ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತೊಂದು ಸಿನಿಮಾದೊಂದಿಗೆ ಇತಿಹಾಸ ಬರೆಯಲು ಸಜ್ಜಾಗುತ್ತಿದ್ದಾರೆ. ಹೌದು ಜೂನಿಯರ್ ಎನ್‍ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಒಂದೇ ತೆರೆಯ ಮೇಲೆ ತಮ್ಮ ನಟನೆಯ ಛಾಪನ್ನು ಒತ್ತಲು ಸಿದ್ಧವಾಗಿರುವ ಈ ಇಬ್ಬರ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿ ದ್ದಾರೆ. ಸ್ಟಾರ್ ನಟ, ನಟಿಯರನ್ನು ಹೊಂದಿರುವ ಈ ಚಿತ್ರದ ಮೇಲೆ ಬಹುಮಟ್ಟದ ನಿರೀಕ್ಷೆ ಇದೆ. ಈ ಆರ್‌ಆರ್‌ಆರ್ ಸಿನಿಮಾವು 6 - 7 ಭಾಷೆಗಳಲ್ಲಿ ತೆರೆಗೆ ಬರಲು ರೆಡಿಯಾಗುತ್ತಿದೆ.
ಇದೇ ಆರ್‌ಆರ್‌ಆರ್ ತಂಡವು ಒಂದು ಸುಂದರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಿಗೆ ಹೊಸ ಸುದ್ದಿ ಕೊಟ್ಟಿದೆ. ಈ ಪೋಸ್ಟರ್‌ನಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ರಾಯಲ್ ಎನ್‍ಫೀಲ್ಡ್ ಬೈಕ್‍ನಲ್ಲಿ ಖುಷಿಯಿಂದ ಸವಾರಿ ಮಾಡುತ್ತಿದ್ದಾರೆ. ಈಗಾಗಲೇ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದು, ಬಿಡುಗಡೆಯಾದ ಒಂದು ಗಂಟೆಯೊಳಗೆ 11 ಸಾವಿರಕ್ಕೂ ಹೆಚ್ಚು ಜನ ರೀ ಟ್ವೀಟ್ ಮಾಡಿದ್ದಾರೆ. 30 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. ಇನ್ನು 10 ನಿಮಿಷದ ಕೆಳಗೆ ಅದೇ ಪೋಸ್ಟರ್ ಟ್ವೀಟ್ ಮಾಡಿ ರಾಮರಾಜು ಮತ್ತು ಭೀಮ ಎಂಬ ಹೆಸರು ಬರೆದಿದ್ದಾರೆ. ಇದು ಬಹುತೇಕ ಇವರಿಬ್ಬರು ಅಭಿನಯಿಸುತ್ತಿರುವ ಪಾತ್ರದ ಹೆಸರು ಇರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ.
ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರ ಈ ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿದೆ. ಈಗಾಗಲೇ ಇಬ್ಬರು ಎರಡು ಸಿನಿಮಾದ ಡಬ್ಬಿಂಗ್ ಕೆಲಸವನ್ನು ಮುಗಿಸಿದ್ದಾರೆ. ಸದ್ಯದಲ್ಲೇ ಎಲ್ಲಾ ಕೆಲಸಗಳು ಮುಕ್ತಾಯಗೊಳ್ಳಲಿದೆ ಎಂದು ಹೇಳಿದೆ.
ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಅಲಿಯಾ ಭಟ್, ಅಜಯ್ ದೇವಗನ್, ಸಮುದ್ರ ಖಣಿ, ಕೆಲವು ಅಂತಾರಾಷ್ಟ್ರೀಯ ನಟರು ಪೋಷಕ ಪಾತ್ರದಲ್ಲಿ ಕಾಣಿಸಿ ಕೊಂಡಿ ದ್ದಾರೆ. ಈ ಸಿನಿಮಾವು ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಡಿವಿವಿ ದಾನಯ್ಯ ಹಾಗೂ ಡಿವಿವಿ ಎಂಟರ್ ಟೈನ್‍ಮೆಂಟ್ ನಿರ್ಮಿಸುತ್ತಿದ್ದು, ಇದು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ಇದಕ್ಕೆ ಎಂ.ಎಂ ಕೀರವಾಣಿಯವರ ಸಂಗೀತದ ಮಾಧುರ್ಯವಿದೆ. ಇನ್ನು ಕೆಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣವಿದೆ.
ಇದನ್ನೂ ಓದಿ: kajal aggarwal| ಕೋಟಿ ಸಂಭಾವನೆ ಪಡೆದು ಕಾಸ್ಟ್ಲಿ ನಟಿಯಾದ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್
ಪೆನ್ ಸ್ಟುಡಿಯೋಸ್ ಉತ್ತರ ಭಾರತದಾದ್ಯಂತ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಎಲ್ಲಾ ಭಾಷೆಗಳಿಗೂ ವಿಶ್ವಾದ್ಯಂತ ಎಲೆಕ್ಟ್ರಾನಿಕ್ ಹಕ್ಕುಗಳನ್ನು ಖರೀದಿಸಿದೆ. ಈ ಸಿನಿಮಾವನ್ನು ಅಕ್ಟೋಬರ್ 13, 2021ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ ಕೋವಿಡ್-19 ಕಾರಣ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಆರ್‌ಆರ್‌ಆರ್ ಚಿತ್ರದ ಎಲ್ಲಾ ಭಾಷೆಗಳ ಡಿಜಿಟಲ್ ಹಾಗೂ ಸ್ಯಾಟೆಲೈಟ್ ಹಕ್ಕುಗಳು ಬರೋಬ್ಬರಿ 325 ಕೋಟಿ ರೂಪಾಯಿಗೆ ಜೀ5 ಮತ್ತು ನೆಟ್‍ಫ್ಲಿಕ್ಸ್ ಪಡೆದುಕೊಂಡಿವೆ ಎಂದು ಸಹ ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ