ಹಾಲಿವುಡ್ ನಟ (Hollywood), ಥಾರ್ ಖ್ಯಾತಿಯ ರೇ ಸ್ಟೀವನ್ಸನ್ (Ray Stevenson) ಅವರು ನಿಧನರಾಗಿದ್ದಾರೆ. ರಾಜಮೌಳಿ (Rajamouli) ಅವರ ತ್ರಿಬಲ್ ಆರ್ (RRR) ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ನಟ 58ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ತ್ರಿಬಲ್ ಆರ್ ಸಿನಿಮಾದಲ್ಲಿ ಬ್ರಿಟಿಷ್ ಗವರ್ನರ್ (British Governor) ಪಾತ್ರವನ್ನು ಮಾಡಿದ್ದ ಸ್ಟೀವನ್ಸನ್ ಅಗಲಿಕೆಗೆ ಎಸ್ಎಸ್ ರಾಜಮೌಳಿ (SSR) ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಥಾರ್ (Thor) ಸಿನಿಮಾಗಳಲ್ಲಿ ಆಸ್ಗಾರ್ಡಿಯನ್ ವಾರಿಯರ್ ಪಾತ್ರವನ್ನು ಮಾಡಿ ಪ್ರಸಿದ್ಧರಾಗಿದ್ದರು. ತ್ರಿಬಲ್ ಆರ ಸಿನಿಮಾದ ಅಧಿಕೃತ ಟ್ವಿಟರ್ (Twitter) ಖಾತೆಯಲ್ಲಿ ನಟನ ಅಗಲಿಕೆಯನ್ನು ಖಚಿತಪಡಿಸಲಾಗಿದೆ. ತ್ರಿಬಲ್ ಆರ್ ನಿರ್ದೇಶಕ ತಮ್ಮ ಸಕ್ಸಸ್ಫುಲ್ ಸಿನಿಮಾದ ನಟನ ಅಗಲಿಕೆ ಸಂತಾಪ ವ್ಯಕ್ತಪಡಿಸಿದ ಟ್ವೀಟ್ ಮಾಡಿದ್ದಾರೆ.
ಸೋಮವಾರ ರಾತ್ರಿ ರಾಜಮೌಳಿ ಅವರು ಟ್ವೀಟ್ ಮಾಡಿದ್ದಾರೆ. ನಮಗೆಲ್ಲರಿಗೂ ಇದು ಅತ್ಯಂತ ಶಾಕಿಂಗ್ ಸುದ್ದಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ರೇ ಸ್ಟೀವನ್ಸನ್. ಸರ್ ಸ್ಕಾಟ್ ನೀವು ಎಂದೂ ನಮ್ಮ ಮನಸಿನಲ್ಲಿರುತ್ತೀರಿ ಎಂದು ಹೇಳಿದ್ದಾರೆ. ಇದರೊಂದಿಗೆ ರಾಜಮೌಳಿ ಅವರು ಆರ್ಆರ್ಆರ್ ಸಿನಿಮಾದಲ್ಲಿ ನಟಿಸಿದ ನಟನ ಒಂದು ಫೋಟೋ ಶೇರ್ ಮಾಡಿದ್ದಾರೆ.
Shocking... Just can't believe this news. Ray brought in so much energy and vibrancy with him to the sets. It was infectious. Working with him was pure joy.
My prayers are with his family. May his soul rest in peace. pic.twitter.com/HytFxHLyZD
— rajamouli ss (@ssrajamouli) May 23, 2023
ನಟನ ಅಭಿಮಾನಿಗಳು ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ನಟರು ತುಂಬಾ ವಿರಳವಾಗಿ ಕ್ಯಾಮೆರಾದಲ್ಲಿ ಹೈಲೈಟ್ ಆಗುತ್ತಾರೆ. ಅವರದ್ದು ಎಂಥಹಾ ಅಧ್ಬುತ ಸ್ಕ್ರೀನ್ ಪ್ರಸೆನ್ಸ್. ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಸಿಗಲಿ. ನಾನು ಅವರು ಇನ್ನಷ್ಟು ಹೊತ್ತು ಸ್ಕ್ರೀನ್ನಲ್ಲಿ ಇರಲಿ ಎಂದು ಬಯಸಿದ್ದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಎಂಥಾ ಫೆಂಟಾಸ್ಟಿಕ್ ನಟ. ಆರ್ಆರ್ಆರ್ನಲ್ಲೊ ಅವರ ಅಭಿನಯ ಅದ್ಭುತವಾಗಿತ್ತು. ನಿಮ್ಮನ್ನು ಮಿಸ್ ಮಾಡುತ್ತೇವೆ ಎಂದಿದ್ದಾರೆ.
ನಟನ ತ್ರಿಬಲ್ ಆರ್ ಸಿನಿಮಾ ಮೂಲಕ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಅವರ ಅಭಿನಯಕ್ಕೆ ದೇಸಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅವರನ್ನು ಮೆಚ್ಚಿಕೊಂಡಿದ್ದಾರೆ ಎನ್ನುವುದಕ್ಕೆ ನೆಟ್ಟಿಗರಿಂದ ಬರುತ್ತಿರುವ ಸಂತಾಪ ಸಂದೇಶಗಳೇ ಸಾಕ್ಷಿ.
ಇದನ್ನೂ ಓದಿ: Tamannaah Bhatia: ಸ್ವಿಜರ್‌ಲ್ಯಾಂಡ್‌ನಲ್ಲಿ ಮಿಲ್ಕಿ ಬ್ಯೂಟಿ ಏನ್ಮಾಡ್ತಿದ್ದಾರೆ? ಜೊತೆಗಿದ್ದಾರಾ ಬಾಯ್ಫ್ರೆಂಡ್?
ಮಾರ್ವೆಲ್ಸ್ ಥಾರ್ನಲ್ಲಿ ವಾಲ್ಸ್ಟಾಗ್ ಪಾತ್ರದ ಮೂಲಕವೇ ರೇ ಫೇಮಸ್ ಆಗಿದ್ದರು. ಎನಿಮೇಟೆಡ್ ಸ್ಟಾರ್ ವಾರ್ಸ್ ಸಿರೀಸ್ ಕ್ಲೋನ್ ವಾರ್ಸ್ & ರೆಬೆಲ್ಸ್ನಲ್ಲಿ ಗಾರ್ ಸಾಕ್ಸಾನ್ಗೆ ವಾಯ್ಸ್ ಕೊಟ್ಟಿದ್ದರು. ರೇ ಅವರು ಮೇ 25ರಂದು 1964ರಲ್ಲಿ ನಾರ್ತ್ ಐರ್ಲಾಂಡ್ನ ಲಿಸ್ಬರ್ನ್ನಲ್ಲಿ ಹುಟ್ಟಿದ್ದರು. ಅವರು 1990ರಲ್ಲಿ ತಮ್ಮ ಕೆರಿಯರ್ ಶುರು ಮಾಡಿದ್ದರು. ಯುರೋಪಿಯನ್ ಟಿವಿ ಸಿರೀಸ್ನಲ್ಲಿ ನಟಿಸಿದ್ದರು. ದಿ ಥಿಯರಿ ಆಫ್ ಎಲೈಟ್ನಲ್ಲಿ ನಟ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಕಾಲಿಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ