ಇಲ್ಲ ಇಲ್ಲ ಎನ್ನುತ್ತಲೇ ಮದುವೆಗೆ ಸಿದ್ಧರಾದ ರೌಡಿ ಬೇಬಿ ಸಾಯಿ ಪಲ್ಲವಿ..!

ಮದುವೆಗೆ ನೋ ನೋ ಎನ್ನುತ್ತಲೇ ಸಿದ್ದರಾದರಾ ನಟಿ ಸಾಯಿ ಪಲ್ಲವಿ. ರೌಡಿ ಬೇಬಿ ಮನ ಕದ್ದ ಆ ಚೋರ ಯಾರು..? ಮದುವೆಯ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಈ ರೌಡಿ ಬೇಬಿ.

ಮದುವೆಗೆ ಸಿದ್ದರಾದ ನಟಿ ಸಾಯಿ ಪಲ್ಲವಿ

ಮದುವೆಗೆ ಸಿದ್ದರಾದ ನಟಿ ಸಾಯಿ ಪಲ್ಲವಿ

  • News18
  • Last Updated :
  • Share this:
- ಅನಿತಾ ಈ, 

ಮಲಯಾಳ ಸಿನಿಮಾ 'ಪ್ರೇಮಂ'ನಲ್ಲಿ ಮಲರ್​ ಆಗಿ ಮನಗೆದ್ದ ಸಾಯಿ ಪಲ್ಲವಿ ತೆಲುಗಿನ 'ಫಿದಾ' ಚಿತ್ರದ ಮೂಲಕ ಹೈಬ್ರೀಡ್​ ಹುಡುಗಿಯಾಗಿ ಟಾಲಿವುಡ್​ನಲ್ಲಿ ಮಿಂಚಿದರು. ಇದಾದ ನಂತರ ತಮಿಳಿನಲ್ಲಿ ಧನುಷ್​ ಜತೆ 'ಮಾರಿ 2' ಸಿನಿಮಾದಲ್ಲಿ ರೌಡಿ ಬೇಬಿಯಾಗಿ ದಕ್ಷಿಣ ಭಾರತದಲ್ಲಿ ದಾಖಲೆ ಬರೆದವರು.

ಇದನ್ನೂ ಓದಿ: ವಿವಾಹಕ್ಕೂ ಮೊದಲೇ ಗರ್ಭಿಣಿಯಾದ ಕಿಚ್ಚನ ಹುಡುಗಿ: ಸಾಮಾಜಿಕ ಜಾಲತಾಣದಲ್ಲಿ ಆಕೆ ಬರೆದುಕೊಂಡಿದ್ದೇನು..?

ಇಂತಹ ರೌಡಿ ಬೇಬಿ ಯಾರನ್ನೋ ಡೇಟ್​ ಮಾಡುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಈ ವಿಷಯವಾಗಿ ನಟಿ ಸಾಯಿ ಪಲ್ಲವಿ ಸಹ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ವಿವಾಹದ ಬಗ್ಗೆ ಯೋಚಿಸುತ್ತಿಲ್ಲ ಎಂದೂ ಹೇಳಿದ್ದರು.

ಹೀಗಿರುವಾಗಲೇ ಸಾಯಿ ಪಲ್ಲವಿ ಮದುಮಗಳಾಗಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಹೌದು, ಮದುವೆ ಆಗೋದಿಲ್ಲ ಎನ್ನುತ್ತಲೇ ಇಂತಹ ಚಿತ್ರಗಳನ್ನು ಸಾಯಿ ಪಲ್ಲವಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

 ಆದರೆ ಈ ಚಿತ್ರಗಳನ್ನು ಪೋಸ್ಟ್​ ಮಾಡಿರುವ ಸಾಯಿ ಪಲ್ಲವಿ, ಇದು ವಿಶು ಹಬ್ಬಕ್ಕಾಗಿ ಎಂದೂ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rowdy Baby: ಮತ್ತೊಂದು ದಾಖಲೆ ಬರೆದ 'ರೌಡಿ ಬೇಬಿ' ಸಾಯಿ ಪಲ್ಲವಿ..!

ಹೌದು, 'ಮಾರಿ 2' ಸಿನಿಮಾದ 'ರೌಡಿ ಬೇಬಿ...' ವಿಡಿಯೋ ಹಾಡು ಇಡೀ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡಾಗಿ ಹೊರಹೊಮ್ಮಿದೆ. 35.3 ಕೋಟಿ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದ್ದು, ಈ ಹಿಂದೆ ಸಾಯಿ ಪಲ್ಲವಿ ಅಭಿನಯದ 'ಫಿದಾ' ಚಿತ್ರದ 'ವಚ್ಚಿಂದೇ ಮೆಲ್ಲ ಮೆಲ್ಲಗ ವಚ್ಚಿಂದೆ..' ಹಾಡು ಸಹ ಕಡಿಮೆ ಸಮಯದಲ್ಲೇ 18 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿತ್ತು.

PHOTOS: ಮಿಯಾಮಿಯಲ್ಲಿ ರಜೆಯ ಮಜದಲ್ಲಿ ಗಂಡ ನಿಕ್​ ಜತೆ ಪ್ರಿಯಾಂಕಾ ಚೋಪ್ರಾ..!
First published: