• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • KGF 2: ಬಯೋ ಬಬಲ್​ನಲ್ಲೇ ರಾಕಿ ಬಾಯ್​ ದರ್ಶನ ಪಡೆದ ಟೀಂ RCB! ಕೆಜಿಎಫ್​ 2 ನೋಡಿ ಹಿಂಗಂದ್ರು ಬೆಂಗಳೂರು ಬಾಯ್ಸ್​

KGF 2: ಬಯೋ ಬಬಲ್​ನಲ್ಲೇ ರಾಕಿ ಬಾಯ್​ ದರ್ಶನ ಪಡೆದ ಟೀಂ RCB! ಕೆಜಿಎಫ್​ 2 ನೋಡಿ ಹಿಂಗಂದ್ರು ಬೆಂಗಳೂರು ಬಾಯ್ಸ್​

ಆರ್​ಸಿಬಿ ಟೀಂ, ಯಶ್​

ಆರ್​ಸಿಬಿ ಟೀಂ, ಯಶ್​

ಒಂದು ಕನ್ನಡ ಸಿನಿಮಾ(Kannada Movie) ಈ ಮಟ್ಟಕ್ಕೆ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವುದು ಕನ್ನಡಿಗರ ಹೆಮ್ಮೆ ಎಂದರೆ ತಪ್ಪಾಗಲಾರದು. ಎಲ್ಲರೂ ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇದೀಗ ರಾಯಲ್​ ಚಾಲೆಂಜರ್ಸ್(Royal Challengers Banglore)​ ಆಟಗಾರರು ಕೂಡ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ.

ಮುಂದೆ ಓದಿ ...
  • Share this:

ವಿಶ್ವದ ಮೂಲೆ ಮೂಲೆಯಲ್ಲೂ ಕೆಜಿಎಫ್​ 2(KGF 2) ಅಬ್ಬರ ಜೋರಾಗಿದೆ. ಬಾಕ್ಸ್​ ಆಫೀಸ್​(Box Office)ನಲ್ಲಿ ರಾಕಿ ಭಾಯ್​ ಧೂಳೆಬ್ಬಿಸುತ್ತಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​​(Rocking Star Yash) ಅಭಿನಯದ ‘ಕೆಜಿಎಫ್: ಚಾಪ್ಟರ್ 2’(KGF Chapter 2) ಸಿನಿಮಾ ಬಾಕ್ಸ್ ಆಫೀಸ್‌ ದಾಖಲೆ(Record)ಗಳ ಪಟ್ಟಿಯಲ್ಲಿ ಇತರೆ ಚಿತ್ರಗಳೆದುರು ತೊಡೆ ತಟ್ಟಿ ನಿಂತಿದೆ. ಕಲೆಕ್ಷನ್‌ ಲೆಕ್ಕಾಚಾರದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮುನ್ನುಗ್ಗುತ್ತಿದೆ. ಯಶ್​(Yash)ಮಾಡಿರುವ ಹೊಸ ದಾಖಲೆಯನ್ನು ಟಚ್​ ಮಾಡುವುದರಲಿ, ಈ ದಾಖಲೆಯತ್ತರ ಬರೋದಕ್ಕೂ ಮತ್ತೆ ರಾಕಿನೇ ಬರಬೇಕು ಅಂತಿದ್ದಾರೆ ಸಿನಿಪಂಡಿತರು. ಒಂದು ಕನ್ನಡ ಸಿನಿಮಾ(Kannada Movie) ಈ ಮಟ್ಟಕ್ಕೆ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವುದು ಕನ್ನಡಿಗರ ಹೆಮ್ಮೆ ಎಂದರೆ ತಪ್ಪಾಗಲಾರದು. ಎಲ್ಲರೂ ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇದೀಗ ರಾಯಲ್​ ಚಾಲೆಂಜರ್ಸ್(Royal Challengers Banglore)​ ಆಟಗಾರರು ಕೂಡ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ.


ಕೆಜಿಎಫ್​ 2 ಸಿನಿಮಾ ನೋಡಿದ ಆರ್​​ಸಿಬಿ!


ಕೆಲವು ದಿನಗಳ ಹಿಂದಷ್ಟೇ 'KGF 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ RCB ಟೀಮ್ವ ಒಟ್ಟಿಗೆ ಸೇರಿತ್ತು. ಈ ಎರಡೂ ಸಂಸ್ಥೆಗಳೂ ಒಟ್ಟಿಗೆ ಸೇರಿ ಹಲವು ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಲಿದೆ ಎಂದು ಹೇಳಿತ್ತು. ಅದರ ಮೊದಲ ಭಾಗವಾಗಿ 'ಕೆಜಿಎಫ್ 2' ಸಿನಿಮಾವನ್ನು ಆರ್‌ಸಿಬಿ ಆಟಗಾರರು ಸಿನಿಮಾ ನೋಡಿದ್ದಾರೆ. ಭಾನುವಾರ (ಏಪ್ರಿಲ್ 17) 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಆರ್‌ಸಿಬಿ ಆಟಗಾರರು ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದ ಬೆಂಗಳೂರು ಬಾಯ್ಸ್​ ಸಖತ್​ ಥ್ರಿಲ್​ ಆಗಿದ್ದಾರೆ.


ಬಯೋ ಬಬಲ್​ನಲ್ಲೇ ರಾಕಿ ಭಾಯ್​ ದರ್ಶನ!


ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವುದರಿಂದ ಆಟಗಾರರೆಲ್ಲರೂ ಬಯೋ ಬಬಲ್‌ನಲ್ಲಿದ್ದಾರೆ. ಹೀಗಾಗಿ 'ಕೆಜಿಎಫ್ 2' ಸಿನಿಮಾವನ್ನೂ ಕೂಡ ಬಯೋ ಬಬಲ್‌ ಒಳಗೆನೇ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಅದರಂತೆಯೇ ಆರ್‌ಸಿನಿ ಆಟಗಾರರು ಏಪ್ರಿಲ್ 17ರಂದು ರಾತ್ರಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ.ಪೋಸ್ಟರ್‌, ಸ್ಯಾಂಡೀಸ್‌ ಇಟ್ಟು ಪ್ರಚಾರ ಮಾಡಿತ್ತು. ರಾತ್ರಿ ಆರ್‌ಸಿಬಿ ಆಟಗಾರರಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದ್ದರು. ಅದರಂತೆ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವು ಆಟಗಾರರು ಸಿನಿಮಾ ವೀಕ್ಷಿಸಿದ್ದಾರೆ.ಇದನ್ನೂ ಓದಿ: KGF 2 ನಲ್ಲಿ ಪ್ರಭಾಸ್ ಸಿನಿಮಾ ಹಿಂಟ್ ಗಮನಿಸಿದ್ರಾ? ಸಲಾರ್ ಕತೆಗೂ ಕೆಜಿಎಫ್ ಮೂಲ!


ಕೆಜಿಎಫ್​ 3 ಅಂದ್ರೆ ಸಲಾರ್​ ಸಿನಿಮಾನಾ?


ಹೌದು, ಇಂಥದ್ದೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಹಾಲಿವುಡ್​ನ ಮಾರ್ವೆಲ್ಸ್​​ ರೀತಿಯಲ್ಲಿ, ಪ್ರಶಾಂತ್​ ನೀಲ್​ ಸಿನಿಮಾ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹಾಲಿವುಡ್ ಮಾರ್ವೆಲ್ಸ್​ ಸಿನಿಮಾಗಳಲ್ಲಿ ಒಂದು ಸಿನಿಮಾದಲ್ಲಿ ಮತ್ತೊಂದು ಸಿನಿಮಾದ ಲಿಂಕ್​ ಇರಲಿದೆ. ಇದನ್ನೇ ಇಲ್ಲಿ ಕನ್ದನಡದಲ್ಲಿ ಪ್ರಶಾಂತ್​ ನೀಲ್​ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಇದೀಗ ಕೆಜಿಎಫ್​ ಚಾಪ್ಟರ್​ 3 ಅಂದ್ರೆ ಪ್ರಭಾಸ್​​ ನಟನೆಯ ಸಲಾರ್​ ಸಿನಿಮಾನಾ ಅನ್ನೋ ಅನುಮಾನ ಶುರುವಾಗಿದೆ. ಅದಕ್ಕೆ ಹಲವು ಕಾರಣಗಳಿದೆ. ಅದೇನು ಅಂತೀರಾ? ಮುಂದೆ ನೋಡಿ.


ಇದನ್ನೂ ಓದಿ: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ


'ಅಧೀರ'ನಿಗೆ ಅವಾಜ್​ ಹಾಕಿದ ಹುಡುಗನೇ ಪ್ರಭಾಸ್​ ಆಗಿ ಬರ್ತಾನಾ?


ಕೆಜಿಎಫ್​ 2 ಸಿನಿಮಾದಲ್ಲಿ ಅಧೀರನ ಎಂಟ್ರಿ ಸೀನ್​ನಲ್ಲಿ ಒಂದು ಹುಡುಗ ಹೆಚ್ಚು ಕಾಟ ಕೊಡುತ್ತಾನೆ. ಅಷ್ಟೇ ಅಲ್ಲದೆ ರಾಕಿ ಭಾಯ್​ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾನೆ. ಆಗ ಅಧೀರನ ಪಡೆ ಆತನನ್ನು ಕೊಲ್ಲುವ ಹಾಗೇ ತೋರಿಸಲಾಗಿದೆ. ಆದರೆ, ಆ ಹುಡುಗನೇ ಸಲಾರ್​ ಸಿನಿಮಾದ ಪ್ರಭಾಸ್​ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಆ ಹುಡಗ ಸತ್ತ ಎಂದಷ್ಟೇ ತೋರಿಸಲಾಗಿದೆ. ಆದರೆ, ಆತನ ಮೃತದೇಹವನ್ನು ನೋಡಲು ಅವರ ತಾಯಿಗೂ ಬಿಡುವುದಿಲ್ಲ. ಹೀಗಾಗಿ ಆ ಹುಡುಗನೇ ದೊಡ್ವನಾಗಿ ಸಲಾರ್​ ಸಿನಿಮಾದಲ್ಲಿ ಪ್ರಭಾಸ್​ ಆಗಿ ಬರ್ತಾನೆ ಎಂದು ಹೇಳಲಾಗುತ್ತಿದೆ.

Published by:ವಾಸುದೇವ್ ಎಂ
First published: