ಸ್ಯಾಂಡಲ್ವುಡ್ನ ಉದಯೋನ್ಮುಖ ತಾರೆ ಭರತ್ ಸಾಗರ್ ನಟಿಸಿರುವ ಸಿನಿಮಾ ಕಾಲವೇ ಮೋಸಗಾರ. ಇದೊಂದು ಕಂಪ್ಲೀಟ್ ರೊಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು, ಸಂಜಯ್ ವದಾತ್ ಆಕ್ಷನ್ ಕಟ್ ಹೇಳಿದ್ದಾರೆ. ಕೆಜಿಎಫ್, ಪೈಲ್ವಾನ್ ಚಿತ್ರಗಳ ಬಳಿಕ ನಾಲ್ಕು ಭಾಷೆಗಳಲ್ಲಿ ಅರ್ಥಾತ್ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಈ ಕಾಲವೇ ಮೋಸಗಾರ. ಈಗಾಗಲೇ ಟೀಸರ್ ಹಾಗೂ ಪಾರ್ಟಿ ಸಾಂಗ್ ಮೂಲಕ ಕಾಲವೇ ಮೋಸಗಾರ ಚಿತ್ರ ಸಿನಿಪ್ರೇಮಿಗಳಲ್ಲಿ ಕೊಂಚ ಮಟ್ಟಿಗೆ ನಿರೀಕ್ಷೆ, ಕುತೂಹಲಗಳನ್ನು ಮೂಡಿಸಿದೆ. ಅದರ ಬೆನ್ನಲ್ಲೇ ಚಿತ್ರತಂಡ ಇವತ್ತು ಮತ್ತೊಂದು ಹೊಚ್ಚ ಹೊಸ ಸಾಂಗ್ ಲಾಂಚ್ ಮಾಡಿದೆ. ಏನಿದು ಜಗವೇ ಹೊಸದು ಎಂದು ಸಾಗುವ ಈ ಹಾಡು ಸದ್ಯ ಯೂಟ್ಯೂಬ್ನಲ್ಲಿ ಸಂಗೀತಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಏನಿದು ಜಗವೇ ಹೊಸದು ಒಂದು ರೊಮ್ಯಾಂಟಿಕ್ ಡುಯೆಟ್ ಸಾಂಗ್ ಆಗಿದ್ದು, ಕೆ. ಲೋಕೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದು, ಗಾಯಕ ಸಂಚಿತ್ ಹೆಗ್ಡೆ ಈ ಹಾಡಿಗೆ ಧ್ವನಿಯಾಗಿದ್ದಾರೆ. ನಾಯಕ ಮತ್ತು ನಾಯಕಿಯ ನಡುವಿನ ಪ್ರೀತಿ, ಪ್ರೇಮ, ಪ್ರಣಯಗಳ ಸುತ್ತ ಈ ಹಾಡು ಸುತ್ತುತ್ತದೆ.
ಕಾಲವೇ ಮೋಸಗಾರ ಚಿತ್ರದಲ್ಲಿ ಭರತ್ ಸಾಗರ್ ಹಾಗೂ ಯಶಸ್ವಿನಿ ರವೀಂದ್ರ ನಾಯಕ, ನಾಯಕಿಯಾಗಿದ್ದು, ಶಂಕರ್ ಮೂರ್ತಿ ಎಸ್ ಆರ್, ಹಾಸ್ಯ ನಟ ಕುರಿ ಪ್ರತಾಪ್, ಬ್ಯಾಂಕ್ ಜನಾರ್ಧನ್, ವಿಜಯ್ ಚೆಂಡೂರ್, ದರ್ಶನ್ ವರ್ಣೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾವಸ್ಪಂದನ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ನಲ್ಲಿ ರಜತ್ ದುರ್ಗೋಜಿ ಸಾಲಂಕೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: Bigg Boss 8: ಜೈಲು ಪಾಲಾದ ಬ್ರೋ ಗೌಡ: ಶಮಂತ್ ಪ್ರೀತಿ ಮಾಡಲೆಂದೇ ಬಿಗ್ ಬಾಸ್ಗೆ ಬಂದಿದ್ದಾರಾ ಎಂದ ದಿವ್ಯಾ ಸುರೇಶ್..!
ಎಲ್ಲವೂ ಅಂದುಕೊಂಡಂತಾಗಿದ್ದರೆ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದಾಗಿ ಹಲವು ತಿಂಗಳ ಕಾಲ ಚಿತ್ರರಂಗ ಬಂದ್ ಆಗಿದ್ದ ಪರಿಣಾಮ, ಶೂಟಿಂಗ್ ಹಾಗೂ ಚಿತ್ರೀಕರಣೋತ್ತರ ಕೆಲಸಗಳು ಸ್ಥಗಿತಗೊಂಡಿದ್ದವು. ಈಗ ಕೊರೊನಾ ಕೇಸ್ಗಳು ಕಡಿಮೆಯಾಗಿದ್ದು, ಚಿತ್ರರಂಗದ ಕೆಲಸಗಳೂ ಮತ್ತೆ ಪುನರಾರಂಭಗೊಂಡಿವೆ. ಅದರ ಜೊತೆಗೆ ಕಾಲವೇ ಮೋಸಗಾರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಪೂರ್ಣಗೊಂಡಿದ್ದು, ಸದ್ಯ ಸೆನ್ಸಾರ್ ಬೋರ್ಡ್ ಬಾಗಿಲ ಬಳಿಯಿದೆ ಚಿತ್ರತಂಡ.
ಇದೇ ಏಪ್ರಿಲ್ ತಿಂಗಳಲ್ಲಿ ಕಾಲವೇ ಮೋಸಗಾರ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಹೀಗಾಗಿಯೇ ಸದ್ಯ ಭರ್ಜರಿ ಪ್ರಚಾರಕ್ಕೆ ಅಣಿಯಾಗಿರುವ ಚಿತ್ರತಂಡ ಕರ್ನಾಟಕದಾದ್ಯಂತ 20 ದಿನಗಳ ಕಾಲ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುವ ಐಡಿಯಾ ಮಾಡಿದೆ. ಮಾತ್ರವಲ್ಲ ಎಲ್ಲ ಜಿಲ್ಲೆಗಳಲ್ಲೂ ಸುದ್ದಿಗೋಷ್ಠಿ ಮಾಡುವ ಬಗ್ಗೆಯೂ ಚಿಂತಿಸುತ್ತಿದೆ. ಮಾತ್ರವಲ್ಲ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಕಾಲವೇ ಮೋಸಗಾರ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ, ತಮಿಳು ನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲೂ ಪಬ್ಲಿಸಿಟಿಗೆ ಪ್ಲ್ಯಾನ್ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ