ನಟ ದಿಲೀಪ್​ ವಿಷಯವಾಗಿ ಮಲಯಾಳಂ ಸಿನಿಮಾ ಕಲಾವಿದರ ಸಂಘವನ್ನು ತರಾಟೆಗೆ ತೆಗೆದುಕೊಂಡ ರಾಜಕಾರಣಿಗಳು

news18
Updated:June 27, 2018, 4:06 PM IST
ನಟ ದಿಲೀಪ್​ ವಿಷಯವಾಗಿ ಮಲಯಾಳಂ ಸಿನಿಮಾ ಕಲಾವಿದರ ಸಂಘವನ್ನು ತರಾಟೆಗೆ ತೆಗೆದುಕೊಂಡ ರಾಜಕಾರಣಿಗಳು
news18
Updated: June 27, 2018, 4:06 PM IST
ನ್ಯೂಸ್​ 18 ಕನ್ನಡ 

ನಟಿಯೊಬ್ಬರನ್ನು ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದಿಲೀಪ್​ ಅವರನ್ನು ಮಲಯಾಳಂ ಸಿನಿಮಾ ಕಲಾವಿದರ ಸಂಘಕ್ಕೆ ಮರು ಸೇರ್ಪಡೆ ಮಾಡಲಾಗಿದೆ. ಈ ಕ್ರಮಕ್ಕೆ ರಾಜಕಾರಣಿಗಳು ಸಂಘವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ನಟಿ ಅಪಹರಣ ಪ್ರಕರಣವಾದಾಗ ಮೊದಲು ವಿಷಯ ತಿಳಿದಿದ್ದು ಹಿರಿಯ ಶಾಸಕ ಪಿ.ಟಿ. ಥಾಮಸ್​ ಅವರಿಗೆ.  ಇಂದು ಮಲಯಾಳಂನ ಕಲಾವಿದರ ಸಂಘ ದಿಲೀಪ್​ ವಿಷಯವಾಗಿ ತೆಗೆದುಕೊಂಡಿರುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹೇಳಿದ್ದಾರೆ ಥಾಮಸ್​.

'ಈಗ ಸಂತ್ರಸ್ತೆಯ ಪರವಾಗಿ ಯಾರು ಇದ್ದಾರೆ ಎಂದು ಅರ್ಥವಾಗಿದೆ. ಘಟನೆ ನಡೆದಾಗ ಮೊಸಳೆ ಕಣ್ಣೀರಿಡುತ್ತಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಕಷ್ಟು ಮಂದಿ ಎಲ್ಲ ಈಗ ಎಲ್ಲಿದ್ದಾರೆ. ಇನ್ನಾದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಧಾನಸಭೆ ಹಾಗೂ ರಾಜ್ಯ ಸರ್ಕಾರ ಪ್ರತಿಕ್ರಿಯಿಸಬೇಕಿದೆ' ಎಂದಿದ್ದಾರೆ ಥಾಮಸ್​.

ಇನ್ನೂ ದಿಲೀಪ್​ ಅವರ ಮೇಲೆ ಹೇರಿದ್ದ ನಿಷೇಧವನ್ನು ತೆರೆವುಗೊಳಿಸುವ ಸಂಘದ ನಿರ್ಧಾರವನ್ನು ಪ್ರಶ್ನಿಸಿ, ದ ವುಮನ್​ ಇನ್​ ಸಿನಿಮಾ ಕಲೆಕ್ಟೀವ್​ ಸಂಘ ಸೋಮವಾರ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದೆ.

ನಟಿ ರೀಮಾ ಕಲ್ಲಿಂಗಲ್​ ಹಾಗೂ ಅವರ ಪತಿ ನಿರ್ದೇಶಕ ಆಶಿಕ್​ ಅಬು ಕಲಾವಿದರ ಸಂಘದ ನಿರ್ಧಾರದ ವಿರುದ್ಧ ಮೊದಲು ಧ್ವನಿ ಎತ್ತಿದವರು. ಕಳೆದ ಭಾನುವಾರ ಕೊಚ್ಚಿಯಲ್ಲಿ ಸಭೆ ಸೇರಿದ್ದ ಕಲಾವಿದರ ಸಂಘದ 385 ಸದಸ್ಯರಲ್ಲಿ ಯಾರೊಬ್ಬರೂ ದಿಲೀಪ್​ ಅವರ ಮೇಲಿನ ನಿಷೇಧವನ್ನು ತೆರೆವುಗೊಳಿಸುವ ನಿರ್ಧಾರದ ಕುರಿತು ಚಕಾರ ಎತ್ತಿಲ್ಲ.

ನಟ ಮೋಹನ್​ಲಾಲ್​ ನೇತೃತ್ವದ ಮಲಯಾಳಂ ಸಿನಿಮಾ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಈ ವಿಷಯವಾಗಿ ಮೌನ ವಹಿಸಿದ್ದಾರೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ