• Home
  • »
  • News
  • »
  • entertainment
  • »
  • Video: ಸ್ಟಾರ್​ ನಿರ್ದೇಶಕನ ಬಳಿ ಕೈ ಮುಗಿದು ಕೆಲಸ ಕೊಡಿ ಎಂದು ಕೇಳಿದ್ದರು ಸಾರಾ ಅಲಿ ಖಾನ್​!

Video: ಸ್ಟಾರ್​ ನಿರ್ದೇಶಕನ ಬಳಿ ಕೈ ಮುಗಿದು ಕೆಲಸ ಕೊಡಿ ಎಂದು ಕೇಳಿದ್ದರು ಸಾರಾ ಅಲಿ ಖಾನ್​!

ಸಾರಾ ಅಲಿ ಖಾನ್

ಸಾರಾ ಅಲಿ ಖಾನ್

Sara Ali Khan: ಸಾರಾ ಮೊದಲು ನಟಿಸಿದ್ದು ಕೇದಾರ್​ನಾಥ್​ ಸಿನಿಮಾದಲ್ಲಿ. ಈ ಸಿನಿಮಾ 2018ರಲ್ಲಿ ತೆರೆ ಕಂಡಿತು. ಅದೇ ವರ್ಷ ಸಾರಾ ಸಿಂಬಾದಲ್ಲಿ ನಟಿಸಿದ್ದಾರೆ.

  • Share this:

    ಸಿನಿಮಾ ಒಂದು ಬಣ್ಣದ ಲೋಕ. ಅನೇಕರು ಬಣ್ಣ ಹಚ್ಚುವ ನಟ-ನಟಿಯರ ಜೀವನ ಹೂವಿನ ಹಾಸಿಗೆ ಎಂದುಕೊಂಡಿರುತ್ತಾರೆ. ಆದರೆ ಮುಳ್ಳಿನ ಹಾಸಿಗೆಯಿಂದ ಬಂದ ಅನೇಕ ಸ್ಟಾರ್​ ನಟ-ನಟಿಯರರು ಕೂಡ ಇದ್ದಾರೆ. ಬಾಲಿವುಡ್​ ಸ್ಟಾರ್​​ ನಟ ಸೈಫ್​​ ಅಲಿ ಖಾನ್​ ಮಗಳು ಕೂಡ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವಂತೆ ಸ್ಟಾರ್​ ನಿರ್ದೇಶಕರೊಬ್ಬರೊಂದಿಗೆ ಕೈ ಮುಗಿದು ಕೇಳಿಕೊಂಡಿದ್ದರು!.


    ಹೌದು. ಸಾರಾ ಮೊದಲು ನಟಿಸಿದ್ದು ಕೇದಾರ್​ನಾಥ್​ ಸಿನಿಮಾದಲ್ಲಿ. ಈ ಸಿನಿಮಾ 2018ರಲ್ಲಿ ತೆರೆ ಕಂಡಿತು. ಅದೇ ವರ್ಷ ಸಾರಾ ಸಿಂಬಾದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ರೋಹಿತ್​​ ಶೆಟ್ಟಿ ನಿರ್ದೇಶನದ ಮೂಡಿ ಬಂದ ಈ ಸಿನಿಮಾದಲ್ಲಿ ರಣ್​ವೀರ್​ಗೆ ಜೋಡಿಯಾಗಿ ನಟಿಸಿದ್ದರು.


    ಆದರೆ ಸಾರಾ ಈ ಪಾತ್ರಕ್ಕಾಗಿ ರೋಹಿತ್​ ಜೊತೆಗೆ ಬೇಡಿಕೊಂಡಿದ್ದರಂತೆ. ಹೌದು. ಸಾರಾ ಅವರು ರೋಹಿತ್​ ಅವರ ಆಫೀಸಿಗೆ ಬಂದು ‘ಸರ್​ ನನಗೆ ಕೆಲಸ ಕೊಡಿ’ ಎಂದು ಕೈ ಮುಗಿದು ಕೇಳಿಕೊಂಡಿದ್ದರಂತೆ. ಈ ವಿಚಾರವನ್ನು ರೋಹಿತ್​ ಶೆಟ್ಟಿ ಅವರೇ ಕಾರ್ಯಕ್ರಮವೊಂದರಲ್ಲಿ ಬಹಿರಂಗ ಪಡಿಸಿದ್ದರು.


    ರೋಹಿತ್​​​ ಶೆಟ್ಟಿ ಹಿಂದಿಯ ಜನಪ್ರಿಯ ಕಾಮಿಡಿ ವಿಥ್​ ಕಪಿಲ್​ ಶರ್ಮಾ ಶೋನಲ್ಲಿ ಈ ವಿಚಾರ ಬಹಿರಂಗ ಪಡಿಸಿದ್ದರು. ಸಿಂಬಾ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಕಪೀಲ್​ ಶರ್ಮಾ ಶೋಗೆ ಬಂದಿದ್ದರು. ಈ ವೇಳೆ ರೋಹಿತ್​ ನೈಜ ಘಟನೆಯನ್ನು ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಸ್ಟಾರ್​ ನಟನ ಮಗಳು ಎಂಬುದು ತಲೆಯಲ್ಲಿ ಇಟ್ಟುಕೊಳ್ಳದೆ ಸರ್​ ನನಗೆ ಕೆಲಸ ಬೇಕೆಂದು ಸಾರಾ ಅಲಿಖಾನ್​ ಬೇಡಿಕೊಂಡಿದ್ದಳು ಎಂದು ಹೇಳಿಕೊಂಡಿದ್ದರು.


    ಸದ್ಯ 2018ರಲ್ಲಿ ಕಾಮಿಡಿ​ ವಿಥ್​ ಕಪಿಲ್​ ಕಾರ್ಯಕ್ರಮದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದೆ. ಐಪಿಎಸ್​ ಅಧಿಕಾರಿ​ ದೀಪಾಂಶ್​​​​ ಕುಬ್ರಾ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದಾರೆ. ಅನೇಕರು ಸಾರಾ ಅವರ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ರೀತಿಯನ್ನು ಕಂಡು ಮೆಚ್ಚುಗೆ ಹರಿಸಿದ್ದಾರೆ.


    ಈ ವರ್ಷ ಸಾರಾ ಅಲಿ ಖಾನ್​ ನಟನೆಯ ‘ಲವ್​ ಆಜ್​ ಕಲ್’​ ಸಿನಿಮಾ ಬಿಡುಗಡೆಗೊಂಡಿದೆ. ಸದ್ಯ ವರುಣ್​ ಧವನ್​ ಜೊತೆಗೆ ಕೂಲಿ ನಂ.1 ಸಿನಿಮಾದಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ‘ಅತರಂಗಿ ರೇ’ ಸಿನಿಮಾದಲ್ಲೂ ಬಣ್ಣ ಹಚ್ಚುತ್ತಿದ್ದಾರೆ.



    ಸೈಫ್​ ಅಲಿ ಖಾನ್​ 1991ರಲ್ಲಿ ಅಮಿತಾ ಸಿಂಗ್​ರನ್ನು ಪ್ರೀತಿಸಿ ವಿವಾಹವಾದರು. ಆನಂತರ ಈ ದಂಪತಿಗಳಿಗೆ 2 ಮಕ್ಕಳು ಹುಟ್ಟಿದರು. ಮೊದಲನೆಯ ಮಗಳು ಸಾರಾ ಅಲಿ ಖಾನ್​, ಎರಡನೆ ಮಗ ಇಬ್ರಾಹಿಂ ಅಲಿ ಖಾನ್. 2004ರಲ್ಲಿ ಈ ಜೋಡಿ ವಿಚ್ಛೇದನ ನೀಡುವ ಮೂಲಕ ಬೇರೆ ಬೇರೆಯಾಗುತ್ತಾರೆ. ಆನಂತರ ಸೈಫ್​ ಅಲಿ ಖಾನ್​ ಕರೀನಾರನ್ನು ವಿವಾಹವಾಗುತ್ತಾರೆ. ಸಾರಾ ಮತ್ತು ಆಕೆಯ ತಮ್ಮ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    Published by:Harshith AS
    First published: