• Home
  • »
  • News
  • »
  • entertainment
  • »
  • Top Movie Sequels: ಈ ವರ್ಷ ರಿಲೀಸ್ ಆಗೋ ಟಾಪ್ ಸೀಕ್ವೆಲ್​ ಸಿನಿಮಾಗಳಿವು

Top Movie Sequels: ಈ ವರ್ಷ ರಿಲೀಸ್ ಆಗೋ ಟಾಪ್ ಸೀಕ್ವೆಲ್​ ಸಿನಿಮಾಗಳಿವು

ಕಾಂತಾರ

ಕಾಂತಾರ

ಆರ್‌ಆರ್‌ಆರ್, ಪೊನ್ನಿಯಿನ್ ಸೆಲ್ವನ್, ಪುಷ್ಪಾ: ದಿ ರೈಸ್, ಕಾಂತಾರ, ವಿಕ್ರಮ್ ಸೇರಿದಂತೆ ಇತ್ತೀಚಿನ ಅನೇಕ ಜನಪ್ರಿಯ ಚಿತ್ರಗಳು ಶೀಘ್ರದಲ್ಲಿಯೇ ಎರಡನೇ ಭಾಗಗಳನ್ನು ಹೊರತರಲು ಸಜ್ಜಾಗಿವೆ.

  • Trending Desk
  • Last Updated :
  • Bangalore, India
  • Share this:

ದಕ್ಷಿಣ ಭಾರತದ ಚಲನಚಿತ್ರೋದ್ಯಮದ ನಾಲ್ಕು ಚಲನಚಿತ್ರ ಉದ್ಯಮಗಳು ಈಗ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳೆರಡರಲ್ಲೂ ಭಾರಿ ಸದ್ದು ಮಾಡುತ್ತಿವೆ. ಅನೇಕ ಬ್ಯಾಕ್-ಟು-ಬ್ಯಾಕ್ ಮೆಗಾ-ಬ್ಲಾಕ್‌ಬಸ್ಟರ್ ಗಳು (Blockbuster) ಮತ್ತು ಎಂದಿನಂತೆ, ಕೆಲವು ಅತ್ಯಂತ ಉತ್ತಮ ಅರ್ಥಪೂರ್ಣ ಚಲನಚಿತ್ರಗಳನ್ನು (Cinema) ಸೌತ್ ಫಿಲ್ಮ್ ಇಂಡಸ್ಟ್ರಿ (South Film Industry) ನೀಡಿದೆ. 


ಮೆಗಾ ಹಿಟ್ ಚಿತ್ರಗಳಿವು


ಎಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತದ ಚಲನಚಿತ್ರಗಳು ಕಳೆದ ಕೆಲವು ವರ್ಷಗಳಿಂದ ಊಹಿಸಲಾಗದಷ್ಟು ಯಶಸ್ಸನ್ನು ಕಂಡಿದ್ದು, ಕೋಟಿಗಟ್ಟಲೆ ಹಣವನ್ನು ಗಳಿಸಿದೆ. ಕೆಲವು ಚಿತ್ರಗಳು ಕಡಿಮೆ ವೆಚ್ಚದಲ್ಲಿ ಮಾಡಲಾಗಿದ್ದರೂ, ಅವುಗಳು ಗಳಿಸಿದ್ದು ಮಾತ್ರ ಕೋಟಿ ಕೋಟಿ.
ತೆಲುಗು ಚಿತ್ರರಂಗದ ಆರ್‌ಆರ್‌ಆರ್ ಮತ್ತು ಪುಷ್ಪಾ, ಕನ್ನಡದ ಕೆಜಿಎಫ್ ಫ್ರ್ಯಾಂಚೈಸ್ ಮತ್ತು ಕಾಂತಾರಾ, ತಮಿಳಿನ ಪೊನ್ನಿಯಿನ್ ಸೆಲ್ವನ್, ವಿಕ್ರಮ್ ಮತ್ತು ಮಲಯಾಳಂ ಭಾಷೆಯ ಜನ ಗಣ ಮನ, ಮಿನ್ನಾಳ್ ಮುರಳಿ ಮತ್ತು ಇತರೆ ಚಿತ್ರಗಳು ಭಾರಿ ಯಶಸ್ಸನ್ನು ಸಾಧಿಸಿವೆ.
ಕುತೂಹಲಕಾರಿ ಸಂಗತಿಯೆಂದರೆ, ಆರ್‌ಆರ್‌ಆರ್, ಪೊನ್ನಿಯಿನ್ ಸೆಲ್ವನ್, ಪುಷ್ಪಾ: ದಿ ರೈಸ್, ಕಾಂತಾರ, ವಿಕ್ರಮ್ ಸೇರಿದಂತೆ ಇತ್ತೀಚಿನ ಅನೇಕ ಜನಪ್ರಿಯ ಚಿತ್ರಗಳು ಶೀಘ್ರದಲ್ಲಿಯೇ ಎರಡನೇ ಭಾಗಗಳನ್ನು ಎಂದರೆ ಈ ಚಿತ್ರಗಳ ಸೀಕ್ವೆಲ್ ಗಳನ್ನು ಹೊರತರಲು ಸಜ್ಜಾಗಿವೆ.


ಪೊನ್ನಿಯಿನ್ ಸೆಲ್ವನ್ ಈಗಾಗಲೇ ತನ್ನ ಎರಡನೆ ಭಾಗದ ಚಿತ್ರೀಕರಣವನ್ನು ಮುಗಿಸುವ ಹಂತದಲ್ಲಿದ್ದು, ಅದರ ಟೀಸರ್ ಅನ್ನು ಸಹ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ದಕ್ಷಿಣ ಭಾರತೀಯ ಚಿತ್ರರಂಗದ 10 ಬಹು ನಿರೀಕ್ಷಿತ ಸೀಕ್ವೆಲ್ ಗಳು ಇವು


1. ಪೊನ್ನಿಯಿನ್ ಸೆಲ್ವನ್ 2


ಪೊನ್ನಿಯಿನ್ ಸೆಲ್ವನ್ ಚಿತ್ರದ ಭಾರಿ ಯಶಸ್ಸನ್ನು ನೋಡಿದ ನಂತರ ಚಿತ್ರತಂಡವು ಈಗಾಗಲೇ ಈ ಫ್ರಾಂಚೈಸಿಯ ಬಹು ನಿರೀಕ್ಷಿತ ಎರಡನೇ ಮತ್ತು ಅಂತಿಮ ಕಂತನ್ನು ಏಪ್ರಿಲ್ 2023 ರಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.


ಪೊನ್ನಿಯಿನ್ ಸೆಲ್ವನ್ 2 ಹಿರಿಯ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಕನಸಿನ ಯೋಜನೆಯ ಮೊದಲ ಕಂತಿನ ಮ್ಯಾಜಿಕ್ ಅನ್ನು ಮರುಸೃಷ್ಟಿಸುವ ನಿರೀಕ್ಷೆಯಿದೆ.
ಈ ಚಿತ್ರವು ಕಲ್ಕಿ ಕೃಷ್ಣಮೂರ್ತಿ ಅವರ ಅದೇ ಹೆಸರಿನ ಮಹಾಕಾವ್ಯ ಕಾದಂಬರಿಯನ್ನು ಆಧರಿಸಿದೆ. ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಕಾರ್ತಿ, ತ್ರಿಷಾ ಕೃಷ್ಣನ್, ಜಯಂ ರವಿ ಮತ್ತು ಇತರರು ಸೇರಿದಂತೆ ಭಾಗ 1 ರ ಮುಖ್ಯ ತಾರಾಗಣದ ಜೊತೆಗೆ, ಪಿಎಸ್ 2 ಪ್ರಮುಖ ಪಾತ್ರಗಳಲ್ಲಿ ಹೊಸ ಮುಖಗಳನ್ನು ಸಹ ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.


2. ಆರ್‌ಆರ್‌ಆರ್ 2


ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರವು ಎಲ್ಲಾ ರೀತಿಯಲ್ಲೂ ಅಪ್ರತಿಮ ಚಿತ್ರವೆಂದು ಪರಿಗಣಿಸಲ್ಪಟ್ಟಿದ್ದು, ಶೀಘ್ರದಲ್ಲಿಯೇ ಅದರ ಮುಂದುವರಿದ ಭಾಗವನ್ನು ತಯಾರಿಸಲು ಸಜ್ಜಾಗಿದೆ.


ಈ ಹಿಂದೆ ಚಿತ್ರದ ನಿರ್ದೇಶಕರು ತಮ್ಮ ಕೆಲವು ಸಂದರ್ಶನಗಳಲ್ಲಿ, ಆರ್‌ಆರ್‌ಆರ್ ನ ಮುಂದುವರಿದ ಭಾಗದ ಸಾಧ್ಯತೆಗಳನ್ನು ಸಕ್ರಿಯವಾಗಿ ಪರಿಗಣಿಸುತ್ತಿದ್ದೇವೆ ಎಂದು ಬಹಿರಂಗಪಡಿಸಿದ್ದರು.
ಆದಾಗ್ಯೂ, ಇತ್ತೀಚಿನ ಸಂಭಾಷಣೆಯಲ್ಲಿ, ಅವರು ಆರ್‌ಆರ್‌ಆರ್ 2 ಗಾಗಿ ಹೆಚ್ಚು ರೋಮಾಂಚನಕಾರಿ ಕಥೆಯ ಕಲ್ಪನೆಯನ್ನು ಕಂಡುಕೊಂಡಿದ್ದಾರೆ ಮತ್ತು ಈ ಯೋಜನೆ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಬಹುದು ಎಂದು ಅವರು ದೃಢಪಡಿಸಿದರು.


3. ಪುಷ್ಪಾ 2: ದಿ ರೂಲ್


ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಹಿಟ್ ಮೇಕರ್ ಸುಕುಮಾರ್ ಪ್ರಸ್ತುತ ಪುಷ್ಪಾ ಫ್ರ್ಯಾಂಚೈಸ್ ನ ಬಹುನಿರೀಕ್ಷಿತ ಎರಡನೇ ಕಂತು ಪುಷ್ಪ 2: ದಿ ರೂಲ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.


ಮೊದಲ ಕಂತಿನ ಪುಷ್ಪಾ: ದಿ ರೈಸ್ 2021 ರ ಅತಿದೊಡ್ಡ ಬ್ಲಾಕ್ ಬಸ್ಟರ್ ಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು ಮತ್ತು ಅಲ್ಲು ಅರ್ಜುನ್ ಅವರನ್ನು ಪ್ಯಾನ್-ಇಂಡಿಯನ್ ಸ್ಟಾರ್ ಆಗಿ ಮಾಡಿತ್ತು.
ಈಗ, ಸಿನಿ ಪ್ರೇಕ್ಷಕರು ಈ ಚಿತ್ರದ ಎರಡನೇ ಭಾಗಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದು ಮೊದಲ ಭಾಗಕ್ಕೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿದೆ ಅಂತ ಹೇಳಲಾಗುತ್ತಿದೆ.


4. ವಿಕ್ರಮ್ 2


ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರ ಬೃಹತ್ ಪುನರಾಗಮನಕ್ಕೆ ಕಾರಣವಾದ ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ್ ಚಿತ್ರವು 1980 ರ ದಶಕದ ಅದೇ ಹೆಸರಿನ ಚಿತ್ರ ಮತ್ತು ನಿರ್ದೇಶಕರ ಹಿಂದಿನ ಬ್ಲಾಕ್ ಬಸ್ಟರ್ ಚಿತ್ರವಾದ ಕೈಥಿಯ ಸೀಕ್ವೆಲ್ ಗೂ ಮುಂಚೆ ಬರಲಿದೆಯೆ ಅಂತ ಕಾದು ನೋಡಬೇಕಿದೆ. ಈಗ, ವಿಕ್ರಮ್ 2 ಸೇರಿದಂತೆ ಫ್ರ್ಯಾಂಚೈಸ್ ನಲ್ಲಿ ಇನ್ನೂ ಹೆಚ್ಚಿನ ಚಿತ್ರಗಳು ಇರಲಿವೆ ಎಂದು ಹೇಳಿದ್ದಾರೆ.


5. ಕಾಂತಾರ 2


ವಿಶ್ವದಾದ್ಯಂತ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿದ ಕನ್ನಡ ಚಿತ್ರವಾದ ಕಾಂತಾರದ ಮುಂದುವರಿದ ಭಾಗವು ನಿಜವಾಗಿಯೂ ಹೊರತರುವ ಯೋಚನೆ ಇದೆ ಎಂದು ಕಾಂತಾರದ ನಿರ್ಮಾಪಕರು ಇತ್ತೀಚೆಗೆ ದೃಢಪಡಿಸಿದ್ದಾರೆ.
ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರೊಡಕ್ಷನ್ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ಎರಡನೇ ಭಾಗವು ಪ್ರಿಕ್ವೆಲ್ ಅಥವಾ ಸೀಕ್ವೆಲ್ ಆಗಿದೆಯೇ ಎಂದು ಇನ್ನೂ ನಿರ್ಧರಿಸಿಲ್ಲ.


6. ಕೈಥಿ 2


ವಿಕ್ರಮ್ 2 ಚಿತ್ರಕ್ಕಿಂತಲೂ ಮೊದಲು, ನಿರ್ದೇಶಕ ಲೋಕೇಶ್ ಕನಗರಾಜ್ ಪ್ರತಿಭಾವಂತ ನಟ ಕಾರ್ತಿ ಅವರೊಂದಿಗೆ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ (ಎಲ್‌ಸಿಯು) ನ ಮೊದಲ ಕಂತಾಗಿದ್ದ ಬ್ಲಾಕ್ ಬಸ್ಟರ್ ಚಿತ್ರವಾದ ಕೈಥಿಯ ಮುಂದುವರಿದ ಭಾಗಕ್ಕಾಗಿ ಮತ್ತೆ ಒಂದಾಗಲಿದ್ದಾರೆ.


ವರದಿಗಳ ಪ್ರಕಾರ, ವಿಕ್ರಮ್ ಅವರ ಕೆಲವು ಪ್ರಮುಖ ಪಾತ್ರಗಳು ಕೈಥಿ ಸೀಕ್ವೆಲ್ ನ ಭಾಗವಾಗಿರುತ್ತವೆ ಮತ್ತು ಈ ಯೋಜನೆ ಭವಿಷ್ಯದಲ್ಲಿ ಹೆಚ್ಚಿನ ಎಲ್‌ಸಿಯು ಚಲನಚಿತ್ರಗಳಿಗೆ ದಾರಿ ಮಾಡಿಕೊಡಬಹುದು.


7. ಎಲ್ 2: ಎಂಪೂರನ್


ಮೋಹನ್ ಲಾಲ್-ಪೃಥ್ವಿರಾಜ್ ಸುಕುಮಾರನ್ ಅವರ ಮೆಗಾ ಪ್ರಾಜೆಕ್ಟ್ ಇದಾಗಿದ್ದು, ನಟ-ನಿರ್ದೇಶಕ ಜೋಡಿಯ 2019-ಬಿಡುಗಡೆಯಾದ ಬ್ಲಾಕ್ ಬಸ್ಟರ್ ಲೂಸಿಫರ್ ನ ಮುಂದುವರಿದ ಭಾಗವಾಗಿದೆ. ಇದು ನಿಸ್ಸಂದೇಹವಾಗಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಬಹು ನಿರೀಕ್ಷಿತ ಮುಂಬರುವ ಯೋಜನೆಗಳಲ್ಲಿ ಒಂದಾಗಿದೆ.


ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರವು 2023 ರ ಮಧ್ಯದ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ. ಈ ಯೋಜನೆಯ ನಂತರ ಮೂರನೇ ಕಂತು ಸಹ ಇರುತ್ತದೆ, ಅದು ಕೆಲವು ವರ್ಷಗಳ ನಂತರ ಬರುತ್ತದೆ ಅಂತ ಚಿತ್ರದ ತಯಾರಕರು ಹೇಳಿದ್ದಾರೆ.


8. ಮಿನ್ನಾಳ್ ಮುರಳಿ 2


ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ ಸೂಪರ್ ಹೀರೋ ಚಿತ್ರವು ಸಿನಿಪ್ರಿಯರಿಗೆ ಅಪಾರವಾಗಿ ಇಷ್ಟವಾಗಿತ್ತು. ಬಾಸಿಲ್ ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಟೊವಿನೊ ಥಾಮಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದರ ಮುಂದುವರಿದ ಭಾಗವು ತೆರೆಗೆ ಬರುವುದು ಖಚಿತವಾಗಿದೆ.


ಇದನ್ನೂ ಓದಿ: Kantara: ಕಾಂತಾರ ಡಿಜಿಟಲ್ ಆರ್ಟ್ ಪೋಸ್ಟರ್! ರಿಷಬ್​ಗೆ ಅಭಿಮಾನಿಯ ಸ್ಪೆಷಲ್ ಪೋಸ್ಟ್


ಆದಾಗ್ಯೂ, ಬಾಸಿಲ್ ತನ್ನ ಮುಂದಿನ ನಿರ್ದೇಶನದ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಿದ ನಂತರವೇ ಈ ಯೋಜನೆ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.


9. ಜನ ಗಣ ಮನ 2


ಡಿಜೋ ಜೋಸ್ ಆಂಟೋನಿ ನಿರ್ದೇಶನದ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಚಿತ್ರ ಎರಡನೇ ಭಾಗವನ್ನು ತೆರೆಗೆ ತರುವುದು ಬಹುತೇಕವಾಗಿ ಖಚಿತವಾಗಿದೆ.


ಆದಾಗ್ಯೂ, ಜನ ಗಣ ಮನ ಫ್ರ್ಯಾಂಚೈಸ್ ನ ಮುಂದಿನ ಕಂತು ಈ ಚಿತ್ರಕ್ಕೆ ಪೂರ್ವಭಾವಿಯಾಗಿದೆ ಮತ್ತು ಪೃಥ್ವಿರಾಜ್ ನಿರ್ವಹಿಸಿದ ಪಾತ್ರವಾದ ಅರವಿಂದ್ ಸ್ವಾಮಿನಾಥನ್ ಅವರ ಆರಂಭಿಕ ಜೀವನವನ್ನು ಅನ್ವೇಷಿಸುತ್ತದೆ.


10. ಜೈ ಭೀಮ್


ಇತ್ತೀಚೆಗೆ, ಜೈ ಭೀಮ್ ನ ನಿರ್ಮಾಪಕರು ಸೂರ್ಯ ಅಭಿನಯದ ಎರಡನೇ ಭಾಗವನ್ನು ತೆರೆಗೆ ತರುವ ಮಾಹಿತಿಯನ್ನು ದೃಢಪಡಿಸಿದ್ದಾರೆ. ನಿರ್ದೇಶಕ ಟಿ.ಜೆ.ಜ್ಞಾನವೇಲ್ ಅವರೊಂದಿಗೆ ರಾಷ್ಟ್ರಪ್ರಶಸ್ತಿ ವಿಜೇತ ನಟನ ಜೊತೆ ಇದು ಎರಡನೇ ಬಾರಿಗೆ ಸೇರಿಕೊಂಡು ಕೆಲಸ ಮಾಡುವ ಚಿತ್ರವಾಗಿದ್ದು, ಇದರಲ್ಲಿ ವಕೀಲರಾದ ಚಂದ್ರು ಅವರ ಜೀವನದ ಮತ್ತೊಂದು ಘಟನೆಯನ್ನು ಇಲ್ಲಿ ತೋರಿಸಲಿದೆ.

Published by:Divya D
First published: