RRR Film: ಅರೆರೇ ಹಾಲಿವುಡ್​​ನಿಂದ ಕಾಪಿ ಮಾಡಿದ್ದಾ RRR..!? ಸಿನಿ ಅಂಗಳದಲ್ಲಿ ಶುರುವಾಗಿದೆ ಗುಸು-ಗುಸು

RRR ಬರೀ ಟಾಲಿವುಡ್ ಮಾತ್ರವಲ್ಲದೇ ಇಡೀ ಭಾರತವೇ ಎದುರು ನೋಡುತ್ತಿರುವ ಸಿನಿಮಾ. ಜಗತ್ತಿನ ಸಿನಿರಂಗದ ಗಮನವನ್ನೂ ಸೆಳೆದಿರುವ ಈ ಸಿನಿಮಾ ಬಗ್ಗೆ ಈಗ ಗುಸುಗುಸು ಶುರುವಾಗಿದೆ. ಬಹು ನಿರೀಕ್ಷಿತ ಸಿನಿಮಾ ಆರ್’ಆರ್’ಆರ್ (RRR CINEMA) ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೀಗ ಆ ಸಿನಿಮಾದ ಕುರಿತು ವಿವಾದಗಳು ಶುರುವಾಗಿದೆ.

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಆರ್​​ಆರ್​​ಆರ್​ (RRR) ಸಿನಿಮಾ (Cinema) ಬರೀ ಟಾಲಿವುಡ್, ಕಾಲಿವುಡ್ ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ನೂರಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ (Rajmouli) ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದೇ ಒಂದು ಪ್ಲಸ್ ಪಾಯಿಂಟ್. ಇದು ಒಂದು ಕಡೆಯಾದರೆ, ಜ್ಯೂ. ಎನ್ಟಿಆರ್ (Jn.NTR) ಹಾಗೂ ರಾಮ್ ಚರಣ್ ತೇಜ (Ramcharan Tej) ಜೊತೆಯಾಗಿ ನಟಿಸುತ್ತಿರುವುದು ಮತ್ತೊಂದು ಹೈಲೈಟ್ಸ್. ಈ ಮೂವರು ಘಟಾನುಘಟಿಗಳ ಕಾಂಬಿನೇಶನ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.

  ಹೆಚ್ಚಾದ ಅಭಿಮಾನಿಗಳ ಕಾತುರತೆ

  ಪ್ರಾರಂಭದಿಂದಲೂ ಭಾರಿ ಸುದ್ದಿ ಮಾಡ್ತಿರೋ ಈ ಸಿನಿಮಾ, ಈಗ ವಿವಾದವನ್ನೂ ಮೈಮೇಲೆ ಹೊತ್ತುಕೊಂಡಿದೆ. ಈ ಸಿನಿಮಾದ ಟೀಸರ್, ಟ್ರೇಲರ್ ಹಾಗೂ ಸಾಂಗ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. YouTube ಸೇರಿದಂತೆ ಶೋಶಿಯಲ್ ಮೀಡಿಯಾಗಳಲ್ಲಿ ಅತೀ ಹೆಚ್ಚು ಲೈಕ್ಸ್, ಶೇರ್ಸ್ ಪಡೆದುಕೊಂಡಿದೆ. ಇನ್ನು 'ನಾಟು ನಾಟು' ಸಾಂಗ್ ಅಂತೂ ಸಿನಿಪ್ರಿಯರ ಹಾಟ್ ಫೇವರೆಟ್ ಆಗಿದೆ. ಈ ಹಾಡಿಗೆ ಹೆಜ್ಜೆ ಹಾಕಿ, ಯುನೀಕ್ ಸ್ಟೈಲ್ ಅನ್ನು ತಾವು ವಿಡಿಯೋ ಮಾಡುತ್ತಾ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಇಷ್ಟರಲ್ಲಾಗಲೇ ಸಿನಿಮಾ ರಿಲೀಸ್ ಆಗಿ, ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಬೇಕಿತ್ತು. ಆದರೆ ಕೋವಿಡ್ ಹಾಗೂ ಇತರೆ ಕಾರಣದಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೆ ಸಿನಿಮಾದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಾ ಇರೋದು ಚಿತ್ರತಂಡಕ್ಕೆ ಸಮಾಧಾನ ತಂದಿದೆ.

  ಆರ್​​​ಆರ್​​ಆರ್​ ಸಿನಿಮಾ ಹಾಲಿವುಡ್ ಕಾಪಿನಾ?

  ಈ ಎಲ್ಲಾ ಸಂತೋಷ, ಸಂಭ್ರಮದ ನಡುವೆಯೇ ಆರ್ಆರ್ಆರ್ ಸಿನಿಮಾಗೆ ವಿವಾದಗಳು ಸುತ್ತಿಕೊಂಡಿವೆ. ಆರ್ಆರ್ಆರ್ ಸಿನಿಮಾದ ಹಲವು ದೃಶ್ಯಗಳು ಹಾಲಿವುಡ್ ನಿಂದ ಕಾಪಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಕೆಲವರು You Tube ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಕಾಪಿ ಮಾಡಲಾಗಿದ್ದು ಎನ್ನಲಾದ ಹಾಲಿವುಡ್ ಸಿನಿಮಾ ಹಾಗೂ ಆರ್ಆರ್ಆರ್ ಸಿನಿಮಾದ ದೃಶ್ಯಗಳನ್ನು ಶೇರ್ ಮಾಡುತ್ತಿದ್ದಾರೆ.

  ಇದನ್ನೂ ಓದಿ: ಬೇಕು ಅಂತಾಲೇ Covid ಅಂಟಿಸಿಕೊಂಡ ಜೆಕ್ ಗಾಯಕಿ ಸಾವು, ಆಕೆ ಲಸಿಕೆ ಕೂಡಾ ಹಾಕಿಸಿಕೊಂಡಿಲ್ಲ

  ಅವೆಂಜರ್ ಇನ್ಫಿನಿಟಿ ವಾರ್ (Avenger infinity war), 10000 BC, ದಿ ಅವೆಂಜರ್ಸ್ (The Avengers) ಇತ್ಯಾದಿ ಸಿನಿಮಾಗಳಿಂದ ಕೆಲ ದೃಶ್ಯಗಳು, ಸಾಹಸದ ದೃಶ್ಯಗಳನ್ನು ಕಾಪಿ ಮಾಡಲಾಗಿದೆ ಎನ್ನಲಾಗುತ್ತಿದೆ.

  10000 BC ಸಿನಿಮಾದಲ್ಲಿ ನಾಯಕನ ಮುಂದೆ ಸಿಂಹವೊಂದು ಬಂದು ಘರ್ಜಿಸುತ್ತದೆ. ಈ ಖಡಕ್ ದೃಶ್ಯ ಆರ್ಆರ್ಆರ್ ನಲ್ಲೂ ಕಾಪಿಯಾಗಿದೆ. ಇಲ್ಲಿ ಜ್ಯೂ.ಎನ್ಟಿಆರ್ (Jr. NTR) ಮುಖದ ಮುಂದೆ ಹುಲಿಯೊಂದು ಬಂದು ಅಬ್ಬರಿಸುವ ಖಡಕ್ ದೃಶ್ಯ ಇದೆ.


  ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ (Ramcharan Tej) ಬಾಕ್ಸಿಂಗ್ ಮಾಡುವ ದೃಶ್ಯವೊಂದು ಇದೆ. ಇದೂ ಕೂಡ ದಿ ಅವೆಂಜರ್ಸ್ (The Avengers) ಸಿನಿಮಾದಿಂದ ಕಾಪಿ ನಕಲು ಮಾಡಲಾಗಿದೆ ಎನ್ನಲಾಗುತ್ತಿದೆ.

  ಇನ್ನು ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ಹ್ಯಾಂಡ್ ಶೇಕ್ ಮಾಡುವ ಸ್ಟೈಲ್ ಈಗಾಗಲೇ ವೈರಲ್ ಆಗಿದೆ. ಆದ್ರೆ ಇದೂ ಕೂಡ 2007ರಲ್ಲಿ ರಿಲೀಸ್ ಆದ ಸ್ಟಾರ್ ವಾರ್ ದಿ ಕೋಲ್ಡ್ ರಿಪಬ್ಲಿಕ್ (Star War The Cold Republic) ಸಿನಿಮಾದಲ್ಲಿದ್ದ ಸೀನ್ ನಂತೆ ಕಾಣಿಸುತ್ತಿದೆ.

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ

  ಒಟ್ಟಾರೆ ಶೋಷಿಯಲ್ ಮೀಡಿಯಾಗಳಲ್ಲಂತೂ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಒಂದು ಸಿನಿಮಾ ಅಂದ್ರೆ ತಿಳಿದು, ತಿಳಿಯದೆಯೋ ಕಾಪಿ ಆಗಿರಬಹುದು. ಆದರೆ ರಾಜಮೌಳಿ ಅವರಿಗೆ ಕಾಪಿ ಮಾಡಬೇಕಾದ ಜರೂರತ್ತು ಇಲ್ಲ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ inspiration ಹೆಸರಲ್ಲಿ ಹಾಲಿವುಡ್ ನಿಂದ ಕೆಲವರು ದೃಶ್ಯಗಳನ್ನು ಮಕ್ಕಿ ಕಾ ಮಕ್ಕಿ ಭಟ್ಟಿ ಇಳಿಸುತ್ತಾರೆ. RRR ಸಿನಿಮಾ ಕೂಡ ಅದೇ ಕೆಟಗರಿ ಅಂತ ಕೆಲವರು ಹೇಳುತ್ತಿದ್ದಾರೆ.

  ಆದರೆ ಈ ವಾದ ಪ್ರತಿವಾದಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಅನ್ನೋದು ಸಿನಿಮಾ ನೋಡಿದ ಮೇಲೆಯೇ ಗೊತ್ತಾಗಲಿದೆ. ಸಧ್ಯ ಫಿಲ್ಮ್ ರಿಲೀಸ್ ಪೋಸ್ಟ್ ಪೋನ್ಡ್ ಆಗಿದ್ದು, ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ. ಕಾಂಟ್ರವರ್ಸಿ ಏನೇ ಇರಲಿ, ಫಿಲ್ಮ್ ಬೇಗ ರಿಲೀಸ್ ಆಗ್ಲಿ ಅಂತ ಅಭಿಮಾನಿಗಳಂತೂ ತುದಿಗಾಲಲ್ಲಿ ಕಾಯುತ್ತಿದ್ದಾರೆ.

  ವರದಿ: ಅಣ್ಣಪ್ಪ ಆಚಾರ್ಯ
  Published by:Latha CG
  First published: