ತೆಲುಗಿನಲ್ಲಿ ಯಶ್ ಸಿನಿಮಾ ಅಕ್ರಮ ಪ್ರಸಾರ; ಕಾನೂನು ಹೋರಾಟ ನಡೆಸಲು ಮುಂದಾದ ಕೆ.ಜಿ.ಎಫ್​ ಟೀಂ

KGF Chapter-1: ತೆಲುಗು ವಾಹಿನಿ ಎವರಿ ಎಂಬ ಸ್ಥಳಿಯ ಚಾನೆಲ್​ ಕೆ.ಜಿ.ಎಫ್​ ಚಾಪ್ಟರ್​-1 ತೆಲುಗು ಅವತರಣಿಕೆಯನ್ನು ಪ್ರಸಾರ ಮಾಡಿದೆ. ಇದೀಗ ಕಾನೂನು ಮೂಲಕ ಹೋರಾಟ ನಡೆಸಲು ಮುಂದಾಗಿರುವ ಕಾರ್ತಿಕ್ ಗೌಡ ಈ ಬಗ್ಗೆ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

news18-kannada
Updated:May 9, 2020, 3:12 PM IST
ತೆಲುಗಿನಲ್ಲಿ ಯಶ್ ಸಿನಿಮಾ ಅಕ್ರಮ ಪ್ರಸಾರ; ಕಾನೂನು ಹೋರಾಟ ನಡೆಸಲು ಮುಂದಾದ ಕೆ.ಜಿ.ಎಫ್​ ಟೀಂ
ಕೆ.ಜಿ.ಎಫ್​
  • Share this:
ರಾಕಿಂಗ್ ಸ್ಟಾರ್​ ಯಶ್​​ ನಟನೆಯ ಕೆ.ಜಿ.ಎಫ್​ ಚಾಪ್ಟರ್​-1 ಸಿನಿಮಾ ಬಿಡುಗಡೆಗೊಂಡು ಅದ್ಧೂರಿ ಪ್ರದರ್ಶನ ಕಂಡು ಯಶಸ್ವಿಯಾಗಿತ್ತು. ಇದೀಗ ನಿರ್ದೇಶಕ ಪ್ರಶಾಂತ್ ನೀಲ್​ ಕೆ.ಜಿ.ಎಫ್​ 2 ಸಿನಿಮಾವನ್ನು ಸಿದ್ಧಪಡಿಸುತ್ತಿದ್ದಾರೆ. ಅಕ್ಟೋಬರ್​ 23 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಕೂಡ ಹೇಳಿದ್ದಾರೆ. ಈ ನಡುವೆ ಆಂಧ್ರದ ಕೇಬಲ್​ ಚಾನಲ್​​ವೊಂದು ಕೆ.ಜಿ.ಎಫ್​ ಚಾಪ್ಟರ್​ 1 ಸಿನಿಮಾವನ್ನು ಅನಧಿಕೃತವಾಗಿ ಪ್ರಸಾರ ಮಾಡಿದ್ದು, ಇದೀಗ ಆ ಚಾನಲ್​ ವಿರುದ್ಧ ನ್ಯಾಯಯುತ ಹೋರಾಟ ನಡೆಸುವುದಾಗಿ ಚಿತ್ರ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​​ ಗೌಡ ಹೇಳಿದ್ದಾರೆ.

ತೆಲುಗು ವಾಹಿನಿ ಎವರಿ ಎಂಬ ಸ್ಥಳಿಯ ಚಾನೆಲ್​ ಕೆ.ಜಿ.ಎಫ್​ ಚಾಪ್ಟರ್​-1 ತೆಲುಗು ಅವತರಣಿಕೆಯನ್ನು ಪ್ರಸಾರ ಮಾಡಿದೆ. ಇದೀಗ ಕಾನೂನು ಮೂಲಕ ಹೋರಾಟ ನಡೆಸಲು ಮುಂದಾಗಿರುವ ಕಾರ್ತಿಕ್ ಗೌಡ ಈ ಬಗ್ಗೆ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕೆ.ಜಿ.ಎಫ್​ ಚಿತ್ರ ಸ್ಯಾಟಲೈಟ್​​ ಹಕ್ಕುಗಳ ಬಗೆಗಿನ ಮಾತುಕತೆ ಅಂತಿಮ ಹಂತದಲ್ಲಿ ಇರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ, ನಾವು ಈ ಕುರಿತು ಕಾನೂನು ಹೋರಾಟ ನಡೆಸುತ್ತೇವೆ. ನಮ್ಮ ಬಳಿ ಟಿವಿ ಚಾನೆಲ್​ ಪ್ರಸಾರ ಮಾಡಿರುವ ಸ್ಕ್ರೀನ್​​ ಶಾಟ್​ ಮತ್ತು ವಿಡಿಯೋ ಸಾಕ್ಷಿಗಳಿವೆ ಎಂದು ಕೆ.ಜಿ.ಎಫ್​ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 


2018 ಡಿಸೆಂಬರ್​ 21ಕ್ಕೆ ಕೆ.ಜಿ.ಎಫ್​ ಚಾಪ್ಟರ್​-1 ಬಿಡುಗಡೆಯಾಯಿತು. ಭಾರತೀಯ ಸಿನಿಮಾದಲ್ಲಿ ರಂಗದಲ್ಲಿ ಈ ಚಿತ್ರ ದೊಡ್ಡ ಯಶಸ್ಸು ಕಂಡಿತು. ಮಾತ್ರವಲ್ಲದೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ಎಲ್ಲರಿಗೂ ಹೆಸರು ತಂದುಕೊಟ್ಟಿತು. ಸಿನಿಮಾ ಯಶಸ್ವಿಯಾದ ನಂತರ ಅಮೆಜಾನ್​ನಲ್ಲಿ ಬಿಡುಗಡೆಯಾಯಿತು. ಆನಂತರ ಚಿತ್ರದ ಅಧಿಕೃತ ಸ್ಯಾಟಲೈಟ್​ ಹಕ್ಕುಗಳನ್ನು ಪಡೆದ ಕೆಲ ಚಾನೆಲ್​ಗಳು  ಚಿತ್ರವನ್ನು ಮರು ಪ್ರಸಾರ ಮಾಡಿದವು.

ಇನ್ನು ತೆಲುಗು ಸ್ಯಾಟಲೈಟ್​ ಹಕ್ಕುಗಳು ಇದುವರೆಗೆ ಮಾರಾಟವಾಗಿಲ್ಲ. ಕೆಲವು ದಿನಗಳ ಹಿಂದೆ ಈ ಬಗ್ಗೆ ಮಾತುಕತೆ ನಡೆದಿದೆ. ಆದರೆ ಈ ನಡುವೆ ಆಂಧ್ರದ ಎವರಿ ಕೇಬಲ್​ ಚಾನಲ್​ ಅನಧಿಕೃತವಾಗಿ ಕೆ.ಜಿ.ಎಫ್​ ಚಾಪ್ಟರ್​-1 ಚಿತ್ರವನ್ನು ಪ್ರಸಾರ ಮಾಡಿ ಕೆಂಗಣ್ಣಿಗೆ ಗುರಿಯಾಗಿದೆ.

Money Heist: ಮನಿ ಹೈಸ್ಟ್ ನಿರ್ದೇಶಕ ಹೇಳಿದ್ರು ಪ್ರೊಫೆಸರ್ ಪಾತ್ರಕ್ಕೆ ದಳಪತಿ ವಿಜಯ್ ಬೆಸ್ಟ್!
First published: May 9, 2020, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading