಆರ್​ಆರ್​ಆರ್​ಗೂ ಲಿಂಕ್ ಇದ್ಯಾ?


    ಈ ವಿಡಿಯೋವನ್ನು ನೋಡುವಾಗಲೇ ಮುಖದಲ್ಲಿ ನಗುತರಿಸುತ್ತೆ. ಆದರೆ ಎಡಿಟ್ ಮಾಡಿದವರಿಗಂತೂ ಭೇಷ್ ಎನ್ನಲೇ ಬೇಕು. ಹಾಗೆಯೇ ಈ ವಿಡಿಯೋವನ್ನು ನೋಡಿದ ಹಲವರು ನಗುವಿನ ಎಮೋಜಿಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲೂ ಒಬ್ಬರು ‘ಕೊನೆಗೂ ಟಾಮ್​ ಆಂಡ್​ ಜೆರ್ರಿಗೆ ಆಸ್ಕರ್​ ಪ್ರಶಸ್ತಿ ಪಡೆಯಿತು‘ ಎಂದು ಹೇಳಿದ್ದಾರೆ. ಇನ್ನೊಬ್ಬರು ಎಡಿಟ್​ ಮಾಡಿದವರು ಬ್ರಿಲಿಯೆಂಟ್​ ಎಂದು ಹೇಳಿಕೊಂಡಿದ್ದಾರೆ.



    ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಪಡೆದ ‘ನಾಟು ನಾಟು’:


    ಈ ಕೆಟಗರಿಯಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಹಾಡು ಎಂಬ ಹೆಗ್ಗಳಿಕೆಗೂ ಸಹ ಈ ಹಾಡು ಪಾತ್ರವಾಗಿದೆ. ಈ ಗೀತೆಯನ್ನು ಆರ್‌ಆರ್‌ಆರ್ ಚಿತ್ರದಲ್ಲಿನ ಗಾರ್ಡನ್ ಪಾರ್ಟಿಯಲ್ಲಿ ಚಿತ್ರೀಕರಿಸಲಾಗಿದ್ದು, ಇದರಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡನ್ನು ಬರೆದಿರುವವರು ಯಾರು ಅಂತ ಅನೇಕರಿಗೆ ಈಗಾಗಲೇ ಗೊತ್ತಿರುತ್ತದೆ.


    ನಾಟು ನಾಟು ಹಾಡು ಬರೆಯೋದಕ್ಕೆ ಬೇಕಾಯ್ತಂತೆ ಒಂದೂವರೆ ವರ್ಷ


    'ನಾಟು ನಾಟು' ಹಾಡಿನ ಗೀತರಚನೆಕಾರ ಚಂದ್ರಬೋಸ್ ಅವರು “ಆರ್‌ಆರ್‌ಆರ್ ಚಿತ್ರದ ಗೋಲ್ಡನ್ ಗ್ಲೋಬ್ ವಿಜೇತ ಹಾಡಿನ ಶೇಕಡಾ 90ರಷ್ಟು ಭಾಗವನ್ನು ಬರೆಯಲು ಒಂದೇ ಒಂದು ಸಿಟ್ಟಿಂಗ್ ಬೇಕಾಯಿತು, ಆದರೆ ಉಳಿದದ್ದನ್ನು ಬರೆಯಲು ಸುಮಾರು 17 ತಿಂಗಳು ಬೇಕಾಯಿತು” ಎಂದು ಹೇಳಿದ್ದಾರೆ.




    "ಚಿತ್ರದ ಒಂದು ನಿರ್ದಿಷ್ಟ ದೃಶ್ಯಕ್ಕಾಗಿ ಒಂದು ಹಾಡನ್ನು ಬರೆಯುವಂತೆ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ನನ್ನನ್ನು ಕೇಳಿದರು. ನಾನು ಮೂರು ಹಾಡುಗಳನ್ನು ಬರೆದು ಅವರಿಗೆ ಪ್ರಸ್ತುತ ಪಡಿಸಿದೆ. ಅವರು ‘ನಾಟು ನಾಟು’ ಹಾಡನ್ನು ಎಲ್ಲದಕ್ಕಿಂತಲೂ ಹೆಚ್ಚು ಇಷ್ಟಪಟ್ಟರು" ಎಂದು ಚಂದ್ರಬೋಸ್ ಮಾಧ್ಯಮವೊಂದಕ್ಕೆ ತಿಳಿಸಿದರು.

    Published by:Prajwal B
    First published: